For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಚಕ್ರದವರಿಗೆ, ಜೀವನಲ್ಲಿ ತುಂಬಾನೇ ಭಯ ಕಾಡಲಿದೆ!

By Deepu
|

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಸಮಸ್ಯೆಗಳು ಇರುತ್ತವೆ. ಹಾಗೆಯೇ ಎಷ್ಟೇ ಧೈರ್ಯಶಾಲಿಯಾದರೂ ಯಾವುದೋ ಒಂದು ವಿಚಾರಕ್ಕೆ ಭಯ ಎನ್ನುವುದು ಇದ್ದೇ ಇರುತ್ತದೆ. ಭಯ ಎನ್ನುವುದು ವ್ಯಕ್ತಿಯ ಅಹಂಕಾರವನ್ನು ಅಡಗಿಸುತ್ತದೆ. ಇದರೊಟ್ಟಿಗೆ ಸಮಾಜದಲ್ಲಿ ತಾನೇ ಶ್ರೇಷ್ಠ ಎನ್ನುವ ಅಹಂಕಾರವನ್ನು ತಡೆಯಲು ಸಹ ಇದು ಸಹಕರಿಸುತ್ತದೆ. ಜೀವನದಲ್ಲಿ ಪರಿಪೂರ್ಣ ವ್ಯಕ್ತಿಯಾಗಲು ಕೆಲವು ವಿಚಾರದಲ್ಲಿ ಭಯ ಭಕ್ತಿ ಎನ್ನುವುದು ಇರಬೇಕು.

