Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಡಿಸೆಂಬರ್ ತಿಂಗಳ ಸಂಖ್ಯಾಶಾಸ್ತ್ರದ ಕಂಪ್ಲೀಟ್ ಡಿಟೇಲ್ಸ್: ನಿಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ
ಸಂಖ್ಯಾಶಾಸ್ತ್ರವನ್ನು ಹೆಚ್ಚಾಗಿ ಪ್ರತಿಯೊಬ್ಬರು ನಂಬುವರು. ಇದು ಕೂಡ ಒಂದು ರೀತಿಯ ಜ್ಯೋತಿಷ್ಯವಾಗಿದೆ. ಅಂಗೈಶಾಸ್ತ್ರ, ಜಾತಕ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಹೀಗೆ ಜ್ಯೋತಿಷ್ಯದಲ್ಲಿ ಹಲವಾರು ವಿಧಗಳಿವೆ. ನೀವು ಸಂಖ್ಯಾ ಶಾಸ್ತ್ರಜ್ಞದ ಬಗ್ಗೆ ಓದಿದ್ದರೆ ಅವರ ಬಗ್ಗೆ ತಿಳಿದಿದ್ದರೆ ಅವರು ಹೇಳುವಂತಹ ವಿಚಾರಗಳು ಅಂಕೆಗೆ ಸಂಬಂಧಿಸಿದ್ದಾಗಿರುವುದು ಎಂದು ತಿಳಿದುಬರುವುದು. ಜ್ಯೋತಿಷಿಗಳ ಪ್ರಕಾರ ಡಿಸೆಂಬರ್ ನಿಂದ ಜನವರಿಗೆ ತಿಂಗಳಿಗೆ ಕಾಲಿಡುವುದು ತುಂಬಾ ಪ್ರಭಾವಶಾಲಿಯಾಗಿರುವುದು. ಹೊಸ ವರ್ಷವು ಮುಂದೆ ಬರುತ್ತಿರುವಂತೆ ನಿಮ್ಮನ್ನು ಕುಗ್ಗುತ್ತಿರುವಂತೆ ಮಾಡುವ ಕೆಲವೊಂದು ವಿಚಾರಗಳನ್ನು ನೀವು ಕಡೆಗಣಿಸಬೇಕು ಅಥವಾ ತ್ಯಜಿಸಬೇಕು. ಡಿಸೆಂಬರ್ ತಿಂಗಳು ಸಂಖ್ಯಾಶಾಸ್ತ್ರದ ಪ್ರಕಾರ ಹೇಗಿರಲಿದೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. 2018ರ ಡಿಸೆಂಬರ್ ತಿಂಗಳು ಹೇಗಿರಲಿದೆ ಎಂದು ನಿಮಗೆ ಹೇಳುತ್ತೇವೆ.
ಈ ತಿಂಗಳ ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯ ಹೇಗಿರಲಿದೆ ಎಂದು ಹೇಳಲಾಗುತ್ತದೆ. ನಿಮ್ಮ ಹುಟ್ಟಿದ ದಿನಾಂಕ, ತಿಂಗಳು ಹೀಗೆ ಪ್ರತಿಯೊಂದನ್ನು ಕೂಡಿ, ಕಳೆದು ಒಂದು ಲೆಕ್ಕ ಮಾಡಿ ನಿಮ್ಮ ಸಂಖ್ಯಾಶಾಸ್ತ್ರದ ಬಗ್ಗೆ ಹೇಳುವರು. ಸಂಖ್ಯಾಶಾಸ್ತ್ರವು ಯಾವತ್ತೂ ಬದಲಾಗದು. ನೀವು ಹುಟ್ಟಿದ ತಿಂಗಳು ಮತ್ತು ದಿನವನ್ನು ಕೂಡಿಸಬೇಕು. ಇದರ ಬಳಿಕ ಅದನ್ನು ಒಂದಂಕೆಗೆ ಪರಿವರ್ತಿಸಬೇಕು. ಉದಾಹರಣೆಗೆ ನೀವು ಮೇ 24ರಂದು ಹುಟ್ಟಿದ್ದರೆ ಆಗ ನೀವು ಹುಟ್ಟಿದ ದಿನಾಂಕಕ್ಕೆ ಐದನ್ನು ಸೇರಿಸಿಕೊಳ್ಳಿ. ಬಳಿಕ ಇದನ್ನು ಒಂದಂಕೆ ಮಾಡಿಕೊಳ್ಳಿ.(24+5=29; 2+9=11; 1+1=2). ಹೀಗೆ ಮಾಡಿಕೊಂಡರೆ ನೀವು ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯ ತಿಳಿಯಿರಿ.

