ನಿದ್ರೆ ಎನ್ನುವುದ ವ್ಯಕ್ತಿಯ ದೈನಂದಿನ ಚಟುವಟಿಕೆಯಲ್ಲಿ ಪ್ರಮುಖವಾದದ್ದು. ಇದರ ಪ್ರಮಾಣದಲ್ಲಿ ಅತಿಯಾದರೆ ಹಾಗೂ ಕಡಿಮೆಯಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ವೈದ್ಯರ ಸಲಹೆಯ ಪ್ರಕಾರ ಮನುಷ್ಯ ಕನಿಷ್ಠವೆಂದರೂ 6 ತಾಸುಗಳ ಕಾಲ ನಿದ್ರೆಯನ್ನು ಮಾಡಬೇಕು. ಇಲ್ಲವಾದರೆ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾವು ಇತ್ತೀಚೆಗೆ ಒಂದು ಸಂಶೋಧನೆಯನ್ನು ಕೈಗೊಂಡಿತ್ತು.
ಈ ಸಂಶೋಧನೆಯ ಪ್ರಮುಖ ಉದ್ದೇಶವೆಂದರೆ ನಿದ್ರೆ ಇಲ್ಲದಿದ್ದರೆ ಏನಾಗಬಹುದು ಎನ್ನುವುದಾಗಿತ್ತು. ಈ ಹಿನ್ನೆಲೆಯಲ್ಲಿಯೇ ಪ್ರಯೋಗಕ್ಕಾಗಿ 5 ಜನರನ್ನು ಒಳಪಡಿಸಲಾಗಿತ್ತು. ಆ ಐದು ಜನರನ್ನು ಒಂದು ಕೋಣೆಯಲ್ಲಿ ಇರಿಸಿ, ಐದು ಬಗೆಯ ವಿಭಿನ್ನ ಅನಿಲಗಳನ್ನು ಬಿಡಲಾಗಿತ್ತು. ಈ ಅನಿಲವು 24 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತಿತ್ತು. ಜೊತೆಗೆ ಮೈಕ್ರೋ ಫೋನ್‍ಗಳ ಸಹಾಯದಿಂದ ಸಂವಹನ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗೆ ಈ ಪ್ರಯೋಗವು ಒಂದು ತಿಂಗಳುಗಳ ಕಾಲ ಮುಂದುವರಿಯಿತು. ಇದರ ಪರಿಣಾಮ ಏನಾಯಿತು ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಓದಿ...
ನಿದ್ರೆ ತಡೆಯುವುದು
ಇವರನ್ನು ಒಂದು ಕೋಣೆಯಲ್ಲಿ ಬಂಧಿಸಿ, 24 ಗಂಟೆಗಳ ಕಾಲ ನಿದ್ರೆ ಇಲ್ಲದಂತೆ ಮಾಡುವುದಾಗಿತ್ತು. ಜನರು ಸಾಯಬಾರದು ಎನ್ನುವ ಉದ್ದೇಶಕ್ಕೆ ಅವರಿಗೆ ಆಮ್ಲಜನಕದ ಗಾಳಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು.
ಆಗಾಗ ಮೇಲ್ವಿಚಾರಣೆ ನಡೆಯುತ್ತಿತ್ತು
ಒಳಗಿರುವ ವ್ಯಕ್ತಿಗಳ ಬಗ್ಗೆ ಆಗಾಗ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಜೊತೆಗೆ ಕ್ಯಾಮೆರಾಗಳನ್ನು ಅಳವಡಿಸಿರುವುದು ಅವರ ಚಟುವಟಿಕೆ ತಿಳಿದುಕೊಳ್ಳಲು ಸಹಾಯವಾಯಿತು.
ಕೋಣೆಯೊಳಗೆ ಎಲ್ಲಾ ಸೌಲಭ್ಯವಿತ್ತು
ಕೊಣೆಯ ಒಳಗೆ , ಪುಸ್ತಕ, ಒಣಗಿದ ಹಣ್ಣುಗಳು, ಮಲಗಲು ಬಟ್ಟೆ ಸೇರಿದಂತೆ ಮೂಲ ಭೂತವಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿತ್ತು.
