For Quick Alerts
ALLOW NOTIFICATIONS  
For Daily Alerts

  ಒಂದೇ ರಾಶಿಯವರು ಮದುವೆಯಾದರೆ ಏನಾದರೂ ತೊಂದರೆ ಆಗುವುದೇ?

  By Hemanth
  |

  ಭಾರತೀಯರಲ್ಲಿ, ಅದರಲ್ಲೂ ಹಿಂದೂಗಳಲ್ಲಿ ಹೆಣ್ಣು ಮತ್ತು ಗಂಡಿನ ಜಾತಕ ನೋಡಿ ಅದು ಕೂಡಿ ಬಂದರೆ ಮಾತ್ರ ಮದುವೆ ಮಾಡುವಂತಹ ಸಂಪ್ರದಾಯವಿದೆ. ಆಧುನಿಕತೆ ಬಂದಂತೆ ಇದು ಕಡಿಮೆಯಾಗುತ್ತಾ ಸಾಗಿದೆ. ಆದರೆ ಪ್ರೀತಿಸುವವರು ಜಾತಕ ನೋಡಿ ಪ್ರೀತಿಸಲ್ಲ, ಇಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆದರೆ ಆಗ ಸಂಬಂಧ ಬೆಸೆಯುವುದು.

  ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಒಂದೇ ರಾಶಿಯ ಗಂಡು ಹಾಗೂ ಹೆಣ್ಣು ಮದುವೆಯಾಗುವ ಸಂಭವ ಹೆಚ್ಚಾಗಿರುವುದು. ಇದನ್ನು ಪ್ರೀತಿಸಿದವರು ಕಡೆಗಣಿಸಿದರೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದೇ ರಾಶಿಯವರು ಮದುವೆಯಾದರೆ ಅದರಿಂದ ಏನೆಲ್ಲಾ ತೊಂದರೆಗಳು ಮತ್ತು ಲಾಭಗಳು ಇವೆ ಎಂದು ತಿಳಿದುಕೊಳ್ಳಿ....

  ಮೇಷ ರಾಶಿಯವನೊಂದಿಗೆ ಮೇಷ ರಾಶಿ

  ಮೇಷ ರಾಶಿಯವನೊಂದಿಗೆ ಮೇಷ ರಾಶಿ

  ಒಂದೇ ರಾಶಿಚಕ್ರದವರಿಬ್ಬರು ಮದುವೆಯಾದರೆ ಯಾವ ರೀತಿಯ ಬೆಂಕಿ ಹಬ್ಬಬಹುದು ಎಂಬುವುದನ್ನು ನೀವೇ ಊಹಿಸಿ. ದಂಪತಿ ಕೂಡ ಇದೇ ರೀತಿಯಾಗಿ ಇರಲಿದ್ದಾರೆ. ಇವರಿಬ್ಬರು ಜತೆಯಾಗಿರುವುದು ತುಂಬಾ ಕಠಿಣ. ಇಬ್ಬರು ಕೂಡ ತುಂಬಾ ಕೋಪ ಪ್ರವೃತ್ತಿಯಾಗಿರುವ ಕಾರಣದಿಂದ ಸಮಸ್ಯೆಗಳು ಆಗಾಗ ಬರುವುದು ಮತ್ತು ಇವರಿಬ್ಬರ ಅಹಂನಿಂದಾಗಿ ಎಲ್ಲವೂ ದಿಕ್ಕೆಟ್ಟು ಹೋಗುವುದು. ಇವರಿಬ್ಬರು ಒಂದೇ ರೀತಿಯಲ್ಲಿ ಯಾವಾಗಲೂ ಚರ್ಚೆಯಲ್ಲಿ ತೊಡಗಿರುವ ಕಾರಣದಿಂದ ಸಂಬಂಧವು ಮುರಿದು ಹೋಗುವುದು.