ನಿಮ್ಮ ಸಂಖ್ಯೆಯು 1 ಆಗಿದ್ದರೆ….
ವ್ಯಕ್ತಿಗಳ ಸಂಖ್ಯೆಯು 1 ಆಗಿದ್ದರೆ ಆಗ ತಿಂಗಳ ಭವಿಷ್ಯದ ಪ್ರಕಾರ ಅವರ ಉದ್ಯೋಗದ ವಾತಾವರಣವು ತುಂಬಾ ಸ್ಥಿರವಾಗಿರಲಿದೆ. ಇನ್ನೊಂದು ಕಡೆಯಲ್ಲಿ ಅವರು ತಮ್ಮ ವೈವಾಹಿಕ ಜೀವನ ಹಾಗೂ ಕುಟುಂಬದ ಸಂಬಂಧಗಳ ಬಗ್ಗೆ ತುಂಬಾ ಕಠಿಣವಾಗಿ ಕೆಲಸ ಮಾಡಬೇಕು. ಈ ತಿಂಗಳಲ್ಲಿ ನೀವು ಸ್ನೇಹಿತರ ಬಳಗ ಹಾಗೂ ಕುಟುಂಬದವರಿಗೆ ತಕ್ಷಣ ಮತ್ತು ಧನಾತ್ಮಕ ಫಲಿತಾಂಶದೊಂದಿಗೆ ಬೆಂಬಲ ನೀಡುವುದು ಅತೀ ಅಗತ್ಯವಾಗಿರುವುದು. ನಿಮ್ಮ ಸಂಖ್ಯಾಶಾಸ್ತ್ರದ ಪ್ರಕಾರ ಈ ತಿಂಗಳು ನಿಮಗೆ ಭಡ್ತಿ ಅಥವಾ ಸಂಬಂಳದಲ್ಲಿ ಏರಿಕೆಯಾಗುವಂತಹ ಸಾಧ್ಯತೆಗಳು ಇರುವುದು. ನಿಮ್ಮ ಕೆಲಸದಲ್ಲಿ ಹೆಚ್ಚಿನ ಒತ್ತಡ ಬೀಳುವುದು. ಈ ತಿಂಗಳು ವ್ಯಾಪಾರ ಮತ್ತು ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಒಳ್ಳೆಯ ತಿಂಗಳಾಗಿರಲಿದೆ. ಯಾವುದೇ ರೀತಿಯ ಕಾನೂನಿನ ಸಮಸ್ಯೆಯಲ್ಲಿ ಸಿಲುಕಿದ್ದರೆ ಆಗ ನೀವು ಇದರಲ್ಲಿ ಮುನ್ನಡೆಯಲು ಅತೀ ಉತ್ತಮ ಸಮಯವಾಗಿರುವುದು. ನಿಮ್ಮ ರೋಮ್ಯಾನ್ಸ್ ಕೂಡ ಈ ತಿಂಗಳಲ್ಲಿ ನಿಮಗೆ ತುಂಬಾ ಇಷ್ಟವಾಗಿರುವುದು ಎಂದು ಸಂಖ್ಯಾಶಾಸ್ತ್ರವು ಹೇಳುತ್ತದೆ. ಬದ್ಧತೆಯು ಸ್ಥಿರತೆಯನ್ನು ಉಂಟು ಮಾಡುವುದು ಎಂದು ನೀವು ತಿಳಿದುಕೊಳ್ಳಬೇಕು.

