Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಗೈ ಶಾಸ್ತ್ರ: ಅಂಗೈ ಮೇಲಿನ ರೇಖೆಗಳು ಸಂತಾನಫಲದ ಬಗ್ಗೆ ತಿಳಿಸುತ್ತದೆಯಂತೆ!

ಅಂಗೈ ಮೇಲಿನ ರೇಖೆಗಳು ಎಲ್ಲವನ್ನು ಹೇಳಿ ಬಿಡುತ್ತದೆ ಎಂದು ಅಂಗೈ ಶಾಸ್ತ್ರಜ್ಞರು ಹೇಳುವರು. ಅಂಗೈಯಲ್ಲಿರುವ ರೇಖೆಗಳು ಭವಿಷ್ಯ, ವರ್ತಮಾನ, ವೃತ್ತಿ, ವೈವಾಹಿಕ ಬದುಕು ಹೀಗೆ ಪ್ರತಿಯೊಂದನ್ನು ಹೇಳುತ್ತದೆ. ಇಂತಹ ಸಮಯದಲ್ಲಿ ಸಂತಾನ ಭಾಗ್ಯದ ಬಗ್ಗೆ ಅಂಗೈ ಮೇಲಿನ ರೇಖೆಗಳು ಹೇಳುತ್ತದೆ. ನಿಮಗೆ ಸಂತಾನಭಾಗ್ಯ ಇದೆಯಾ? ಇಲ್ಲವಾ? ಅಥವಾ ಎಷ್ಟು ಮಕ್ಕಳ ಭಾಗ್ಯವಿದೆ ಹೀಗೆ ಪ್ರತಿಯೊಂದನ್ನು ಹೇಳುವರು.
ಗರ್ಭಧಾರಣೆ ಹಾಗೂ ಬಂಜೆತನದ ರೇಖೆಗಳು ನಮ್ಮ ಕೈಯಲ್ಲೇ ಇರುವುದು ಗರ್ಭಧಾರಣೆ ಬಗ್ಗೆ ಹೇಳಲಿದೆ. ಈ ಕೆಲವು ರೇಖೆಗಳು ನೀವು ಫಲವತ್ತತೆ ಇಲ್ಲದೆ ಇರುವ ವ್ಯಕ್ತಿಯಾ ಅಥವಾ ಗರ್ಭಧಾರಣೆಗೆ ಯಾವುದೇ ರೀತಿಯ ಸಮಸ್ಯೆ ಇದೆಯಾ ಎಂದು ಹೇಳಬಹುದು. ಈ ಗೆರೆಗಳು ಅಥವಾ ಚಿಹ್ನೆಗಳು ನಿಮ್ಮ ಲೈಂಗಿಕ ಅಸಮರ್ಥತೆಯ ಬಗ್ಗೆ ಯಾವುದೇ ಸೂಚನೆ ನೀಡುವುದಿಲ್ಲ.
ನಿಮ್ಮ ಹೃದಯ ಗೆರೆಯಲ್ಲಿ ಸ್ಥಿರವಲ್ಲದೆ ಇರುವ ಹಳದಿ ಉಗುರುಗಳಿಗೆ ಯಾವುದೇ ಶಾಖೆಗಳು ಇಲ್ಲದೆ ಇದ್ದರೆ ಆಗ ಇದು ಬಂಜೆತನದ ಚಿಹ್ನೆ ಎಂದು ಹೇಳಲಾಗುತ್ತದೆ. ಅಂಗೈಯಲ್ಲಿ ಇರುವ ಕೆಲವೊಂದು ಚಿಹ್ನೆಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಬುಧನಿಂದ ವಿಭಜಿಸಿರುವ ಶಾಖೆಗಳು
ಬುಧನ ಗೆರೆಯ ಶಾಖೆಯಿಂದ ಗೆರೆಗಳು ವಿಭಜಿಸಲ್ಪಟ್ಟಿದ್ದರೆ ಆಗ ಇದನ್ನು ಗರ್ಭಧಾರಣೆಗೆ ಸಂಬಂಧಿಸಿದ ಚಿಹ್ನೆ ಎಂದು ಹೇಳಬಹುದು. ಈ ರೀತಿಯ ಮಹಿಳೆಯರಿಗೆ ಗರ್ಭ ಧರಿಸಲು ತುಂಬಾ ಕಷ್ಟವಾಗುವುದು.

ಆರೋಗ್ಯ ರೇಖೆಯು ತುಂಡಾಗಿರುವುದು
ಆರೋಗ್ಯ ರೇಖೆಯು ತುಂಡಾಗಿದ್ದಾರೆ ಇದನ್ನು ಕೂಡ ಲೈಂಗಿಕ ಅಸ್ಥಿರತೆಯ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಹಲವಾರು ರೀತಿಯ ಅನಾರೋಗ್ಯದಿಂದ ಬಳಲುವರು. ಆರೋಗ್ಯ ಗೆರೆಯಲ್ಲಿ ಹಲವಾರು ಗೆರೆಗಳು ಹಾದು ಹೋದರೆ ಇದು ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಯ ಚಿಹ್ನೆ ಆಗಿರುವುದು.'

ಶುಕ್ರನ ಪವರ್ತದ ಮೇಲೆ ವೃತ್ತಾಕಾರದ ಗುರುತು
ಶುಕ್ರನ ಪರ್ವತದ ಮೇಲೆ ನಿಮಗೆ ಒಂದು ವೃತ್ತಾಕಾರದ ಗುರುತು ಕಾಣಿಸಿದರೆ ಇದು ಕೂಡ ಗರ್ಭಧಾರಣೆಗೆ ನಿಮಗೆ ಸಮಸ್ಯೆಯಾಗುತ್ತಿದೆ ಎನ್ನುವುದರ ಸೂಚನೆಯಾಗಿದೆ.

ಶುಕ್ರನ ಪರ್ವತದ ಬಗ್ಗೆ…
ಶುಕ್ರನ ಪರ್ವತವು ನಿಮ್ಮ ಅಂಗೈಯಲ್ಲಿ ಒತ್ತಲ್ಪಟ್ಟಿದ್ದರೆ ಆಗ ಇದು ನಿಮಗೆ ಗರ್ಭಧಾರಣೆಯಾಗಲು ತುಂಬಾ ಸಮಸ್ಯೆ ಆಗುತ್ತಿದೆ ಎನ್ನುವುದರ ಸೂಚನೆಯಾಗಿದೆ.

ಉಗುರುಗಳು ಹಳದಿ ಮತ್ತು ಒಡೆದಿರುವುದು
ಉಗುರುಗಳು ಹಳದಿಯಾಗಿದ್ದರೆ ಮತ್ತು ಇದು ಒಡೆದು ಹೋಗಿದ್ದರೆ ಆಗ ಇದನ್ನು ಕೂಡ ಗರ್ಭಧಾರಣೆಗೆ ಸಂಬಂಧಿಸಿದರೆ ದೊಡ್ಡ ಮಟ್ಟದ ಸಮಸ್ಯೆಯ ಚಿಹ್ನೆ ಎಂದು ಪರಿಗಣಿಸಲಾಗಿದೆ.



Click it and Unblock the Notifications
