Latest Updates
-
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ!
ಸಂಖ್ಯಾ ಶಾಸ್ತ್ರದ ಪ್ರಕಾರ 2019ರಲ್ಲಿ, ನಿಮ್ಮ ಭವಿಷ್ಯ ಹೇಗಿದೆ ಎಂದು ನೋಡಿ
ಭವಿಷ್ಯ ಎನ್ನುವುದು ಒಂದು ನಿಗೂಢವಾದ ಸಂಗತಿ. ಭವಿಷ್ಯದಲ್ಲಿ ಹೀಗೇ ಆಗುವುದು ಎನ್ನುವುದನ್ನು ನಾವು ಬಲ್ಲವು ಎನ್ನುವುದಾದರೆ ಪ್ರಪಂಚದಲ್ಲಿ ಮೋಸ, ಕೊಲೆ, ಕಳ್ಳತನ ಸೇರಿದಂತೆ ಇನ್ನಿತರ ಕೆಟ್ಟ ಕೆಲಸಗಳು ಉದ್ಭವ ಆಗುತ್ತಲೇ ಇರಲಿಲ್ಲ. ಸಂತೋಷಕ್ಕೆ ಕಾರಣವಾಗುವ ಕೆಲಸ ಹಾಗೂ ಸದಾ ಯಶಸ್ಸಿನ ಹಾದಿಯಲ್ಲಿ ಮನುಷ್ಯ ಸಾಗುತ್ತಲೇ ಇರುತ್ತಿದ್ದ ಎನ್ನಬಹುದು. ನಾವು ಮಾಡುವ ಪ್ರಯತ್ನ ಹಾಗೂ ಜೀವನದ ಬಗ್ಗೆ ಯಾವುದೇ ಸರಿಯಾದ ಮಾಹಿತಿಯೂ ಮೊದಲೇ ನಮಗೆ ಸಿಗುವುದು ಕಷ್ಟ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಇದೊಂದು ಸವಾಲಿನ ಸಂಗತಿ ಎಂದು ಸಹ ಹೇಳಬಹುದು. ಆದರೆ ಇವೆಲ್ಲಕ್ಕೂ ಮಿಗಿಲಾದ ಒಂದು ಜ್ಞಾನದಿಂದ ಭವಿಷ್ಯದ ಆಗು-ಹೋಗುಗಳನ್ನು ಅಂದಾಜಿಸಬಹುದಾಗಿದೆ. ಅದನ್ನೇ ಜ್ಯೋತಿಷ್ಯ ಶಾಸ್ತ್ರ ಎನ್ನಲಾಗುವುದು.
ನಮ್ಮ ಸುತ್ತಲಿನ ಪರಿಸರ, ಪ್ರಾಣಿ, ಪಕ್ಷಿ, ಸಂಖ್ಯೆ, ಕುಂಡಲಿ, ರಾಶಿಚಕ್ರ, ಹಸ್ತ ಮುದ್ರಿಕೆಯ ಸಹಾಯದಿಂದ ಸಾಕಷ್ಟು ಭವಿಷ್ಯದ ವಿಷಯಗಳನ್ನು ತಿಳಿದುಕೊಳ್ಳಬಹುದು. ಇವುಗಳ ಸಹಾಯದಿಂದ ನಮಗೆ ಎಷ್ಟರ ಮಟ್ಟಿಗೆ ಧನಾತ್ಮಕ ಸಮಯ ಹಾಗೂ ಅದೃಷ್ಟ ದೊರೆಯುವುದು ಎಂದು ಗುರುತಿಸಬಹುದು. ಅವುಗಳ ಆಧಾರದ ಮೇಲೆ ನಮ್ಮ ಜೀವನದ ಮುಂದಿನ ಯೋಜನೆಯನ್ನು ಸಹ ಕೈಗೊಳ್ಳಬಹುದು. ಆಗ ನಮ್ಮ ಆಸೆಯಂತೆ ಯಶಸ್ಸು ದೊರೆಯುವುದು ಎಂದು ಹೇಳಲಾಗುತ್ತದೆ. ಅಂತಹ ಅದ್ಭುತ ಶಕ್ತಿಯಲ್ಲಿ ಸಂಖ್ಯಾ ಶಾಸ್ತ್ರವೂ ಒಂದು...

