ಊರಿನ ಹೆಸರು ದ್ವಂದ್ವಾರ್ಥ ಹೊಂದಿದೆಯೇ? ಈ ತಾಣಕ್ಕೆ ಹೆಸರು ಒದಗಿಸಿ!

Posted By: Arshad Hussain
Subscribe to Boldsky

ಜಗತ್ತಿನ ಅತ್ಯಂತ ಜನಪ್ರಿಯ ವಯಸ್ಕರ ಜಾಲತಾಣವಾದ ಪಾರ್ನ್ ಹಬ್ ತನ್ನ ಗ್ರಾಹಕರಿಗೆ ಸದಾ ಹೊಸತನ್ನು, ಕೊಂಚ ವಿನೋದದ ಪೋಲಿ ಭಾಷೆ ಹಾಗೂ ಭಿನ್ನವಾದುದನ್ನು ನೀಡುತ್ತಾ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಈ ತಾಣದಲ್ಲಿ ಪ್ರಕಟವಾಗಿರುವ ಸಾಹಿತ್ಯದ ಜೊತೆಗೇ ತನ್ನ ಸರಕನ್ನು ಮಾರುಕಟ್ಟೆಯಲ್ಲಿ ನಗದೀಕರಣಗೊಳಿಸುವ ತಂತ್ರಗಳು ಗ್ರಾಹಕರ ಗಮನವನ್ನು ಸೆಳೆಯಲು ಖಂಡಿತಾ ಯಶಸ್ವಿಯಾಗುತ್ತವೆ. ಪ್ರಸ್ತುತ ಈ ತಾಣ ಒಂದು ಹೊಸ ಅಭಿಯಾನವನ್ನು ಆರಂಭಿಸಿದೆ.

ಅದೆಂದರೆ ವಿಶ್ವದಾದ್ಯಂತ ಜನರಿಂದ ತಮ್ಮ ಊರಿನ ದ್ವಂದ್ವಾರ್ಥದ ಹೆಸರನ್ನು ತಿಳಿಸಿ ತಮ್ಮ ತಾಣದಲ್ಲಿ ದಾಖಲಿಸಿಕೊಳ್ಳಲು ಕೇಳಿಕೊಂಡಿದೆ. ಅಂದರೆ ಈ ಊರಿನ ಹೆಸರು ಒಳ್ಳೆಯ ಅರ್ಥವನ್ನೂ, ಪೋಲಿ ಅರ್ಥವನ್ನೂ ಹೊಂದಿರಬೇಕು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ವ್ಯಾಲೈಂಟೈನ್ ದಿವಸದ ಕೊಡುಗೆ

ವ್ಯಾಲೈಂಟೈನ್ ದಿವಸದ ಕೊಡುಗೆ

ಪಾರ್ನ್ ಹಬ್ ಎಂದಿಗೂ ತನ್ನ ವಿಶಿಷ್ಟ ಹಾಗೂ ಕಚಗುಳಿ ಇಡುವಂತಹ ಕೊಡುಗೆಗಳಿಂದ ಸದಾ ಪ್ರಚಲಿತವಾಗಿದ್ದು ಅತ್ಯುತ್ತಮ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತದೆ. ವ್ಯಾಲೈಂಟೈನ್ ದಿನದಂದು ಸಾಮಾನ್ಯವಾಗಿ ಹಣ ಕೊಟ್ಟು ಸಂದರ್ಶಿಸಬೇಕಾದ ಈ ತಾಣವನ್ನು ಇಡಿಯ ದಿನ ಪುಕ್ಕಟೆಯಾಗಿ ನೋಡಬಹುದು. ಇಂತಹ ಕೊಡುಗೆಗಳು ಕಾಲಕ್ಕೆ ತಕ್ಕಂತೆ, ಸಂದರ್ಭಾನುಸಾರ ಬದಲಾಗುತ್ತಲೂ ಇರುತ್ತವೆ.

