For Quick Alerts
ALLOW NOTIFICATIONS  
For Daily Alerts

  2018ರಲ್ಲಿ ಯಾವ ರಾಶಿಯವರ ವೈವಾಹಿಕ ಜೀವನ ಹೇಗಿರುತ್ತದೆ ನೋಡಿ...

  By Deepu
  |

  ಜೀವನದ ಸಾಕ್ಷಾತ್ಕಾರ ಅಥವಾ ಜೀವನದ ಸಂಪೂರ್ಣ ಅನುಭವವನ್ನು ಪಡೆಯಬೇಕೆಂದರೆ ವಿವಾಹ ಎನ್ನುವ ಪವಿತ್ರ ಬಂಧನಕ್ಕೆ ಒಳಗಾಗಬೇಕು. ಜೀವನದ ಪ್ರತಿಯೊಂದು ಹಂತದ ಜವಾಬ್ದಾರಿಯನ್ನು ಧಾರ್ಮಿಕ ಆಚರಣೆಯ ಅನುಸಾರ ನಿರ್ವಹಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಾಹ ಎನ್ನುವ ಪದ್ಧತಿ ಅನೇಕ ಬದಲಾವಣೆಯನ್ನು ಕಂಡುಕೊಳ್ಳುತ್ತಿರುವುದನ್ನು ಸಹ ನಾವು ನೋಡಬಹುದು. ವಿವಾಹ ಬಂಧನ ಎನ್ನುವ ಈ ಸುಮಧುರ ಬಂಧನವು ಸುಖಕರವಾಗಿರಬೇಕು ಎಂದಾದರೆ ಮೊದಲು ಸಂಗಾತಿಯಾಗುವವರು ನಮ್ಮೊಂದಿಗೆ ಒಳ್ಳೆಯ ಸ್ನೇಹ, ಹೊಂದಾಣಿಕೆ ಹಾಗೂ ಪ್ರೀತಿ-ವಿಶ್ವಾಸದಿಂದ ಇರಬೇಕಾಗುತ್ತದೆ.

  ಸಾಮಾನ್ಯವಾಗಿ ಹುಡುಗನನ್ನು ಅಥವಾ ಹುಡುಗಿಯನ್ನು ಆಯ್ಕೆ ಮಾಡುವಾಗ ಸೌಂದರ್ಯ, ನಡತೆ, ಗುಣಗಳು ಕುಟುಂಬದ ಹಿನ್ನೆಲೆ ನೋಡುತ್ತೇವೆ. ಜೊತೆಗೆ ಜವಾಬ್ದಾರಿ ಇರುವ ವ್ಯಕ್ತಿಯೇ? ಪುರುಷತ್ವ ಹೊಂದಿರುವ ವ್ಯಕ್ತಿಯೇ? ಸಮಾಜದಲ್ಲಿ ಸನ್ನಡತೆ ಇದೆಯೇ? ಕೆಟ್ಟ ಹವ್ಯಾಸಗಳಿಂದ ದೂರ ಇರುವ ವ್ಯಕ್ತಿಯಾಗಿದ್ದಾನೆಯೇ? ಉತ್ತಮ ಸಂಪಾದನೆ ಇದೆಯೇ? ಸಂಸ್ಕಾರ ಎನ್ನುವುದು ಇದೆಯೇ? ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಹೊಂದಿರುವ ಸೂಕ್ತ ವ್ಯಕ್ತಿಗಳನ್ನು ವಿವಾಹವಾಗಲು ಸಿದ್ಧರಾಗುವುದು ಸಾಮಾನ್ಯ.

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದ ಪುರುಷರು ಹಾಗೂ ಸ್ತ್ರೀಯರು ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ. ಹಾಗಾಗಿ ವಿವಾಹದ ಸಂದರ್ಭದಲ್ಲಿ ಕುಂಡಲಿಯ ಹೊಂದಾಣಿಕೆಯನ್ನು ನೋಡುತ್ತಾರೆ. ಆಗ ಉತ್ತಮ ಹೊಂದಾಣಿಕೆಯಾಗುತ್ತದೆ ಎಂದಾದರೆ ವಿವಾಹ ಮಾಡಿಸುತ್ತಾರೆ. ಇದರಿಂದ ವಿವಾಹವಾದವರ ದಾಂಪತ್ಯ ಜೀವನವು ಸುಂದರವಾಗಿರುತ್ತದೆ ಎನ್ನಲಾಗುವುದು. 2018ರಲ್ಲಿ ರಾಶಿಚಕ್ರದ ಅನುಗುಣವಾಗಿ ಗ್ರಹಗತಿಗಳ ಬದಲಾವಣೆ ಉಂಟಾಗುತ್ತಿದೆ. ಇದರಿಂದ ಯಾವೆಲ್ಲಾ ರಾಶಿಚಕ್ರದವರಿಗೆ ವಿವಾಹ ಯೋಗವಿದೆ? ದಾಂಪತ್ಯ ಜೀವನದಲ್ಲಿ ಸರಸ ವಿರಸಗಳು ಉಂಟಾಗಬಹುದೇ ಎನ್ನುವುದನ್ನು ತಿಳಿದುಕೊಳ್ಳಲು ಈ ಮುಂದೆ ನೀಡಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ... 

