Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪೆನ್‌ನ ಬಣ್ಣ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು!
ಛೇ! ಅವನನ್ನು ನೋಡು, ಹೇಗಿದ್ದವ ಹೇಗಾಗಿ ಹೋದಿದ್ದಾನೆ. ಅದೃಷ್ಟವೆಂದರೆ ಆ ರೀತಿ ಇರಬೇಕು ಎನ್ನುವ ಮಾತುಗಳು ಕೇಳಿಬರುತ್ತದೆ. ಅದೃಷ್ಟವೆನ್ನುವುದು ಪ್ರತಿಯೊಬ್ಬರಿಗೂ ಇರುವುದಿಲ್ಲ. ನಿಮ್ಮ ರಾಶಿಗೆ ಅನುಗುಣವಾಗಿ ಅದೃಷ್ಟ ಕೂಡ ನಿಮಗೆ ಸಿಗುವುದು. ಇಂತಹ ಸಂದರ್ಭದಲ್ಲಿ ಅದೃಷ್ಟವನ್ನು ಹೇಗೆ ಓಲೈಸಿಕೊಳ್ಳಬಹುದು ಎಂದು ಹೇಳಿದರೆ ನಿಮಗೆ ತುಂಬಾ ಖುಷಿಯಾಗಬಹುದು. ಹೌದು, ಈ ಲೇಖನದಲ್ಲಿ ಅದೃಷ್ಟವನ್ನು ಬದಲಾಯಿಸಿಕೊಳ್ಳುವ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಬಣ್ಣದ ಬಟ್ಟೆಗಳು, ಹರಳುಗಳು, ಉಂಗುರಗಳು ಮತ್ತು ನೀವು ಬಳಸುವ ಪೆನ್ ನ ಬಣ್ಣವು ಅದೃಷ್ಟ ತರಬಲ್ಲದು. ಪ್ರಸಿದ್ಧ ಅಂಕಿಶಾಸ್ತ್ರಜ್ಞರ ಪ್ರಕಾರ ಪೆನ್ ನ ಬಣ್ಣವು ನಿಮ್ಮ ಅದೃಷ್ಟ ಸುಧಾರಿಸುವುದು. ಪೆನ್ ನ ಬಣ್ಣ ಮತ್ತು ನಿಮ್ಮ ಹುಟ್ಟಿದ ದಿನಾಂಕವು ಇದನ್ನು ಅವಲಂಬಿಸಿರುವುದು.
ಅಂಕಿಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ನೀವು ಯಾವ ಬಣ್ಣದ ಪೆನ್ ಇಟ್ಟುಕೊಂಡರೆ ಅದೃಷ್ಟ ಬರುವುದು ಎಂದು ತಿಳಿಯಬಹುದು. ಸರಿಯಾದ ಬಣ್ಣದ ಪೆನ್ ಇಟ್ಟುಕೊಳ್ಳುವ ಮೂಲಕ ನಿಮಗೆ ಒಳ್ಳೆಯ ಖ್ಯಾತಿ ಹಾಗೂ ಸಂಪತ್ತು ಸಿಗುವುದು. ಹುಟ್ಟಿದ ದಿನಾಂಕವನ್ನು ಲೆಕ್ಕ ಹಾಕುವ ಬಗ್ಗೆ ನಿಮಗೆ ಯಾವುದೇ ಸಂಶಯವಿದ್ದರೆ ನಾವು ಅದನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ನಿಮ್ಮ ಹುಟ್ಟಿದ ದಿನಾಂಕವು 15 ಆಗಿದ್ದರೆ ಆಗ 1+5=6. ಇದು ಅಂತಿಮ ಸಂಖ್ಯೆ. ನಿಮ್ಮ ಹುಟ್ಟಿದ ದಿನಾಂಕವನ್ನು ಲೆಕ್ಕಹಾಕಿಕೊಂಡು ಅದೃಷ್ಟವನ್ನು ಸೆಳೆಯಲು ಮುಂದಾಗಿ...

ನಿಮ್ಮ ಹುಟ್ಟಿದ ದಿನಾಂಕ 1 ಆಗಿದ್ದರೆ
ನಿಮ್ಮ ಹುಟ್ಟಿದ ದಿನಾಂಕವು 1 ಆಗಿದ್ದರೆ ಆಗ ನಿಮಗೆ ಬಂಗಾರದ ಬಣ್ಣದ ಪೆನ್ ಬೇಕಾಗಿದೆ. ಇದು ನಿಮ್ಮ ಜೀವನ ವನ್ನು ಒಳ್ಳೆಯ ರೀತಿ ಬದಲಾಯಿಸುವುದು.
2 ಹುಟ್ಟಿದ ದಿನಾಂಕವಾಗಿದ್ದರೆ
ನಿಮ್ಮ ಹುಟ್ಟಿದ ದಿನಾಂಕದಿಂದ 2 ಅಂಕೆ ಬಂದರೆ ಆಗ ನೀವು ಬೆಳ್ಳಿ ಮೇಲ್ಮೈ ಇರುವಂತಹ ಅಥವಾ ಬಿಳಿ ಬಣ್ಣದ ಪೆನ್ ತೆಗೆದುಕೊಳ್ಳಿ. ಇದು ನಿಮ್ಮ ಜೀವನದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಉಂಟು ಮಾಡುವುದು.