ನಿಮ್ಮ ಅಂಕೆಯು 2 ಆಗಿದ್ದರೆ
ಈ ಅಂಕೆಯು ನಿಮ್ಮದಾಗಿದ್ದರೆ ಸಂಖ್ಯಾಶಾಸ್ತ್ರದ ಪ್ರಕಾರ ಈ ತಿಂಗಳು ಸಂಪೂರ್ಣವಾಗಿ ಆತ್ಮಾವಲೋಕನ, ಚಿಂತನೆ ಮತ್ತು ಧ್ಯಾನದಲ್ಲಿ ಇರಲಿದೆ. ಈ ತಿಂಗಳು ನಿಮ್ಮ ಅಂತರಂಗದ ಬೆಳವಣಿಗೆ ಮತ್ತು ಆತ್ಮದ ಹುಡುಕಾಟದಲ್ಲಿ ಕಳೆಯಲಿದ್ದೀರಿ. ಒಂದು ವರ್ಷ ನೀವು ಕಠಿಣವಾಗಿ ಪರಿಶ್ರಮಪಟ್ಟ ಬಳಿಕ ಈ ತಿಂಗಳು ನಿಮಗೆ ಶಾಂತಿ ನೀಡಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಬೆಲೆ ಸಿಗುವ ಸಮಯವು ಬಂದಿದೆ. ಹಗಲುಗನಸು ಮತ್ತು ಚಿಂತನೆಯ ಮೌಲ್ಯವನ್ನು ತಿಳಿಯುವುದು ತುಂಬಾ ಕಠಿಣವಾಗಿರುವುದು ಎಂದು ತಜ್ಞರು ಹೇಳುವರು. ಅದಾಗ್ಯೂ, ನೀವು ತಿಂಗಳಲ್ಲಿ ತುಂಬಾ ಅನುತ್ಪಾದಕ ಸಮಯವನ್ನು ಕಳೆದರೂ ಅದರಿಂದ ನಿಮಗೆ ಹೆಚ್ಚಿನ ಪ್ರತಿಫಲ ಸಿಗಲಿದೆ.

ಅಂಕೆ 3
ಸಂಖ್ಯಾಶಾಸ್ತ್ರವು ಹೇಳುವ ಪ್ರಕಾರ ಈ ತಿಂಗಳು ಜೀವನದ ಹಲವಾರು ವಿಭಾಗಗಳಲ್ಲಿ ನಿಮಗೆ ಪ್ರತಿಫಲವನ್ನು ನೀಡಲಿದೆ. ವ್ಯಾಪಾರ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಇದು ಅತ್ಯುತ್ತಮವಾಗಿರುವಂತಹ ಸಮಯವಾಗಿದೆ. ಈ ತಿಂಗಳು ನೀವು ಬೇರೆಯವರನ್ನು ಆಕರ್ಷಿಸಲು ಅಥವಾ ನಿಮ್ಮ ಯಶಸ್ಸನ್ನು ವಿಜೃಂಭಿಸಲು ಹಣವನ್ನು ವ್ಯಯ ಮಾಡಲಿದ್ದೀರಿ. ಉದ್ಯೋಗದ ಕಡೆಯಲ್ಲಿ ನಿಮ್ಮ ಕೆಲಸದ ಪರಿಶ್ರಮಕ್ಕೆ ಏನಾದರೂ ಪ್ರತಿಫಲ ಸಿಗಲಿದೆ. ಇದು ಬೋನಸ್ ಅಥವಾ ಭಡ್ತಿ ಆಗಿರಬಹುದು. ವೃತ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಯಾವುದಾದರೂ ಯೋಜನೆಗಳನ್ನು ಜಾರಿಗೆ ತರಲು ಇದು ಅತ್ಯುತ್ತಮವಾಗಿರುವ ಸಮಯವಾಗಿದೆ. ರೋಮ್ಯಾನ್ಸ್ ಜೀವನ ಕೂಡ ಈ ತಿಂಗಳು ನಿಮ್ಮ ಪರವಾಗಿಯೇ ಇರಲಿದೆ. ಆದರೆ ನೀವು ಪ್ರೀತಿಯನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತೀರಿ ಎನ್ನುವುದು ತುಂಬಾ ಮುಖ್ಯವಾಗಿರಲಿದೆ.

