Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಚ್ಚರಿ ಜಗತ್ತು: ಈತನ ಶಿಶ್ನದಿಂದ ಕೊಂಬು ಬೆಳೆಯುತ್ತಿದೆ!
ಯಾವಾಗ ಅಂತರ್ಜಾಲ ಮಾಹಿತಿಯ ಕಟ್ಟೆಯೊಡೆದು ಜನಸಾಮಾನ್ಯರಿಗೂ ಲಭ್ಯವಾಗಲು ಸಾಧ್ಯವಾಯಿತೋ ಆಗಲೇ ಲಕ್ಷಾಂತರ ಅಚ್ಚರಿಯ ಮಾಹಿತಿಗಳೂ ಲಭ್ಯವಾಗುತ್ತಿವೆ. ಇಂತಹ ಒಂದು ಅಚ್ಚರಿಯ ಮತ್ತು ಬೆಚ್ಚಿಬೀಳಿಸುವ ಮಾಹಿತಿಯೊಂದು ಅಂತರ್ಜಾಲದ ಮೂಲಕ ಲಭ್ಯವಾಗಿದ್ದು ನಿಮ್ಮೊಂದಿಗೆ ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ನೀವು ಈಗಾಗಲೇ ಹಲವಾರು ರೀತಿಯ ವಿಚಿತ್ರ ಸುದ್ದಿಗಳನ್ನು ಇದೇ ವಿಭಾಗದಲ್ಲಿ ಓದಿಕೊಂಡಿದ್ದೀರಿ. ಇಂತಹ ಹಲವಾರು ರೀತಿಯ ಚಿತ್ರವಿಚಿತ್ರವಾಗಿರುವ ಸುದ್ದಿಗಳು ನಿಮಗೆ ತಲುಪಿಸುವುದೇ ನಮ್ಮ ಉದ್ದೇಶ.
ಈ ವಿಚಿತ್ರ ಸುದ್ದಿ ಓದಿ ನಿಮಗೆ ತುಂಬಾ ನಗು ಬರಬಹುದು. ಯಾಕೆಂದರೆ ಈ ಸುದ್ದಿ ಹಾಗೆ ಇದೆ. ತಲೆಯಲ್ಲಿ ಕೊಂಬು ಬೆಳೆಯುವಂತಹ ಸುದ್ದಿಯನ್ನು ನೀವು ಓದಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯ ಶಿಶ್ನದಲ್ಲಿ ಒಂದು ಇಂಚಿನ ಕೊಂಬು ಬೆಳೆಯುತ್ತಿದೆ! ಇದು ನಿಮಗೆ ತುಂಬಾ ವಿಚಿತ್ರವೆನಿಸಬಹುದು. ಆದರೆ ಇದು ನಿಜ. ಈ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿಕೊಳ್ಳಿ...

ಇದು ನಡೆದಿರುವುದು ಭಾರತದಲ್ಲೇ…
ಈ ವಿಚಿತ್ರ ಪ್ರಕರಣವು ಭಾರತದಲ್ಲೇ ನಡೆದಿರುವುದು. 60ರ ಹರೆಯದ ವ್ಯಕ್ತಿಯ ಶಿಶ್ನದಲ್ಲಿ ಕೊಂಬು ಮೂಡುತ್ತಿದೆ. ವೈದ್ಯರ ಪ್ರಕಾರ ಇದು ಶಸ್ತ್ರಚಿಕಿತ್ಸೆಯ ಅಡ್ಡ ಪರಿಣಾಮದಿಂದ ಆಗಿರುವುದು.

ಶಸ್ತ್ರಚಿಕಿತ್ಸೆ ಬಳಿಕ ಕೊಂಬು ಬೆಳೆದಿದೆ
ಈ ವ್ಯಕ್ತಿಯು ಎರಡು ತಿಂಗಳ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರ ಬಳಿಕ ಆ ವ್ಯಕ್ತಿಗೆ ಶಿಶ್ನದ ಬುಡದಲ್ಲಿ ತುಂಬಾ ವಿಚಿತ್ರವಾಗಿರುವುದು ಬೆಳೆಯುತ್ತಿರುವುದು ಕಂಡುಬಂದಿದೆ.

ವೈದ್ಯರು ಇದನ್ನು ಪರೀಕ್ಷಿಸಿ, ತೆಗೆದರು
ಈ ಅಸಾಮಾನ್ಯ ಬೆಳವಣಿಗೆ ಬಗ್ಗೆ ವ್ಯಕ್ತಿಯು ವೈದ್ಯರಿಗೆ ತಿಳಿಸಿದಾಗ, ಅವರು ಇದನ್ನು ತೆಗೆದುಹಾಕಿದರು. ಆದರೆ ಕೆಲವು ದಿನಗಳ ಬಳಿಕ ಮತ್ತೆ ಹಿಂದಿಗಿಂತ ದೊಡ್ಡದಾಗಿ ಬೆಳೆಯಲು ಆರಂಭಿಸಿದೆ.

ಕೊಂಬಿನ ಬೆಳವಣಿಗೆ
ಶಿಶ್ನದ ಚರ್ಮದಿಂದ ಇದು ಬೆಳೆಯುತ್ತಿದ್ದು, ಇದರ ಬಣ್ಣವು ಹಳದಿ ಮತ್ತು ಕಂದು ಆಗಿದೆ. ಎರಡನೇ ಸಲ ತಜ್ಞರು ಇದನ್ನು ತೆಗೆದಿದ್ದಾರೆ. ಇದರ ಬಯೊಸ್ಪಿ ಕೂಡ ಮಾಡಲಾಗಿದೆ. ಇದು ಕ್ಯಾನ್ಸರ್ ಗಡ್ಡೆಯಲ್ಲವೆಂದು ದೃಢವಾಗಿದೆ.

ಆ ವ್ಯಕ್ತಿಗೆ ಚಿಕಿತ್ಸೆ ನೀಡಲಾಯಿತು
ವೈದ್ಯರು ಎರಡನೇ ಬಾರಿಗೆ ಈ ಕೊಂಬನ್ನು ತೆಗೆದುಹಾಕಿದ್ದಾರೆ. ಆದರೆ ಇದರಿಂದ ವ್ಯಕ್ತಿಯ ಶಿಶ್ನಕ್ಕೆ ಯಾವುದೇ ಹಾನಿಯಾಗಿಲ್ಲವೆಂದು ಹೇಳಿದ್ದಾರೆ.

ಯಾಕೆ ಹೀಗೆ?
ಶಿಶ್ನದ ಚರ್ಮದಲ್ಲಿ ಬೆಳೆಯುತ್ತಿದ್ದ ಕೊಂಬು ಕೆರಟೈನ್ ಅತಿಯಾಗಿ ಬೆಳವಣಿಗೆಯಿಂದ ಆಗಿದೆ. ಈ ಪ್ರೋಟೀನ್ ಕೂದಲು, ಚರ್ಮ ಮತ್ತು ಉಗುರಿನ ಬೆಳವಣಿಗೆಗೆ ನೆರವಾಗುವುದು. ಇಂತಹ ಇನ್ನಷ್ಟು ವಿಚಿತ್ರ ಸುದ್ದಿಗಳನ್ನು ನೀವು ಓದಬೇಕೆಂದುಕೊಂಡಿದ್ದೀರಾ? ಇದೇ ವಿಭಾಗದಲ್ಲಿ ನೀವು ವಿಶ್ವದೆಲ್ಲೆಡೆಯ ವಿಚಿತ್ರ ಸುದ್ದಿಗಳನ್ನು ಓದಿಕೊಳ್ಳಬಹುದು



Click it and Unblock the Notifications
