Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತನ್ನ ಮಗನ ಮೊದಲ ಹುಟ್ಟುಹಬ್ಬಕ್ಕೆ- ತಾಯಿ ಏನು ಮಾಡಿದಳು ಗೊತ್ತೇ?
ಮಗುವಿನ ಮೊದಲ ಹುಟ್ಟುಹಬ್ಬವೆನ್ನುವುದು ಯಾವಾಗಲೂ ತುಂಬಾ ಸಂಭ್ರಮ ಹಾಗೂ ಅಬ್ಬರದಿಂದ ಮಾಡಲು ಪ್ರತಿಯೊಬ್ಬ ತಂದೆತಾಯಿಯ ಆಸೆಯಾಗಿರುವುದು. ಮೊದಲ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ಆಯೋಜಿಸುವುದು ಮತ್ತು ಅದನ್ನು ಮಗುವಿನ ಜೀವನದಲ್ಲಿ ಯಾವತ್ತೂ ಮೆರೆಯಲಾರದ ನೆನಪಾಗಿ ಮಾಡಲು ಪೋಷಕರು ಕಷ್ಟಪಡುವರು. ಆದರೆ ಮಗುವಿನ ಮೊದಲ ಹುಟ್ಟುಹಬ್ಬಕ್ಕೆ ಏನಾದರೂ ವಿಲಕ್ಷಣವಾಗಿರುವುದನ್ನು ಮಾಡಲು ಬಯಸಿದರೆ ಆಗ ಅದು ಹೇಗಿರಬಹುದು?

ಖಂಡಿತವಾಗಿಯೂ ಜನರು ನಿಮ್ಮ ಬಗ್ಗೆ ತುಂಬಾ ಒರಟಾಗಿ ಮಾತನಾಡಬಹುದು ಮತ್ತು ನೀವು ಪೋಷಕರಾಗಿ ಹೀಗೆ ಹುಚ್ಚು ಬುದ್ಧಿಯವರಂತೆ ವರ್ತಿಸಲು ಹೇಗೆ ಸಾಧ್ಯ ಎಂದು ಹೇಳಬಹುದು. ಆಗ ನಿಮಗೆ ನಿರಾಶೆಯಾಗಬಹುದು.
ಆದರೆ ಈ ಕಥೆಯು ಆಮಿ ಲೂಯಿಸ್ ಎಂಬಾಕೆ ತನ್ನ ಮಗನ ಮೊದಲ ಹುಟ್ಟುಹಬ್ಬಕ್ಕೆ ಝಂಬಿ ಥೀಮ್ ಕೇಕ್ ನ್ನು ತಂದು ಆಚರಿಸಲು ಬಯಸಿದಳು. ಜನರು ತಮ್ಮ ಕೋಪ ವ್ಯಕ್ತಪಡಿಸಿ ಇದು 'ಅಸಹ್ಯಕರ', 'ಅಸ್ವಸ್ಥ', ಮತ್ತು 'ಆಕ್ರಮಣಕಾರಿ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಝಂಬಿ ಥೀಮ್ ಹೊಂದಿರುವ ಕೇಕ್ ನ್ನು ತನ್ನ ಮಗನ ಹುಟ್ಟುಹಬ್ಬಕ್ಕೆ ಕೊಡಲು ಮತ್ತು ಫೋಟೊಶೂಟ್ ಮಾಡಲು ಕಾರಣವೇನೆಂದು ತಿಳಿದರೆ ಖಂಡಿತವಾಗಿಯೂ ನಿಮ್ಮ ಹೃದಯ ಕರಗಬಹುದು. ಇದು ಹೃದಯಕರಗಿಸುವುದು ಮತ್ತು ಟೀಕಾಕಾರರ ಬಾಯಿ ಮುಚ್ಚಿಸುವುದು. ಆತನ ಜನನದ ವೇಳೆ ವೈದ್ಯರು ಆಕೆಯ ಜರಾಯುವು ಬೇರ್ಪಟ್ಟಿದೆ ಎಂದು ಹೇಳಿದ್ದರು ಮತ್ತು ಮಗುವಿನ ಹೃದಯಬಡಿತವಿರಲಿಲ್ಲ. ಅವರು ಜರಾಯು ಕತ್ತರಿಸಿದರು ಮತ್ತು ಅಮಿಗೆ ಜೀವನದಲ್ಲಿ ಭಾವನೆಗಳ ಸುಂಟರಗಾಳಿ ಎದ್ದಿತ್ತು.
