Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು
ಮಹಿಳೆಯರ ಪರಾಕಾಷ್ಠೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದನ್ನು ತಿಳಿಯಲು ಸಾಧ್ಯವೂ ಇಲ್ಲ. ಆದರೆ ವಿಜ್ಞಾನಿಗಳು ಮಹಿಳೆಯರ ಪರಾಕಾಷ್ಠೆ ಬಗ್ಗೆ ಸುಮಾರು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಇದು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

ಹೆಬ್ಬೆರಳಿನ ಪಾತ್ರ
ಮಹಿಳೆಯ ಚಂದ್ರನಾಡಿ ಮತ್ತು ಯೋನಿ ನಡುವಿನ ಆರಂಭಿಕ ಅಂತರವು ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆಯನ್ನು ಸಂಬಂಧಿಸಿದ್ದಾಗಿದೆ. ಈ ಅಂತರ ಕಡಿಮೆಯಿದ್ದಷ್ಟು ಅಂದರೆ ಒಂದು ಹೆಬ್ಬರಳಿನಷ್ಟ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಪರಾಕಾಷ್ಠೆ ತಲುಪುವ ಸಾಧ್ಯತೆ ಹೆಚ್ಚು. ಯಾಕೆ? ಚಂದ್ರನಾಡಿಯು ಕ್ರಿಯೆಯ ವೇಳೆ ಅನಿರ್ದೇಶಿತ ಉತ್ತೇಜನಕ್ಕೆ ಒಳಗಾಗುವುದು.

ಕೆಲವು ಮಹಿಳೆಯರು ನಿದ್ರೆಯಲ್ಲೇ ಪರಾಕಾಷ್ಠೆ ತಲುಪುವರು
ಪುರುಷರಿಗೆ ಮಾತ್ರ ಸ್ವಪ್ನ ಸ್ಖಲನವಾಗುವುದಲ್ಲ, ಇದನ್ನು ನೀವು ನಂಬಬೇಕು. ಅಲ್ಫ್ರೆಡ್ ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.37ರಷ್ಟು ಮಹಿಳೆಯರು ಒಂದು ಸಲವಾದರೂ ನಿದ್ರೆಯಲ್ಲಿ ಪರಾಕಾಷ್ಠೆ ತಲುಪುವರು.

ವ್ಯಾಯಾಮದ ವೇಳೆ ಪಾರಾಕಾಷ್ಠೆ
ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.5ರಷ್ಟು ಮಹಿಳೆಯರಿಗೆ ನಿರ್ದಿಷ್ಟವಾಗಿರುವಂತಹ ವ್ಯಾಯಾಮ ಮಾಡಿದಾಗ ಪರಾಕಾಷ್ಠೆ ತಲುಪಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇದಕ್ಕೂ ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವರು. ಯೋಗ, ಓಟ, ಭಾರ ಎತ್ತುವುದು ಇತ್ಯಾದಿ ವೇಳೆಯು ಮಹಿಳೆಯರಿಗೆ ಹೀಗೆ ಆಗಿದೆ.

ತೊಟ್ಟಿನಿಂದ ಪರಾಕಾಷ್ಠೆ
ಹೌದು, ಕೆಲವು ಮಹಿಳೆಯರಿಗೆ ಸ್ತನಗಳ ತೊಟ್ಟನ್ನು ಉದ್ರೇಕಿಸಿದರೆ ಅದರಿಂದಲೂ ಪರಾಕಾಷ್ಠೆ ತಲುಪಲು ಆಗುವುದು. ಮೆದುಳಿನ ಅಧ್ಯಯನಿಂದ ನಡೆಸಿರುವಂತಹ ಅಧ್ಯಯನಗಳಿಂದ ತಿಳಿದುಬಂದಿರುವಂತಹ ವಿಚಾರವೆಂದರೆ ಚಂದ್ರನಾಡಿ ಅಥವಾ ಯೋನಿಯ ಉತ್ತೇಜನಗೊಳಿಸಿದಷ್ಟೇ ಸ್ತನಗಳ ತೊಟ್ಟಿನಿಂದಲೂ ಪರಾಕಾಷ್ಠೆ ತಲುಪಬಹುದು.

