Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಇಲ್ಲಿ ಒಂದು ಪ್ರಾಣಿಯ ಚಿತ್ರ ಆಯ್ದುಕೊಳ್ಳಿರಿ-ನಿಮ್ಮೊಳಗಿನ ವ್ಯಕ್ತಿತ್ವ ಅರಿಯಿರಿ!
ಇಂದು ನಾವು ಇನ್ನೊಂದು ಕುತೂಹಲಕರ ಚಿತ್ರಗಳ ರಸಪ್ರಶ್ನೆಯೊಂದಿಗೆ ಬಂದಿದ್ದೇವೆ. ಕೆಳಗೆ ಕೆಲವಾರು ಪ್ರಾಣಿಗಳ ಚಿತ್ರಗಳನ್ನು ಪ್ರಸ್ತುತಪಡಿಸಲಾಗಿದ್ದು ಇದರಲ್ಲೊಂದನ್ನು ನೀವು ಆಯ್ಕೆ ಮಾಡಬೇಕಷ್ಟೇ. ನಿಮ್ಮ ಆಯ್ಕೆಯ ಚಿತ್ರ ನಿಮ್ಮ ವ್ಯಕ್ತಿತ್ವದ ಇನ್ನೊಂದು ಪಾರ್ಶ್ವವನ್ನು ಪ್ರಸ್ತುತಪಡಿಸುತ್ತದೆ. ಇದೊಂದು ಪರೀಕ್ಷೆ ಅಷ್ಟೇ, ಇದರಿಂದ ನಮ್ಮನ್ನು ನಾವೇ ಇನ್ನೊಂದು ಬದಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಬನ್ನಿ, ನೀವು ಯಾವ ಪ್ರಾಣಿಯನ್ನು ಆಯ್ಕೆ ಮಾಡಿದಿರಿ ನೋಡೋಣ...

ಒಂದು ವೇಳೆ ನೀವು ರಣಹದ್ದನ್ನು ಆಯ್ದುಕೊಂಡರೆ
ರಣಹದ್ದುಗಳು ಸಾಮಾನ್ಯವಾಗಿ ಎತ್ತರದಲ್ಲಿ ಹಾರುತ್ತಿದ್ದು ಅಮಾಯಕ ಪ್ರಾಣಿಗಳ ಮೇಲೆ ಅವುಗಳಿಗೆ ಅರಿವೇ ಇಲ್ಲದಂತೆ ಧಾಳಿ ಎಸಗಲು ಸದಾ ಹೊಂಚು ಹಾಕುತ್ತಿರುತ್ತದೆ. ಇವು ತಮ್ಮ ಆಹಾರಕ್ಕಾಗಿ ಚಿಕ್ಕ ಪ್ರಾಣಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹಿಂದಿನಿಂದ ಥಟ್ಟನೇ ಎರಗಿ ಉಗುರುಗಳಿಂದ ಹಿಡಿಯುತ್ತವೆ. ಒಂದು ವೇಳೆ ನೀವು ಈ ಚಿತ್ರವನ್ನು ಆಯ್ದುಕೊಂಡರೆ ನಿಮ್ಮ ಇನ್ನೊಂದು ಪಾರ್ಶ್ವರೂಪದಲ್ಲಿ ನೀವು ಅತ್ಯಂತ ಅಪಾಯಕಾರಿಯಾದ ಅವಕಾಶವಾದಿಯಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ. ನೀವು ಸಾಮಾನ್ಯವಾಗಿ ಮುಂಗೋಪವನ್ನು ಪ್ರಕಟಿಸದೇ ಇದ್ದರೂ ಮನದಲ್ಲಿ ಪ್ರತೀಕಾರದ ಭಾವನೆಯನ್ನು ಹೊಂದಿರುತ್ತೀರಿ. ಇನ್ನೊಂದು ಅರ್ಥದಲ್ಲಿ ನೀವು ಸದಾ ಸೂಕ್ತ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದು ಈ ಕ್ಷಣ ಲಭ್ಯವಾದ ತಕ್ಷಣ ನಿಮ್ಮ ನಿಜವಾದ ಬಣ್ಣವನ್ನು ಪ್ರಕಟಿಸುತ್ತೀರಿ.

ಒಂದು ವೇಳೆ ನೀವು ಕಪ್ಪು ಬೆಕ್ಕನ್ನು ಆಯ್ದುಕೊಂಡರೆ
ಸಾಮಾನ್ಯವಾಗಿ ನೀವು ಒಂಟಿತನವನ್ನು ಬಯಸುತ್ತೀರಿ. ಇತರರಿಂದ ನೀವು ಕೊಂಚ ದೂರವೇ ಇರುತ್ತೀರಿ. ನಿಮ್ಮ ಸಾಮರ್ಥ್ಯವೆಂದರೆ ನೀವು ಯಾವುದೇ ವಿಷಯವನ್ನು ಹೆಚ್ಚು ಕೂಲಕಂಷವಾಗಿ ಗಮನಿಸುವುದೇ ಆಗಿದೆ. ಇದರ ಹೊರತಾಗಿ ನೀವು ನಿಮ್ಮ ಕಾರ್ಯಗಳನ್ನು ಸೂಕ್ತವಾಗಿ ನಿಯೋಜಿಸಿ ಸರಿಯಾಗಿ ಕಾರ್ಯಗತಗೊಳ್ಳಲು ಪ್ರಯತ್ನಿಸುವ ವ್ಯಕ್ತಿತ್ವ ಹೊಂದಿದ್ದೀರಿ.

