Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಯಾವ್ಯಾವ ರಾಶಿಯಲ್ಲಿ ಹುಟ್ಟಿರುವ ಪುರುಷರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ನೋಡಿ..
ಒಂದು ವೇಳೆ ನಿಮಗೆ ಯಾರಾದರೂ ಹುಡುಗ ಇಷ್ಟವಾಗಿದ್ದಾನೆಯೇ? ಅವನು ರೋಮ್ಯಾಂಟಿಕ್ ಆಗಿರುವನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಆಸೆ ನಿಮಗೆ ಇದೆಯೇ? ಒಂದು ವೇಳೆ ನಿಮಗೆ ಆಕಸ್ಮಾತಾಗಿ ಇಬ್ಬರು ಹುಡುಗರು ಏನಾದರೂ ಇಷ್ಟವಾಗಿದ್ದರೆ ಅವರಲ್ಲಿ ಯಾರನ್ನು ಆರಿಸಿಕೊಳ್ಳಬೇಕು ಎಂಬ ದ್ವಂದ್ವ ಇದೆಯೇ? ನೀವು ಮುಂದೆ ಮದುವೆಯಾಗಲು ಯಾರನ್ನು ಇಷ್ಟಪಡಬೇಕು ಎಂಬ ಯೋಚನೆ ಏನಾದರೂ ನಿಮಗೆ ಇದೆಯೇ?
ಸರಿ ಹಾಗಾದರೆ,ನಾವು ನಿಮಗಾಗಿ ಈ ಲೇಖನದಲ್ಲಿ ಈ ವಿಷಯದ ಬಗ್ಗೆ ಒಳ್ಳೆಯ ಮಾಹಿತಿಯನ್ನು ತಂದಿದ್ದೇವೆ. ಇಲ್ಲಿ ಯಾವ ಯಾವ ರಾಶಿಯ ಪುರುಷರು ಹೆಚ್ಚು ರೋಮ್ಯಾಂಟಿಕ್ ಎಂಬ ವಿಷಯವನ್ನು ನಾವು ನಿಮಗೆ ಹೇಳುತ್ತೇವೆ.ಇದಕ್ಕೆ ಮುಂಚೆ ನೀವು ತಿಳಿದುಕೊಳ್ಳಬೇಕಾದ ಒಂದೇ ಒಂದು ಸಂಗತಿಯೆಂದರೆ ನೀವು ಇಷ್ಟ ಪಡುತ್ತಿರುವ ಹುಡುಗನ ರಾಶಿ ಯಾವುದು ಎನ್ನುವುದು ಮಾತ್ರ.
ನಮ್ಮ ಆಸಕ್ತಿ ಮತ್ತು ವ್ಯಕ್ತಿತ್ವಗಳು ನಮ್ಮ ರಾಶಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂಬುದನ್ನು ಜೋತಿಷ್ಯಶಾಸ್ತ್ರ ಹೇಳುತ್ತದೆ. ಇದರ ಆಧಾರದ ಮೇಲೆ ಯಾವ ಯಾವ ರಾಶಿಯಲ್ಲಿ ಹುಟ್ಟಿರುವ ಪುರುಷರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳೋಣ....

ವೃಷಭ ರಾಶಿ - ಏಪ್ರಿಲ್ 21 ರಿಂದ ಮೇ 21
ಪ್ರೀತಿಯ ಹುಡುಗಿಯರೇ,ನಿಮ್ಮನ್ನು ಯಾವಾಗಲು ಅತಿ ಹೆಚ್ಚು ಪ್ರೀತಿಯಿಂದ ಮುದ್ದಿಸುವ ಹುಡುಗ ನಿಮಗೆ ಬೇಕೆಂದು ನೀವು ಬಯಸುತ್ತ ಇದ್ದೀರಾ? ಹಾಗಾದರೆ ವೃಷಭ ರಾಶಿಯ ಪುರುಷರು ನಿಮಗೆ ಹೇಳಿ ಮಾಡಿಸಿದಂತೆ ಇರುತ್ತಾರೆ.ವೃಷಭ ರಾಶಿಯ ಪುರುಷರು ಅತಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಅವರು ಪ್ರೀತಿ ಮಾಡುವ ಹುಡುಗಿಯರಿಗೆ ಎಂದಿಗೂ ಅವರು ಮೋಸ ಮಾಡುವುದಿಲ್ಲ.ಇಂತಹ ಹುಡುಗರನ್ನು ಹುಡುಗಿಯರು ಸುಲಭವಾಗಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಮತ್ತು ಜೀವನ ಪೂರ್ತಿ ಅವರು ನೀವು ಹೇಳಿದಂತೆಯೇ ಕೇಳುತ್ತಾರೆ.

