For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ರಾಶಿಯವರು ಜೀವನದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು

By Hemanth Amin
|

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ಬದಲಾಗಬೇಕೆಂದು ಬಯಸುತ್ತಾನೆ. ಇದಕ್ಕೆ ಕೆಲವರು ಅಪವಾದವಾಗಿರಬಹುದು. ಆದರೆ ಪ್ರತಿಯೊಬ್ಬನ ಮನಸ್ಸಿನಲ್ಲೂ ಬದಲಾವಣೆ ಕಿಚ್ಚು ಇದ್ದೇ ಇರುವುದು. ಅದರಲ್ಲೂ ಮೊದಲಾಗಿ ಬದಲಾವಣೆ ಮಾಡುವುದು ನಿಮ್ಮ ವ್ಯಕ್ತಿತ್ವದಲ್ಲಿ ಇರುವಂತಹ ಕೆಲವೊಂದು ದುರ್ಬಲತೆಗಳನ್ನು.

ಈ ಲೇಖನದಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ವ್ಯಕ್ತಿತ್ವದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂದು ನಾವು ನಿಮಗೆ ಹೇಳಿಕೊಡಲಿದ್ದೇವೆ. ನೀವೊಬ್ಬ ಉತ್ತಮ ವ್ಯಕ್ತಿಯಾಗಲು ಕೆಲವೊಂದು ವಿಚಾರಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳಬೇಕೆಂದು ತಮ್ಮ ಜೋತಿಷ್ಯ ತಜ್ಞರು ಹೇಳುತ್ತಾರೆ. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಇರುವಂತಹ ದುರ್ಬಲತೆಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದನ್ನು ಓದುತ್ತಾ ಸಾಗಿ...

ಮೇಷ: ಮಾ.21-ಎಪ್ರಿಲ್ 19

ಮೇಷ: ಮಾ.21-ಎಪ್ರಿಲ್ 19

ಮೇಷ: ಬದಕಲು ಏನು ಬೇಕೋ ಅದನ್ನು ನೀವು ಬದಲಾಯಿಸಿಕೊಳ್ಳಬೇಕು

ನೀವು ಮಾಡುತ್ತಿರುವಂತಹ ಕೆಲಸವು ನಿಮಗೆ ಸಂತೋಷ ನೀಡದೇ ಇದ್ದರೆ ಮತ್ತು ಕೆಲಸವನ್ನು ನೀವು ಆನಂದಿಸದೇ ಇದ್ದರೆ ಇದನ್ನು ಬಿಟ್ಟು ಬೇರೆ ಯೋಚನೆ ಮಾಡಬೇಕು. ಬೇರೆಯವರು ನಿಮ್ಮ ಕಾರ್ಯವನ್ನು ಮಾಡಿ ಸಂತೋಷವಾಗಿರಲಿ. ನಿಮಗೆ ಇಷ್ಟವಾಗಿರುವಂತಹ ಕೆಲಸವನ್ನು ನೀವು ಹುಡುಕಬೇಕು ಮತ್ತು ನೀವು ಯಾವುದರಲ್ಲಿ ಉತ್ತಮವಾಗಿದ್ದೀರೋ ಅದನ್ನು ಆಯ್ಕೆ ಮಾಡಿ ಮತ್ತು ಅದರಲ್ಲಿ ನಿಮಗೆ ಯಶಸ್ಸು ಸಿಗುವುದು.ಇನ್ನು ಜೂನ್ ತಿಂಗಳಲ್ಲಿ ನಡೆಯುವ ಕೆಲವು ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಗಳು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 2018ರ ಜೂನ್ ತಿಂಗಳು ಈ ರಾಶಿಯವರಿಗೆ ಸಿನಿಮಾದ ರೀತಿಯಲ್ಲಿ ಬದಲಾವಣೆಯನ್ನು ಕಾಣುವರು ಎಂದು ಹೇಳಲಾಗುತ್ತದೆ. ನಿಮ್ಮ ಆಕ್ರಮಣ ಶೀಲ ಗುಣವು ಹಿಮ್ಮುಖ ಚಲನೆಗೆ ಎಡೆಮಾಡಿ ಕೊಡುವುದು. ಅಲೆಗಳು ಅದೆಷ್ಟು ಏರಿಳಿತಗಳ ಅಬ್ಬರ ತಂದರು ಕಾಲನ್ನು ಗಟ್ಟಿಯಾಗಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳಬೇಕು.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ವೃಷಭ: ಜೀವನದ ವಿಚಾರದಲ್ಲಿ ಭಯ ಅನುಮತಿಸಿ