ಒಂದು ವೇಳೆ ನೀವು ಕಪ್ಪು ವಿಧವೆ ಜೇಡವನ್ನು ಆಯ್ದುಕೊಂಡರೆ
ಕಪ್ಪು ಜೇಡ ತನ್ನನ್ನು ಕೂಡಲು ಬಂದ ಗಂಡನ್ನೇ ತಿಂದು ಬಿಡುವ ಕಾರಣ ಇದಕ್ಕೆ ವಿಧವೆ ಎಂಬ ಹೆಸರು ಬಂದಿದೆ. ಈ ಚಿತ್ರವನ್ನು ಆಯ್ದುಕೊಂಡರೆ ನಿಮ್ಮ ಇನ್ನೊಂದು ಪಾರ್ಶ್ವದಲ್ಲಿ ನೀವು ನಿಮ್ಮ ಕಾರ್ಯಸಾಧನೆಗಾಗಿ ಯಾವುದೇ ಬಗೆಯ ಮೋಸವನ್ನು ಮಾಡಲೂ ಸಿದ್ದರಿದ್ದೀರಿ ಎಂಬುದನ್ನು ತೋರಿಸುತ್ತದೆ. ನಿಮ್ಮ ಸವಿಮಾತುಗಳ ಬಲೆಯಲ್ಲಿ ಗ್ರಾಹಕನನ್ನು ಬೀಳಿಸಿ ಆತನಿಂದ ನಿಮಗೆ ಪ್ರಯೋಜನವಾಗುವಂತೆ ಮಾಡುವಲ್ಲಿ ನೀವು ಸಿದ್ಧಹಸ್ತರಾಗಿದ್ದು ಈ ಬಲೆಯಲ್ಲಿ ಗ್ರಾಹಕ ತಾನೇ ಬೀಳುವಂತೆ ಮಾಡುತ್ತೀರಿ. ಗ್ರಾಹಕ ನಿಮ್ಮಿಂದ ಮೋಸ ಹೋಗುವವರೆಗೂ ತಾನು ಬಲೆಯಲ್ಲಿ ಬೀಳುತ್ತಿದ್ದೇನೆ ಎಂಬ ಅರಿವೇ ಆಗದಂತೆ ನೀವು ಚೆನ್ನಾಗಿ ನಡೆದುಕೊಳ್ಳುವ ವ್ಯಕ್ತಿತ್ವ ಹೊಂದಿದ್ದೀರಿ.

ಒಂದು ವೇಳೆ ನೀವು ಕಪ್ಪು ಚಿರತೆಯನ್ನು ಆಯ್ದುಕೊಂಡರೆ
ನಿಮ್ಮ ವ್ಯಕ್ತಿತ್ವದಲ್ಲಿ ಏನೋ ಕುತೂಹಲಕರವಾದುದಿದೆ ಎಂಬ ಅಂಶ ಹಲವು ಜನರನ್ನು ನಿಮ್ಮತ್ತ ಆಕರ್ಷಿತವಾಗಿಸುತ್ತದೆ. ಒಂದು ವೇಳೆ ಈ ಕ್ರೂರಪ್ರಾಣಿಯನ್ನು ನೀವು ಆಯ್ದುಕೊಂಡರೆ ನೀವು ಬಲಿಷ್ಟರೂ, ಕ್ರೂರಿಗಳೂ ಆಗಿದ್ದು ನೀವು ಅರಿಯದವರಿಂದ ಯಾವುದೇ ಬಗೆಯ ಪ್ರಯೋಜನವನ್ನು ಬಲಪ್ರಯೋಗ ಅಥವಾ ಹುನ್ನಾರದಿಂದ ಪಡೆದುಕೊಳ್ಳುವವರಾಗಿದ್ದೀರಿ.

