Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿ ರಾಶಿಚಕ್ರದವರಲ್ಲಿಯೂ ಇಂತಹ ನಕಾರಾತ್ಮಕ ಗುಣಗಳು ಇದ್ದೇ ಇರುತ್ತದೆ!
ಒಳ್ಳೆಯದು ಎಂದಮೇಲೆ ಕೆಟ್ಟದ್ದು ಎನ್ನುವುದು ಇದ್ದೇ ಇರುತ್ತದೆ. ಏಕೆಂದರೆ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಲವೊಮ್ಮೆ ಒಳ್ಳೆಯ ವಿಚಾರ ಹೆಚ್ಚು ಪ್ರಾಮುಖ್ಯತೆ ಪಡೆದರೆ ಇನ್ನೂಕೆಲವೊಮ್ಮೆ ಕೆಟ್ಟ ಗುಣಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಒಳ್ಳೆಯದ್ದು ಹಾಗೂ ಕೆಟ್ಟದ್ದು ಎನ್ನುವುದು ಯಾವುದೋ ಒಂದು ವಸ್ತುಗೆ ಸೀಮಿತವಾಗಿರುವುದಿಲ್ಲ. ಅದು ವ್ಯಕ್ತಿಯ ಸ್ವಭಾವದಲ್ಲಿಯೂ ಇರುತ್ತದೆ. ಹಾಗಾಗಿ ನಮಗೆ ಯಾವುದು ಬೇಕು ಎನ್ನುವುದರ ಬಗ್ಗೆ ಅರಿವಿರಬೇಕು ಅಷ್ಟೆ.
ಒಳ್ಳೆಯ ಗುಣಗಳ ಹಾಗೆ ಪ್ರತಿಯೊಬ್ಬರಲ್ಲೂ ಕೆಟ್ಟ ಗುಣಗಳು ಇರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರಕ್ಕೆ ಅನುಗುಣವಾಗಿ ವ್ಯಕ್ತಿಯಲ್ಲಿ ಕೆಟ್ಟಗುಣಗಳು ಇರುತ್ತವೆ. ಇವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ವಿಭಿನ್ನವಾಗಿರುತ್ತದೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ಕೆಟ್ಟ ಗುಣಗಳಿವೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ವಿದ್ದರೆ ಬೋಲ್ಡ್ ಸ್ಕೈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ
ಈ ರಾಶಿಯವರಿಗೆ ಬೆಂಕಿಯಂತಹ ಕೋಪ ಬರುವುದು. ಯಾವುದಾದರೂ ಕೆಲಸವನ್ನು ಮಾಡುವಾಗ ಅತ್ಯಂತ ಆತುರಕ್ಕೆ ಒಳಗಾಗಿರುತ್ತಾರೆ. ಇವರಿಗೆ ನಿರ್ಧಾರ ಕೈಗೊಳ್ಳುವ ಮೊದಲು ತಾಳೆಯಿಂದ ಯೋಚಿಸುವುದಿಲ್ಲ. ಇವರಲ್ಲಿ ಸಾಮಾನ್ಯವಾಗಿ ಬಲವಾದ ಮತ್ತು ಶಕ್ತಿಯುತವಾದ ಗುಣಗಳಿರುತ್ತವೆ. ಇವರ ಅಸಹನೆ ಎನ್ನುವುದು ಯಶಸ್ಸಿಗೆ ತಡೆಯನ್ನುಂಟುಮಾಡುವುದು.

ವೃಷಭ
ಈ ರಾಶಿಯಲ್ಲಿ ಹುಟ್ಟಿದವರು ಸ್ವಾಮ್ಯಸೂಚಕ ಹಾಗೂ ಅಸೂಯೆಯವರಾಗಿರುವರು. ಇವರಿಗೆ ಸಂಬಂಧದಲ್ಲಿ ಸುರಕ್ಷತೆ ಮತ್ತು ಸ್ಥಿರತೆ ಬೇಕಾಗಿರುತ್ತದೆ. ಪ್ರಾಪಂಚಿಕ ವಸ್ತುಗಳ ಬಗ್ಗೆ ಅವರಿಗೆ ಹೆಚ್ಚಿನ ಪ್ರೀತಿ ಇರುವುದು. ಇದರಿಂದಾಗಿಯೇ ಅವರು ಸಮಸ್ಯೆಗೆ ಸಿಲುಕುವರು. ಇವರು ತುಂಬಾ ಮೊಂಡು ಸ್ವಭಾವದವರು ಮತ್ತು ಇದೇ ವೇಳೆ ತುಂಬಾ ವಿವೇಚನೆಯಿಲ್ಲದವರಾಗಿರುವರು.