ನಿಮಗೆ ಯಾವುದರ ಬಗ್ಗೆಯಾದರೂ ಭಯವಿದ್ದರೆ ಆಗ ಒಂದು ಅವಕಾಶ ಪಡೆಯಿರಿ. ಯಾಕೆಂದರೆ ನೀವು ಯಾಕಾಗಿ ಭಯ ಪಡುತ್ತೀರಿ ಎನ್ನುವ ಕಾರಣವಿರುವುದು. ಕೆಲವೊಂದು ಸಲ ಭಯವು ನಿಮ್ಮ ಆಯ್ಕೆಯ ಹಾದಿಯಲ್ಲೇ ಸಾಗುವಂತೆ ಮಾಡಿ ಗುರಿಮುಟ್ಟಿಸಬಹುದು. ಇನ್ನು ಮುಂಗಾರು ಮಳೆಯನ್ನು ತರುವ ಜೂನ್ ತಿಂಗಳು ವೃಷಭ ರಾಶಿಯವರ ಭವಿಷ್ಯದಲ್ಲಿ ವಿವಿಧ ಆಕಾಂಕ್ಷೆಗಳ ಭರವಸೆಯನ್ನು ಮೂಡಿಸುತ್ತದೆ. ಜೀವನದ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಬದಲಾವಣೆಯನ್ನು ಕಾಣುವಿರಿ. ನಿಮ್ಮ ವೃತ್ತಿ ಜೀವನದ ಗುರಿಗಳು ಮತ್ತು ಆಕಾಂಕ್ಷೆಗಳು ಸಹ ತಿಂಗಳ ಪೂರ್ತಿ ಮುಂಚೂಣಿಯಲ್ಲಿ ಇರುತ್ತವೆ. ನಿಮ್ಮ ಕೆಲಸದಲ್ಲಿ ಗುರಿಯನ್ನು ಸಾಧಿಸಲು ಗ್ರಹಗತಿಗಳು ನಿಮಗೆ ಸಾಥ್ ನೀಡುತ್ತವೆ ಎಂದು ಹೇಳಲಾಗುವುದು. ಗುರಿ ತಲುಪಲು ಕೆಲವೊಂದು ಅಡೆತಡೆಗಳು ಉಂಟಾಗಬಹುದು. ಅದರ ಕುರಿತು ನೀವು ಚಿಂತಿಸುವ ಅಗತ್ಯವಿಲ್ಲ.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಮಿಥುನ : ನಿಮ್ಮ ಸುತ್ತಲಿನ ಜನರನ್ನು ಬದಲಾಯಿಸಿ

ನಿಮ್ಮ ಸುತ್ತಲು ಯಾವಾಗಲೂ ಧನಾತ್ಮಕತೆ ಇರಬೇಕು ಮತ್ತು ಜನರು ನಿಮಗೆ ಸರಿಯಾದ ನಿರ್ದೇಶನ ನೀಡಬೇಕು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ನಕಾರಾತ್ಮಕತೆಯಿದ್ದರೆ ಆಗ ನೀವು ಅದನ್ನು ಹೋಗಲಾಡಿಸಬೇಕು ಮತ್ತು ನಕಾರಾತ್ಮಕತೆ ಉಂಟು ಮಾಡುವ ಜನರಿಂದ ದೂರವಿರಬೇಕು. ಇನ್ನು ಜೂನ್ ತಿಂಗಳಲ್ಲಿ ಮಿಥುನ ರಾಶಿಯವರು ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬೇಕಾಗುವುದು. ತಿಂಗಳ ಹೆಚ್ಚಿನ ಸಮಯ ಕೌಟುಂಬಿಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತವೆ. ವಿವಿಧ ಗ್ರಹಗಳ ಸಂಚಾರ ಹಾಗೂ ಬದಲಾವಣೆಗಳು ವೃತ್ತಿ ಜೀವನವನ್ನು ತಳ್ಳಲು ಸಹಾಯ ಮಾಡುವುದು. ಅಲ್ಲದೆ ವೃತ್ತಿ ಜೀವನದಲ್ಲಿ ಸಾಕಷ್ಟು ವಿಶೇಷ ಬದಲಾವಣೆಯನ್ನು ಕಾಣುವಿರಿ. ಸಾಕಷ್ಟು ಪ್ರತಿಕೂಲವಾದ ಹಾಗೂ ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸಬೇಕಾಗುವುದು. ನಿಮ್ಮ ಸ್ನೇಹ ಮತ್ತು ಸ್ವಾಭಾವಿಕ ಗುಣಗಳಿಂದ ಸಮಸ್ಯೆಗಳನ್ನು ನಿಭಾಯಿಸುವಿರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಮಟ್ಟವು ಉತ್ತಮ ಸ್ಥಾನದಲ್ಲಿ ಇರುವುದು. ಪ್ರಭಾವಶಾಲಿ ಜನರ ಪರಿಚಯವಾಗುವ ಸಾಧ್ಯತೆಗಳಿರುತ್ತವೆ. ಸಾಕಷ್ಟು ಒತ್ತಡದ ಜೀವನವನ್ನು ಅನುಭವಿಸಬೇಕಾದ್ದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ: ಜೂನ್ 21- ಜುಲೈ 22