4 ಸಂಖ್ಯೆಯು ನಿಮ್ಮದಾಗಿದ್ದರೆ…
ಸಂಖ್ಯಾಶಾಸ್ತ್ರಜ್ಞರು ಹೇಳುವ ಪ್ರಕಾರ ಈ ತಿಂಗಳು ನಿಮ್ಮ ಸಂಬಂಧವು ಕೊನೆಯಾಗಲಿದೆ. ಯಾಕೆಂದರೆ ಇದು ತುಂಬಾ ಒತ್ತಡಕ್ಕೆ ಒಳಗಾಗಿರುವ ಪರಿಣಾಮವಾಗಿದೆ. ಆದರೆ ಕೃತಜ್ಞತೆಯ ಭಾವವು ನಿಮ್ಮಲ್ಲಿರಲಿದೆ. ನಿಮ್ಮ ಭಾವನಗೆಳು ತುಂಬಾ ಆಳವಾಗಿರಲಿದೆ. ಆದರೆ ಇದನ್ನು ವ್ಯಕ್ತಪಡಿಸಲು ನೀವು ತುಂಬಾ ಪರಿಶ್ರಮಪಟ್ಟರೂ ಅದನ್ನು ವ್ಯಕ್ತಪಡಿಸಲು ತುಂಬಾ ಕಠಿಣವಾಗಲಿದೆ ಎಂದು ತಜ್ಞರು ಹೇಳುತ್ತಾರೆ. ನೀವು ಈ ಸಮಯದಲ್ಲಿ ತುಂಬಾ ದುರ್ಬಲ ಹಾಗೂ ಭಾವನಾತ್ಮಕವಾಗಿರಲಿದ್ದೀರಿ. ನಿಮ್ಮ ಬಗ್ಗೆ ಮಾತ್ರ ಆಲೋಚನೆ ಮಾಡುವ ಬದಲು ಜೀವನದಲ್ಲಿ ಕೆಲವೊಂದು ಮಹತ್ವದ ವಿಚಾರಗಳಿಗೂ ಹೆಚ್ಚಿನ ಸಮಯ ಹಾಗೂ ಶಕ್ತಿ ವ್ಯಯಿಸಬೇಕಾಗಿದೆ. ತುಂಬಾ ವಿಚಿತ್ರವಾಗಿರುವಂತಹ ಸಂದರ್ಭದಲ್ಲಿ ನಿಮ್ಮ ಕ್ರಮ ಹಾಗೂ ಪ್ರೇರಣೆಯನ್ನು ಸಮರ್ಥಿಸಿಕೊಳ್ಳಲಿದ್ದೀರಿ. ಅವಿವಾಹಿತರಾಗಿರುವಂತಹ ವ್ಯಕ್ತಿಗಳು ಈ ತಿಂಗಳ ಅಂತ್ಯದಲ್ಲಿ ಸಂಗಾತಿಯನ್ನು ಭೇಟಿಯಾಗಲಿದ್ದಿರಿ. ಈಗಾಗಲೇ ಸಂಬಂಧದಲ್ಲಿ ಇರುವವರಿಗೆ ಈ ತಿಂಗಳು ತುಂಬಾ ಏರಿಳಿತದಿಂದ ಕೂಡಿರುವುದು.