ಸಂಖ್ಯಾ ಶಾಸ್ತ್ರ
ಸಂಖ್ಯಾ ಶಾಸ್ತ್ರ ಎನ್ನುವುದು ಅತ್ಯುತ್ತಮ ರೀತಿಯಲ್ಲಿ ಭವಿಷ್ಯದ ವಿಷಯವನ್ನು ತೆರೆದಿಡುವುದು. ಸಂಖ್ಯೆ ಎನ್ನುವುದು ಮೇಲ್ನೋಟಕ್ಕೆ ಒಂದು ಅಂಕೆ ಸಂಖ್ಯೆಯಂತೆ ಕಂಡುಬರಬಹುದು. ಆದರೆ ಪ್ರತಿಯೊಂದು ಸಂಖ್ಯೆಯು ನಮ್ಮ ಭವಿಷ್ಯವನ್ನು ನುಡಿಯುವುದು. ನಾವು ಆಯ್ಕೆ ಮಾಡುವ ಸಂಖ್ಯೆಯಿಂದ ನಮ್ಮ ಭವಿಷ್ಯದಲ್ಲಿ ಏನು ಸಂಭವಿಸುವುದು ಎಂದು ಹೇಳಲಾಗುವುದು. ನಾವು ಹುಟ್ಟಿದ ಸಂಖ್ಯೆಯಿಂದಲೇ ನಮ್ಮ ಪ್ರತಿವರ್ಷದ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಅಲ್ಲದೆ ಅವುಗಳ ಆಧಾರದ ಮೇಲೆ ನಾವು ಅಂದುಕೊಂಡ ಯೋಜನೆ ಅಥವಾ ಗುರಿಗೆ ಸಾಕಷ್ಟು ಸಿದ್ಧತೆಯನ್ನು ನಡೆಸಬಹುದು.

ಸಂಖ್ಯಾ ಶಾಸ್ತ್ರ
ಈಗಾಗಲೇ 2018ನೇ ಸಾಲಿನ ಅಂತ್ಯಕ್ಕೆ ಆಗಮಿಸಿರುವ ನಮಗೆ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸುವುದು ಹಾಗೂ 2019ರಲ್ಲಿ ಕೈಗೊಳ್ಳಲು ಒಂದಿಷ್ಟು ಯೋಜನೆಗಳನ್ನು ರೂಪಿಸಿಕೊಂಡಿರುತ್ತೇವೆ. ನಿಮ್ಮ ಯೋಜನೆಗಳಿಗೆ ಮುಂದಿನ ವರ್ಷ ಅಂದರೆ 2019ರಲ್ಲಿ ಯಾವ ರೀತಿಯ ಬದಲಾವಣೆ ಕಾಣುವಿರಿ ಎನ್ನುವುದನ್ನು ಸಣ್ಣ ಲೆಕ್ಕ ಹಾಕುವುದರ ಮೂಲಕ ತಿಳಿಯಬಹುದು. ಹಾಗಾದರೆ ಆ ಲೆಕ್ಕ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವುದರ ಬಗ್ಗೆ ಕುತೂಹಲವನ್ನು ಹೊಂದಿದ್ದೀರಿ ಎಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ ಭವಿಷ್ಯದ ಆಗು ಹೋಗುಗಳನ್ನು ತಿಳಿಯಿರಿ.