ಮಿಥುನ
ಇವರು ಯಾವಾಗಲೂ ಉಭಯತ್ವ ತೋರಿಸುತ್ತಾ ಇರುತ್ತಾರೆ. ಇದರಿಂದಾಗಿ ಅವರ ವ್ಯಕ್ತಿತ್ವದಲ್ಲಿ ಯಾವಾಗಲೂ ಅಸ್ಥಿರತೆ ಇರುವುದು. ಇವರ ಮನೋಭಾವ ಆಗಾಗ ಬದಲಾಗುತ್ತಾ ಇರುತ್ತದೆ. ಭಾವನೆ ಹಾಗೂ ಬುದ್ಧಿಶಕ್ತಿ ಮಧ್ಯೆ ಇವರಿಗೆ ಸಂಘರ್ಷವಾಗುತ್ತಿರುವುದು.

ಕರ್ಕಾಟಕ
ರಾಶಿಗಳಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ರಾಶಿಯೆಂದರೆ ಅದು ಕರ್ಕಾಟಕ. ಇವರು ಹೊರಗಡೆ ತಾವು ತುಂಬಾ ಬಲಿಷ್ಠ ಮನೋಭಾವದವರೆಂದು ತೋರಿಸಲು ಪ್ರಯತ್ನಿಸಿದರೂ ಒಳಗಿನಿಂದ ಅವರು ತುಂಬಾ ಮೃಧುವಾಗಿರುತ್ತಾರೆ. ತಮ್ಮ ಸುತ್ತಲು ಇರುವ ಜನರು ಹಾಗೂ ಅವರು ಇರುವ ಪ್ರದೇಶ ಹೀಗೆ ಪ್ರತಿಯೊಂದರಲ್ಲೂ ಅವರ ಭಾವನೆ ಬದಲಾಗುತ್ತಾ ಇರುವುದು. ಇವರಲ್ಲಿ ನಕಾರಾತ್ಮಕ ಭಾವನೆ ಬೇಗನೆ ಮೂಡುವುದ ಮತ್ತು ಇದರಿಂದ ಖಿನ್ನತೆಗೆ ಒಳಗಾಗುವರು.

ಸಿಂಹ
ಈ ರಾಶಿಯಲ್ಲಿ ಹುಟ್ಟಿದವರಲ್ಲಿ ಅಧಿಕಾರ ಸಾಧಿಸುವ ಗುಣವಿರುವುದು ಮತ್ತು ಅವರ ನಡವಳಿಕೆ ಬಲಿಷ್ಠವಾಗಿರುವುದು. ಅಧಿಕಾರ ಪಡೆಯಲು ಬಯಸುವುದು ಮತ್ತು ಯಾವಾಗಲೂ ಸುದ್ದಿಯಲ್ಲಿರಬೇಕೆಂದು ಬಯಸುವುದು ತುಂಬಾ ಸಮಸ್ಯೆಯಾಗುವುದು. ಅವರು ತುಂಬಾ ಸ್ವಾಮ್ಯಸೂಚಕವಾಗಿರುತ್ತಾರೆ. ಅವರು ತುಂಬಾ ಸೊಕ್ಕಿನ ಹಾಗೂ ಉನ್ನತ ಮನಸ್ಸಿನವರಾಗಿರುವರು.

ಕನ್ಯಾ
ಇವರು ತಮ್ಮ ತಪ್ಪುಗಳನ್ನು ಕಡೆಗಣಿಸುವುದಿಲ್ಲ ಮತ್ತು ಅವರು ತುಂಬಾ ವಿಮರ್ಶನಾತ್ಮಕವಾಗಿರುವರು. ಸಾಮಾನ್ಯವಾಗಿರುವ ಕೆಲವು ವಿಷಯಗಳ ಬಗ್ಗೆ ಅವರು ನಕಾರಾತ್ಮಕವಾಗಿರುವರು. ಅವರಲ್ಲಿ ಬಲಿಷ್ಠ ಇಷ್ಟ ಹಾಗೂ ಇಷ್ಟವಿಲ್ಲದಿರುವ ನಡವಳಿಕೆಯು ಅವರ ನಡವಳಿಕೆ ಚೆನ್ನಾಗಿಲ್ಲದಂತೆ ಮಾಡುವುದು.

ತುಲಾ
ತುಲಾ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಯಾವಾಗಲೂ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಒಂದು ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದಾಗ ಅವರು ಅದಕ್ಕೆ ಹಿಂಜರಿಯುವರು ಮತ್ತು ನಿರ್ಧಾರ ಮಾಡಲು ಅವರಿಗೆ ತುಂಬಾ ಕಷ್ಟವಾಗುವುದು. ಅವರು ತಮ್ಮ ಮನಸ್ಸನ್ನು ಪದೇ ಪದೇ ಬದಲಾಯಿಸುತ್ತಿರುವರು. ತುಲಾ ರಾಶಿಯವರಲ್ಲಿ ವಿರೋಧಾತ್ಮಕ ವ್ಯಕ್ತಿತ್ವವಿರುವುದು.