ಈಗ ಈ ತಾಣ ’ಒಬ್ಬ ಸಂರಕ್ಷಕ’ ಎಂಬ ಆಟ ಆಡಲು ಹೊರಟಿದೆ

ವ್ಯಾಲಂಟೈನ್ಸ್ ದಿನಾಚರಣೆಯಲ್ಲಿ ಈ ತಾಣವನ್ನು ಸಂದರ್ಶಿರುವ ಒಂಟಿ ಜೀವಿಗಳನ್ನು ಜೋಡಿಯಾಗಿಸುವ ಪುಣ್ಯದ ಕಾರ್ಯವನ್ನು ಮಾಡುವ ಜೊತೆಗೇ ಇನ್ನೊಂದು ವರ್ಗದ ಜನತೆಗೂ ಬೇರೆಯೇ ವಿಧದ ಕೊಡುಗೆಯನ್ನು ನೀಡ ಹೊರಟಿದೆ. ಅದೆಂದರೆ, ಉದ್ದೇಶರಹಿತವಾಗಿ ಪಡೆದಿರುವ ದ್ವಂದ್ವಾರ್ಥದ ಹೆಸರುಳ್ಳ ಊರಿನ ನಿವಾಸಿಗಳು ತಮ್ಮ ಊರಿನ ಹೆಸರನ್ನು ಹೆಸರಿಸಿ ಈ ತಾಣದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಈ ಪಟ್ಟಿಯಲ್ಲಿ ಭಾರತದ ಊರುಗಳೂ ಇವೆ

ಈ ಪಟ್ಟಿಯಲ್ಲಿ ಭಾರತದ ಊರುಗಳೂ ಇವೆ

ಈಗಾಗಲೇ ಹಲವಾರು ಭಾರತೀಯರೂ ತಮ್ಮ ಊರುಗಳ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಈ ಸ್ಪರ್ಧೆಗೆ ಲಾಯಕ್ಕು ಎನಿಸಿರುವ ವಿಶ್ವದ ಒಟ್ಟು ಐವತ್ತು ಊರುಗಳನ್ನು ಸ್ಪರ್ಧೆಗೆ ಅರ್ಹ ಎಂದು ತಾಣ ಸ್ವೀಕರಿಸಿಯೂ ಆಗಿದೆ. ಇದರಲ್ಲಿ ಭಾರತ ಕೇವಲ ಒಂದು ಊರು ಸ್ಪರ್ಧೆಗೆ ಸ್ವೀಕೃತವಾಗಿದೆ.

ಭಾರತದ ಈ ಊರೆಂದರೆ...

ಭಾರತದ ಈ ಊರೆಂದರೆ...

ತಮಿಳುನಾಡಿನಲ್ಲಿರುವ 'ಕಂಬಂ' ಎಂಬ ಊರಿನ ಹೆಸರು ತಮಿಳಿನ 'ಧೃವ' ಎಂಬ ಅರ್ಥವನ್ನು ಪಡೆದಿದೆ. ಆದರೆ ಈ ಹೆಸರನ್ನು ಇಂಗ್ಲಿಷಿನಲ್ಲಿ ಬರೆದಾಗ "Cumbum" ಎಂದಾಗುತ್ತದೆ. ಇಂಗ್ಲಿಷಿನಲ್ಲಿ ಎರಡೂ ಪದಗಳಿಗೆ ಬೇರೆಯೇ ದ್ವಂದ್ವಾರ್ಥಗಳಿವೆ. ಇದೇ ಹೆಸರಿನ ಇನ್ನೊಂದು ಊರು ಆಂಧ್ರಪ್ರದೇಶದಲ್ಲಿಯೂ ಇದೆ. ಆದರೆ ಸ್ಪರ್ಧೆಗೆ ತಮಿಳುನಾಡಿನ ಊರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಈ ಊರಿನ ಜನರು ವಿಶ್ವದ ಈ ತಾಣದಲ್ಲಿ ತಮ್ಮ ಊರಿನ ಹೆಸರಿದೆ ಎಂದು ಸಂಭ್ರಮಿಸಬಹುದು.

English summary

Pornhub Offers Premium Access To Cities That Sound Dirty!

The world's most popular adult website - Pornhub is always known for its tongue-in-cheek sense of humour. The site is not only famous for its content, but for also for its marketing stunts, which can gain anybody's attention! Currently, Pornhub is running an offer in which it is requesting people from across the world to come forward and register their place's name if the city has a double meaning to it! Find out more details about the same below.