ಅದೃಷ್ಟ ಸಂಖ್ಯೆಯನ್ನು ಕಂಡು ಹಿಡಿಯಲು ನಿಯಮ
ನಿಮ್ಮ ಅದೃಷ್ಟ ಸಂಖ್ಯೆಯನ್ನು ಕಂಡು ಹಿಡಿಯಲು ಈ ರೀತಿಯ ನಿಯಮಗಳನ್ನು ಅನುಸರಿಸಬೇಕು.
* ಮೊದಲು ನೀವು ಹುಟ್ಟಿದ ದಿನಾಂಕ ಮತ್ತು ತಿಂಗಳ ಸಂಖ್ಯೆಯನ್ನು ಕೂಡಿಸಿ ಏಕ ಸಂಖ್ಯೆ ಬರುವಂತೆ ಮಾಡಬೇಕು. ಉದಾ: ನೀವು ಫೆಬ್ರವರಿ 6 ರಂದು ಜನಿಸಿದ್ದರೆ 6+2(ಎರಡನೇ ತಿಂಗಳು)= 8 ಆಗಿರುತ್ತದೆ. ಅದೇ ನೀವು ಆಗಸ್ಟ್ 15 ರಂದು ಜನಿಸಿದ್ದರೆ 15+8=23 ಆಗುವುದು. ಆಗ ಪುನಃ ಕೂಡಿದಾಗ 2+3=5 ಆಗುವುದು. ನಿಮ್ಮ ಅದೃಷ್ಟ ಸಂಖ್ಯೆ 5 ಆಗುವುದು.
* ನಂತರ 2019ರ ಸಂಖ್ಯೆಯನ್ನು ಕೂಡಿದಾಗ 2+0+1+9=12 ಆಗುವುದು. ಅದನ್ನು ಪುನಃ 1+2=3 ಎಂದು ಕೂಡಬೇಕು.
* ಈಗ ಜನ್ಮ ದಿನಾಂಕದಿಂದ ಸಿಕ್ಕ ಅದೃಷ್ಟ ಸಂಖ್ಯೆ ಮತ್ತು 2019ನ್ನು ಕೂಡಿದಾಗ ಬಂದ ಅದೃಷ್ಟ ಸಂಖ್ಯೆಯನ್ನು ಕೂಡಬೇಕು ಉದಾ: 8+3=11 ಆಗುವುದು ಆಗ ಪುನಃ ಕೂಡಿದಾಗ 1+1=2 ಎನ್ನುವ ಅದೃಷ್ಟ ಸಂಖ್ಯೆ ದೊರೆಯುವುದು. ಅಂತಿಮವಾಗಿ ಸಿಗುವ ಸಂಖ್ಯೆಯೇ ನಿಮ್ಮ 2019ನೇ ಸಾಲಿನ ಅದೃಷ್ಟ ಸಂಖ್ಯೆಯಾಗಿರುತ್ತದೆ.

ನಿಮ್ಮ ಅದೃಷ್ಟ ಸಂಖ್ಯೆ 1 ಆಗಿದ್ದರೆ
ನಿಮ್ಮ ಅದೃಷ್ಟ ಸಂಖ್ಯೆ 1 ಆಗಿದ್ದರೆ 2019ರ ವರ್ಷವು ನಿಮಗೆ ಅದೃಷ್ಟದಾಯಕವಾಗಿರುತ್ತದೆ. ಈ ವರ್ಷ ನಿಮ್ಮ ರೀತಿಯಲ್ಲಿಯೇ ಹಲವಾರು ಹೊಸ ಯೋಜನೆ ಹಾಗೂ ವಿಷಯಗಳಿಗೆ ಅವಕಾಶವನ್ನು ಕಲ್ಪಿಸಿಕೊಡುವುದು. ಅಂತೆಯೇ ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಒಳ್ಳೆಯ ಸಂಗತಿಗಳನ್ನು ಹಾಗೂ ಕೆಟ್ಟ ವಿಷಯಗಳನ್ನು ಕಡೆಗಣಿಸದಿರಿ. ಈ ವರ್ಷ ನೀವು ಹೇಗೆ ಆತ್ಮವಿಶ್ವಾಸದಿಂದ ನಿರ್ಣಯವನ್ನು ಕೈಗೊಳ್ಳುವಿರಿ ಎನ್ನುವುದರ ಮೇಲೆಯೇ ನಿಮ್ಮ ಜೀವನದ ಸಂತೋಷ ನಿರ್ಧರಿಸುವುದು. ಈ ವರ್ಷ ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವಂತಹ ಯಾವುದೇ ಅಡೆತಡೆಗಳು ಸಂಭವಿಸುವುದಿಲ್ಲ ಎನ್ನಲಾಗುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ವರ್ಷ ನಿಮಗೆ ಬಹಳ ಸಂತೋಷಕರವಾದ ವರ್ಷವಾಗಿರುತ್ತದೆ.