ಸಂಖ್ಯೆಯು 5 ಆಗಿದ್ದರೆ…
2018ರ ಡಿಸೆಂಬರ್ ನ ಸಂಖ್ಯಾಶಾಸ್ತ್ರವು ಹೇಳುವ ಪ್ರಕಾರ ಈ ತಿಂಗಳು ನಿಮ್ಮ ಶಕ್ತಿ ಹಾಗೂ ಅತ್ಯುತ್ಸಾಹವು ಹೆಚ್ಚಾಗಿರುವುದು. ನಿಮ್ಮ ವೃತ್ತಿಯು ಆರ್ಥಿಕವಾಗಿಯು ಉತ್ತಮ ಫಲ ನೀಡಲಿದೆ ಮತ್ತು ನಿಮಗೆ ಭಡ್ತಿಯ ಮೂಲಕವಾಗಿ ಬದಲಾವಣೆ ತಂದುಕೊಡಲಿದೆ. ವೃತ್ತಿ ಬದುಕಿನಲ್ಲಿ ನಿಮಗೆ ತುಂಬಾ ಅಗತ್ಯವಾಗಿರುವಂತಹ ಒಬ್ಬ ವ್ಯಕ್ತಿ ಅಥವಾ ಹಲವಾರು ಜನರೊಂದಿಗೆ ನೀವು ಭೇಟಿಯಾಗಲಿದ್ದೀರಿ ಮತ್ತು ಇದು ನಿಮ್ಮ ಭವಿಷ್ಯದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಾರೆ. ಈ ತಿಂಗಳು ನಿಮ್ಮನ್ನು ಹಾಗೂ ನಿಮ್ಮ ಪ್ರೀತಿಪಾತ್ರರನ್ನು ಅನ್ಯೋನ್ಯವಾಗಿಸಲಿದೆ. ತುಂಬಾ ದೀರ್ಘಕಾಲದಿಂದ ನಿಮ್ಮಲ್ಲಿರುವಂತಹ ಭಾವನೆಗಳು ಈ ತಿಂಗಳಲ್ಲಿ ಹೊರಬೀಳಲಿದೆ. ನೀವು ಅವಿವಾಹಿತರಾಗಿದ್ದರೆ ಆಗ ರೋಮ್ಯಾನ್ಸ್ ಈ ತಿಂಗಳು ನಿಮ್ಮ ಸಂತೋಷದ ಪ್ರಮುಖ ಕೀಲಿಕೈಯಾಗಿರಲಿದೆ. ಸಂಖ್ಯಾಶಾಸ್ತ್ರವು ಹೇಳುವಂತೆ ನೀವು ಈ ತಿಂಗಳಲ್ಲಿ ತುಂಬಾ ಜ್ಞಾನಿಯಾಗಿರುವ ಅಥವಾ ಆಧ್ಯಾತ್ಮಿಕವಾಗಿರುವಂತಹ ವ್ಯಕ್ತಿಯೊಬ್ಬರನ್ನು ಭೇಟಿಯಾಗುವಿರಿ.

