ವ್ಯಕ್ತಿತ್ವ ಪರೀಕ್ಷೆ: ಬಾಗಿಲೊಂದನ್ನು ಆರಿಸಿ, ಇದರ ಗೂಢಾರ್ಥವನ್ನು ಅರಿಯಿರಿ!

By Deepu
Subscribe to Boldsky

ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ಸೋನಾ ಘಸ್ ಕೇ ದೇಖೋ, ಆದ್ಮೀ ಕೇ ಸಾಥ್ ಬಸ್ ಕೇ ದೇಖೋ ಎಂದು ಹಿರಿಯರು ಹೇಳುತ್ತಾರೆ. ಚಿನ್ನವನ್ನು ಉಜ್ಜಿ ನೋಡು, ವ್ಯಕ್ತಿಯೊಂದಿಗೆ ಇದ್ದು ನೋಡು ಎಂದು ಇದರ ಅರ್ಥವಾಗಿದೆ. ವ್ಯಕ್ತಿತ್ವವನ್ನು ಕಂಡುಕೊಳ್ಳಲು ಇಂದು ಕೆಲವಾರು ಪರೀಕ್ಷೆಗಳು ಹಾಗೂ ಬುದ್ಧಿಯಾಧಾರಿತ ಆಟಗಳು, ಚಿತ್ರಗಳನ್ನು ಅವಲೋಕಿಸುವುದು ಮೊದಲಾದವುಗಳ ಮೂಲಕ ವ್ಯಕ್ತಿತ್ವದ ಬಗ್ಗೆ ವಿವರಗಳನ್ನು ಪಡೆಯಬಹುದು.

ಇಂದಿನ ಲೇಖನದಲ್ಲಿ ಒಂದು ಭಿನ್ನ ರೀತಿಯ ಪರೀಕ್ಷೆಯನ್ನು ಪ್ರಸ್ತುತಪಡಿಸಲಾಗಿದ್ದು ಇದರಲ್ಲಿ ಒಂದು ಬಾಗಿಲನ್ನು ಆರಿಸಿಕೊಳ್ಳ ಬೇಕಾಗುತ್ತದೆ. ಆರಿಸಿದ ಬಾಗಿಲನ್ನು ಆಧರಿಸಿ ಇವರು ಇಂತಹದ್ದೇ ವ್ಯಕ್ತಿತ್ವ ಹೊಂದಿದ್ದಾರೆ ಎಂದು ತಿಳಿದುಕೊಳ್ಳಬಹುದು. ಈ ಪರೀಕ್ಷೆಗಳು ವ್ಯಕ್ತಿಯ ಭಯ ಹಾಗೂ ದೌರ್ಬಲ್ಯಗಳನ್ನು ಆಧರಿಸಿವೆ. ಈ ವಿಷಯಗಳನ್ನು ಅರಿತುಕೊಳ್ಳಲು ಕೊಂಚ ಸಮಯದ ಅಗತ್ಯವಿದೆ ಹಾಗೂ ಈ ಪರಿಕ್ಷೆಯನ್ನು ಹಲವಾರು ಬಾರಿ ನಡೆಸಿ ಖಚಿತ ಪಡಿಸಿಕೊಳ್ಳ ಬೇಕಾಗುತ್ತದೆ. ಬನ್ನಿ, ನೀವು ಯಾವ ಬಾಗಿಲನ್ನು ಆರಿಸಿದ್ದೀರಿ ಎಂಬುದನ್ನು ನೋಡಿ, ನಿಮ್ಮ ವ್ಯಕ್ತಿತ್ವ ಅರಿಯಲು ಯತ್ನಿಸಿ... 