ನಿಮ್ಮ ಅದೃಷ್ಟದ ಸಂಖ್ಯೆ 2 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 2 ಆಗಿದ್ದರೆ ಈ ವರ್ಷ ನೀವು ಸಾಧಕರಾಗಿರುತ್ತೀರಿ ಎಂದು ಹೇಳುತ್ತದೆ. ನಿಮ್ಮ ಗುರಿ ಹಾಗೂ ಉದ್ದೇಶವನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ನೀವು ಸೂಕ್ತ ಹಾಗೂ ದೃಢವಾದ ಆದ್ಯತೆಗಳನ್ನು ಹೊಂದಿರುತ್ತೀರಿ ಎಂದು ಹೇಳಲಾಗುವುದು. ನಿಮ್ಮ ಆದ್ಯತೆಯ ಬಗ್ಗೆ ಸಾಕಷ್ಟು ಖಚಿತತೆಯು ನಿಮ್ಮದಾಗಿರಬೇಕು ಎಂದು ಹೇಳಲಾಗುವುದು. ನಿಮಗೆ ಉತ್ತಮ ಸಮಯ ಹಾಗೂ ಅವಕಾಶಗಳು ಈ ವರ್ಷ ದೊರೆಯುವುದು. ಅದನ್ನು ಬಳಸಿಕೊಂಡು ನಿಮ್ಮ ಗುರಿಯನ್ನು ತಲುಪುವ ಕೆಲಸವನ್ನು ಕೈಗೊಳ್ಳಬೇಕು. ಕೈಕಟ್ಟಿ ಕುಳಿತುಕೊಂಡರೆ ಎಷ್ಟೇ ಒಳ್ಳೆಯ ಸಮಯ ಎದುರಾದರೂ ಪ್ರತಿಫಲ ದೊರೆಯದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಅಗತ್ಯವಾದ ಶ್ರಮ ಹಾಗೂ ನಿಷ್ಠೆಯನ್ನು ನೀವು ವಿನಿಯೋಗಿಸಬೇಕು.

ನಿಮ್ಮ ಅದೃಷ್ಟದ ಸಂಖ್ಯೆ 3 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 3 ಆಗಿದ್ದರೆ ಈ ವರ್ಷ ನೀವು ನಿಮ್ಮ ಅತ್ಯುತ್ತಮ ಬುದ್ಧಿವಂತಿಕೆಯನ್ನು ಬಹಿರಂಗಪಡಿಸುತ್ತೀರಿ ಎಂದು ಹೇಳಲಾಗುವುದು. ನೀವು ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಬದಲಾವಣೆಯ ಬಗ್ಗೆ ಸಾಕಷ್ಟು ತಳ್ಮೆಯನ್ನು ಹೊಂದಬೇಕು ಎಂದು ಸಲಹೆ ನೀಡಲಾಗುವುದು. ನೀವು ಬಯಸುವ ವಸ್ತು ಅಥವಾ ವ್ಯಕ್ತಿಯ ಬಗ್ಗೆ ಸಾಕಷ್ಟು ಖಚಿತತೆಯನ್ನು ಹೊಂದಬೇಕು. ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಯಾವುದೇ ಹಸ್ತಕ್ಷೇಪವಿಲ್ಲದೆ ನಿಮ್ಮ ಸ್ವಂತ ಗುರುತನ್ನು ಕಂಡುಕೊಳ್ಳಬೇಕಾದ ವರ್ಷವಾಗಿರುತ್ತದೆ. ನಿಮ್ಮಲ್ಲಿ ಸಾಕಷ್ಟು ಉತ್ತಮ ಸಾಮಥ್ರ್ಯ ಇರುವುದರಿಂದ ಅದನ್ನು ಬಳಸಿಕೊಂಡು ನೀವು ಉತ್ತಮ ಸಾಧನೆ ಮಾಡಬಹುದು. ಅದಕ್ಕಾಗಿ ಈ ವರ್ಷ ನಿಮಗೆ ಉತ್ತಮ ಸಮಯವನ್ನು ಕಲ್ಪಿಸಿಕೊಡುವುದು. ಯಾವುದೇ ಕಾರಣಕ್ಕೂ ಇನ್ನೊಬ್ಬರ ಸಹಾಯಕ್ಕೆ ಮೊರೆ ಹೋಗುವ ಅನಿವಾರ್ಯತೆ ಒದಗಿ ಬರದು.