   ಮೇಷ

  ಮೇಷ

  ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸ್ವತಂತ್ರವಾಗಿರಲು ಬಯಸುತ್ತಾರೆ. ಜೊತೆಗೆ ತನ್ನ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರು ದಾಂಪತ್ಯ ಜೀವನದಲ್ಲಿ ಅತ್ಯುನ್ನತವಾದ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯಲ್ಲಿರುವ ಅವಿವಾಹಿತರು 2018ರಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ವೃಷಭ

  ವೃಷಭ

  ಇವರು ಆಗಲೇ ಒಂದು ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಲ್ಲದೆ ತಮ್ಮ ಪ್ರೀತಿಯನ್ನು ಖುಷಿಪಡಿಸುವುದು ಹಾಗೂ ಅದರೊಂದಿಗೆ ಉತ್ತಮವಾದ ಜೀವನವನ್ನು ಕಳೆಯುತ್ತಿದ್ದಾರೆ ಎಂದು ಹೇಳಬಹುದು. ಇವರು ತಮ್ಮ ಸಂಗಾತಿಗೆ ಪ್ರಶಂಸೆ ಹಾಗೂ ಆಶ್ಚರ್ಯಕರವಾದ ಉಡುಗೊರೆ ನೀಡುವುದರ ಮೂಲಕ ಪ್ರೀತಿಯನ್ನು ಹೆಚ್ಚಿಸುವರು. ಅವಿವಾಹಿತರು 2018 ಮುಗಿಯುವುದರ ಒಳಗೆ ವಿವಾಹವನ್ನು ನಿಶ್ಚಯ ಮಾಡಿಕೊಳ್ಳುವ ಸಾಧ್ಯತೆಗಳಿವೆ.

  ಮಿಥುನ

  ಮಿಥುನ

  ಈ ರಾಶಿಯವರು 2018 ಅಕ್ಟೋಬರ್ ವರೆಗೆ ಅತ್ಯುತ್ತಮ ದಾಂಪತ್ಯ ಜೀವನ ನಡೆಸುವರು. ನಿಮ್ಮ ಪ್ರೀತಿಯ ಪ್ರತೀಕವಾಗಿ ಮಗುವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಮನೆಗೆ ಬರುವ ಹೊಸ ಅತಿಥಿಯು ನಿಮ್ಮ ಮನೆ ಮನಸ್ಸನ್ನು ಹರುಷಗೊಳಿಸುವರು. ನಿಮ್ಮ ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ, ಜವಾಬ್ದಾರಿಯನ್ನು ನಿಭಾಯಿಸುವಿರಿ. ಧಾರ್ಮಿಕ ಚಿಂತನೆಗಳಿಂದಾಗಿಯೂ ಸಂಬಂಧ ಉತ್ತಮಗೊಳ್ಳುವುದು.

  ಕರ್ಕ

  ಕರ್ಕ

  2018ರಲ್ಲಿ ಇವರಿಗೆ ವಿವಾಹ ಯೋಗ ಲಭಿಸುವುದು ಎನ್ನುವುದಕ್ಕೆ ಯಾವುದೇ ಭರವಸೆಯನ್ನು ನೀಡಲು ಸಾಧ್ಯವಾಗದು. ಕುಂಡಲಿಯಲ್ಲಿರುವ ಕೆಲವು ಗ್ರಹಗತಿಗಳ ಸ್ಥಿತಿಗತಿಗಳ ಅನುಗುಣವಾಗಿ ವಿವಾಹಯೋಗ ಅಲ್ಪಪ್ರಮಾಣದಲ್ಲಿ ಸಿಗಬಹುದು. ಆದರೆ ಯಾವುದೇ ರೀತಿಯ ಹೊಸ ಸಂಬಂಧವು ಚಿಗುರೊಡೆಯದು. ಈ ವರ್ಷ ಈ ರಾಶಿಯವರು ಕೆಲವು ಮಹತ್ತರ ರೀತಿಯ ಪರಿಸ್ಥಿತಿಯನ್ನು ಎದುರಿಸುವುದು ಹಾಗೂ ಶ್ರಮಪಡಬೇಕಾದ ಅನಿವಾರ್ಯತೆ ಇರುವುದು.

  ಸಿಂಹ

  ಸಿಂಹ

  ಇವರ ಸಂಬಂಧಗಳು ನಿರ್ಮಲವಾದ ಆಕಾಶದಂತೆ ಇರದು. ಕೊಂಚ ಗೊಂದಲ ಹಾಗೂ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಮುಂದಿನ 2018ರಲ್ಲಿ ದಾಂಪತ್ಯದ ನಡುವೆ ಸ್ವಲ್ಪ ಬಿರುಕು ಉಂಟಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುವುದು. ನಿಮ್ಮ ಹವ್ಯಾಸ ಹಾಗೂ ವರ್ತನೆಯ ಬಗ್ಗೆ ಕಡಿವಾಣ ಇರಬೇಕು ಉತ್ತಮ ಪ್ರೀತಿ ಹಾಗೂ ಸಂಭಾಷಣೆಯ ಮೂಲಕ ಸಂಬಂಧ ಹೊಂದಾಣಿಕೆ ಕಾಣಬಹುದು.

  ಕನ್ಯಾ

  ಕನ್ಯಾ

  ನೀವು ಸಂಬಂಧದಲ್ಲಿ ಅಥವಾ ಸಂಗಾತಿಯ ವರ್ತನೆ ಹಾಗೂ ನಡವಳಿಕೆಯಲ್ಲಿ ಪರಿಪೂರ್ಣತೆಯನ್ನು ಸದಾ ಹುಡುಕುತ್ತಲೇ ಇರಬೇಕಾಗುವುದು. ಅದರಲ್ಲಿ ಸಂಪೂರ್ಣವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದು. ಏನಾದರೂ ಹೊಸತು ಅಥವಾ ಹೊಸ ಬದಲಾವಣೆಯನ್ನು ನೀವು ಕಾಣಬೇಕು.

   ತುಲಾ

  ತುಲಾ

  2018ರಲ್ಲಿ ನಿಮ್ಮ ಮಾನಸಿಕವಾಗಿ ಹೆಚ್ಚು ನೋವನ್ನು ಅನುಭವಿಸುವ ಸಾಧ್ಯತೆಗಳಿವೆ. ಭಾವನಾತ್ಮ ವಿಚಾರದಲ್ಲಿ ವಿಪರೀತವಾದ ಏರಿಳಿತವನ್ನು ಕಾಣುವಿರಿ. ಇವುಗಳ ನಡುವೆ ನೀವು ದೃಢವಾದ ಒಂದು ನಿರ್ಧಾರಕ್ಕೆ ಬರಬೇಕಾಗುವುದು. ಸಂಗಾತಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗದೆ ವಿಚ್ಛೇದನಪಡೆಯುವ ಸಾಧ್ಯತೆಗಳಿವೆ.

  ವೃಶ್ಚಿಕ

  ವೃಶ್ಚಿಕ

  ಶುಕ್ರ ಮತ್ತು ಮಂಗಳ ಗ್ರಹವು ನಿಮ್ಮ ಕೌಟುಂಬಿಕ ಮನೆಯನ್ನು ಪ್ರವೇಶಿಸುತ್ತವೆ. ಇದು ನಿಮಗೆ ಉತ್ತಮ ಫಲಿತಾಂಶ ನೀಡುವುದು. ಅಲ್ಲದೆ ಸಂಗಾತಿಯ ಹುಡುಕಾದ ವಿಚಾರದಲ್ಲಿ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಜೀವನದ ಉಳಿದ ಸಂಗತಿಗಳ ಬಗ್ಗೆ ಹೆಚ್ಚು ಚಿಂತಿಸದಿರುವಿರಿ. ದಾಂಪತ್ಯ ಜೀವನದ ಸಿದ್ಧತೆಗಾಗಿ ಒಂದಿಷ್ಟು ಹಣವನ್ನು ವ್ಯಯಿಸುವ ಸಾಧ್ಯತೆಗಳಿವೆ.