ಒಂದು ವೇಳೆ ನೀವು ಮೊದಲನೆಯ ಬಾಗಿಲನ್ನು ಆರಿಸಿದರೆ

ಒಂದು ವೇಳೆ ನೀವು ಮೊದಲನೆಯ ಬಾಗಿಲನ್ನು ಆರಿಸಿದರೆ

ನೀವು ಸ್ವಾತಂತ್ರ್ಯದ ದಾರಿಯನ್ನು ಹುಡುಕುತ್ತೀರಿ. ನೀವು ನಿಮಗಾಗಿ ಸ್ವಂತದ್ದೇ ಆದ ಸ್ಥಳಾವಕಾಶ ಹೊಂದ ಬಯಸುತ್ತೀರಿ ಹಾಗೂ ವಿಶೇಷವಾಗಿ ಅಪರಿಮಿತ ಸಾಧ್ಯತೆಗಳಿದ್ದಾಗ ನಿಮ್ಮದೇ ಆದ ದಾರಿಯನ್ನು ನಿರ್ಮಿಸಬಯಸುತ್ತೀರಿ. ಇನ್ನೊಂದು ಕಡೆಯಿಂದ ನೀವು ಸ್ವತಂತ್ರರಾಗಿರಲು ಹಾಗೂ ಇತರರಿಗೆ ಎದುರಾಗಿ ಎದೆಯೊಡ್ಡಲು ಹಿಂಜರಿಯುತ್ತೀರಿ. ಇದರ ಹೊರತಾಗಿ ಎಲ್ಲರೂ ನುಗ್ಗುವೆಡೆ ನುಗ್ಗದೇ ಸಾವಕಾಶವಾಗಿ ಮುಂದುವರೆಯುವ ವ್ಯಕ್ತಿತ್ವ ನಿಮ್ಮದು.

ಒಂದು ವೇಳೆ ನೀವು ಎರಡನೆಯ ಬಾಗಿಲನ್ನು ಆರಿಸಿದರೆ

ಒಂದು ವೇಳೆ ನೀವು ಎರಡನೆಯ ಬಾಗಿಲನ್ನು ಆರಿಸಿದರೆ

ನೀವು ಯಾವುದೇ ವಿಷಯದಲ್ಲಿ ಇದುವರೆಗೆ ಯಾರೂ ಆರಿಸಿರದ ಪಥವನ್ನು ಅಥವಾ ಇದುವರೆಗೆ ಈ ಪಥದಲ್ಲಿ ಹೆಚ್ಚಿನವರು ಯಶಸ್ಸು ಪಡೆದ ಪಥವನ್ನೇ ಆರಿಸುತ್ತೀರಿ ನೀವು ಸಾಮಾನ್ಯವಾಗಿ ಒಂಟಿಯಾಗಿಯೇ ಪಯಣಿಸಲು ಬಯಸುತ್ತೀರಿ ಹಾಗೂ ಹೊಸ ಸ್ಥಳಗಳಿಗೆ ಒಂಟಿಯಾಗಿ ಭೇಟಿ ನೀಡಲು ಹಾಗೂ ಒಂಟಿ ಜೀವನವನ್ನು ಇಷ್ಟಪಡುತ್ತೀರಿ. ಇದಕ್ಕೆ ವ್ಯತಿರಿಕ್ತವಾಗಿ ನೀವು ಸದಾ ಸ್ವಂತಿಕೆಯುಳ್ಳ, ಕ್ರಿಯಾತ್ಮಕ, ಒಳನೋಟವುಳ್ಳ, ತಾತ್ವಿಕ, ಮತ್ತು ಸ್ವಭಾವತಃ ಅಂತರ್ಮುಖಿ ವ್ಯಕ್ತಿಯಾಗಿದ್ದೀರಿ.

ಒಂದು ವೇಳೆ ನೀವು ಮೂರನೆಯ ಬಾಗಿಲನ್ನು ಆರಿಸಿದರೆ

ಒಂದು ವೇಳೆ ನೀವು ಮೂರನೆಯ ಬಾಗಿಲನ್ನು ಆರಿಸಿದರೆ

ನೀವು ಈ ಪ್ರಪಂಚದ ಭಾಗವಾಗಿರಲು ಇಚ್ಛಿಸುವ ವ್ಯಕ್ತಿಯಾಗಿದ್ದು ಎಲ್ಲರೊಂದಿಗೆ ಬೆರೆಯುವ ಸ್ವಭಾವ ಹೊಂದಿದ್ದೀರಿ. ನಿಮ್ಮ ಸುತ್ತಮುತ್ತಲ ಜನರೊಂದಿಗೆ ಪ್ರಯೋಗಗಳನ್ನು ನಡೆಸಿ ಅವರಿಂದಲೂ ಸದಾ ಕಲಿತುಕೊಳ್ಳುವ ವ್ಯಕ್ತಿತ್ವ ನಿಮ್ಮದಾಗಿದೆ. ಇನ್ನೊಂದು ಕಡೆ ನಿಮ್ಮ ಜೀವನದಲ್ಲಿ ಗುರಿಗಿಂತಲೂ ಪ್ರಯಾಣಕ್ಕೇ ಹೆಚ್ಚಿನ ಆದ್ಯತೆ ಇರುತ್ತದೆ.