ನಿಮ್ಮ ಅದೃಷ್ಟದ ಸಂಖ್ಯೆ 4 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 4 ಆಗಿದ್ದರೆ ಈ ವರ್ಷ ಸಾಕಷ್ಟು ಶ್ರಮದಾಯಕ ಹಾಗೂ ಆತ್ಮವಿಶ್ವಾಸದಿಂದ ಕೆಲಸವನ್ನು ಕೈಗೊಳ್ಳುವುದರ ಮೂಲಕ ನಿಮ್ಮ ಸಾಮಥ್ರ್ಯವನ್ನು ಬಹಿರಂಗ ಪಡಿಸುವಿರಿ. ವಿಶ್ವಾಸ ಮತ್ತು ನಿರ್ಣಯವು ನಿಮ್ಮನ್ನು ಯಶಸ್ವಿ ಯಕ್ತಿಯನ್ನಾಗಿ ಮಾಡುವುದು. ಈ ವರ್ಷ ನೀವು ಅಂದು ಕೊಂಡಿದ್ದೆಲ್ಲವನ್ನೂ ಮಾಡುವಿರಿ. ನಿಮಗೆ ದುಃಖವನ್ನು ತಂದೊಡ್ಡ ಬಹುದಾದ ಯಾವುದೇ ತಪ್ಪು ನಿರ್ಧಾರವನ್ನು ಕೈಗೊಳ್ಳಬಾರದು ಎಂದು ಸಲಹೆ ನೀಡಲಾಗುವುದು. ಸಾಮಾನ್ಯವಾಗಿ ಅಂತಹ ಕೆಲಸಗಳಿಗೆ ನೀವು ಮುಂದಾಗುವ ಸಾಧ್ಯತೆಗಳು ಕಡಿಮೆ ಎಂದು ಅಂದಾಜಿಸಲಾಗುವುದು. ನೀವು ಮಾಡುವ ಕೆಲಸವು ಆತ್ಮ ಸಾಕ್ಷಿಯಾಗಿ ಉತ್ತಮವಾಗಿದೆ ಎಂದಾಗ ನೀವು ಅಂದುಕೊಂಡಂತಹ ಸಹಾಯ ಹಾಗೂ ಯಶಸ್ಸು ದೊರೆಯುವುದು.

ನಿಮ್ಮ ಅದೃಷ್ಟ ಸಂಖ್ಯೆ 5 ಆಗಿದ್ದರೆ
ನಿಮ್ಮ ಅದೃಷ್ಟ ಸಂಖ್ಯೆ 5 ಆಗಿದ್ದರೆ ಈ ವರ್ಷ ನಿಮಗೆ ಶ್ರೇಷ್ಠವಾದ ವರ್ಷ ಎಂದು ಬಹಿರಂಗ ಪಡಿಸುತ್ತದೆ. ನಿಮ್ಮ ಸುತ್ತಲಿನ ಬದಲಾವಣೆಗಳನ್ನು ಸ್ವೀಕರಿಸಲು ನೀವು ಸಾಕಷ್ಟು ಮೃದುವಾದ ಮತ್ತು ಸಕಾರಾತ್ಮಕ ವಾತಾವರಣ ಒದಗಿ ಬರುವುದು. ಈ ಹಿಂದೆ ಅನುಭವಿಸುತ್ತಿದ್ದ ಅಹಿತಕರವಾದ ಸಂಗತಿಗಳಿಂದ ದೂರವಾಗಲು ಸಾಕಷ್ಟು ಅನುಕೂಲಕರ ಪರಿಸ್ಥಿತಿ ಎದುರಾಗುವುದು. 2019ರ ವರ್ಷದಲ್ಲಿ ನೀವು ಜನರೊಂದಿಗೆ ವ್ಯವಹರಿಸುವಾಗ ಸಾಕಷ್ಟು ಪ್ರಾಮಾಣಿಕತೆಯ ವರ್ತನೆಯನ್ನು ಹೊಂದಬೇಕು. ಆಗ ನಿಮ್ಮ ಮಾರ್ಗದಲ್ಲಿ ಉಂಟಾಗುವ ತೊಂದರೆಗಳನ್ನು ಸುಲಭವಾಗಿ ತಡೆಯಬಹುದು ಎಂದು ಸಲಹೆ ನೀಡಲಾಗುವುದು. ಕಷ್ಟಗಳು ಎದುರಾದಾಗ ಅದಕ್ಕೆ ಬೇಸರ ಹಾಗೂ ಚಿಂತನೆಗೆ ಒಳಗಾಗಿ ಕುಳಿತುಕೊಳ್ಳಬಾರದು. ಅದನ್ನು ಎದುರಿಸಿ ಮುಂದೆ ಸಾಗುವ ಮನಃಸ್ಥಿತಿಯನ್ನು ಹೊಂದಬೇಕು. ಆಗ ನಿಮ್ಮ ದಾರಿಗೆ ಯಾವುದೇ ಅಡೆ-ತಡೆ ಉಂಟಾಗದು.