ವೃಶ್ಚಿಕ
ಇವರು ಹಗೆಸಾಧಿಸಲು ಯಾವಾಗಲೂ ಕಾಯುತ್ತಿರುವರು ಮತ್ತು ತಮ್ಮ ದಾರಿಗೆ ಯಾರಾದರು ಅಡ್ಡ ಬಂದರೆ ತಾಳ್ಮೆ ಕಳೆದುಕೊಳ್ಳುವರು. ಇವರು ದೀರ್ಘಕಾಲದ ತನಕ ಹಗೆ ಇಟ್ಟುಕೊಂಡಿರುವರು ಮತ್ತು ಸಮಯ ಸಿಕ್ಕಾಗ ಹಗೆ ಸಾಧಿಸಲು ಪ್ರಯತ್ನಿಸುವರು. ಇಂತಹ ಸ್ವಾಮ್ಯತೆಯು ಅವರ ಸಂಬಂಧ ಕೆಡಿಸುವುದು. ಇದರಿಂದ ಅವರಿಗೆ ಹಾಗೂ ಅವರ ಸಂಗಾತಿಗೆ ತುಂಬಾ ಕಠಿಣ ಪರಿಸ್ಥಿತಿ ಉಂಟಾಗುವುದು.

ಧನು
ಇತರರಿಗೆ ನೋವು ಮಾಡುವ ವಿಷಯದಲ್ಲಿ ಇವರು ತುಂಬಾ ಕಠಿಣ ಹಾಗೂ ಕ್ರೂರವಾಗುವರು. ಇವರಿಗೆ ಬದ್ಧತೆ ಇರುವುದಿಲ್ಲ. ಆದರೆ ಅವರಿಗೆ ನಿಷ್ಠ ಸ್ನೇಹಿತರು ಹಾಗೂ ಪ್ರೇಮಿಗಳಿರುವರು. ಅವರ ನಡವಳಿಕೆ ಬದಲಾಗುತ್ತಿರುತ್ತದೆ ಮತ್ತು ಇದನ್ನು ಊಹಿಸುವುದು ಕಷ್ಟವಾಗುವುದು. ಚತುರತೆಯಿಂದ ಇರಲು ಅವರು ಪ್ರಯತ್ನಿಸಬೇಕು.

ಮಕರ
ಈ ರಾಶಿಯಲ್ಲಿ ಹುಟ್ಟಿದವರು ಮುಖ್ಯವಾಗಿ ತಮ್ಮ ಸುತ್ತಮುತ್ತಲು ಇರುವವರನ್ನು ಹಾಗೂ ಇತರರನ್ನು ಗೌರವಿಸಲು ಕಲಿಯಬೇಕು. ಇವರಿಗೆ ತಮ್ಮದೇ ಆದ ನಿಯಮಗಳಿರುವುದು ಮತ್ತು ಬೇರೆಯವರ ಸಲಹೆಗಳನ್ನು ಪಾಲಿಸುವುದಿಲ್ಲ. ಕೆಲವೊಂದು ಸಲ ಇವರು ತುಂಬಾ ನಿರಾಶವಾದಿಗಳಾಗಿರುವರು.

ಕುಂಭ
ಕುಂಭ ರಾಶಿಯು ತುಂಬಾ ದೂರ ಹಾಗೂ ಪ್ರತ್ಯೇಕವಾಗಿರುವುದು. ಅವರು ಒಂದೇ ಮನಸ್ಸನ್ನು ಹೊಂದಿರುವರು ಮತ್ತು ತಮಗೆ ಬೇಕಾದಂತೆ ಜೀವನ ಸಾಗಿಸಲು ಪ್ರಯತ್ನಿಸುತ್ತಾರೆ. ಅವರಲ್ಲಿ ಕೆಲವು ಭಾವನೆಗಳು ಅಡಗಿರುವುದು ಮತ್ತು ಹೆಚ್ಚು ಭಾವನಾತ್ಮಕವಾಗಿಯೂ ಇರುವುದಿಲ್ಲ. ಕೆಲವು ಸಲ ಇವರು ಬಂಡಾಯಗಾರರಾಗುವರು.

ಮೀನ
ಇವರಿಗೆ ನಿರ್ಧಾರ ತೆಗೆದುಕೊಳ್ಳವ ಸಾಮರ್ಥ್ಯವಿರಲ್ಲ ಮತ್ತು ಅವರಿಗೆ ಏನು ಬೇಕು ಎಂದೇ ತಿಳಿದಿರುವುದಿಲ್ಲ. ಅವರು ಯಾವಾಗಲೂ ಕಾಲ್ಪನಿಕ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಈ ರಾಶಿಯವರು ಚಟಕ್ಕೆ ಅಂಟಿಕೊಂಡಿರುವರು. ಯಾಕೆಂದರೆ ಅವರು ಸತ್ಯ ಹಾಗೂ ವಾಸ್ತವತೆ ಎದುರಿಸಲು ಬಯಸುವುದಿಲ್ಲ.



Click it and Unblock the Notifications