ಧನಸ್ಸು ರಾಶಿ - ನವೆಂಬರ್ 23 ರಿಂದ ಡಿಸೆಂಬರ್ 22
ಧನಸ್ಸು ರಾಶಿಯ ಪುರುಷರು ಹೆಚ್ಚಾಗಿ ಮಾತನಾಡುವುದಿಲ್ಲ,ಕೆಲವರು ಸ್ವಲ್ಪ ಮಾತನಾಡುತ್ತಾರಾದರೂ ಅವರನ್ನು ನೋಡಿದ ತಕ್ಷಣ ಅವರ ವ್ಯಕ್ತಿತ್ವವನ್ನು ಗುರುತಿಸುವುದು ಕಷ್ಟ.ಆದರೆ ಈ ರಾಶಿಯವರಲ್ಲಿ ಒಂದು ವಿಷಯ ಮಾತ್ರ ಸತ್ಯ.ಅದೇನೆಂದರೆ ಅವರು ಪರಿಪೂರ್ಣವಾದ ಗೆಳೆಯರಾಗಲು ಅಥವಾ ಜೀವನ ಸಂಗಾತಿಯಾಗಲು ಸರಿ ಹೊಂದುತ್ತಾರೆ.ಇವರು ತಮ್ಮ ಪತ್ನಿಯನ್ನು ಹೇಗೆ ಸಂತೋಷದಿಂದ ಇಟ್ಟುಕೊಳ್ಳಬೇಕು ಎಂಬ ವಿಷಯವನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿರುತ್ತಾರೆ.ಕೆಲವೊಮ್ಮೆ ಇವರು ಬಹಳ ಬೇಗ ಬೇಸರವನ್ನು ಹೊಂದಬಹುದು.ಆದರೆ ಇವರು ತಮ್ಮ ಹುಡುಗಿಯರನ್ನು ಅವರ ತಂದೆಯರು ಜೋಪಾನವಾಗಿ ನೋಡಿಕೊಳ್ಳುವ ರೀತಿಯಲ್ಲೇ ನೋಡಿಕೊಳ್ಳುತ್ತಾರೆ .ಈ ಒಂದು ಕಾರಣದಿಂದ ಬಹುಶಃ ಧನಸ್ಸು ರಾಶಿಯಲ್ಲಿನ ಪುರುಷರು ವಿಶೇಷವಾಗಿ ಕಾಣುತ್ತಾರೆ.

ಮಕರ ರಾಶಿ - ಡಿಸೆಂಬರ್ 23ರಿಂದ ಜನವರಿ 20
ನೀವು ಡೇಟಿಂಗ್ ಮಾಡಲು ಇಷ್ಟ ಪಡುತ್ತಾ ಇದ್ದರೆ ನಿಮಗೆ ಮಕರ ರಾಶಿಯ ಪುರುಷರಿಗಿಂತ ಒಳ್ಳೆಯವರು ಎಲ್ಲೂ ಸಿಗುವುದಿಲ್ಲ ಎಂದೇ ಹೇಳಬಹುದು.ಇವರು ತಾವು ಮಾಡುವ ಕೆಲಸದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ಅವರು ಅದರ ಕಡೆಗೆ ಹೆಚ್ಚು ಒಲವನ್ನು ಹೊಂದಿದ್ದರೂ ಸಹ ಇವರು ರೋಮ್ಯಾಂಟಿಕ್ ವ್ಯಕ್ತಿಗಳ ಪಟ್ಟಿಯಲ್ಲೇ ಬರುತ್ತಾರೆ.ಅವರು ತಮ್ಮ ಪ್ರೀತಿಯನ್ನು ವರ್ಷಗಳ ಕಾಲ ಹಾಗೆಯೇ ಉಳಿಸಿಕೊಂಡು ಹೋಗುತ್ತಾರೆ ಹಾಗು ಇವರಲ್ಲಿ ಹೆಚ್ಚಾಗಿ ಯಾವುದೇ ಬದಲಾವಣೆಗಳಾಗುವುದಿಲ್ಲ.ಅವರು ಪ್ರೀತಿಸುವುದನ್ನು ಇಷ್ಟ ಪಡುತ್ತಾರೆ ಹಾಗು ಇದೇ ಅವರಲ್ಲಿ ಕಂಡುಬರುವ ಒಂದು ಒಳ್ಳೆಯ ಸಂಗತಿಯೆಂದರೆ ತಪ್ಪಾಗದು.

ಕುಂಭ ರಾಶಿ - ಜನವರಿ 21 ರಿಂದ ಫೆಬ್ರವರಿ 19
ಕುಂಭ ರಾಶಿಯ ಪುರುಷರು ಕೂಡ ಅತಿ ಹೆಚ್ಚು ರೋಮ್ಯಾಂಟಿಕ್ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಹೇಳ ಬಹುದು. ಇವರಲ್ಲಿರುವ ಒಂದು ವಿಶೇಷ ಗುಣವೆಂದರೆ ಇವರು ತಮ್ಮ ಪತ್ನಿಯರು ಸ್ವಲ್ಪ ಬೇಜಾರಾದರೂ ಸಹಿಸುವುದಿಲ್ಲ ಹಾಗು ಅವರ ಮುಖದ ಮೇಲೆ ಮತ್ತೆ ನಗುವನ್ನು ವಾಪಸ್ಸು ತರಲು ಏನು ಬೇಕಾದರೂ ಮಾಡುತ್ತಾರೆ.ಆದರೆ ಕೆಲವೊಮ್ಮೆ ಅವರ ಗಮನ ಹೊರಗಿನ ಪ್ರಪಂಚದ ಮೇಲೆ ಹೋಗಿ ಮನೆಯವರ ಮತ್ತು ತಮ್ಮ ಪತ್ನಿಯರ ಮೇಲೆ ಹೆಚ್ಚು ಕಾಳಜಿ ತೆಗೆದುಕೊಳ್ಳದೆ ಇರಬಹುದು.ಅಂತಹ ಸಮಯದಲ್ಲಿ ಅವರ ಪತ್ನಿಯರು ತಾಳ್ಮೆಯಿಂದ ಧೈರ್ಯವಂತರಾಗಿ ಇರಬೇಕು.ಏಕೆಂದರೆ ಏನೇ ಆದರೂ ಕೂಡ ಅವರು ಮನೆಗೆ ಖಂಡಿತವಾಗಿಯೂ ವಾಪಸ್ಸು ಬರುತ್ತಾರೆ.



Click it and Unblock the Notifications











