For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಈ ಆರು ರಾಶಿಯವರಿಗೆ ಆ ವಿಷಯದಲ್ಲಿ ಬಹಳ ಆಸಕ್ತಿಯಂತೆ!

  By Arshad
  |

  ದಂಪತಿಗಳ ನಡುವಣ ದೈಹಿಕ ಸಂಪರ್ಕದ ವಿಷಯ ಬಂದಾಗ ಇದರಲ್ಲಿ ಅನುರಾಗ ಹಾಗೂ ಭೋಗಾಪೇಕ್ಷೆಯ ವ್ಯತ್ಯಾಸವಿದೆ. ಒಂದೇ ರಾಶಿಗಳಿಗೆ ಸೇರಿದ ವ್ಯಕ್ತಿಗಳು (ಉದಾಹರಣೆಗೆ ವೃಶ್ಚಿಕ) ಜೋಡಿಯಾದರೆ ಇವರ ನಡುವೆ ಭೋಗಾಪೇಕ್ಷೆಯೇ ಪ್ರಮುಖವಾಗಿರುತ್ತದೆ. ಕೆಲವು ರಾಶಿಗಳಲ್ಲಿ ಅನುರಾಗವೇ ಪ್ರಮುಖ ಪಾತ್ರ ವಹಿಸುತ್ತದೆ.

  ಇಂದಿನ ಲೇಖನದಲ್ಲಿ ಪ್ರತಿ ರಾಶಿಗೆ ಸೇರಿದ ವ್ಯಕ್ತಿಗಳ ಅತ್ಯಂತ ಖಾಸಗಿ ಕ್ಷಣಗಳಲ್ಲಿ ತಮ್ಮ ಸಂಗಾತಿಯೊಂದಿಗಿನ ದೈಹಿಕ ಸಂಪರ್ಕದ ಸಮಯದಲ್ಲಿ ಯಾವ ಭಾವನೆ ಉತ್ಕಟವಾಗಿರುತ್ತದೆ ಎಂಬುದನ್ನು ಸ್ಥೂಲವಾಗಿ ವಿವರಿಸಲಾಗಿದೆ. ಈ ರಾಶಿಗೆ ಸೇರಿದ ವ್ಯಕ್ತಿಗಳು ತಮ್ಮ ಸಂಗಾತಿಗೆ ಗರಿಷ್ಠವಾದ ಸುಖವನ್ನು ನೀಡುವುದನ್ನು ಪ್ರಾಮುಖ್ಯತೆಯಾಗಿರಿಸುತ್ತಾರೆ. ಬನ್ನಿ, ನಿಮ್ಮ ಜನ್ಮರಾಶಿಯೂ ಈ ಪಟ್ಟಿಯಲ್ಲಿದೆಯೇ ಎಂದು ನೋಡಿ...

  ಮೇಷ: ಮಾರ್ಚ್ 21- ಏರ್ಪಿಲ್ 19

  ಮೇಷ: ಮಾರ್ಚ್ 21- ಏರ್ಪಿಲ್ 19

  ಈ ರಾಶಿಗೆ ಸೇರಿದ ಜನರನ್ನು ಕಾಮದ ವಿಷಯದಲ್ಲಿ ಯಾವುದೇ ಬಗೆಯಲ್ಲಿ ಊಹಿಸಿ ಹೇಳಲು ಸಾಧ್ಯವಿಲ್ಲ. ಇವರಿಗೆ ತಮ್ಮ ಸಂಗಾತಿ ಸಮಾಗಮಕ್ಕೆ ಸಿದ್ದರಾಗುವವರೆಗೂ ತಾಳಿಕೊಳ್ಳುವಷ್ಟು ತಾಳ್ಮೆ ವಹಿಸುವುದಿಲ್ಲ. ಇವರು ಅತೀವ ಕ್ರಿಯಾತ್ಮಕರು ಹಾಗೂ ವಿವಿಧ ಭಂಗಿಗಳಲ್ಲಿ ತಮ್ಮ ಸಂಗಾತಿಯನ್ನು ಮೆಚ್ಚಿಸಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ನಡೆಸುವವರಾಗಿದ್ದಾರೆ.