  ವೃಷಭ ರಾಶಿ ಗಂಡು ಮತ್ತು ವೃಷಭ ರಾಶಿ ಹೆಣ್ಣು

  ವೃಷಭ ರಾಶಿ ಗಂಡು ಮತ್ತು ವೃಷಭ ರಾಶಿ ಹೆಣ್ಣು

  ಇಬ್ಬರು ಕೂಡ ಭೂಮಿಯ ಚಿಹ್ನೆಯಾಗಿರುವರು. ಸ್ಥಿರತೆಗಾಗಿ ಇವರ ಅನ್ವೇಷಣೆಯು ಅದ್ಭುತವಾಗಿ ಕೆಲಸ ಮಾಡುವುದು. ಈ ರಾಶಿಯವರು ಒಳ್ಳೆಯ ದಂಪತಿಗಳಾಗುವರು. ಜತೆಯಾಗಿ ಇರುವುದರಿಂದ ಇವರು ಒಂದೇ ರೀತಿಯಲ್ಲಿ ಆಲೋಚನೆ ಮಾಡುವರು ಮತ್ತು ಅದೇ ರೀತಿಯಲ್ಲಿ ಕೆಲಸ ಮಾಡುವುದರಿಂದ ಇದು ಕೆಲಸ ಮಾಡುವುದು. ಕ್ರೀಡೆ, ಅಡುಗೆ, ಪ್ರಕೃತಿಗೆ ಹಿಂತಿರುಗಿಸುವುದು ಇತ್ಯಾದಿ ಸಮಾಜ ಹವ್ಯಾಸದಿಂದ ಅವರಿಬ್ಬರು ನಡುವಿನ ಸಂಬಂಧ ಬೆಸೆಯುವುದು.

  ಮಿಥುನ ಮತ್ತು ಮಿಥುನ

  ಮಿಥುನ ಮತ್ತು ಮಿಥುನ

  ಈ ರಾಶಿಯವರು ಯಾವತ್ತೂ ಬೇಸರಗೊಳ್ಳುವುದಿಲ್ಲ. ಯಾಕೆಂದರೆ ಇವರ ಶಕ್ತಿಯ ಪ್ರಮಾಣ ಆ ರೀತಿಯಲ್ಲಿ ಇರುವುದು. ಈ ಸಂಬಂಧದಲ್ಲಿ ಒಬ್ಬ ವ್ಯಕ್ತಿ ಸ್ವಲ್ಪ ಕೋಪಿಷ್ಠನಾದರೂ ಇನ್ನೊಬ್ಬ ಇದನ್ನು ಸರಿಹೊಂದಿಸುತ್ತಾನೆ. ಇದರಿಂದಾಗಿ ಅವರು ಪರಸ್ಪರರನ್ನು ಗೌರವಿಸಿ, ಪ್ರೋತ್ಸಾಹಿಸುವರು. ಸಂಬಂಧದ ಕಡೆಗಿನ ಅವರ ಆಕರ್ಷಣೆಯು ಒಬ್ಬರಿಗೆ ಬೇಜಾರು ಆಗುವ ತನಕ ಮುಂದುವರಿಯುವುದು. ದಂಪತಿಯಾಗಿ ಇವರನ್ನು ಊಹಿಸಲು ಸಾಧ್ಯವಾಗದು. ಆದರೆ ಬಯಸಿದರೆ ಇವರು ಒಳ್ಳೆಯ ಜೋಡಿಯಾಗಬಲ್ಲರು.

  ಕರ್ಕಾಟಕದ ಹುಡುಗಿ ಮತ್ತು ಕರ್ಕಾಟಕದ ಹುಡುಗ

  ಕರ್ಕಾಟಕದ ಹುಡುಗಿ ಮತ್ತು ಕರ್ಕಾಟಕದ ಹುಡುಗ

  ಇಬ್ಬರು ತುಂಬಾ ಸೂಕ್ಷಮತಿಗಳು ಮತ್ತು ಪೋಷಣೆಯ ಗುಣವನ್ನು ಹೊಂದಿರುವರು. ಇದರಿಂದ ಇಬ್ಬರ ನಡುವಿನ ಹೊಂದಾಣಿಕೆ ಶ್ರೇಷ್ಠವಾಗಿರುವುದು. ಈ ಸಂಬಂಧವು ಭಾವನಾತ್ಮಕವಾಗಿಯೂ ಪ್ರಮುಖವಾಗಿರುವುದು. ಇವರು ಪರಸ್ಪರರ ಭಾವನೆಯನ್ನು ಅರ್ಥ ಮಾಡಿಕೊಂಡು ಹೋಗುವ ಕಾರಣ ಎಲ್ಲವೂ ಸುಲಭವಾಗಿ ಸಾಗುವುದು. ಇದರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಭಾವನಾತ್ಮಕವಾಗಿ ಇದು ದೊಡ್ಡ ಸಮಸ್ಯೆ ಉಂಟು ಮಾಡಬಹುದು.

