ರಾತ್ರಿ ಮಂಚದ ಕೆಳಗಡೆ ಒಂದು ಲೋಟ ನೀರು ಇಟ್ಟು ಮಲಗಿ- ನಕಾರಾತ್ಮಕ ಶಕ್ತಿ ದೂರವಾಗುವುದು

Posted By: Deepu
Subscribe to Boldsky
ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೆಂದು ತಿಳಿಯುವುದು ಹೇಗೆ? | Oneindia Kannada

ಮಾನಸಿಕ ಕಾಯಿಲೆಯೆನ್ನುವುದು ಕೆಲವೊಂದು ಮಾನಸಿಕ ಅಂಶಗಳಿಂದ ಬರುವುದು. ಆದರೆ ಈ ಕಾಯಿಲೆಗಳು ಒಬ್ಬ ವ್ಯಕ್ತಿಯಲ್ಲಿ ಬೆಳೆಯಲು ಹಾಗೂ ಹೆಚ್ಚಾಗಲು ಕೆಲವು ಆಧ್ಮಾತ್ಮಿಕ ಅಂಶಗಳು ಕೂಡ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೆಳುತ್ತಾರೆ. ಕೆಲವೊಂದು ಸಲ ದೊಡ್ಡ ದೊಡ್ಡ ಮನಶಾಸ್ತ್ರಜ್ಞರು ಕೂಡ ಮಾನಸಿಕ ರೋಗ ಗುಣಪಡಿಸಲು ಮತ್ತು ಅವರ ಸುತ್ತಲಿನ ನಕಾರಾತ್ಮ ಶಕ್ತಿ ತೆಗೆಯಲು ಸಾಧ್ಯವಾಗುವುದಿಲ್ಲ.

ನಕಾರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತಲಿದೆ ಎಂದು ನಿಮಗೆ ಅನಿಸಲು ಆರಂಭಿಸಿದ್ದರೆ, ಆಗ ನೀವು ಇದಕ್ಕಾಗಿ ದೊಡ್ಡ ಖರ್ಚು ಮಾಡಬೇಕೆಂದಿಲ್ಲ. ಈ ಲೇಖನದಲ್ಲಿ ನೀಡಿರುವಂತಹ ಒಂದು ವಿಧಾನ ಪಾಲಿಸಿಕೊಂಡು ಹೋದರೆ ಆಗ ಪರಿಹಾರ ಸಿಗುವುದು. ಈ ವಿಧಾನದಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುವುದು ಮತ್ತು ನಕಾರಾತ್ಮಕ ಶಕ್ತಿಯು ದೂರವಾಗುವುದು. ಈ ವಿಧಾನವು ತುಂಬಾ ನೈಸರ್ಗಿಕವಾಗಿರುವುದು ಮತ್ತು ಇದರಿಂದಾಗಿ ನೀವು ಬೇಗನೆ ಚೇತರಿಸಿಕೊಳ್ಳಬಹುದು.

ಈ ಲೇಖನದಲ್ಲಿ ಹೇಳಿರುವಂತಹ ವಿಧಾನವು ಒಂದು ಲೋಟ ನೀರನ್ನು ಮಂಚದ ಕೆಳಗಡೆ ಇಡುವುದು. ನಕಾರಾತ್ಮಕ ಶಕ್ತಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ತಡೆಯಲು ನೀವು ಪ್ರಯತ್ನಿಸಬೇಕು. ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಇದು ತುಂಬಾ ಪರಿಣಾಮಕಾರಿ ವಿಧಾನ....

