Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಲೈಂಗಿಕ ಕ್ರಿಯೆಯಲ್ಲಿ ಅತ್ಯುತ್ಸಾಹ ತೋರಿಸುವ ರಾಶಿಗಳು
ಪ್ರೀತಿ ಪ್ರೇಮದ ಬಳಿಕ ಸಂಗಾತಿಗಳ ಮಧ್ಯೆ ನಡೆಯುವುದೇ ರೋಮ್ಯಾನ್ಸ್, ಲೈಂಗಿಕ ಕ್ರಿಯೆ. ಇದು ಪ್ರಕೃತಿದತ್ತ ಬಯಕೆಯಾಗಿರುವುದು. ಹುಡುಗ ಮತ್ತು ಹುಡುಗಿ ಇಬ್ಬರಲ್ಲೂ ಇದು ಕಂಡುಬರುವುದು. ಆದರೆ ಕೆಲವರಿಗೆ ಇದರಲ್ಲಿ ನಿರಾಸಕ್ತಿಯಿದ್ದರೆ, ಇನ್ನು ಕೆಲವರಿಗೆ ಅತಿಯಾದ ಆಸಕ್ತಿ ಇರುವುದು. ಲೈಂಗಿಕ ಕ್ರಿಯೆನ್ನು ಕೆಲವರು ತುಂಬಾ ಆನಂದಿಸುವರು. ಇದಕ್ಕೆ ಅವರಲ್ಲಿನ ಬಯಕೆ ಮಾತ್ರ ಕಾರಣವಲ್ಲ. ಅವರು ಜನ್ಮ ರಾಶಿಯು ಕೂಡ ಕಾರಣವಾಗಿದೆ.
ಬೇರೆ ರಾಶಿಯವರಿಗೆ ಹೋಲಿಸಿದರೆ ಇವರು ಇತರ ರಾಶಿಯವರಿಗಿಂತ ಹೆಚ್ಚು ಸುಖ ನೀಡುವಂತಹವರು. ಈ ಲೇಖನದಲ್ಲಿ ನಾವು ನಿಮಗೆ ಲೈಂಗಿಕ ಕ್ರಿಯೆಯನ್ನು ತುಂಬಾ ಇಷ್ಟಪಡುವ ರಾಶಿಗಳು ಯಾವುದು ಎಂದು ತಿಳಿಸಲಿದ್ದೇವೆ. ಈ ಕೆಳಗಿನ ರಾಶಿಚಕ್ರದವರು ತಮ್ಮ ರಾಶಿಯವರಿಗೆ ಅತ್ಯುನ್ನತ ಸುಖ ನೀಡುವರು ಮತ್ತು ಲೈಂಗಿಕ ಕ್ರಿಯೆಯನ್ನು ಸಂಪೂರ್ಣವಾಗಿ ಆನಂದಿಸುವರು....

ಮೇಷ: ಮಾ.21-ಎಪ್ರಿಲ್ 19
ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಈ ರಾಶಿಯವರು ಊಹಿಸಲು ಅಸಾಧ್ಯವೆಂದೇ ಪರಿಗಣಿಸಲಾಗಿದೆ. ಈ ರಾಶಿಯವರು ತಮ್ಮ ಸಂಗಾತಿಯು ಹಾಸಿಗೆಗೆ ತಯಾರಾಗಬೇಕೆಂದು ಯಾವತ್ತೂ ಕಾಯಲ್ಲ. ಇವರು ಅದ್ಭುತವಾಗಿ ಕ್ರಿಯಾತ್ಮಕವಾಗಿರುವರು ಮತ್ತು ಉತ್ತಮ ಲೈಂಗಿಕ ಕ್ರಿಯೆ ಮತ್ತು ಪ್ರಯೋಗದಲ್ಲಿ ತೊಡಗಿಕೊಳ್ಳುವರು.

ಮೀನ: ಫೆ.18-ಮಾ.20
ತಮ್ಮ ಸಂಗಾತಿ ಜತೆಗಿದ್ದರೆ ಈ ರಾಶಿಯವರು ಯಾವತ್ತೂ ಬೇಸರ ಮೂಡಿಸಲ್ಲ. ಈ ರಾಶಿಯವರು ತಮ್ಮ ಸಂಗಾತಿಯು ವಿವಿಧ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಿಡುವರು. ಇವರು ಹಾಸಿಗೆಯಲ್ಲಿ ಅಧಿಪತ್ಯ ಹೊಂದಿರುವರು. ಇವರಿಗೆ ಉತ್ತಮ ಲೈಂಗಿಕ ಕ್ರಿಯೆಯ ಬಯಕೆ ಯಾವಾಗಲೂ ಇರುವುದು.

