Latest Updates
-
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ
ದೇಹದ ಇಂತಹ ಜಾಗದಲ್ಲಿ ಮಚ್ಚೆಗಳಿದ್ದರೆ ಮದುವೆ ಬಳಿಕ ಅದೃಷ್ಟವೇ ಬದಲಾಗಲಿದೆ!

ಜಗತ್ತಿನ ಮೇಲೆ ವ್ಯಕ್ತಿಯಿಂದ ವ್ಯಕ್ತಿಯು ಭಿನ್ನವಾಗಿರುವನು. ಆತನ ಹಾವಭಾವ, ಗುಣನಡತೆ ಎಲ್ಲವೂ ಸಂಪೂರ್ಣವಾಗಿ ಭಿನ್ನವಾಗಿರುವುದು. ಆದರೆ ಮನುಷ್ಯನ ದೇಹದಲ್ಲಿರುವಂತಹ ಕೆಲವೊಂದು ಮಚ್ಚೆಗಳಿಂದ ಆತನ ನಡವಳಿಕೆ ಮತ್ತು ಮನೋಭಾವನ್ನು ತಿಳಿಯಬಹುದಂತೆ. ಈ ಲೇಖನದಲ್ಲಿ ನಾವು ನಿಮಗೆ ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಆಗ ಮನುಷ್ಯನ ಜೀವನವು ಮದುವೆ ಬಳಿಕ ಬದಲಾಗುತ್ತದೆ ಎನ್ನುವುದನ್ನು ನಿಮಗೆ ಹೇಳಿ ಕೊಡಲಿದ್ದೇವೆ.
ಹೌದು, ದೇಹದಲ್ಲಿರುವ ಒಂದು ಮಚ್ಚೆಯು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಯಿಂದ ನಮ್ಮ ಜೀವನದ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಬಗ್ಗೆ ತಿಳಿದುಬರುತ್ತದೆ. ಹುಟ್ಟುವಾಗಲೇ ದೇಹದ ಯಾವುದಾದರೂ ಭಾಗದಲ್ಲಿ ಮಚ್ಚೆ ಇರುವುದು. ಅದರಲ್ಲೂ ಮಹಿಳೆಯರ ದೇಹದ ಕೆಲವೊಂದು ಭಾಗದಲ್ಲಿರುವಂತಹ ಮಚ್ಚೆಯು ಆಕೆಗೆ ವಿವಾಹದ ಬಳಿಕ ಅದೃಷ್ಟ ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಅರ್ಧಾಂಗಿಯ ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಅದೃಷ್ಟ ಎಂದು ತಿಳಿಯಲು ಇಲ್ಲಿ ಓದಿಕೊಳ್ಳಿ....

ಮೂಗಿನ ಬದಿಯಲ್ಲಿ ಮಚ್ಚೆ
ಮೂಗಿನ ಬದಿಯಲ್ಲಿ ಮಚ್ಚೆ ಇರುವಂತಹ ಮಹಿಳೆಯರು ಜೀವನದಲ್ಲಿ ಯಾವಾಗಲೂ ಸಮಸ್ಯೆಗಳೇ ಕಾಣಿಸಿಕೊಳ್ಳುವುದು. ಎಲ್ಲವೂ ಅವರು ಅನಿಸಿದಂತೆ ಆಗುವುದೇ ಇಲ್ಲ. ಇವರು ಮದುವೆಯಾಗುವ ತನಕ ಅವರ ಸಮಸ್ಯೆಗಳು ಬಗೆಹರಿಯುವುದೇ ಇಲ್ಲ. ಇವರಿಗೆ ಮದುವೆಯಾದ ಬಳಿಕ ಐಷಾರಾಮಿ ಜೀವನ ಮತ್ತು ತಮ್ಮ ಕನಸುಗಳನ್ನು ನನಸಾಗಿಸುವ ಅವಕಾಶ ಸಿಗುವುದು. ಆದರೆ ಮದುವೆ ಬಳಿಕವಷ್ಟೇ. ಮದುವೆಯಾಗುವ ತನಕ ತುಂಬಾ ಕಷ್ಟ ಸಹಿಸಿಕೊಳ್ಳಬೇಕು.

ಬಲದ ಗಲ್ಲದಲ್ಲಿ ಮಚ್ಚೆ
ಮಹಿಳೆಯ ಬಲದ ಗಲ್ಲದಲ್ಲಿ ಮಚ್ಚೆಯಿದ್ದರೆ, ಆಗ ಆಕೆಗೆ ಮದುವೆಯ ಬಳಿಕ ತುಂಬಾ ಅದೃಷ್ಟ ಮತ್ತು ಹಠಾತ್ ಗುರಿಯಲ್ಲಿ ಬದಲಾವಣೆಯಾಗಲಿದೆ. ಇಂತಹ ಮಹಿಳೆಯರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಅವರಿಗೆ ಮದುವೆ ಬಳಿಕ ಅದೃಷ್ಟವು ಒಲಿದುಬರಲಿದೆ. ಇನ್ನು ಬಲದ ಗಲ್ಲದ ಮೇಲೆ ಸ್ಪಷ್ಟವಾದ ಕಪ್ಪು ಮಚ್ಚೆಯುಳ್ಳ ಪುರುಷರು ಕೆಲವು ವಿಷಯಗಳಲ್ಲಿ ಅತಿ ಅನುರಾಗ ಹೊಂದಿರುವವರಾಗಿರುತ್ತಾರೆ. ಉದಾಹರಣೆಗೆ ಸಂಗೀತಗಾರರಾಗಿದ್ದರೆ ಸಂಗೀತದ ಹೊರತು ಅವರಿಗೆ ಬೇರೆ ಯಾವುದರಲ್ಲೂ ಆಸಕ್ತಿ ಅತಿಹೆಚ್ಚಾಗಿ ಇರುವುದಿಲ್ಲ. ಮಹಿಳೆಯರಲ್ಲಿ ಈ ಮಚ್ಚೆ ತನ್ನ ಪತಿಯೊಂದಿಗೆ ಅತ್ಯುತ್ತಮ ಹಾಗೂ ಸಂತೋಷಕರವಾದ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುತ್ತದೆ.