  ಸಿಂಹ ಮತ್ತು ಸಿಂಹದ ಜೋಡಿ

  ಸಿಂಹ ಮತ್ತು ಸಿಂಹದ ಜೋಡಿ

  ಇದು ತುಂಬಾ ಕೆಟ್ಟ ಜೋಡಿ ಮತ್ತು ಇದನ್ನು ಯಾವತ್ತೂ ಶಿಫಾರಸು ಮಾಡಲಾಗುವುದಿಲ್ಲ. ಈ ರಾಶಿಯವರು ದಂಪತಿಯಾಗಿರುವುದು ಎರಡು ಬಾಂಬ್ ಗಳು ಜತೆಯಾಗಿರುವಂತೆ! ಯಾವ ಬಾಂಬ್ ಯಾವಾಗ ಸಿಡಿಯುವುದು ಎಂದು ಹೇಳಲು ಸಾಧ್ಯವಾಗದು. ಇವರಿಬ್ಬರ ನಿರಂತರ ಆಕಾಂಕ್ಷೆಯು ಸಮೀಕರಣವನ್ನು ತೊಂದರೆಗೆ ಸಿಲುಕಿಸಬಹುದು. ಇಬ್ಬರು ಪ್ರಾಬಲ್ಯ ಸಾಧಿಸುವ ಮತ್ತು ಬೇಗನೆ ಕುಪಿತರಾಗುವ ಗುಣ ಹೊಂದಿರುವರು. ಇದರಿಂದ ಈ ಸಂಬಂಧ ಬೇಗನೆ ಕೊನೆಯಾಗುವುದು.

  ಕನ್ಯಾ ಮತ್ತು ಕನ್ಯಾ

  ಕನ್ಯಾ ಮತ್ತು ಕನ್ಯಾ

  ಈ ರಾಶಿಯವರು ಪರಸ್ಪರರಿಗೆ ಹೇಳಿ ಮಾಡಿಸಿರುವ ಜೋಡಿಯಾಗಿದೆ. ಇವರಿಬ್ಬರಿಗೆ ಪರಸ್ಪರ ಆಶಯವಿರುವುದು. ಪರಸ್ಪರರನ್ನು ಸೆಳೆಯುವ ಶೋಧನೆಯು ಅಂತ್ಯವಾಗದೆ ಇರುವ ಕಾರಣದಿಂದ ಅವರಿಬ್ಬರ ಸಂಬಂಧವು ಬಲಗೊಳ್ಳುವುದು. ನಿಸ್ವಾರ್ಥ ಮತ್ತು ದಾನ ಮಾಡುವಂತಹ ಗುಣವನ್ನು ಪರಸ್ಪರ ಪ್ರಶಂಸೆ ಮಾಡಿ ಅರ್ಥ ಮಾಡಿಕೊಳ್ಳುವರು. ಸಂಬಂಧವು ಉತ್ತಮವಾಗಿ ಬೆಳೆಯಲು ಇವರು ನಿರಂತರ ಪ್ರಯತ್ನ ಮಾಡುವರು. ಇವರು ಪರಸ್ಪರರಿಗೆ ಬೆಂಬಲದ ಶ್ರೇಷ್ಠ ಕಂಬವಾಗಿರುವರು.

  ತುಲಾದ ಹೆಣ್ಣು ಮತ್ತು ತುಲಾದ ಗಂಡಿನ ಜೋಡಿ

  ತುಲಾದ ಹೆಣ್ಣು ಮತ್ತು ತುಲಾದ ಗಂಡಿನ ಜೋಡಿ

  ಪರಸ್ಪರರ ತಪ್ಪುಗಳನ್ನು ಸ್ವೀಕರಿಸಿಕೊಂಡು, ಪಾರದರ್ಶಕವಾಗಿ ಇರಲು ಬಯಸಿದರೆ ಆಗ ಈ ಜೋಡಿಯು ಅದ್ಭುತವಾಗಿ ಕೆಲಸ ಮಾಡುವುದು. ಇಬ್ಬರು ಕೂಡ ಸೌಹಾರ್ದತೆ ಬಯಸುವರು. ಇವರು ಪರಸ್ಪರರೊಂದಿಗೆ ಮಾತನಾಡುವ ಬಗ್ಗೆ ನಿರ್ಧರಿಸದೆ ಇದ್ದರೆ ಆಗ ದೊಡ್ಡ ಮಟ್ಟದ ಸಮಸ್ಯೆಯಾಗಿ ಅವರ ಜೀವನದಲ್ಲಿ ಗೊಂದಲ ಉಂಟಾಗಬಹುದು. ಪರಸ್ಪರರು ಪ್ರೀತಿ ಹಾಗೂ ಭಾಂದವ್ಯದಿಂದ ಇರಲು ಕಠಿಣವಾಗಿ ಕೆಲಸ ಮಾಡಬೇಕು. ಆದರೆ ಆಳದಲ್ಲಿ ಇವರಿಗೆ ದ್ವೇಷವಿರುವುದು. ಇವರು ಪರಸ್ಪರರ ಹೃದಯ ಮೆಚ್ಚಿಕೊಂಡಾಗ ಇವರನ್ನು ಬೇರ್ಪಡಿಸಲಾಗದು ಮತ್ತು ಯಾವುದೇ ಚಂಡಮಾರುತಲ್ಲಿ ಇವರು ತೇಲಿ ಹೋಗುವರು.