ಅಕಾಲಿಕ ಪರಾಕಾಷ್ಠೆ
2011ರಲ್ಲಿ ಪೋರ್ಚುಗೀಸ್ ಮಹಿಳೆಯರ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಕಂಡುಕೊಂಡಿರುವ ವಿಚಾರವೆಂದರೆ ಶೇ.14ರಷ್ಟು ಮಹಿಳೆಯರು, ಸಾಂದರ್ಭಿಕವಾಗಿ ಅವರು ಬಯಸುವ ಮೊದಲೇ ಪರಾಕಾಷ್ಠೆ ತಲುಪುವರು. ಅದೇ ಶೇ.3ರಷ್ಟು ಮಹಿಳೆಯರಿಗೆ ಇದು ನಿರಂತರವಾಗಿರುವುದು. ಪುರುಷರಲ್ಲಿ ಮಾತ್ರ ಇಂತಹ ಪರಾಕಾಷ್ಠೆ ನಡೆಯುವುದಲ್ಲ. ಮಹಿಳೆಯರಲ್ಲೂ ಅಕಾಲಿಕ ಪರಾಕಾಷ್ಠೆಯಿದೆ ಎಂದು ತಿಳಿದುಬಂದಿದೆ.

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ
ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ ಮದುಳಿನ ಒಂದು ಭಾಗವು ಪ್ರತಿಕ್ರಿಯಿಸುತ್ತದೆ. ಇದರಿಂದ ನೋವು ಮತ್ತು ಸಂತೋಷಕ್ಕೆ ನರಗಳ ಸಂಬಂಧವಿದೆ ಎಂದು ಇದು ಹೇಳಿದೆ.
ಮಹಿಳೆಯರು ತಮ್ಮ ಸಂಗಾತಿಯು ತುಂಬಾ ಆಕರ್ಷಕ, ಹಣವಂತ ಮತ್ತು ಆತ್ಮವಿಶ್ವಾಸಿಯಾಗಿದ್ದರೆ ಬೇಗನೆ ಪರಾಕಾಷ್ಠೆ ತಲುಪುವರು. ಮಹಿಳೆಯರ ಸಂತಾನೋತ್ಪತ್ತಿ ಫಿಟ್ನೆಸ್ ಹಾಗೂ ಪುರುಷರ ಸಾಮರ್ಥ್ಯವು ಮಹಿಳೆಯರ ಪರಾಕಾಷ್ಠೆಯಲ್ಲಿ ಪಾತ್ರ ವಹಿಸುವುದು ಎಂದು ಕೆಲವು ವಿಜ್ಞಾನಿಗಳು ಹೇಳಿರುವರು.

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು
ಸಾಮಾನ್ಯ ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು ಆಕೆ ತನ್ನ ಸಂಗಾತಿ ಜತೆಗೆ ಇದಕ್ಕೆ ಮೊದಲು ಎಷ್ಟು ಸಲ ಲೈಂಗಿಕ ಕ್ರಿಯೆಗೆ ಒಳಪಟ್ಟಿದ್ದಾಳೆ ಎನ್ನುವುದನ್ನು ಅವಲಂಬಿಸಿದೆ. ಆ ಸಂಗಾತಿ ಬಗ್ಗೆ ಏನು ಭಾವಿಸುವಳು ಮತ್ತು ಅವರಿಬ್ಬರು ಲೈಂಗಿಕವಾಗಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ತುಂಬಾ ಅವಲಂಬಿತವಾಗಿದೆ.

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ
ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶವನ್ನು ದೊಡ್ಡ ಶಿಶ್ನಗಳು ಹೆಚ್ಚಿಸುವುದಿಲ್ಲವೆಂದು ಕೆಲವು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವು ಮಹಿಳೆಯರು ದೊಡ್ಡ ಶಿಶ್ನವನ್ನು ಬಯಸುವರು. ಯಾಕೆಂದರೆ ಅವರಿಗೆ ಗರ್ಭಕಂಠದ ಉತ್ತೇಜನದ ಆನಂದ ಬೇಕಾಗುತ್ತದೆ. ಗರ್ಭಕಂಠದ ಉತ್ತೇಜನದಿಂದಾಗಿ ತಮಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಮಹಿಳೆಯರಲ್ಲಿ ಹೆಚ್ಚು ಪ್ರಖರವಾಗಿರುವ ಮೇಲ್ದುಟಿಯ ಟುರ್ಬೆಕ್ಲೆ ಇದ್ದರೆ ಆಗ ಅವರು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಪರಾಕಾಷ್ಠೆ ತಲುಪುವರು ಎಂದು ಹೇಳಲಾಗುತ್ತದೆ.