ಒಂದು ವೇಳೆ ನೀವು ಕಪ್ಪು ಕಾಗೆಯನ್ನು ಆಯ್ದುಕೊಂಡರೆ
ನೀವು ಇತರ ವ್ಯಕ್ತಿಗಳ ಅಗತ್ಯತೆ ಹಾಗೂ ಇದಕ್ಕೆ ಬೇಕಾದ ಪೂರೈಕೆಗಳನ್ನು ನೀಡಲು ಸೂಕ್ಷ್ಮವಾಗಿ ಗಮನಿಸುವ ವ್ಯಕ್ತಿತ್ವದವರಾಗಿದ್ದು ಇದಕ್ಕೇನು ಮಾಡಬೇಕು ಎಂದು ಚಿಂತಿಸುವ ವ್ಯಕ್ತಿತ್ವ ಹೊಂದಿದ್ದೀರಿ. ಇದಕ್ಕಾಗಿ ನೀವು ಜನರೊಂದಿಗೆ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುತ್ತೀರಿ. ಇದರ ಹೊರತಾಗಿ ನೀವು ನಿಮ್ಮ ಗುಟ್ಟುಗಳನ್ನು ಕಾಪಾಡುವ ಹಾಗೂ ಈ ಬಗ್ಗೆ ಜಗತ್ತಿಗೆ ಗೊತ್ತಾಗದಂತೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸುತ್ತೀರಿ.

ಒಂದು ವೇಳೆ ನೀವು ಬಾವಲಿಯನ್ನು ಆಯ್ದುಕೊಂಡರೆ
ಒಂದು ವೇಳೆ ಬಾವಲಿ ನಿಮ್ಮ ಅಯ್ಕೆಯಾದರೆ ನೀವು ಅತಿ ಸೂಕ್ಷ್ಮ ಸ್ವಭಾವದ ವ್ಯಕ್ತಿಯಾಗಿದ್ದು ನೀವು ಅಂದುಕೊಂಡಂತೆಯೇ ನಿಮ್ಮ ಜೀವನ ಇರಬೇಕೆಂದು ಬಯಸುವ ವ್ಯಕ್ತಿಯಾಗಿದ್ದೀರಿ. ಇದರ ಹೊರತಾಗಿ ನೀವು ಕೊಂಚ ಜಟಿಲ ವ್ಯಕ್ತಿತ್ವ ಹೊಂದಿದ್ದು ಜಗತ್ತನ್ನು ಇತರರು ನೋಡದ ದೃಷ್ಟಿಕೋನದಲ್ಲಿ ನೋಡುತ್ತೀರಿ. ಇತರರಿಗಿಂತ ನೀವು ಭಿನ್ನ ಎಂದು ನಿಮಗೆ ಸ್ಪಷ್ಟವಾದ ಅರಿವಿದ್ದು ಇತರರನ್ನೂ ಆ ಪ್ರಕಾರವೇ ನಡೆಸಿಕೊಳ್ಳುತ್ತೀರಿ.

ಒಂದು ವೇಳೆ ನೀವು ತೋಳವನ್ನು ಆಯ್ದುಕೊಂಡರೆ
ತೋಳಗಳು ಕಾಡಿನಲ್ಲಿ ಒಗ್ಗಟ್ಟಿನಲ್ಲಿ ಪ್ರಾಣಿಯನ್ನು ಬೇಟೆಯಾಡುತ್ತವೆ. ನೀವು ಸಹಾ ತೋಳದಂತೆಯೇ ಪ್ರಬಲರಾಗಿದ್ದು ನಿಮ್ಮ ಎದುರಾಳಿಯನ್ನು ಮಣಿಸಲು ಸತರ ಹಿಂಬಾಲಿಸುತ್ತಾ ಸೂಕ್ತ ಸಮಯದಲ್ಲಿ ಪ್ರಹಾರ ಎಸಗುವ ವ್ಯಕ್ತಿತ್ವ ಹೊಂದಿದ್ದೀರಿ. ಆದರೆ ತೋಳಗಳಂತೆ ಗುಂಪನ್ನು ಇಷ್ಟಪಡದ ನೀವು ಒಂಟಿಯಾಗಿರಲು ಬಯಸುತ್ತೀರಿ. ನಿಮಗೆ ನಿಮ್ಮ ಸಾಮರ್ಥ್ಯವೇನು ಎಂದು ಅರಿವಿರುತ್ತದೆ ಹಾಗೂ ನಿಮ್ಮ ಕ್ರಿಯೆಗಳ ಪರಿಣಾಮವೇನಾಗುತ್ತದೆ ಎಂದೂ ನಿಮಗೆ ಸ್ಪಷ್ಟವಾದ ಅರಿವಿರುತ್ತದೆ. ಇನ್ನೊಂದು ಕಡೆಯಲ್ಲಿ ನಿಮ್ಮ ಕ್ರಿಯೆಗಳು ಚುರುಕಾಗಿಯೂ ಇದ್ದು ನಿಮ್ಮ ಸ್ವಾಮಿನಿಷ್ಠೆ ಪ್ರಶ್ನಾತೀತವಾಗಿದೆ. ನೀವು ಯಾವ ಪ್ರಾಣಿಯನ್ನು ಆಯ್ದುಕೊಂಡಿರಿ, ಇಲ್ಲಿನ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.



Click it and Unblock the Notifications