ಆರಂಭದ 5 ದಿನ:
ಆರಂಭದ ಐದು ದಿನ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಇವರು 30 ದಿನಗಳ ಕಾಲ ನಿದ್ರೆ ಮಾಡದೆ ಇರುವುದರ ಪರಿಣಾಮವಾಗಿ ಸುಳ್ಳು ಭರವಸೆಗಳನ್ನು ನೀಡಿದ್ದರು.
5 ದಿನಗಳ ನಂತರ ತೊಂದರೆಗಳು ಆರಂಭವಾದವು
ಐದು ದಿನಗಳ ನಂತರ ಮಾನಸಿಕ ಪ್ರಮೆಗೆ ಒಳಗಾಗಿರುವಂತೆ ಪ್ರಾರಂಭಿಸಿದರು. ಈ ಪ್ರಯೋಗ ನಡೆಸುವುದರ ಮುಂಚೆ ಹೇಳಿರುವ ವಿಚಾರದ ಕುರಿತು ಮತ್ತು ನಂತರದ ದಿನದಲ್ಲಿ ನಡೆದ ವಿಚಾರದ ಕುರಿತು ದೂರು ನೀಡಲು ಪ್ರಾರಂಭಿಸಿದ್ದರು.
ಮೈಕ್ರೋಫೋನ್‍ಗಳಲ್ಲಿ ಸಮಸ್ಯೆಗಳನ್ನು ಹೇಳಿದರು
ಮೈಕ್ರೋ ಫೋನ್‍ಗಳ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿದರು. ಜೊತೆಗೆ ಸಹವರ್ತಿಗಳ ಜೊತೆ ಸಂವಹನ ನಿಲ್ಲಿಸಿದರು. ಹೀಗೆ ಮಾಡುವುದರಿಂದ ಹೊರಗಿನ ಜನರ ವಿಶ್ವಾಸವನ್ನು ಗೆಲ್ಲಬಹುದು ಎಂದು ಭಾವಿಸಿದರು.
10ನೇ ದಿನದಂದು
ಹತ್ತನೇ ದಿನದಂದು ಇಬ್ಬರು ಬಹಳ ಕಿರುಚುವುದಕ್ಕೆ ಪ್ರಾರಂಭಿಸಿದರು. ಜೊತೆಗೆ ಕೋಣೆಯೊಳಗೆ ಓಡಾಡಲು ಪ್ರಾರಂಭಿಸಿದರು ಕಿರುಚುವ ಪರಿಯಿಂದ ಇವರ ಧ್ವನಿಯು ದುರ್ಬಲಗೊಳ್ಳುವುದಾಗಿ ಮನವರಿಕೆ ನೀಡುತ್ತಿದ್ದರು. ಕಿರುಚುವ ವ್ಯಕ್ತಿಗಳ ಕುರಿತು ಉಳಿದ ವ್ಯಕ್ತಿಗಳು ಯಾರೂ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದರು.
14ನೇ ದಿನ
ಒಳಗಿರುವ ವ್ಯಕ್ತಿಗಳು ಕೆಲವು ಪ್ರಯೋಗಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದರಿಂದ, ಪ್ರತಿಕ್ರಿಯೆಗಳ ಬಗ್ಗೆ ತಿಳಿಯಲು ಇಂಟರ್‍ಕಾಮ್ ಬಳಕೆ ಮಾಡಲಾಯಿತು. ದುರ್ಬಲಗೊಂಡ ಧ್ವನಿಯಿಂದ ಶಾಂತವಾಗಿ ಇನ್ನುಮುಂದೆ ತಪ್ಪು ಮಾಡದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
15ನೇ ದಿನ
ಕೋಣೆಯ ಒಳಗೆ ಪರಿಸ್ಥಿತಿಯು ಬಿಗಡಾಯಿಸುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡಿದರು. ಆದರೆ ಅಲ್ಲಿರುವ ವ್ಯಕ್ತಿಗಳು ಆಮ್ಲಜನಕದ ಬದಲಿಗೆ ಉತ್ತೇಜಕ ಅನಿಲವನ್ನು ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡರು.