ವ್ಯಕ್ತಿಯಲ್ಲಿ ಭಯ ಎನ್ನುವುದು ರಾಶಿಚಕ್ರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರತಿಯೊಂದು ರಾಶಿಚಕ್ರದ ಅಡಿಯಲ್ಲಿ ವ್ಯಕ್ತಿ ವಿಶೇಷವಾದ ಚಿಂತನೆಗಳಿಗೆ ಹಾಗೂ ವಿಷಯಕ್ಕೆ ಹೆದರಿಕೆಯನ್ನು ಹೊಂದಿರುತ್ತಾನೆ. ನಿಮಗೂ ನಿಮ್ಮಲ್ಲಿರುವ ಭಯ ಯಾವುದು? ನಿಮ್ಮ ರಾಶಿಕ್ರದ ಅಡಿಯಲ್ಲಿ ಯಾವ ರೀತಿಯ ಭಯಕ್ಕೆ ಒಳಗಾಗಿದ್ದೀರಿ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಈ ರಾಶಿಚಕ್ರದವರಿಗೆ ಇರುವ ಅತ್ಯಂತ ಭಯದ ವಿಚಾರ ಎಂದರೆ ತನ್ನ ಹತ್ತಿರದ ವ್ಯಕ್ತಿ ಮತ್ತು ವಸ್ತುವನ್ನು ಕಳೆದು ಕೊಳ್ಳುತ್ತೇನೆ ಎನ್ನುವ ಭಯ ಇರುತ್ತದೆ. ಇವರ ಪ್ರೀತಿ ಪಾತ್ರರು ತೊರೆದಾಗ ಅವರು ಕಷ್ಟವನ್ನು ಎದುರಿಸುತ್ತಾರೆ. ಮತ್ತೊಂದೆಡೆ ಇವರು ತೊಂದರೆಯನ್ನು ನಿವಾರಿಸಿಕೊಳ್ಳಲು ಅಥವಾ ನಿಯಂತ್ರಣದಲ್ಲಿ ಇಡಲು ಮುಂದಾಗುವುದಿಲ್ಲ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಅತೃಪ್ತವಾದ ಮನಸ್ಸನ್ನು ಹೊಂದಿರುವ ಇವರಿಗೆ ತಮ್ಮ ಸಂಪತ್ತನ್ನು ಕಳೆದುಕೊಳ್ಳುತ್ತೇನೆ ಎನ್ನುವ ಭಯವಿರುತ್ತದೆ. ಇವರು ಆರ್ಥಿಕ ಸ್ಥಿತಿ ಉತ್ತಮವಾಗಿರುವಾಗ ಯಾವುದೇ ಭಯವನ್ನು ಹೊಂದುವುದಿಲ್ಲ. ಆಳವಾದ ಅನಾನುಕೂಲತೆ ಉಂಟಾದಾಗ ಅವರ ಸ್ಥಿತಿ ಅಹಿತಕರವಾಗಿದೆ ಎಂದು ಭಾವಿಸುತ್ತಾರೆ. ಇದರಿಂದ ಇವರ ಪ್ರೀತಿಪಾತ್ರರಿಗೆ ಇವರನ್ನು ಅರಿಯಲು ಅಹಿತಕರವಾದ ಭಾವನೆಯನ್ನುಂಟುಮಾಡುತ್ತದೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಸೃಜನಾತ್ಮಕ ಸ್ವಭಾವದಿಂದ ಕೂಡಿರುವ ಇವರು ನೈಸರ್ಗಿಕವಾದ ಪ್ರತಿಭೆಯನ್ನು ಹೊಂದಿದ್ದಾರೆ. ಇವರು ಸಾವಿರಾರು ಸಂಭವನೀಯ ವಿಧಾನಗಳಲ್ಲಿ ವಿಷಯಗಳನ್ನು ನೋಡಲು ಬಯಸುತ್ತಾರೆ. ಅವುಗಳನ್ನು ಸೂಕ್ತವಾಗಿ ಕೈಗೊಳ್ಳಲು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕಷ್ಟಪಡುತ್ತಾರೆ. ಈ ವಿಚಾರವಾಗಿಯೇ ಅವರು ಒಂದಿಷ್ಟು ಭಯಕ್ಕೆ ಒಳಗಾಗುತ್ತಾರೆ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಈ ವ್ಯಕ್ತಿಗಳು ತಮ್ಮ ಸುತ್ತಲಿನ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳಿಗೆ ತಮ್ಮನ್ನು ಒಡ್ಡಲು ಭಯಪಡುತ್ತಾರೆ. ಇದು ಅವರ ಕನಸನ್ನು ಬದುಕಾಗುವಂತೆ ಮಾಡುತ್ತದೆ. ಮತ್ತೊಂದೆಡೆ ಇವರು ಹೊಸ ಸಾಹಸಗಳನ್ನು ಎದುರಿಸಲು ಹೆದರುತ್ತಾರೆ ಎಂದು ಹೇಳಬಹುದು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಈ ರಾಶಿಯವರು ಸ್ನೇಹಪರ ವ್ಯಕ್ತಿತ್ವದವರು. ವರ್ಚಸ್ವಿ ಮತ್ತು ಉತ್ತಮ ಓಟಗಾರರಾಗಿರುತ್ತಾರೆ. ಇವರು ಜಗತ್ತಿನಲ್ಲಿ ಎಲ್ಲರ ಗಮನ ಸೆಳೆಯಲು ಮತ್ತು ತಮ್ಮನ್ನು ಹೆಚ್ಚು ಸಂತೋಷದಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಈ ರಾಶಿಯವರ ಭಯದ ವಿಚಾರ ಎಂದರೆ ತಮ್ಮ ಅಸ್ತಿತ್ವ ಮತ್ತು ಕೆಲಸಕ್ಕೆ ಹೆಚ್ಚು ಗಮನ ನೀಡದೆ ಇರುವ ಪರಿಯು ಇವರಲ್ಲಿ ಭಯವನ್ನು ಹುಟ್ಟಿಸುತ್ತದೆ. ಇವರು ತಮ್ಮ ಸುತ್ತಲಿನ ಜನರಿಂದ ಗೌರವ ಮತ್ತು ಅಂಗೀಕಾರವನ್ನು ಹುಡುಕುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಈ ವ್ಯಕ್ತಿಗಳು ಸ್ವಚ್ಛತೆ ಹಾಗೂ ವಸ್ತುಗಳನ್ನು ಕ್ರಮಬದ್ಧವಾಗಿ ಇಡಲು ಬಯಸುತ್ತಾರೆ. ಅವುಗಳ ಸುತ್ತ ಅಸಮರ್ಪಕ ಮತ್ತು ದೋಷವನ್ನು ಕಂಡಾಗ ಒಂದು ರೀತಿಯ ಭಯಕ್ಕೆ ಒಳಗಾಗುತ್ತಾರೆ. ಜೊತೆಗೆ ವಿಲಕ್ಷಣ ರೀತಿಯಲ್ಲಿ ವರ್ತಿಸುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ಪ್ರೀತಿಯ ವಿಚಾರದಲ್ಲಿ ಮತ್ತು ಇತರರಿಗೆ ಪ್ರೀತಿಯನ್ನು ತೋರಿಸುವುದರಲ್ಲಿ ಭಾವೋದ್ರಿಕ್ತ ಪ್ರೇಮಿಗಳು. ಇವರು ತಮ್ಮ ಸುತ್ತಲಿನ ಜನರನ್ನು ವಿಸ್ಮಯಗೊಳಿಸುತ್ತಾರೆ. ಆದರೆ ಕೆಲವೊಮ್ಮೆ ಇವರಿಗೆ ಏಕಾಂಗಿಯಾಗಿಬಿಡುತ್ತೇನೆ ಎನ್ನುವ ಭಯ ಕಾಡುತ್ತದೆ. ಹಾಗೊಮ್ಮೆ ಇವರು ಏಕಾಂಗಿಯಾದರೆ ಸಾಮಾನ್ಯವಾಗಿ ಖಿನ್ನತೆಗೆ ಒಳಗಾಗುತ್ತಾರೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಈ ವ್ಯಕ್ತಿಗಳು ಹೊರಗಿನ ಪ್ರಪಂಚಕ್ಕೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಹೋರಾಟ ನಡೆಸುತ್ತಿರುತ್ತಾರೆ. ಇವರು ಪ್ರೀತಿಸುವ ಜನರಿಂದ ದೂರವಿರಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರು ತಮ್ಮನ್ನು ಮೋಸಗೊಳಿಸುತ್ತಾರೆ ಎನ್ನುವ ಭಯ ಇವರಲ್ಲಿ ಕಾಡುತ್ತದೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಈ ರಾಶಿಯವರು ವಿವಿಧೆಡೆ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಇವರು ತಮ್ಮ ಜೀವನ, ಸಂಬಂಧ ಮತ್ತು ಎಲ್ಲೆಡೆ ಹೆಚ್ಚು ಜಾಗಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಬಂಧಿತರಾಗಿರುವ ಜೀವನವನ್ನು ನಡೆಸಲು ಅವರಿಗೆ ಇಷ್ಟವಿಲ್ಲ. ಏಕೆಂದರೆ ಇವರಿಗೆ ಇಕ್ಕಟ್ಟಿನ ಭೀತಿಯು ತುಂಬಿರುತ್ತದೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ವಿಫಲವಾಗುವ ಭಯವು ಈ ರಾಶಿಚಕ್ರದವರಿಗೆ ಹೆಚ್ಚಿನ ಪ್ರಮಾಭದಲ್ಲಿ ಭಯವನ್ನುಂಟುಮಾಡುತ್ತದೆ. ಇವರು ಯಾವುದೇ ಕಾರಣಕ್ಕೂ ವೈಫಲತೆಯನ್ನು ಕಾಣಬಾರದು ಎನ್ನುವ ಉದ್ದೇಶದಿಂದಲೇ ಕೆಲಸ ಮಾಡುತ್ತಾರೆ. ಹಾಗೊಮ್ಮೆ ವೈಫಲ್ಯತೆ ಉಂಟಾದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇವರು ನಿತ್ಯದ ದಿನಚರಿಯ ಬಗ್ಗೆ ಭಯಪಡುತ್ತಾರೆ. ನಿಯಮಿತವಾದ ಕೆಲಸ ಮತ್ತು ವ್ಯವಹಾರದ ವೇಳಾಪಟ್ಟಿಯಲ್ಲಿ ಸಿಕ್ಕಿಬಿದ್ದ ಭಾವನೆಗಳನ್ನು ಅವರು ದ್ವೇಷಿಸುತ್ತಾರೆ. ಇವರ ಬೌದ್ಧಿಕ ಸಾಮರ್ಥ್ಯವನ್ನು ಪ್ರಶ್ನಿಸಿದಾಗ ಅವರು ನಿರ್ಣಯವನ್ನು ಬದಲಿಸುವ ಸಾಧ್ಯತೆಗಳಿರುತ್ತವೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಈ ವ್ಯಕ್ತಿಗಳು ಉಚಿತ ಮನಸ್ಸಿನಿಂದ ಪ್ರೀತಿಸುತ್ತಾರೆ. ಜೀವನದಲ್ಲಿ ಜವಾಬ್ದಾರಿಯನ್ನು ಹೊಂದುವುದನ್ನು ದ್ವೇಷಿಸುತ್ತಾರೆ. ಮಿತಿಗಳಿಂದ ಬಂಧಿಸದೆ ಅವರ ಮನಸ್ಸು ಉತ್ಕೃಷ್ಟವಾಗಿರುತ್ತದೆ. ಅದರಲ್ಲಿ ಅವರು ಜವಾಬ್ದಾರಿಗಳಿಂದ ಬದ್ಧರಾಗಿರಲು ದ್ವೇಷಿಸುತ್ತಾರೆ.

English summary

most-secretive-fears-that-each-zodiac-sign-has

Do you know that each zodiac sign has its own set of fears? These fears are said to be something that even the individuals belonging to the zodiac signs themselves are mostly not aware of!. Here, at Boldsky, we bring to you the list of the most secretive fears of each zodiac sign. We bet, you totally agree with us, as the list of fears are so accurate! So, find out more about the different fears of each zodiac sign.
X
Desktop Bottom Promotion