  ಧನು

  ಧನು

  ಈ ರಾಶಿಯವರಿಗೆ 2018 ಅಷ್ಟು ಶುಭಕರವಾದದ್ದಲ್ಲ. ಕೌಟುಂಬಿಕ ಮನೆಯಲ್ಲಿ ಮಾನಸಿಕ ನೋವು ಉಂಟಾಗುವ ಸಾಧ್ಯತೆಗಳಿವೆ. ನೀವು ನಿಮ್ಮ ಸಂಗಾತಿಯೆಡೆಗೆ ಹೆಚ್ಚು ಗಮನ ಹಾಗೂ ಪ್ರೀತಿಯನ್ನು ತೋರಿಸುವ ಅನಿವಾರ್ಯತೆಗಳಿವೆ. ಹಾಗೊಮ್ಮೆ ನೀವು ಅವುಗಳಿಂದ ದೂರವಾದರೆ ಸಂಬಂಧವನ್ನು ಕಳೆದುಕೊಳ್ಳುವ ನೋವನ್ನು ಅನುಭವಿಸಬೇಕಾಗುವುದು.

  ಮಕರ

  ಮಕರ

  ನಿಮಗೆ 2018ರಲ್ಲಿ ದಾಂಪತ್ಯ ವಿರಸ ಉಂಟಾಗುವ ಸಾಧ್ಯತೆಗಳಿವೆ ಸೂಕ್ತ ಹೊಂದಾಣಿಕೆ ಹಾಗೂ ಸಂವಹನಗಳ ಕೊರತೆ ಇರುವುದು ಹಾಗೂ ಸಂಗಾತಿಗಳ ನಡುವೆ ಸಾಮರಸ್ಯವಿಲ್ಲದೆ ಇರುವ ಕಾರಣಕ್ಕಾಗಿ ಸಂಬಂಧದಿಂದ ಮುಕ್ತಿ ಹೊಂದಲು ದೃಢವಾದ ನಿಲುವನ್ನು ಹೊಂದುವಿರಿ. ಫಲಿತಾಂಶವಾಗಿ ಸಂಗಾತಿಗಳು ಶಾಶ್ವತವಾಗಿ ದೂರ ಹೋಗುವ ಸಾಧ್ಯತೆಗಳಿವೆ.

  ಕುಂಬ

  ಕುಂಬ

  ಮುಂದಿರುವ 2018ರ ವರ್ಷ ನಿಮಗೆ ಉತ್ತಮ ಫಲವನ್ನು ನೀಡಲಿದೆ. ನಿಮ್ಮ ಆಸೆ, ಆಕಾಂಕ್ಷೆಗಳಿಗೆ ಹೊಂದುವ ಹಾಗೂ ನಿಮ್ಮ ಚಿಂತನೆ ಸಂಸ್ಕೃತಿಗಳಲ್ಲಿ ಸಮನಾದ ಆಸಕ್ತಿ ಹಾಗೂ ಸಹಕಾರ ನೀಡುವಂತಹ ಸಂಗಾತಿಯನ್ನು ಒಲಿಸಿಕೊಳ್ಳುವಿರಿ. ಅಂತೆಯೇ ನಿಮ್ಮ ಸಂಬಂಧವು ಗಟ್ಟಿಯಾಗುವುದು.

  ಮೀನ

  ಮೀನ

  2018ರಲ್ಲಿ ವೈವಾಹಿಕ ಜೀವನದಲ್ಲಿ ಅಪಸಾಮಾನ್ಯವಾದದ್ದು ಎನ್ನುವಂತಹ ಚಿಂತನೆಗಳು ಅಥವಾ ಬದಲಾವಣೆಯೇನು ಉಂಟಾಗದು. ಉತ್ತಮ ನಡತೆ ಹಾಗೂ ಹೊಂದಾಣಿಕೆಯಿಂದ ಸಾಮಾನ್ಯವಾಗಿ ನೆರವೇರುವುದು. ಈಗಾಗಲೇ ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದಾದರೆ ಸಂಬಂಧವು ಉತ್ತಮ ಹೊಂದಾಣಿಕೆ ಮತ್ತು ಪ್ರೀತಿ ವಿಶ್ವಾಸದಿಂದ ಮುಂದುವರಿಯುವುದು.

  English summary

  Marriage Horoscope 2018

  Marriage is one of the most magical events of our life and there is a lot that depends on the kind of partner that we get. In this article, we present to the 2018 marriage prospects for all the 12 Zodiac signs. Whether you are single, or in love, or in love and looking out to tie the knot, or married, there is something in it for all of you. Some of you will find the going easy. Like, Capricorn singles who wish to tie the knot will be favored by the stars post-February. Quite a few signs, though, are likely to face challenges in 2018 on the marriage front, and Ganesha has advised you to postpone your plans of ringing in the wedding bells.
  Story first published: Tuesday, January 16, 2018, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more