Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಿಯಲ್ ಸ್ಟೋರಿ: ಆಕೆ ಸಣ್ಣದಾಗಿದೆ ಎಂದಳು...ಆತ ಅದನ್ನು ಕತ್ತರಿಸಿಯೇ ಬಿಟ್ಟ…!
ಪುರುಷರು ಲೈಂಗಿಕ ವಿಚಾರದಲ್ಲಿ, ಅವರಲ್ಲೂ ಅವರ ಪುರುಷತ್ವ ಮತ್ತು ಶಿಶ್ನದ ಗಾತ್ರದ ಬಗ್ಗೆ ಟೀಕೆ ಮಾಡಿದರೆ ಆಗ ಅವರು ಅದನ್ನು ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ. ಕೆಲವೊಂದು ಸಲ ಶಿಶ್ನದ ಗಾತ್ರದ ಬಗ್ಗೆ ಪುರುಷರು ಚಿಂತೆ ಮಾಡುವುದು ಇದೆ. ಶಿಶ್ನದ ಗಾತ್ರವು ಕೆಲವು ಪುರುಷರಲ್ಲಿ ಹೆಮ್ಮೆಯನ್ನು ಉಂಟು ಮಾಡಿದರೆ ಇನ್ನು ಕೆಲವರು ಪುರುಷರಲ್ಲಿ ಇದು ಚಿಂತೆಗೆ ಕಾರಣವಾಗಿರುವುದು.
ಆದರೆ ನಾವು ಇಲ್ಲಿ ಹೇಳಲು ಹೊರಟಿರುವುದು ಒಂದು ಸತ್ಯಘಟನೆಯ ಬಗ್ಗೆ. ಗೆಳತಿಯೊಬ್ಬಳು ಆತನ ಶಿಶ್ನವನ್ನು ನೋಡಿ ತುಂಬಾ ಸಣ್ಣದಿದೆ ಎಂದು ಬಿಟ್ಟುಹೋದಳು. ಗುವಾಂಗ್ಝೌ ಕಾಲೇಜಿನ ವಿದ್ಯಾರ್ಥಿಯ ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಯಿತು. ಗೆಳತಿಯೊಂದಿಗೆ ಜಗಳ ಮಾಡಿಕೊಂಡ ಬಳಿಕ ವಿದ್ಯಾರ್ಥಿಯು ತನ್ನ ಜನನೇಂದ್ರಿಯವನ್ನೇ ಕತ್ತರಿಸಿದೆ. ಈ ಕಥೆಯ ಬಗ್ಗೆ ಇನ್ನಷ್ಟು ಓದಲು ಮುಂದೆ ಓದಿ...

ಇದು ನಡೆದಿರುವುದು ಚೀನಾದಲ್ಲಿ…
ಚೀನಾದ ಗುವಾಂಗ್ಝೌನಲ್ಲಿ ಈ ಘಟನೆಯು ನಡೆದಿದೆ ಎಂದು ಹೇಳಲಾಗುತ್ತದೆ. ತನ್ನ ಗೆಳತಿ ಜತೆಗೆ ಜಗಳವಾಡಿಕೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಶ್ನವನ್ನೇ ಕತ್ತರಿಸಿ ಹಾಕಿದ.

ಚಿತ್ರಗಳು ಮತ್ತು ವಿಡಿಯೋ ವೈರಲ್ ಆಯಿತು!
ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಫೋಟೊಗಳು ತುಂಬಾ ವೈರಲ್ ಆಗುತ್ತಲಿದೆ. ಗುವಾಂಗ್ಝೌನ ಗುಂಗ್ ಡಾಂಗ್ ಪೆಝೆಂಗ್ ನ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ತುಂಬಾ ತಾಳ್ಮೆಯಿಂದ ನಡೆದುಕೊಂಡು ಹೋಗುತ್ತಿದ್ದಾನೆ. ಈ ಯುವಕನು ಕೇವಲ ಟೀ ಶರ್ಟ್ ಮಾತ್ರ ಧರಿಸಿದ್ದಾನೆ. ಕೆಳಗಿನ ಭಾಗದಲ್ಲಿ ಏನು ಇಲ್ಲ. ಕಾಲಿನಲ್ಲಿ ರಕ್ತ ಒಣಗಿರುವ ಕಲೆಗಳು ಇವೆ.