15ನೇ ದಿನ ಮುಂದುವರಿದ ಬಗೆ..
ಕೋಣೆಯ ಒಳಗಿರುವವರನ್ನು ಹೊರ ತೆಗೆಯಲು ಬಂದರು. ಇದರಲ್ಲಿ ಒಬ್ಬ ವ್ಯಕ್ತಿಯು ಸತ್ತು ಹೋಗಿದ್ದನು. ಅವನ ತೊಡೆ ಹಾಗೂ ಹೃದಯದ ಭಾಗ ಕಳೆದು ಹೋಗಿತ್ತು. ಅಲ್ಲದೆ ಕೋಣೆಯಲ್ಲಿ ನಾಲ್ಕು ಅಂಗುಲದಷ್ಟು ನೀರು ತುಂಬಿತ್ತು. ಚರಂಡಿಯ ಭಾಗದಲ್ಲಿ ಸತ್ತ ವ್ಯಕ್ತಿ ಹುದುಗಿ ಹೋಗಿದ್ದ.
ದಿಗಿಲು ಮೂಡಿಸುವಂತಹ ತಪ್ಪೊಪ್ಪಿಗೆ
ಒಬ್ಬ ವ್ಯಕ್ತಿಯಲ್ಲಿ ಏಕೆ ಈ ಬಗೆಯ ವರ್ತನೆ ತೋರಿರುವುದು ಎಂದು ಕೇಳಿದರೆ " ನಾನು ಎಚ್ಚರವಾಗಿರಬೇಕು" ಎನ್ನುವ ಉತ್ತರ ನೀಡುತ್ತಿದ್ದ.
ನಂತರ ಕೊಲ್ಲಲ್ಪಟ್ಟರು
ಕೋಣೆಯಲ್ಲಿ ಆಗಮಿಸಿದ ಸಂಶೋಧಕರು ಪ್ರಯೋಗಕ್ಕೆ ಒಳಗಾದವರನ್ನು ಗುಂಡು ಹಾರಿಸಿ ಕೊಲ್ಲಲ್ಪಟ್ಟರು. ಪ್ರಯೋಗಕ್ಕೆ ಒಳಗಾಗಿ ಸತ್ತ ವ್ಯಕ್ತಿಯ ದೇಹ ಸ್ಥಿತಿಯು ಬಹಳ ದುರ್ಬಲ ಸ್ಥಿತಿಯಲ್ಲಿತ್ತು. ಅತ್ಯಂತ ಧೈರ್ಯವನ್ನು ಹೊಂದಿದ್ದ ಅವರ ದೇಹವನ್ನು ಸರಿಸಲು ಬಹಳ ಹೆದರಿಕೆಯನ್ನು ತೋರುತ್ತಿದ್ದರು.
ಅಂತಿಮ ತೀರ್ಪು
ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಒತ್ತಡ ಮತ್ತು ಆಘಾತವನ್ನು ಉಂಟುಮಾಡುವಂತಿದೆ. ಇದು ರಷ್ಯಾದಲ್ಲಿ ನಡೆದ "ಸ್ಲೀಪ್ ಎಕ್ಸಪಿರಿಮೆಂಟ್" ಎನ್ನುವ ವಿಚಾರದಲ್ಲಿ ಹರಡುತ್ತಿದೆ. ಇದು ನಿಜವೇ? ಸುಳ್ಳೇ? ಎನ್ನುವುದು ಇಂದಿಗೂ ಸೂಕ್ತ ಮಾಹಿತಿ ದೊರೆತಿಲ್ಲ. ಆದರೆ ಗಾಳಿ ಸುದ್ದಿ ಮಾತ್ರ ಈ ರೀತಿಯಲ್ಲಿ ಅನೇಕ ಜನರನ್ನು ತಲುಪುತ್ತಿದೆ....