ಶ್! ಇದು ಮಹಿಳೆಯರ ಸೀಕ್ರೆಟ್ ವಿಷಯ-ಹೆಚ್ಚಿನ ಕುತೂಹಲ!
ಕಾಮೋತ್ತೇಜಕ ಮಾಹಿತಿಗಳ ಬಗ್ಗೆ ಎಲ್ಲರೂ ಹೆಚ್ಚಿನ ಕುತೂಹಲ ಪ್ರಕಟಿಸುತ್ತಾರೆ. ಆದರೆ ಈ ಬಗ್ಗೆ ಮುಕ್ತವಾದ ಚರ್ಚೆ ಮಾತ್ರ ನಡೆಯುವುದಿಲ್ಲ. ಆದ್ದರಿಂದ ಈ ಬಗ್ಗೆ ಹರಡಿರುವ ಅಪಾರ್ಥ ಕಲ್ಪನೆಗಳೇ ನಿಜವೆಂದು ಹೆಚ್ಚಿನವರು ನಂಬಿದ್ದಾರೆ. ಸಿನಿಮಾ, ಕಾಮುಕ ಸಾಹಿತ್ಯಗಳ ಮೂಲಕ ವಿಜೃಂಭಿಸಿದ ಸುಳ್ಳುಗಳನ್ನೇ ನಿಜವಾದ ಮಾಹಿತಿ ಎಂದು ನಂಬಿದ್ದಾರೆ. ಈ ಬಗ್ಗೆ ಅತಿ ಹೆಚ್ಚಿನ ಅಪಾರ್ಥವಿರುವ ಮಾಹಿತಿ ಎಂದರೆ ಮಹಿಳೆಯರು ಪಡೆಯುವ ತೀವ್ರೋದ್ರೇಕ ಅಥವಾ ಕಾಮೋತ್ತೇಜತೆಯ ಪರಾಕಾಷ್ಠೆ. ಈ ಬಗ್ಗೆ ವೈಜ್ಞಾನಿಕವಾಗಿ ಪಡೆದ ಮಾಹಿತಿಗಳೇ ನಿಜವಾದ ಮಾಹಿತಿಗಳಾಗಿದ್ದು ಇವುಗಳನ್ನು ಹಲವಾರು ತಜ್ಞರು ತಮ್ಮ ಹಲವು ವರ್ಷಗಳ ಅಪಾರವಾದ ಸಂಶೋಧನೆಯ ಮೂಲಕ ಪಡೆದಿರುವಂತಹದ್ದಾಗಿದ್ದು ಇವುಗಳನ್ನೇ ನಂಬುವುದು ಇಂದಿನ ಅಗತ್ಯವಾಗಿದೆ. ಮುಂದೆ ಓದಿ

ಮಹಿಳೆಯರಿಗೆ ಕಾಮೋತ್ತೇಜಕತೆ ಪಡೆಯಲು ಸಂಗಾತಿಯ ಅಗತ್ಯವಿಲ್ಲ
ಮಹಿಳೆಯರಿಗೆ ಕಾಮೋತ್ತೇಜಕತೆ ಪಡೆಯಲು ಸಂಗಾತಿಯ ಅಗತ್ಯವಿಲ್ಲದೆಯೂ ಸಾಧ್ಯ. ಒಂದು ಸಂಶೋಧನೆಯ ಮೂಲಕ 37% ಮಹಿಳೆಯರು ತಮ್ಮ ನಿದ್ದೆಯಲ್ಲಿಯೇ, ಅರಿವಿಲ್ಲದೆಯೇ, ಅನೈಚ್ಛಿಕವಾಗಿ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ.

ಪುರುಷರಿಗೆ ಹೋಲಿಸಿದರೆ
ಪುರುಷರಿಗೆ ಹೋಲಿಸಿದರೆ ಒಂದೇ ದಿನದಲ್ಲಿ ಮಹಿಳೆಯರು ಹೆಚ್ಚು ಬಾರಿ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ. ಏಕೆಂದರೆ ಪುರುಷರಿಗೆ ಸ್ಖಲನದ ಬಳಿಕ ನಿರುತ್ಸಾಹ ಆವರಿಸುವಂತೆ ಮಹಿಳೆಯರಿಗೆ ಆವರಿಸುವುದಿಲ್ಲ.