ಕರ್ಕಾಟಕ: ಜೀವನದಲ್ಲಿ ತೆಗೆದುಕೊಳ್ಳದೆ ಇರುವ ಅಪಾಯಗಳನ್ನು ಬದಲಾಯಿಸಿ

ನೀವು ಜೀವನದಲ್ಲಿ ಇನ್ನಷ್ಟು ಅಪಾಯಗಳನ್ನು ಎದುರಿಸಬೇಕು. ನಿಮಗೆ ಭೀತಿ ಹುಟ್ಟಿಸುವಂತಹ ವಿಚಾರಗಳನ್ನೇ ಹೆಚ್ಚಾಗಿ ಮಾಡಿ. ನೀವು ಕ್ಯಾರೆ ಮಾಡದಿರುವಂತಹ ಒಂದು ಜೀವನ ಆರಂಭಿಸಿ ಮತ್ತು ನೀವು ಮಾಡುವುದರಿಂದ ತುಂಬಾ ಹೆಮ್ಮೆ ಪಡಿ.

ಸಿಂಹ: ಜುಲೈ 23- ಆ.23

ಸಿಂಹ: ಜುಲೈ 23- ಆ.23

ಸಿಂಹ: ನಿಮ್ಮ ಆರಾಮ ವಲಯದಿಂದ ಹೊರಬನ್ನಿ ಗೋಡೆಯನ್ನು ಕಟ್ಟಿಕೊಂಡು ಜನರನ್ನು ದೂರವಿಡಬೇಕೆಂದು ನೀವು ಚಿಂತಿಸುತ್ತಿರಬಹುದು. ಆದರೆ ನಿಮ್ಮ ದುರ್ಬಲತೆ ಬಗ್ಗೆ ತಿಳಿದಿದೆಯಾ? ಜನಸಂಪರ್ಕವು ಅತೀ ಅಗತ್ಯ. ನೀವು ಮತ್ತೊಮ್ಮೆ ಯೋಚಿಸಿ.

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ಕನ್ಯಾ: ನೀವು ಬದುಕಲು ವಿಫಲವಾಗುತ್ತಿರುವ ಜೀವನ ಮಟ್ಟ ಬದಲಾಯಿಸಿ

ಅವಾಸ್ತವಿಕವಾಗಿರುವಂತಹ ನಿರೀಕ್ಷೆಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲವೆನ್ನುವ ಕೊರಗನ್ನು ಬಿಡಬೇಕು. ಇದರಿಂದಾಗಿ ನೀವು ಹೆಚ್ಚು ವಿಫಲರಾಗುವುದು ಕಂಡುಬರುತ್ತದೆ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ತುಲಾ: ಜೀವನಪೂರ್ತಿ ನೀವು ನಿಸ್ವಾರ್ಥಿಯಾಗಿರುತ್ತೀರುತ್ತೀರಿ ಎನ್ನುವ ಸತ್ಯ ಬದಲಾಯಿಸಿ ಮತ್ತು ಸ್ವಾರ್ಥಿಯಾಗುವಂತಹ ಸಮಯವು ನಿಮಗೆ ಬಂದಿದೆ.

ನೀವು ಒಂದು ಸಲವಾದರೂ ನಿಮಗೋಸ್ಕರ ಚಿಂತೆ ಮಾಡಬೇಕು ಮತ್ತು ಇದರ ಬಗ್ಗೆ ನೀವು ಬೇಸರಿಸಬೇಕಿಲ್ಲ. ನೀವು ಪಡೆದಿರುವುದಕ್ಕಿಂತಲೂ ಹೆಚ್ಚಿನದಕ್ಕೆ ಅರ್ಹನಾಗಿದ್ದೀರಿ. ಒಳ್ಳೆಯದಕ್ಕಾಗಿ ನೀವು ಬದಲಾಗಬೇಕು.