6 ನಿಮ್ಮ ಸಂಖ್ಯೆಯಾಗಿದ್ದರೆ…
ಸಂಖ್ಯಾಶಾಸ್ತ್ರ ಪ್ರಕಾರ ಈ ತಿಂಗಳು ನೀವು ನಿಮ್ಮಲ್ಲಿರುವಂತಹ ಎಲ್ಲಾ ದೃಷ್ಟಿಯನ್ನು ಸಂಬಂಧ ಹಾಗೂ ಹೃದಯಕ್ಕೆ ಸಂಬಂಧಿಸಿರುವಂತಹ ವಿಚಾರಗಳಿಗೆ ಹರಿಸಲಿರುವಿರಿ. ಸಹೋದ್ಯೋಗಿಗಳು ತುಂಬಾ ಬೇಡಿಕೆಯನ್ನಿಡುವರು. ಇದು ಕೇವಲ ನಿಮ್ಮ ಉದ್ಯೋಗದ ವಿಚಾರವಾಗಿ ಮಾತ್ರವಲ್ಲದೆ, ವೈಯಕ್ತಿಕ ವಿಚಾರದಲ್ಲೂ ಆಗಿರುವುದು. ನೀವು ಈ ರೀತಿಯಾಗಿ ನಿಮಗೆ ಸಂಬಂಧಿಸದೆ ಇಲ್ಲದಿರುವಂತಹ ಯಾವುದಾದರೂ ಗೊಂದಲದ ವಿಚಾರ ಅಥವಾ ಸಂಘರ್ಷದಲ್ಲಿ ತೊಡಗಿಕೊಳ್ಳಲಿರುವಿರಿ. ನೀವು ತುಂಬಾ ಸೂಕ್ಷ್ಮವಾಗಿರುವಂತಹ ವಿಚಾರಗಳನ್ನು ನಿಭಾಯಿಸಲು ಪ್ರಯತ್ನಿಸುವಿರಿ ಮತ್ತು ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಸಂಬಂಧ ಹಾಗೂ ಸ್ನೇಹಿತರ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಅನುಭವವು ಒಂದೇ ರೀತಿಯಾಗಿರುವುದು. ಅದಾಗ್ಯೂ, ನೀವು ಎದ್ದು ನಿಲ್ಲಬೇಕೆಂದು ತಜ್ಞರು ಹೇಳುವರು. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಮಾತುಕತೆ ನಡೆಸಲು ಇದು ಸರಿಯಾದ ಸಮಯ. ಇದು ಸಾಲ ಅಥವಾ ಅಡಮಾನಗಳಿಗೆ ಸಂಬಂಧಿಸಿದ ವಿಚಾರವಾಗಿದ್ದರೂ ಇದು ಸೂಕ್ತ ಸಮಯವಾಗಿದೆ. ಇನ್ನೊಂದು ಕಡೆಯಲ್ಲಿ ರೋಮ್ಯಾನ್ಸ್ ಈ ತಿಂಗಳಲ್ಲಿ ತುಂಬಾ ಬಲವಾಗಿರುವುಉ. ಆದರೆ ಇದರಲ್ಲಿ ಹಣದ ವಿಚಾರ ಬಂದಾಗ ಮಾತ್ರ ಇದು ಸ್ವಲ್ಪ ಮಟ್ಟಿಗೆ ಕ್ಲಿಷ್ಟವಾಗಬಹುದು ಎಂದು ಸಂಖ್ಯಾಶಾಸ್ತ್ರಜ್ಞರು ಅಭಿಪ್ರಾಯಪಡುವರು.

7 ನಿಮ್ಮ ಸಂಖ್ಯೆಯಾಗಿದ್ದರೆ…
ಡಿಸೆಂಬರ್ 2018ರ ಸಂಖ್ಯಾಶಾಸ್ತ್ರವು ಹೇಳುವ ಪ್ರಕಾರ ನೀವು ಈ ತಿಂಗಳು ತುಂಬಾ ಸಂಭ್ರಮಿಸಬೇಕು ಮತ್ತು ಎಲ್ಲವನ್ನು ಆನಂದಿಸಬೇಕು. ನೀವು ತುಂಬಾ ಗಂಭೀರವಾಗಿ ಆಲೋಚನೆ ಮಾಡುವುದನ್ನು ಈ ತಿಂಗಳು ಬಿಡಬೇಕು. ಈ ತಿಂಗಳು ನೀವು ತುಂಬಾ ಆರಾಮವಾಗಿದ್ದುಕೊಂಡು ನಿಮ್ಮ ಶಕ್ತಿಯನ್ನು