ಮಿಲನದ ಮೂಲಕ ಮಾತ್ರವೇ ಕಾಮೋತ್ತೇಜತೆ
ಮಿಲನದ ಮೂಲಕ ಮಾತ್ರವೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುವುದು ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ಏಕೆಂದರ ಈ ಮೂಲಕ ಕೇವಲ 25% ರಷ್ಟು ಮಾತ್ರ ಮಹಿಳೆಯರು ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ. ಉಳಿದವರು ತಲುಪುವುದೇ ಇಲ್ಲ. ಬದಲಿಗೆ ಮಹಿಳೆಯರು ಪ್ರಾರಂಭದ ಹಂತದಲ್ಲಿರುವಾಗಲೇ ಪುರುಷನ ಪೌರುಷ ಸಮಾಪ್ತಿಯಾಗಿರುತ್ತದೆ.

ವ್ಯಾಯಾಮ ಮಾಡುತ್ತಿರುವಾಗಲೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ
ಕೆಲವು ಮಹಿಳೆಯರು ವ್ಯಾಯಾಮ ಮಾಡುತ್ತಿರುವಾಗಲೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುತ್ತಾರೆ. ಈ ಪರಿಸ್ಥಿತಿಗೆ "coregasms" ಎಂದು ಕರೆಯುತ್ತಾರೆ. ವಿಶೇಷವಾಗಿ ಸೊಂಟ ಬಗ್ಗಿಸುವ ವ್ಯಾಯಾಮಗಳು (core exercises), ಯೋಗಾಭ್ಯಾಸ, ನಿಧಾನಗತಿಯ ಓಟ, ತೀವ್ರಗತಿಯ ಓಟ ಮೊದಲಾದವುಗಳ ಮೂಲಕವೂ ಮಹಿಳೆಯರು ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುವುದು ಸಾಧ್ಯ.

ಸ್ತನತೊಟ್ಟಿನ ಸಂವೇದನೆಯಿಂದಲೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪಬಹುದು
"Nipplegasms"-ಹೆಸರೇ ಸೂಚಿಸುವಂತೆ ಸ್ತನತೊಟ್ಟಿನ ಸಂವೇದನೆಯಿಂದಲೇ ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪಬಹುದು. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ತಜ್ಞರು ಸ್ತನತೊಟ್ಟಿನ ಸವರುವಿಕೆಯಿಂದ ಮೆದುಳಿಗೆ ತಲುಪುವ ಸಂವೇದನೆಗೂ ಚಂದ್ರನಾಡಿಯ ಸವರುವಿಕೆಯಿಂದ ತಲುಪುವ ಸಂವೇದನೆಗೂ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದನ್ನು ಕಂಡುಕೊಂಡಿದ್ದಾರೆ. ಅಂದರೆ ಮಗು ಹಾಲು ಕುಡಿಯುವ ಮೂಲಕವೂ ತಾಯಿ ಅತ್ಯಂತ ಪಾವನ ಭಾವನೆ ಮತ್ತು ಕಾಮೋತ್ತೇಜತೆಯ ಪರಾಕಾಷ್ಠೆಯನ್ನು ತಲುಪುವುದು ಸಾಧ್ಯ.

ಮಹಿಳೆಯರೂ ಅವಧಿಗೂ ಮುನ್ನ ಪರಾಕಾಷ್ಠೆಯನ್ನು ತಲುಪಬಹುದು
ಪುರುಷರಲ್ಲಿ ಅವಧಿಗೂ ಮುನ್ನ ಸ್ಖಲನವಾಗುವಂತೆ ಮಹಿಳೆಯರೂ ಅವಧಿಗೂ ಮುನ್ನ ಪರಾಕಾಷ್ಠೆಯನ್ನು ತಲುಪಬಹುದು. ಅಂದರೆ ಅವರಿಗೆ ನಿಜವಾಗಿ ಯಾವಾಗ ಬೇಕಾಗಿತ್ತೋ ಅದಕ್ಕೂ ಮುನ್ನವೇ ಪರಾಕಾಷ್ಠೆ ಬಂದುಬಿಡಬಹುದು. ಯಾವಾಗಲೂ ಅಲ್ಲದಿದ್ದರೂ, ಅಪರೂಪವಾಗಿಯಾದರೂ ಆಗಬಹುದು.



Click it and Unblock the Notifications