ವೃಶ್ಚಿಕ: ಅ.23-ನ.22

ವೃಶ್ಚಿಕ: ಅ.23-ನ.22

ವೃಶ್ಚಿಕ:ನೀವು ಈಗ ಬದುಕುತ್ತಿರುವ ಜೀವನದ ಗ್ರಹಿಕೆ ಬದಲಾಯಿಸಿ.

ನಕಾರತ್ಮಕತೆಯು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಅರ್ಧ ಖಾಲಿಯಾಗಿರುವಂತಹ ಲೋಟದ ಕಡೆ ನೋಡುವ ಬದಲಾಗಿ ನೀವು ಸಂಪೂರ್ಣವಾಗಿ ಭಿನ್ನವಾಗಿ ಜೀವನವನ್ನು ನೋಡಬೇಕು.

ಧನು: ನ.23-ಡಿ.22

ಧನು: ನ.23-ಡಿ.22

ಧನು: ನಿಮ್ಮ ಕೊಡದೆ ಇರುವಂತಹ ಶ್ರೇಯಸ್ಸನ್ನು ಬದಲಾಯಿಸಿ

ಒಂದು ಸಲವಾದರೂ ನಿಮ್ಮ ಬೆನ್ನನ್ನು ತಟ್ಟಿಕೊಳ್ಳಬೇಕು. ನಿಮ್ಮ ಬಗ್ಗೆ ಮತ್ತು ಜೀವನದಲ್ಲಿ ಮಾಡಿಕೊಂಡಿರುವ ಆಯ್ಕೆ ಬಗ್ಗೆ ಹೆಮ್ಮೆಯಿರುವುದು ತುಂಬಾ ಒಳ್ಳೆಯದು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಮಕರ: ಬೇರೆಯವರಿಗೆ ಅಲ್ಲದೆ, ನಿಮಗೋಸ್ಕರ ಸಂತೋಷವಾಗಿರಲು ಜೀವನ ಬದಲಾಯಿಸಿ ನಿಮ್ಮ ಸುತ್ತಲು ಇರುವವರನ್ನು ಖುಷಿಯಾಗಿಡುವ ಮೊದಲು ನಿಮ್ಮನ್ನು ನೀವು ಸಂತೋಷವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಬೇರೆಯವರನ್ನು ಖುಷಿಯಾಗಿಡಬೇಕೆಂಬ ಧಾವಂತದಲ್ಲಿ ನಿಮ್ಮನ್ನು ಕಳಕೊಂಡಿದ್ದೀರಿ ಎಂದು ನಿಮಗೆ ಸಂತೋಷ ಸಿಗುವಾಗ ತಿಳಿಯುವುದು.

ಕುಂಭ: ಜೂ.21- ಫೆ.18

ಕುಂಭ: ಜೂ.21- ಫೆ.18

ಕುಂಭ: ಭೂತಕಾಲದ ಬಗ್ಗೆ ಯೋಚಿಸುವ ವಿಧಾನ ಬದಲಾಯಿಸಿ

ನಿಮ್ಮ ಜೀವನದ ಮೇಲೆ ಪರಿಣಾಮ ಬೀರುವಂತಹ ಕೆಲವು ಘಟನೆಗಳ ಬಗ್ಗೆ ನೀವು ಯೋಚಿಸುವುದನ್ನು ಬಿಟ್ಟು ಬಿಡಬೇಕು. ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಅದರಿಂದ ನೀವು ಕೆಲವು ಪಾಠ ಕಲಿಯಬಹುದಷ್ಟೇ.

ಮೀನ: ಫೆ. 19-ಮಾ.20

ಮೀನ: ಫೆ. 19-ಮಾ.20

ಮೀನ: ಸುತ್ತಮುತ್ತಲನ್ನು ಬದಲಾಯಿಸಿ

ಈ ಜಾಗವು ನಿಮಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲವೆಂದು ನೀವು ಅರ್ಥಮಾಡಿಕೊಳ್ಳಬೇಕು. ನೀವಿರುವಂತಹ ಜಾಗವನ್ನು ಬದಲಾಯಿಸಿಕೊಳ್ಳಿ. ಇದರಿಂದ ಏಳಿಗೆ ಮತ್ತು ಬೆಳೆಯಲು ಸಾಧ್ಯವಾಗುವುದು.

English summary

ONE Change You Need To Make In Your Life As Per Your Zodiac

What is the one thing that you wish to change in your life? We bet, it must be your weakness that you think is the worst thing in your personality and you wish to change exactly that. Here, in this article, we are revealing to you about what you need to change in yourself as per your zodiac sign.
X
Desktop Bottom Promotion