ನಿಮ್ಮ ಅದೃಷ್ಟದ ಸಂಖ್ಯೆ 6 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 6 ಆಗಿದ್ದರೆ 2019ರಲ್ಲಿ ನೀವು ಸಾಮಾಜಿಕ ವಲಯದಲ್ಲಿ ಸಾಕಷ್ಟು ಗಮನಾರ್ಹ ಹೆಚ್ಚಳನ್ನು ಅನುಭವಿಸುತ್ತೀರಿ. ಸಾಮಾಜಿಕ ವಲಯದಲ್ಲಿ ಸಾಕಷ್ಟು ಉತ್ತಮ ಕಾರ್ಯವನ್ನು ಕೈಗೊಳ್ಳುವಿರಿ. ನಾಚಿಕೆ ಮತ್ತು ನಿಷ್ಕಪಟ ವ್ಯಕ್ತಿಗಳಾಗಿ ಅತ್ಯುತ್ತಮ ಆತ್ಮವಿಶ್ವಾಸದಿಂದ ಹೊರಹೊಮ್ಮುವಿರಿ. ಯಾವುದೇ ಯೋಜನೆ ಅಥವಾ ಗುರಿಯಲ್ಲಿ ಇತರರಿಗೆ ನೋವು, ನಷ್ಟ ಮತ್ತು ಅನಾನುಕೂಲತೆಯನ್ನು ಕಲ್ಪಿಸುವಂತೆ ಇರಬಾರದು. ಉತ್ತಮ ಕೆಲಸ ಹಾಗೂ ನಿರ್ಧಾರಗಳ ಮೇಲೆ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಲಾಗುವುದು. ಇದರಿಂದ ಸಾಕಷ್ಟು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಅಲ್ಲದೆ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು.

ನಿಮ್ಮ ಅದೃಷ್ಟದ ಸಂಖ್ಯೆ 7 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 7 ಆಗಿದ್ದರೆ 2019ರಲ್ಲಿ ನೀವು ಸಾಕಷ್ಟು ವೈಯಕ್ತಿಕ ಬೆಳವಣಿಗೆಯನ್ನು ಕಂಡುಕೊಳ್ಳುವಿರಿ ಎಂದು ಸಂಖ್ಯಾ ಶಾಸ್ತ್ರ ಹೇಳುವುದು. ಈ ವರ್ಷ ನೀವು ಇತರರ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಕೆಲಸ-ಕಾರ್ಯವನ್ನು ಕೈಗೊಳ್ಳುವಿರಿ. ಸಾಕಷ್ಟು ಶ್ರಮ ಹಾಗೂ ಆಸಕ್ತಿಯಿಂದ ಕೆಲಸವನ್ನು ನಿರ್ವಹಿಸಿದರೆ ಈ ವರ್ಷ ನಿಮಗೆ ನೆನಪಿನಲ್ಲಿಟ್ಟು ಕೊಳ್ಳುವಂತಹ ವರ್ಷ ವಾಗುವುದು. ನೀವು ಯಾವುದೇ ಗುರಿಯನ್ನು ಹೊಂದಿರಬೇಕು ಎಂದಾದರೆ ಅದರ ಕುರಿತು ಇತರರ ಮುಂದೆ ಸಹಾಯದ ಕುರಿತು ಸಹಾಯ ಯಾಚಿಸುವ ಅಗತ್ಯ ಇರುವುದಿಲ್ಲ. ನೀವು ನಿಮ್ಮ ಇಷ್ಟಗಳಿಗೆ ಅನುಗುಣವಾಗಿ ಸೂಕ್ತ ಯೋಜನೆಯನ್ನು ಕೈಗೊಳ್ಳಬಹುದು. ಇದರಿಂದ ಉತ್ತಮ ಫಲಗಳನ್ನು ಅನುಭವಿಸುವಿರಿ ಎನ್ನಲಾಗುವುದು.