   ವೃಶ್ಚಿಕ ಮತ್ತು ವೃಶ್ಚಿಕ

  ವೃಶ್ಚಿಕ ಮತ್ತು ವೃಶ್ಚಿಕ

  ತುಂಬಾ ವಿಚಿತ್ರ ವ್ಯಕ್ತಿತ್ವ ಮತ್ತು ಪರಸ್ಪರ ಆಸಕ್ತಿದಾಯಕ ಭಾವೋದ್ರೇಕ ಹೊಂದಿರುವ ಕಾರಣದಿಂದ ಈ ಜೋಡಿಯು ಸಿಡಿಲು ಮಿಂಚಿನಂತಿರುವುದು. ನಂಬಿಕೆ ವಿಚಾರ, ಹೊಟ್ಟೆಕಿಚ್ಚು ಮತ್ತು ಸಂಶಯ ಇವರಿಬ್ಬರ ಸಂಬಂಧದಲ್ಲಿ ತೊಂದರೆ ಉಂಟು ಮಾಡಲಿದೆ. ಈ ರಾಶಿಯ ವ್ಯಕ್ತಿಗಳಿಬ್ಬರು ಜತೆಯಾಗಿರುವಾಗ ಬೇಡದ ಬಯಕೆಗಳಿರುವುದು. ಇದೇ ಅವರನ್ನು ಜತೆಯಾಗಿಡುವುದು. ಇವರು ಯಾವಾಗಲೂ ಜಗಳವಾಡುತ್ತಾ ಇರಬಹುದು. ಆದರೆ ಇದೇ ವೇಳೆ ಅವರ ಪ್ರೀತಿಯು ಯಾರಿಂದಲೂ ಭೇದಿಸಲಾಗದು.

  ಧನು ರಾಶಿಯ ದಂಪತಿ

  ಧನು ರಾಶಿಯ ದಂಪತಿ

  ಇವರಿಬ್ಬರು ಪರಸ್ಪರ ತುಂಬಾ ಆರೋಗ್ಯಕಾರಿ ಸ್ಪರ್ಧಿಯೆಂದು ಭಾವಿಸುವರು. ಪರಸ್ಪರರೊಂದಿಗೆ ಸಮಯವನ್ನು ಹೇಗೆ ಆನಂದಿಸುವುದು ಎಂದು ಅವರಿಗೆ ತಿಳಿದಿದೆ. ಇವರಿಬ್ಬರ ಮಧ್ಯೆ ಅಭಿಪ್ರಾಯ ಭೇದವಿದ್ದರೂ ಇವರು ಸಂವಹನ ನಡೆಸಲು ದಾರಿಯನ್ನು ಹುಡುಕುವರು ಮತ್ತು ಪರಸ್ಪರರು ಯಶಸ್ಸು, ಬೆಳವಣೆಗೆ ಮತ್ತು ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವರು. ಇನ್ನೊಂದು ಬದಿಯಲ್ಲಿ ಇವರಿಗೆ ಬದ್ಧತೆಯು ಸಮಸ್ಯೆಯಾಗಿ ಕಾಡಬಹುದು.