ಕಾಲೇಜು ಸುದ್ದಿಯನ್ನು ದೃಢಪಡಿಸಿದೆ
ವಿದ್ಯಾರ್ಥಿ ಬಗ್ಗೆ ಸುದ್ದಿಯು ವೈರಲ್ ಆಗುತ್ತಲಿರುವಂತೆ ಕಾಲೇಜಿನ ಆಡಳಿತವು ಪ್ರಕಟಣೆಯೊಂದನ್ನು ನೀಡಿದ್ದು, ವಿದ್ಯಾರ್ಥಿಯು ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವುದು ನಿಜ. ಆದರೆ ಇದರ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದೆ.

ಗಾಳಿಸುದ್ದಿಯು ಹೀಗೂ ಇದೆ…
ವಿದ್ಯಾರ್ಥಿಯ ಗೆಳತಿಯು ಆತನನ್ನು ತ್ಯಜಿಸಿದಳು ಮತ್ತು ಆತನ ಶಿಶ್ನದ ಗಾತ್ರದ ಬಗ್ಗೆ ತಮಾಷೆ ಮಾಡಿದಳು. ಇದರಿಂದ ತನ್ನ ಪುರುಷತ್ವಕ್ಕೆ ಹಾನಿಯಾಗಿದೆ ಎಂದು ಭಾವಿಸಿದ ಆತ ನಿರಾಶಿಯಿಂದ ಅದನ್ನು ಕತ್ತರಿಸಿಕೊಂಡಿದ್ದಾನೆ.

ಕಟುಸತ್ಯ
ಕಾಲೇಜಿನ ಕ್ಯಾಂಪಸ್ ನಲ್ಲಿ ತುಂಬಾ ತಾಳ್ಮೆಯಿಂದ, ಏನೂ ಆಗದಂತೆ ನಡೆದುಕೊಂಡು ಹೋಗುತ್ತಿರುವಂತಹ ವಿದ್ಯಾರ್ಥಿಯ ತೊಡೆಯ ಭಾಗದಲ್ಲಿ ರಕ್ತದ ಕಲೆಗಳು ಇವೆ. ನಿಜವಾಗಿಯೂ ಆತ ಇಂತಹ ಕ್ರಮ ತೆಗೆದುಕೊಂಡಿದ್ದಾನೆಯಾ ಎನ್ನುವುದು ನಮಗೆ ಅಚ್ಚರಿ ಮೂಡಿಸುವುದು.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಶಿಶ್ನ ಕತ್ತರಿಸಿಕೊಂಡಿರುವ ವಿದ್ಯಾರ್ಥಿಯು ಯಾವ ಕಾರಣಕ್ಕಾಗಿ ಹೀಗೆ ಮಾಡಿದ್ದಾನೆ ಎಂದು ಕಾಲೇಜಿನ ಆಡಳಿತಕ್ಕೂ ಗೊತ್ತಿಲ್ಲ. ಆದರೆ ಕ್ಷುಲ್ಲಕ ಕಾರಣಕ್ಕಾಗಿ ಹೀಗೆ ಮಾಡುವುದು ಸರಿಯೆಂದು ನಿಮಗೆ ಅನಿಸುತ್ತಿದೆಯಾ? ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ. ಇಂತಹ ಆಸಕ್ತಿದಾಯಕ ಮತ್ತು ವಿಚಿತ್ರ ಸುದ್ದಿಗಳಿಗಾಗಿ ನೀವು ಇದೇ ಸೆಕ್ಷನ್ ನಲ್ಲಿ ಓದುತ್ತಲಿರಿ. ವಿಶ್ವದೆಲ್ಲೆಡೆಯಿಂದ ಇಂತಹ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ.



Click it and Unblock the Notifications