ಮರಳಿ ಪಡೆಯುವಂತಹ ಸಮಯವಾಗಿದೆ. ನಿಮ್ಮ ಸೃಜನಶೀಲತೆಯು ಈ ತಿಂಗಳು ವರ್ಧಿಸಲಿದೆ ಮತ್ತು ಅದೇ ರೀತಿಯಾಗಿ ನಿಮ್ಮ ಹಾಸ್ಯ ಪ್ರವೃತ್ತಿಯು. ಈ ತಿಂಗಳು ನೀವು ಯಾವುದೇ ವಿಚಾರವನ್ನು ಬೇರೆಯವರ ಮೇಲೆ ಒತ್ತಡ ಪೂರ್ವಕವಾಗಿ ಹೇರಬೇಡಿ. ಇದರಿಂದಾಗಿ ತಿಕ್ಕಾಟವು ಉಂಟಾಗುವ ಸಾಧ್ಯತೆಗಳು ಇರುವುದು. ಎಲ್ಲಾ ವಿಚಾರಗಳು ಅದರ ವೇಗದಲ್ಲೇ ನಡೆಯಲಿ ಮತ್ತು ಅದಾಗಿಯೇ ಅದರ ಜಾಗದಲ್ಲಿರಲಿ. ನೀವು ಡಿಸೆಂಬರ್ ನಲ್ಲಿ ಹೆಚ್ಚಿನ ಶಕ್ತಿಯನ್ನು ಪಡೆಯುವ ಸಮಯ ಪಡೆಯಲಿದ್ದೀರಿ. ಅದೇ ರೀತಿಯಾಗಿ ಹೆಚ್ಚಿನ ಅವಕಾಶಗಳು ನಿಮಗೆ ಸಿಗುವುದು. ಆದರೆ ಈ ಒಂದು ಘಟ್ಟವು ಬರುವ ಮೊದಲು ನೀವು ಆರಾಮ ಮತ್ತು ವಿಶ್ರಾಂತಿ ಮಾಡಿಕೊಳ್ಳಿ ಎಂದು ಸಂಖ್ಯಾಶಾಸ್ತ್ರವು ಹೇಳುತ್ತದೆ.

8 ಸಂಖ್ಯೆಯು ನಿಮ್ಮದಾಗಿದ್ದರೆ…
2018ರ ಡಿಸೆಂಬರ್ ನ ಸಂಖ್ಯಾಶಾಸ್ತ್ರವು ಹೇಳಿರುವಂತಹ ನಿಮಗೆ ಈ ತಿಂಗಳು ಹೆಚ್ಚಿನ ಅವಕಾಶಗಳು ಹಾಗೂ ನಿರಾಶೆಯು ಕಾಡುವುದು. ಗುರಿಯತ್ತ ನೀವು ದೃಷ್ಟಿಯನ್ನು ಕೇಂದ್ರೀಕರಿಸಬೇಕು ಮತ್ತು ಕಠಿಣವಾಗಿ ಕೆಲಸ ಮಾಡಬೇಕು. ವೃತ್ತಿಯಲ್ಲಿ ನಿಮಗೆ ಅವಕಾಶಗಳು ಹಾಗೂ ಮುನ್ನಡೆಯಲು ಕೆಲವೊಂದು ಅವಕಾಶ ಸಿಗಲು ಇದು ಅತ್ಯುತ್ತಮವಾಗಿರುವಂತಹ ಸಮಯವೆಂದು ತಜ್ಞರು ವಿವರಿಸುವರು. ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಜನರನ್ನು ಆಕರ್ಷಿಸಬೇಕು ಎಂದು ತಜ್ಞರು ಹೇಳುವರು. ಈ ತಿಂಗಳಲ್ಲಿ ಸಂಖ್ಯಾಶಾಸ್ತ್ರವು ಹೇಳುವ ಮತ್ತೊಂದು ವಿಚಾರವೆಂದರೆ ನೀವು ಆಯ್ಕೆ ಮಾಡಿರುವಂತಹ ದಾರಿಯಲ್ಲಿ ಅಸ್ಥಿರತೆಯಿಂದಾಗಿ ನಿಮ್ಮಲ್ಲಿ ಆಶಾಭಂಗ ಉಂಟಾಗುವುದು. ನೀವು ಒಂದು ಬಲೆಯಲ್ಲಿ ಸಿಲುಕಿದಂತೆ ಆಗಬಹುದು. ನೀವು ತುಂಬಾ ಉನ್ನತ ಮಟ್ಟದ ಪ್ರಯತ್ನವನ್ನು ಮಾಡಬೇಕು. ಈ ತಿಂಗಳು ನಿಮ್ಮ ತಾಳ್ಮೆ ಹಾಗೂ ಪರಿಶ್ರಮವು ತುಂಬಾ ಪ್ರಮುಖ ಪಾತ್ರ ವಹಿಸಲಿದೆ ಎಂದು ನೀವು ತಿಳಿಯಬೇಕು.