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಅಂಗೈಯಲ್ಲಿ 'V' ಗುರುತಿನ ಚಿಹ್ನೆ ಇದೆಯೇ? ಏನಿದರ ಅರ್ಥ ಗೊತ್ತೇ?
ಹೌದು ಸ್ವಾಮಿ! ಕಾಂಡೋಮ್ನಿಂದಲೂ ಸಾಕಷ್ಟು ಉಪಯೋಗಗಳಿವೆಯಂತೆ!
ಗುರು ಶಂಕರಾಚಾರ್ಯರ ಬಗ್ಗೆ ಕೆಲವು ಅಗತ್ಯ ಮಾಹಿತಿಗಳು
ನೀವು ಖುಷಿಯಾಗಿಲ್ಲದೇ ಇರಲು ಕಾರಣವನ್ನು ನಿಮ್ಮ ರಾಶಿಯೇ ತಿಳಿಸುತ್ತೆ
ಲೈಫ್ನಲ್ಲಿ ಸೆಕೆಂಡ್ ಚಾನ್ಸ್ ಪಡೆಯಲು ಅರ್ಹರಾಗಿರುವ ರಾಶಿಯವರಿವರು
ಯಾವ ರಾಶಿಗಳ ಜೋಡಿಗಳ ಸಂಬಂಧ ದೀರ್ಘಕಾಲ ಉಳಿಯಲಾರದು
ರಾಶಿಫಲಕ್ಕನುಗುಣವಾಗಿ ನಿಮ್ಮಲ್ಲಿರುವ ಯಾವ ಗುಣ ಸಂಗಾತಿಯನ್ನು ಆಕರ್ಷಿಸುತ್ತದೆ ತಿಳಿಯಿರಿ
ಇಲ್ಲಿರುವ ಪುರಾತನ ಚಿಹ್ನೆಯೊಂದನ್ನು ಆರಿಸಿ... ಇದರ ಹಿಂದಿದೆ ನಿಮ್ಮ ಸದ್ಯದ ಪರಿಸ್ಥಿತಿಗೆ ಪರಿಹಾರ
ರಾಶಿ ಭವಿಷ್ಯ: ಇದೇ ಕಾರಣಕ್ಕೆ ಸಂಗಾತಿ ನಿಮ್ಮೆಡೆಗೆ ಆಕರ್ಷಣೆಗೆ ಒಳಗಾಗುವುದು!
ಏಪ್ರಿಲ್ 14: ಗುರುವಾರದ ದಿನ ಭವಿಷ್ಯ
ಏಪ್ರಿಲ್: ಮುಂದಿನ ಎರಡು ವಾರಗಳಲ್ಲಿ ರಾಶಿ ಭವಿಷ್ಯ ಹೇಗಿದೆ ನೋಡಿ...
ರಾಶಿ ಭವಿಷ್ಯ: ಬೇಸರದಿಂದ ಇರಲು ರಾಶಿಚಕ್ರಗಳೇ ಕಾರಣ!
ರಾಶಿ ಭವಿಷ್ಯ: ಅಕ್ಷಯ ತೃತೀಯದಂದು ಪಠಿಸಬೇಕಾದ ಮಂತ್ರ
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ರಾಜಕೀಯ ಬಿಡಲು ಸಿದ್ಧ, ಆದರೆ ವಕೀಲಿಕೆ ವೃತ್ತಿಯನಲ್ಲ: ಚಂದ್ರಮೌಳಿ
ವಿಧಾನಸಭೆ ಚುನಾವಣಾ ಕಣದಲ್ಲಿರುವ ವಿಧಾನಪರಿಷತ್ ಸದಸ್ಯರ ಪಟ್ಟಿ
ಎದುರಾಳಿ ರಘುಪತಿ ಭಟ್ ತಾಯಿ ಕಾಲಿಗೆ ಬಿದ್ದ ಪ್ರಮೋದ್ ಮಧ್ವರಾಜ್