  ಮೀನ : ಫೆಬ್ರವರಿ 18=ಮಾರ್ಚ್ 20

  ಮೀನ : ಫೆಬ್ರವರಿ 18=ಮಾರ್ಚ್ 20

  ಈ ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿಯೊಂದಿಗಿದ್ದಾಗ ಎಂದಿಗೂ ಬೇಸರ ಎದುರಾಗದು. ಇವರು ಹೊಸ ಪ್ರಯೋಗ ಮಾಡಲು ತಮ್ಮ ಸಂಗಾತಿಗಳನ್ನೇ ಪ್ರೇರೇಪಿಸುವವರು ಹಾಗೂ ಭಿನ್ನ ಭಂಗಿಗಳನ್ನು ಪ್ರಯತ್ನಿಸಬಯಸುವವರೂ ಆಗಿದ್ದಾರೆ. ಇವರಿಗೆ ಸಂಗಾತಿಯ ಸುಖವೇ ಆದ್ಯತೆಯಾಗಿದ್ದು ಇವರು ಸದಾ ಕಾಮಕ್ಕಾಗಿ ಹಪಹಪಿಸುವವರೂ ಆಗಿರುತ್ತಾರೆ.

  ತುಲಾ: ಸೆಪ್ಟೆಂಬರ್ 23-ಅಕ್ಟೋಬರ್ 23

  ತುಲಾ: ಸೆಪ್ಟೆಂಬರ್ 23-ಅಕ್ಟೋಬರ್ 23

  ಈ ರಾಶಿಯ ವ್ಯಕ್ತಿಯೊಂದಿಗೆ ಪ್ರೇಮಸಂಬಂಧವನ್ನು ಉತ್ತಮಗೊಳಿಸಲು ಪೂರ್ಣ ಕಾರ್ಯಕ್ರಮವನ್ನು ಜಾಣ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಏಕೆಂದರೆ ಈ ವ್ಯಕ್ತಿಗಳು ಮುನ್ನಲಿವನ್ನು ಹೆಚ್ಚು ಇಷ್ಟಪಡುವವರಾಗಿರುತ್ತಾರೆ ಹಾಗೂ ನಿಧಾನವಾಗಿ ಮುಂದಿನ ನಡೆಗಳನ್ನು ನಡೆಸುವವರಾಗಿರುತ್ತಾರೆ. ಇದು ಅವರ ಸಂಗಾತಿಯನ್ನು ಇನ್ನಿಲ್ಲದಂತೆ ಉದ್ರೇಕಿಸುತ್ತದೆ. ಈ ಕ್ರಿಯೆಯಲ್ಲಿ ಕ್ಷಿಪ್ರ ಸಮಯದಲ್ಲಿ ಕೂಟವನ್ನು ಮುಗಿಸುವುದು ಇವರಿಗೆ ಸುತಾರಾಂ ಇಷ್ಟವಾಗದ ಸಂಗತಿಯಾಗಿದೆ.

  ವೃಷಭ: ಏಪ್ರಿಲ್ 20-ಮೇ 20

  ವೃಷಭ: ಏಪ್ರಿಲ್ 20-ಮೇ 20

  ಈ ರಾಶಿಯ ಜನರಿಗೂ ಮುನ್ನಲಿವು ಹೆಚ್ಚು ಇಷ್ಟವಾದ ಸಂಗತಿಯಾಗಿದ್ದು ಸ್ಪರ್ಶಸಂವೇದನೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇನ್ನೊಂದು ಕಡೆಯಲ್ಲಿ ಇವರಿಗೆ ಈ ಕ್ರಿಯೆ ನಿಧಾನವಾಗಿ ಆಗಬೇಕು. ಅವಸರದ ಕಾರ್ಯ ಇವರಿಗೆ ಇಷ್ಟವಾಗದು. ಇವರಿಗೆ ಹಿತವಾದ ಅಪ್ಪುಗೆ ಹಾಗೂ ಸಂಗಾತಿಯ ಪ್ರೇಮದ ಶಾಖವೇ ಇವರ ಭಾವೋದ್ದೀಪ್ತ ಭಾವನೆಯನ್ನು ಪ್ರಕಟಿಸಲು ಸಾಧ್ಯ.