3 ಅಂಕೆ ನಿಮ್ಮ ಹುಟ್ಟಿದ ದಿನಾಂಕವಾದರೆ
ನಿಮ್ಮ ಹುಟ್ಟಿದ ದಿನಾಂಕವು 3 ಆಗಿದ್ದರೆ ಆಗ ನೀವು ಬಂಗಾರದ ಬಣ್ಣದ ಮೇಲ್ಮೈ ಇರುವ ಪೆನ್ ತೆಗೆದುಕೊಳ್ಳಿ. ಇದು ನಿಮ್ಮ ಅದೃಷ್ಟ ಸುಧಾರಿಸುವುದು.
ಹುಟ್ಟಿದ ದಿನಾಂಕ 4 ಆಗಿದ್ದರೆ
ಹುಟ್ಟಿದ ದಿನಾಂಕವು ನಾಲ್ಕು ಆದರೆ ಆಗ ನೀವು ಕಂದು ಬಣ್ಣದ ಪೆನ್ ಇಟ್ಟುಕೊಳ್ಳಿ. ಇದು ನಿಮ್ಮನ್ನು ಅನಗತ್ಯ ಸಮಸ್ಯೆಗಳಿಂದ ರಕ್ಷಿಸುವುದು ಮತ್ತು ಸ್ಥಿರವಾಗಿಡುವುದು.
ಐದು ಸಂಖ್ಯೆ ಹುಟ್ಟಿದ ದಿನಾಂಕವಾದರೆ
ನಿಮ್ಮ ಹುಟ್ಟಿದ ದಿನಾಂಕವು ಐದು ಆದರೆ ಆಗ ನೀವು ಪೆನ್ ನಲ್ಲಿ ಹಸಿರು ಬಣ್ಣದ ಮೇಲ್ಮೈ ಇರುವುದನ್ನು ಇಟ್ಟುಕೊಳ್ಳಿ. ಇದು ನಿಮ್ಮ ಜೀವನ ಸುಗಮವಾಗಿಸುವುದು.
6 ನಿಮ್ಮ ಹುಟ್ಟಿದ ದಿನಾಂಕವಾದರೆ
ನಿಮ್ಮ ಹುಟ್ಟಿದ ದಿನಾಂಕವು ಆರು ಆಗಿದ್ದರೆ ಆಗ ನೀವು ಪೆನ್ ನ ಮೇಲ್ಮೈಯಲ್ಲಿ ಮಿನುಗುವ ಅಂಶ ಅಥವಾ ವಜ್ರದ ಹರಳು ಇರುವುದನ್ನು ಇಟ್ಟುಕೊಳ್ಳಿ. ಈ ರೀತಿಯ ಪೆನ್ ಇದ್ದರೆ ಖಂಡಿತವಾಗಿಯೂ ನಿಮಗೆ ಅದೃಷ್ಟ ಬರುವುದು.
7 ನಿಮ್ಮ ಹುಟ್ಟಿದ ಸಂಖ್ಯೆಯಾಗಿದ್ದರೆ.
ನಿಮ್ಮ ಹುಟ್ಟಿದ ದಿನಾಂಕವು 7 ಆಗಿದ್ದರೆ ಆಗ ನೀವು ಕಡುಹಸಿರು ಬಣ್ಣದ ಪೆನ್ ಇಟ್ಟುಕೊಳ್ಳಿ. ಈ ಪೆನ್ ನಿಂದ ನಿಮ್ಮ ಕೋಪ ನಿಯಂತ್ರಣದಲ್ಲಿ ಇರುವುದು ಮತ್ತು ನೀವು ತುಂಬಾ ಶಾಂತವಾಗಿರುವಿರಿ.
8 ನಿಮ್ಮ ಸಂಖ್ಯೆಯಾಗಿದ್ದಲ್ಲಿ...
ಹುಟ್ಟಿದ ದಿನಾಂಕವು 8 ಆಗಿದ್ದರೆ ಆಗ ನೀವು ಕಪ್ಪು ಅಥವಾ ಆಕಾಶ ನೀಲಿ ಬಣ್ಣದ ಪೆನ್ ಇಟ್ಟುಕೊಳ್ಳಿ. ಇದು ನಿಮ್ಮತ್ತ ಬರುವ ಅನಗತ್ಯ ಸಮಸ್ಯೆಗಳ ನಿವಾರಣೆ ಮಾಡುವುದು.
9 ನಿಮ್ಮ ಹುಟ್ಟಿದ ದಿನಾಂಕವಾಗಿದ್ದರೆ...
ನಿಮ್ಮ ಹುಟ್ಟಿದ ದಿನಾಂಕವು 9 ಆಗಿದ್ದರೆ ಆಗ ನೀವು ಕೆಂಪು ಬಣ್ಣದ ಪೆನ್ ಇಟ್ಟುಕೊಳ್ಳಿ. ಇದು ನಿಮ್ಮ ಅದೃಷ್ಟವನ್ನು ಸಂಪೂರ್ಣವಾಗಿ ಬದಲಾಯಿಸುವುದು.



Click it and Unblock the Notifications