  ಮಕರ ರಾಶಿಯೊಂದಿಗೆ ಮಕರ ರಾಶಿ

  ಮಕರ ರಾಶಿಯೊಂದಿಗೆ ಮಕರ ರಾಶಿ

  ಸಾಮಾನ್ಯವಾಗಿ ಇದನ್ನು ಒಳ್ಳೆಯ ಜೋಡಿಯೆಂದು ಪರಿಗಣಿಸಲಾಗಿದೆ. ಸಂಬಂಧದಿಂದ ಹೊರಗಡೆ ಪರಸ್ಪರರ ಅಗತ್ಯಗಳೇನು ಎಂದು ಇವರು ಅರ್ಥ ಮಾಡಿಕೊಳ್ಳುವರು. ಇನ್ನೊಂದು ಬದಿಯಲ್ಲಿ ಇವರು ಪರಸ್ಪರ ಅರ್ಥ ಮಾಡಿಕೊಂಡು ಪರಸ್ಪರರ ಕೆಲಸವನ್ನು ಪ್ರೋತ್ಸಾಹಿಸುವರು. ಇವರ ವೈಯಕ್ತಿಕ ಆಕಾಂಕ್ಷೆ ಮತ್ತು ಅಭಿಲಾಷೆಯು ಸಂಬಂಧದಲ್ಲಿ ಮಧ್ಯಪ್ರವೇಶ ಮಾಡಿದರೆ ಇದು ದೊಡ್ಡ ಅಪಾಯ ತಂದೊಡ್ಡುವುದು.

  ಕುಂಭ ರಾಶಿ ಮತ್ತು ಕುಂಭ ರಾಶಿ

  ಕುಂಭ ರಾಶಿ ಮತ್ತು ಕುಂಭ ರಾಶಿ

  ಈ ರಾಶಿಗಳೆರಡು ಜತೆಯಾದಾಗ ಇವರ ಆಧ್ಯಾತ್ಮಿಕ ಶಕ್ತಿಯನ್ನು ಉನ್ನತ್ತ ಮಟ್ಟದಲ್ಲಿ ಇರಿಸಿಕೊಳ್ಳುವುದು ತುಂಬಾ ಕಷ್ಟವಾಗುವುದು. ಇಬ್ಬರು ಉದಾರವಾದಿಗಳು ಮತ್ತು ಸಹನಶೀಲರಾಗಿರುವ ಕಾರಣದಿಂದ ಇದು ಒಳ್ಳೆಯ ಜೋಡಿ. ಭಾವನಾತ್ಮಕ ದೃಷ್ಟಿ ಮತ್ತು ಪರಸ್ಪರರ ಭಾವನೆ ಬದಲಾಗುವುದನ್ನು ನಿರ್ವಹಿಸುವುದು ಇವರಿಬ್ಬರ ಸಂಬಂಧಕ್ಕೆ ತುಂಬಾ ಕಠಿಣವಾಗಬಹುದು.

  ಮೀನ ರಾಶಿಯ ಸತಿ ಮತ್ತು ಪತಿ

  ಮೀನ ರಾಶಿಯ ಸತಿ ಮತ್ತು ಪತಿ

  ಒಂದೇ ಚಿಹ್ನೆಯ ಇಬ್ಬರು ಸತಿಪತಿಗಳಾಗುವ ಕಾರಣ ಇವರು ಜತೆಯಾಗಿಯೇ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಒಳ್ಳೆಯ ಉದಾಹರಣೆಯಾಗುವರು. ಇವರು ಪರಸ್ಪರರೊಂದಿಗೆ ಒಳ್ಳೆಯ ಜತೆಗಾರರಾಗಿ ಇರುವರು. ಒಂದೇ ರಾಶಿಚಕ್ರದವರಾಗಿರುವ ಕಾರಣದಿಂದ ಇವರು ಮೋಸಕ್ಕೆ ಒಳಗಾಗುವಂತಹ ಸಾಧ್ಯತೆಗಳು ಇರುವುದು. ಉದಾರವಾಗಿರುವಲ್ಲಿ ಅವರು ಎಂದಿಗೂ ವಾಸಿಸುವುದಿಲ್ಲ. ಇದರಿಂದಾಗಿ ಜತೆಯಾಗಿಯೇ ವಿಶ್ವವನ್ನು ಅನ್ವೇಷಿಸಲು ತೊಡಗಿಕೊಳ್ಳುವರು.

  English summary

  same-zodiac-sign-marriage-relationship-compatibility

  It is generally seen that when two people fall in love, it is either for the reason that there is some 'opposite attraction' or it could be due to the 'like-mindedness'. Relationships are like a jigsaw puzzle, and the only perfect pieces can fit in and fix the void. Here, in this article, we are revealing to you the pros and cons of what happens when two individuals of the same sign decide to get married or be in a relationship. Check it out.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more