ನಿಮ್ಮ ಅದೃಷ್ಟದ ಸಂಖ್ಯೆ 8 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 8 ಆಗಿದ್ದರೆ 2018ರಲ್ಲಿ ನೀವು ಸಾಕಷ್ಟು ಶ್ರಮದಾಯಕ ಕೆಲಸವನ್ನು ಕೈಗೊಳ್ಳಬೇಕು. ಪ್ರಯತ್ನಗಳು ಹೆಚ್ಚಾಗಿರಬೇಕೆಂದು ಬಯಸುತ್ತಾರೆ. ನೀವು ಶ್ರಮದಾಯಕ ವ್ಯಕ್ತಿಗಳಾಗಿದ್ದರೆ ನಿಮಗೆ ಆಗ ಅಷ್ಟು ಕಷ್ಟ ಎನಿಸದು. ಸಾಕಷ್ಟು ಕೆಲಸದಲ್ಲಿ ನೀವು ಕ್ಷಮೆಯಾಚಿಸ ಬೇಕಾಗುವುದು. ಉತ್ತಮ ಫಲಿತಾಂಶಕ್ಕಾಗಿ ನೀವೇ ಸಾಕಷ್ಟು ಕಾಳಜಿಯನ್ನು ವಹಿಸ ಬೇಕಾಗುವುದು. ಇಲ್ಲವಾದರೆ ಕೆಲಸ ಕಾರ್ಯಗಳಲ್ಲಿ ವಿಫಲತೆಯನ್ನು ಅನುಭವಿಸ ಬೇಕಾಗುವುದು. ಹಾಗಾಗಿ ನೀವು ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಪರಿಶೀಲನೆ ನಡೆಸುವ ಅನಿವಾರ್ಯತೆ ಇರುತ್ತದೆ.

ನಿಮ್ಮ ಅದೃಷ್ಟದ ಸಂಖ್ಯೆ 9 ಆಗಿದ್ದರೆ
ನಿಮ್ಮ ಅದೃಷ್ಟದ ಸಂಖ್ಯೆ 9 ಆಗಿದ್ದರೆ 2019ರಲ್ಲಿ ನೀವು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ ಎಂದು ಹೇಳಲಾಗುವುದು. ಸ್ವಭಾವತಃ ನೀವು ಮಾನವೀಯತೆ ಹೊಂದಿರುವ ವ್ಯಕ್ತಿಗಳಾಗಿದ್ದರೆ ಈ ವರ್ಷ ಸಾಕಷ್ಟು ವಿಷಯದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುವುದು. ಈ ನಿಟ್ಟಿನಲ್ಲಿ ನೀವು ನಿಸ್ವಾರ್ಥ ವ್ಯಕ್ತಿಗಳಾಗಿರಬೇಕಾಗುವುದು. ಒಳ್ಳೆಯ ಪರಿಶ್ರಮ ಹಾಗೂ ಸೂಕ್ತ ನಿರ್ಣಯದಿಂದಾಗಿ ಪ್ರಶಂಸೆ ಹಾಗೂ ಆಶೀರ್ವಾದಗಳು ನಿಮಗೆ ದೊರೆಯುವುದು ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಈ ವರ್ಷ ನಿಮಗೆ ಒಂದಿಷ್ಟು ಶ್ರಮದಾಯಕ ಜೀವನವನ್ನು ಕೈಗೊಳ್ಳುವಂತೆ ಮಾಡಿದರೂ ಸಾಕಷ್ಟು ಉತ್ತಮ ಫಲಿತಾಂಶವು ದೊರೆಯುವುದು. ಹಾಗಾಗಿ ಯೋಜನೆಯನ್ನು ಕೈಗೊಳ್ಳುವಾಗ ಹಾಗೂ ಆಯ್ಕೆಯ ಸಮಯದಲ್ಲಿ ಸಾಕಷ್ಟು ಚಿಂತನೆ ನಡೆಸಬೇಕಾಗುವುದು.



Click it and Unblock the Notifications