ತುಲಾ: ಸೆ.23-ಅ.23
ಈ ರಾಶಿಯವರೊಂದಿಗೆ ಲೈಂಗಿಕ ಕ್ರಿಯೆಯನ್ನು ಸಂಭಾಲಿಸುವುದು ತುಂಬಾ ಜಾಣ್ಮೆಯಿಂದ ಎಲ್ಲಾ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಿದಂತೆ ಆಗುವುದು. ಇವರಿಗೆ ಲೈಂಗಿಕ ಕ್ರಿಯೆ ಮೊದಲಿನ ಆಟ ಒಳ್ಳೆಯದು ಮತ್ತು ಇದರ ಬಳಿಕ ನಿಧಾನವಾಗಿ ಹಾಸಿಗೆಯಲ್ಲಿ. ಇದರಿಂದ ಅವರ ಕಾಮಾಸಕ್ತಿಯು ಉತ್ತುಂಗಕ್ಕೇರುವುದು. ಇವರಿಗೆ ಕಡಿಮೆ ಸಮಯದ ಲೈಂಗಿಕ ಕ್ರಿಯೆ ಸುಖ ನೀಡಲ್ಲ.

ವೃಷಭ: ಎ.20-ಮೇ 20
ಭೂಮಿಯ ಈ ರಾಶಿಯು ಸೂಕ್ಷ್ಮ ಸ್ಪರ್ಶ ಮತ್ತು ಲೈಂಗಿಕ ಕ್ರಿಯೆಗೆ ಮೊದಲಿನ ಆಟವು ಇಷ್ಟವಾಗುವುದು. ಇನ್ನೊಂದು ಕಡೆ ಇವರಿಗೆ ಕಡಿಮೆ ಸಮಯದ ಲೈಂಗಿಕ ಕ್ರಿಯೆ ತೃಪ್ತಿ ನೀಡದು. ಅವರ ಬಗ್ಗೆ ಕಾಳಜಿ ಮಾಡುವುದು ಮತ್ತು ಬೆಚ್ಚಗಿನ ಪ್ರೀತಿ ನೀಡುವುದು ಇವರಿಗೆ ಹಾಸಿಗೆಯಲ್ಲಿ ಸುಖ ನೀಡುವುದು.

ಕನ್ಯಾ: ಆ.23-ಸೆ.23
ನಿಮ್ಮ ಸಂಗಾತಿಯು ಈ ರಾಶಿಯವರಾಗಿದ್ದರೆ ಆಗ ನೀವು ಲೈಂಗಿಕವಾಗಿ ತುಂಬಾ ಕ್ರಿಯಾತ್ಮವಾಗಿರಬೇಕಾಗುತ್ತದೆ. ಇವರು ಯಾವಾಗಲೂ ಹಾಸಿಗೆಯಲ್ಲಿ ಚಟುವಟಿಕೆಯಿಂದ ಇರುವುದನ್ನು ಬಯಸುವರು. ತಮ್ಮ ಸಂಗಾತಿಯು ಲೈಂಗಿಕ ಕ್ರಿಯೆಗೆ ಬಯಕೆ ವ್ಯಕ್ತಪಡಿಸಿದಷ್ಟು ಇವರು ಅದನ್ನು ಆನಂದಿಸುವರು. ಇನ್ನೊಂದು ಬದಿಯಲ್ಲಿ ಇವರು ತಮ್ಮ ಸಂಗಾತಿಯು ದೈಹಿಕವಾಗಿ ಆಕರ್ಷಣೀಯ ಮತ್ತು ಚಟುವಟಿಕೆಯಿಂದ ಇರಬೇಕೆಂದು ಬಯಸುವರು.

ಕುಂಭ: ಜ.20-ಫೆ.18
ಇವರು ಹಾಸಿಗೆಯಲ್ಲಿ ಇರುವುದನ್ನು ಇಷ್ಟಪಡುವರು ಮತ್ತು ವಿವಿಧ ಭಂಗಿ ಇವರಿಗೆ ಇಷ್ಟವಾಗುವುದು. ಇವರಿಗೆ ಲೈಂಗಿಕ ಬಯಕೆಯು ಅಧಿಕವಾಗಿರುವುದು. ಇವರು ಲೈಂಗಿಕವಾಗಿ ತುಂಬಾ ಆಕರ್ಷಕ ಮತ್ತು ಚಟುವಟಿಕೆಯಿಂದ ಇರುವರು. ಹಾಸಿಗೆಯಲ್ಲಿ ಇವರು ಅಧಿಪತ್ಯ ಸಾಧಿಸುವರು.



Click it and Unblock the Notifications