  ಕನ್ಯಾ: ಆಗಸ್ಟ್ 23-ಸೆಪ್ಟೆಂಬರ್ 23

  ಕನ್ಯಾ: ಆಗಸ್ಟ್ 23-ಸೆಪ್ಟೆಂಬರ್ 23

  ಈ ರಾಶಿಯ ವ್ಯಕ್ತಿ ನಿಮ್ಮ ಸಂಗಾತಿಯಾಗಿದ್ದರೆ ನೀವು ಸಹಾ ಕಾಮಕೇಳಿಯಲ್ಲಿ ಉತ್ತಮರಾಗಿರಬೇಕು. ಇವರಿಗೆ ಹೆಚ್ಚಿನ ಸಮಯವನ್ನು ಕಾಮಕೇಳಿಯಲ್ಲಿ ಕಳೆಯುವ ಹಂಬಲವಿದ್ದು ತಮ್ಮ ಮನಸ್ಸು ತೃಪ್ತಿಯಾಗುವವರೆಗೂ ಈ ಕೇಳಿಯಲ್ಲಿ ಮುಂದುವರೆಯುತ್ತಿರಬೇಕು ಎಂದು ಬಯಸುವವರಾಗಿರುತ್ತಾರೆ. ಇನ್ನೊಂದು ಕಡೆಯಿಂದ ಇವರು ತಮ್ಮ ಸಂಗಾತಿ ಚಟುವಟಿಕೆಯುಳ್ಳವರು ಹಾಗೂ ಸೌಂದರ್ಯದ ಗಣಿಯೂ ಆಗಿರಬೇಕೆಂದು ಬಯಸುತ್ತಾರೆ.

  ಕುಂಭ: ಜನವರಿ 20-ಫೆಬ್ರವರಿ 18

  ಕುಂಭ: ಜನವರಿ 20-ಫೆಬ್ರವರಿ 18

  ಈ ರಾಶಿಗೆ ಸೇರಿದ ವ್ಯಕ್ತಿಗಳು ಹಾಸಿಗೆಯ ಮೇಲೆ ಹೆಚ್ಚಿನ ಸಮಯ ಕಳೆಯಲು ಹಾಗೂ ಭಿನ್ನವಾದ ಭಂಗಿಯಗಳನ್ನು ಪ್ರಯೋಗಿಸಲು ಇಷ್ಟಪಡುವವರಾಗಿರುತ್ತಾರೆ. ಈ ವ್ಯಕಿಗಳಿಗೆ 'ಸದಾನಂದನಿಗೆ ಅದೇ ಧ್ಯಾನ' ಎಂಬ ಹಣೆಪಟ್ಟಿ ಸೂಕ್ತವಾಗಿದೆ. ಸಾಮಾನ್ಯವಾಗಿ ಈ ರಾಶಿಯ ವ್ಯಕ್ತಿಗಳು ಸೂಜಿಯಂತೆ ಆಕರ್ಷಿಸುವ ಹಾಗೂ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ ಹಾಸಿಗೆಯಲ್ಲಿ ಮಾತ್ರ ತಾವೇ ವಿಜೃಂಭಿಸಬೇಕು ಎಂಬ ಭಾವನೆ ಹೊಂದಿರುತ್ತಾರೆ.

  English summary

  People Of These Zodiac Signs Enjoy Lovemaking The Most!

  Here, in this article, we bring to you the list of zodiac signs that love to enjoy lovemaking sessions and are quite passionate about them. These are the zodiac signs, the people of which are believed to give the maximum pleasure to their partners and enjoy the act to the fullest.
  Story first published: Saturday, January 27, 2018, 13:02 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more