ಸಂಖ್ಯೆಯು 9 ಆಗಿದ್ದರೆ…
ಡಿಸೆಂಬರ್ 2018ರ ಸಂಖ್ಯಾಶಾಸ್ತ್ರದ ಪ್ರಕಾರವಾಗಿ ನೀವು ಈ ತಿಂಗಳು ಹೆಚ್ಚಿನ ಬದಲಾವಣಿಗೆಲು ಹಾಗೂ ಮುಂದಿನ ದಿನಗಳಲ್ಲಿ ನಿಮಗೆ ವಿಶ್ರಾಂತಿಯಿಲ್ಲದಂತೆ ಆಗಬಹುದು. ನೀವು ಇತರೊಂದಿಗ ಇರಬೇಕು ಮತ್ತು ಸಮಾಜಮುಖಿಯಾಗಿರಬೇಕು. ಪ್ರಯಾಣಿಸಲು ನಿಮಗೆ ಕೆಲವೊಂದು ಅವಕಾಶಗಳು ಸಿಗಲಿದೆ. ನೀವು ಮನೆಯಿಂದ ಹೊರಗೆ ಹೋಗುವ ಪ್ರಯಾಣದ ವೇಳೆ ಹಲವಾರು ಜನರನ್ನು ಭೇಟಿಯಾಗಲಿದ್ದೀರಿ. ಈ ತಿಂಗಳಲ್ಲಿ ನಿಮಗೆ ಕೆಲವೊಂದು ಅಚ್ಚರಿಗಳು ಕಾದಿದೆ. ಹೊಸ ವಿಚಾರಗಳನ್ನು ನೀವು ಕಲಿಯಲು, ಹೊಸ ಮಾಹಿತಿ ಸಂಗ್ರಹಿಸಲು ಮತ್ತು ಅನಿರೀಕ್ಷಿತವಾಗಿರುವ ಮೂಲಗಳಿಂದ ಜ್ಞಾನ ಸಂಪಾದನೆ ಮಾಡಲು ಇದು ಅದ್ಭುತವಾಗಿರುವ ಸಮಯವಾಗಿದೆ. ನೀವು ಒಂದು ಹೊಸ ದಿಶೆಯಲ್ಲಿ ಸಾಗಲಿದ್ದೀರಿ ಎಂದು ತಜ್ಞರು ಹೇಳುವರು. ನೀವು ತುಂಬಾ ಸಾಹಸಪ್ರವೃತ್ತಿಯವರಾಗಿರುವಿರಿ ಮತ್ತು ಕೆಲವೊಂದು ಅಪಾಯವನ್ನು ಈ ಸಮಯದಲ್ಲಿ ಎದುರಿಸಲು ತಯಾರಿಗಿರುವಿರಿ. ಇನ್ನೊಂದು ಬದಿಯಲ್ಲಿ ಈ ತಿಂಗಳು ನೀವು ಧೈರ್ಯ ಹಾಗೂ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವಂತಹ ಅಗತ್ಯವು ಇರುವುದು.



Click it and Unblock the Notifications