ಮಗುವಿನ ಜನನವಾದಾಗ ಇದು ನಡೆಯುತ್ತದೆ ಎಂದು ಆಕೆ ಭಾವಿಸಿದ್ದಳು. ಆದರೆ ಮಗುವನ್ನು ಹೊರತೆಗೆದು, ಮಗು ಅಳದೆ ಇರುವಾಗ ಹೃದಯ ಬಡಿತವಿರಲಿಲ್ಲ. ಹೃದಯಬಡಿತವಿಲ್ಲದೆ ಇರುವ ಕಾರಣದಿಂದಾಗಿ ಮಗುವಿಗೆ ವೈದ್ಯರು ಬಡಿದರು.
ಮಗು ಸತ್ತಿದೆ ಎಂದು ದಂಪತಿಯು ಭಾವಿಸಿದರು. ಆದರೆ ವೈದ್ಯರು ತಮ್ಮ ಭರವಸೆ ಕಳೆದುಕೊಳ್ಳಲಿಲ್ಲ. ವೈದ್ಯರು ನನ್ನ ಕೈಯನ್ನು ಹಿಸುಕಲು ಪ್ರಯತ್ನಿಸಿದರು ಮತ್ತು ತಮ್ಮ ಭಾವನೆ ತೋರಿಸಲು ಪ್ರಯತ್ನಿಸಿದರು. ಆದರೆ ಇದು ದೊಡ್ಡ ಅವ್ಯವಸ್ಥೆಯಾಗಿತ್ತು ಮತ್ತು ಭೀಕರವಾಗಿತ್ತು. ಏನು ಆಗಿದೆ ಎನ್ನುವುದನ್ನು ಆಲೋಚನೆ ಮಾಡುತ್ತಿರುವ ನನ್ನ ತಲೆಯಲ್ಲಿ ಶವದ ಮೇಲೆ ಹಾಕುವಂತಹ ಬಿಳಿ ಬಟ್ಟೆಯು ಬಂದುಹೋಯಿತು.
ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ದಂಪತಿಯ ಸಣ್ಣ ಹುಡುಗ ಫೀನಿಕ್ಸ್ ನಿಜವಾದ ಹೋರಾಟಗಾರನಾಗಿ ಬಂದ. ಅಕ್ಟೋಬರ್ 31ರಂದು ಮಗು ಮತ್ತೆ ಜೀವ ಪಡೆಯಿತು. ಇದು ಆಕೆಯ ಜೀವನದ ಅತ್ಯಂತ ದೀರ್ಘ ಮತ್ತು ಭೀಕರವಾದ 13 ನಿಮಿಷಗಳಾಗಿದ್ದವು ಆಕೆ ಹೇಳಿದ್ದಳು.
ಮೊದಲ ಸಲ ಮಗುವನ್ನು ಹಿಡಿದಾಗ ನನಗೆ ಪದಗಳೇ ಬರಲಿಲ್ಲ ಮತ್ತು ಸತ್ತಿರುವ ಮಗುವು ಮತ್ತೆ ಜೀವ ಪಡೆದಿರರುವುದಕ್ಕೆ ಝಂಬಿ ಥೀಮ್ ಇರುವ ಕೇಕ್ ನೀಡುವುದಕ್ಕಿಂತ ಬೇರೆ ಮಾರ್ಗವಿದೆಯಾ? ಎಂದು ಆಕೆ ತಿಳಿಸುತ್ತಾಳೆ.
ಆಕೆ ತನ್ನ ಮಗನ ಮೊದಲ ಹುಟ್ಟುಹಬ್ಬಕ್ಕೆ ಝಂಬಿ ಥೀಮ್ ಕೇಕ್ ಯಾಕೆ ಆಯ್ಕೆ ಮಾಡಿದಳು ಎಂದು ನಿಮಗೆ ತಿಳಿದಿದೆ ತಾನೇ?ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.



Click it and Unblock the Notifications