ನೀರಿನಲ್ಲಿದೆ ದುಷ್ಟಶಕ್ತಿಯ ನಾಶ ಪಡಿಸುವ ಶಕ್ತಿ

ನೀರಿನಲ್ಲಿದೆ ದುಷ್ಟಶಕ್ತಿಯ ನಾಶ ಪಡಿಸುವ ಶಕ್ತಿ

ನೀರು ದುಷ್ಟಶಕ್ತಿಯ ನಾಶ ಮಾಡಿ, ನಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ದೂರ ಮಾಡುವುದು.ಇದರಿಂದ ಮಂಚದ ಕೆಳಗಡೆ ರಾತ್ರಿ ವೇಳೆ ಒಂದು ಲೋಟ ನೀರು ಇಡಬೇಕು. ನೀರು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತೆ. ಇದರಿಂದ ಕೋಣೆಯಲ್ಲಿರುವ ನಕಾರಾತ್ಮಕತೆದೂರವಾಗುವುದು.

ಇದನ್ನು ಮಾಡುವುದು ಹೇಗೆ?

ಇದನ್ನು ಮಾಡುವುದು ಹೇಗೆ?

ಇದನ್ನು ಮಾಡುವುದು ಅಷ್ಟು ಕಠಿಣ ಕೆಲಸವಲ್ಲ. ಒಂದು ಲೋಟ ನೀರನ್ನು ತೆಗೆದುಕೊಂಡು ಅದನ್ನು ಮಂಚದ ಕೆಳಗಡೆ ಇಡಬೇಕು. ಇದು ರಾತ್ರಿಯಿಡಿ ಮಂಚದಡಿಯಲ್ಲಿಯೇ ಇರಬೇಕು. ಮರುದಿನ ಎದ್ದ ಬಳಿಕ ಈ ಲೋಟದ ನೀರನ್ನು ಗಮನಿಸಬೇಕು.

ನೀರಿನಲ್ಲಿ ಗುಳ್ಳೆಗಳು ಇದ್ದರೆ?

ನೀರಿನಲ್ಲಿ ಗುಳ್ಳೆಗಳು ಇದ್ದರೆ?

ಒಂದು ವೇಳೆ ನೀರಿನಲ್ಲಿ ಗುಳ್ಳೆಗಳು ಇದ್ದರೆ ಅಥವಾ ನೀರು ಸ್ವಲ್ಪ ಬೂದು ಬಣ್ಣಕ್ಕೆ ತಿರುಗಿದ್ದರೆ, ನಿಮ್ಮ ವಿಧಾನ ಫಲಿಸಿದೆ ಎಂದರ್ಥ. ನಾಕಾರಾತ್ಮಕ ಶಕ್ತಿಯು ಪರಿಣಾಮಕಾರಿಯಾಗಿ ಹೊರಹೋಗಿದೆ.

 ಈ ನೀರನ್ನು ಶೌಚಾಲಯದ ಒಳಗೆ ಚೆಲ್ಲಿ

ಈ ನೀರನ್ನು ಶೌಚಾಲಯದ ಒಳಗೆ ಚೆಲ್ಲಿ

ಇದು ಪರಿಣಾಮಕಾರಿ ಆಗಿದೆ ಎಂದು ನಿಮಗೆ ಅನಿಸಿದ ಬಳಿಕ ಕೊನೆಯದಾಗಿ ನೀರನ್ನು ಶೌಚಾಲಯದ ಒಳಗೆ ಚೆಲ್ಲಿ ಫ್ಲಶ್ ಮಾಡಿ. ಮರುದಿನ ಇದೇ ವಿಧಾನ ಮುಂದುವರಿಸಬಹುದು. ಆದರೆ ನೀವು ಹಿಂದಿನ ರಾತ್ರಿಯಿಟ್ಟ ಅದೇ ನೀರನ್ನು ಮತ್ತೆ ಮಂಚದ ಕೆಳಗೆ ಇಡಬಾರದು. ಇದನ್ನು ಯಾವತ್ತಿಗೂ ಮಾಡಬೇಡಿ.

English summary

put-glass-water-under-your-bed-every-night--will-be-amazed

Mental diseases can be a result of many psychological factors, but some researchers say that spiritual factors also play their role when it comes to the development of these diseases. Sometimes not even the best therapies help to get a person out of some mental disease, and to remove the negative energy that surrounds him or her.