 ಒಂದು ವೇಳೆ ನೀವು ನಾಲ್ಕನೆಯ ಬಾಗಿಲನ್ನು ಆರಿಸಿದರೆ

ಒಂದು ವೇಳೆ ನೀವು ನಾಲ್ಕನೆಯ ಬಾಗಿಲನ್ನು ಆರಿಸಿದರೆ

ನೀವು ಸದಾ ಹೋರಾಟಕ್ಕೆ ಸಿದ್ದರಾಗಿರುವ ವ್ಯಕ್ತಿಯಾಗಿದ್ದೀರಿ. ಇದು ಕಾನೂನು ಹೋರಾಟ, ಅಧಿಕಾರ, ಉದ್ಯೋಗದಲ್ಲಿ ಭಡ್ತಿ ಮೊದಲಾದ ಯಾವುದೂ ಆಗಬಹುದು. ಇದಕ್ಕಾಗಿ ನೀವು ಸೂಕ್ತ ಹೆಜ್ಜೆಗಳನ್ನು ಇಡುತ್ತಿದ್ದೀರಿ ಹಾಗೂ ಸಾಮಾನ್ಯವಾಗಿ ಈ ಪ್ರಯತ್ನಗಳು ಫಲನೀಡುತ್ತವೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿರುತ್ತಾರೆ.

 ಒಂದು ವೇಳೆ ನೀವು ಐದನೆಯ ಬಾಗಿಲನ್ನು ಆರಿಸಿದರೆ

ಒಂದು ವೇಳೆ ನೀವು ಐದನೆಯ ಬಾಗಿಲನ್ನು ಆರಿಸಿದರೆ

ನೀವು ಶಾಂತ ಸ್ವಭಾವ ಹಾಗೂ ಎಲ್ಲರನ್ನೂ ಸ್ವಾಗತಿಸುವ ವ್ಯಕ್ತಿಯಾಗಿದ್ದೀರಿ. ನೀವು ಶಾಂತಿ ಪ್ರಿಯ ಹಾಗೂ ಸರಳ ಸ್ವಭಾವದವರಾಗಿದ್ದೀರಿ. ಇನ್ನೊಂದು ಕಡೆಯಿಂದ ನಿಮಗೆ ಯಾವುದೇ ಅಡೆತಡೆಯಿಲ್ಲದ ದಾರಿಯನ್ನು ಬಯಸುತ್ತೀರಿ ಹಾಗೂ ಅತಿ ವಿನಮ್ರತೆಗಾಗಿಯೇ ಎಲ್ಲರಿಂದಲೂ ಪ್ರಶಂಸೆಯನ್ನು ಪಡೆಯುತ್ತೀರಿ.

ಒಂದು ವೇಳೆ ನೀವು ಆರನೆಯ ಬಾಗಿಲನ್ನು ಆರಿಸಿದರೆ

ಒಂದು ವೇಳೆ ನೀವು ಆರನೆಯ ಬಾಗಿಲನ್ನು ಆರಿಸಿದರೆ

ನೀವು ಸದ್ದುಗದ್ದಲವಿಲ್ಲದ ಪಥವನ್ನು ಆರಿಸಬಯಸುತ್ತೀರಿ. ನೀವು ಒಂಟಿಯಾಗಿ ಸಮಯ ಕಳೆಯಲು ಹಾಗೂ ಒಂಟಿತನದಿಂದ ಎಂದಿಗೂ ನಿಮಗೆ ಬೇಸರ ಎನಿಸುವುದಿಲ್ಲ. ಇನ್ನೊಂದೆಡೆ ನೀವು ನೈಜ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುವವರೂ ಆಗಿದ್ದೀರಿ. ನಿಮಗೆ ಹೆಚ್ಚಿನ ಅಡೆತಡೆಗಳು ಇಷ್ಟವಾಗದ ಸಂಗತಿಗಳಾಗಿವೆ. ಈ ಲೇಖನವನ್ನು ನೀವು ಇಷ್ಟಪಟ್ಟರೆ ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಅವರೂ ಈ ಅಚ್ಚರಿಯನ್ನು ಪಡೆಯಲು ನೆರವಾಗಿ.

For Quick Alerts
ALLOW NOTIFICATIONS
For Daily Alerts

    English summary

    Array

    Understanding a person's personality can be very easy. With so many personality tests to mind games and even picture revelations, a lot of things can be understood about a person. Here, in this article, all that you need to do is pick a door and see what your inner self reveals about you. These are the tests which are generally played to understand a person's weaknesses and fears. Though these things take time for us to understand, they are so apt that you would get hooked onto trying these kind of quizzes more often. So, go ahead and check on to know what your inner self reveals about you.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more