ಹುಬ್ಬುಗಳ ಮಧ್ಯೆ ಮಚ್ಚೆ
ಮಹಿಳೆಯ ಹುಬ್ಬಗಳ ಮಧ್ಯದಲ್ಲಿ ಮಚ್ಚೆಯಿದ್ದರೆ ಅಥವಾ ಕಣ್ಣಿನ ನಡುವೆ ಇದ್ದರೆ ಇಂತಹವರು ಮದುವೆ ಬಳಿಕ ತುಂಬಾ ಯಶಸ್ವಿಯಾಗುವರು. ಮದುವೆಗೆ ಮೊದಲು ಈ ಮಹಿಳೆಯರಿಗೆ ಹೆಚ್ಚಿನ ಯಶಸ್ಸು ಸಿಗುವುದಿಲ್ಲ.

ಮದುವೆ ಗೆರೆಯಲ್ಲಿ ಮಚ್ಚೆ
ಮದುವೆ ಗೆರೆ ಮೇಲೆ ಅಥವಾ ಅದಕ್ಕೆ ಸಮೀಪದಲ್ಲಿ ಮಹಿಳೆಗೆ ಕಪ್ಪು ಅಥವಾ ಕೆಂಪು ಮಚ್ಚೆಯಿದ್ದರೆ, ಇದು ಭಿನ್ನವಾಗಿರುವುದು. ಕೆಂಪು ಮಚ್ಚೆಯು ಸಂಗಾತಿಗಳ ಮಧ್ಯೆ ಯಶಸ್ವಿ ಮತ್ತು ಫಲಪ್ರದ ಸಂಬಂಧವನ್ನು ಸೂಚಿಸುವುದು. ಅದೇ ಕಪ್ಪು ಮಚ್ಚೆಯು ಇದಕ್ಕೆ ಸಂಪೂರ್ಣ ವಿರುದ್ಧವಾಗಿರುವುದನ್ನು ಸೂಚಿಸುವುದು.

ಪಾದದಲ್ಲಿ ಮಚ್ಚೆ
ಮಹಿಳೆಯ ಪಾದದಲ್ಲಿ ಮಚ್ಚೆಯಿದ್ದರೆ, ಅದು ಆಕೆಯ ಜೀವನದಲ್ಲಿ ಹೆಚ್ಚಿನ ಪ್ರಯಾಣವನ್ನು ಸೂಚಿಸುವುದು. ಇದು ದೇಶೀಯ ಅಥವಾ ವಿದೇಶ ಪ್ರಯಾಣವಾಗಿರಬಹುದು. ಇವರು ತುಂಬಾ ಪ್ರಯಾಣ ಮಾಡುವರು. ಮದುವೆ ಬಳಿಕ ಇವರಿಗೆ ಶಾಂತಿ ಹಾಗೂ ಸಮೃದ್ಧಿ ಜೀವನ ಸಿಗುವುದು. ಮದುವೆ ಬಳಿಕವೇ ನಿಮ್ಮ ಯಶಸ್ಸಿನ ಬಾಗಿಲು ತೆರೆಯುವುದು. ಇನ್ನು ಪಾದದಲ್ಲಿ ಮಚ್ಚೆ ಇರುವ ವ್ಯಕ್ತಿಗಳ ಕಾಲಿಗೆ ಚಕ್ರ ಇರುತ್ತದೆ ಎಂಬ ನಂಬಿಕೆ ಬಹಳ ವರ್ಷಗಳಿಂದ ಬೆಳೆದುಬಂದಿದೆ. ಪಾದದ ಯಾವುದೇ ಭಾಗದಲ್ಲಿ ಅಂದರೆ ಕೆಳಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ, ಬೆರಳುಗಳಲ್ಲಿ ಅಥವಾ ಹಿಮ್ಮಡಿಯಲ್ಲಿ, ಬಲಪಾದ ಅಥವಾ ಎಡಪಾದ ಎಲ್ಲಿದ್ದರೂ ಇವರು ಸದಾ ಪ್ರಯಾಣಿಸುತ್ತಾ ಇರುತ್ತಾರೆ ಎಂದು ನಂಬಲಾಗಿದೆ. ಇವರು ನಾಯಕತ್ವದ ಗುಣಗಳನ್ನೂ ಸಮರ್ಥವಾಗಿ ಪ್ರದರ್ಶಿಸುವವರಾಗಿದ್ದಾರೆ.



Click it and Unblock the Notifications











