Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಪುರುಷರು ಹಸ್ತಮೈಥುನ ಮಾಡಿಕೊಳ್ಳಲು ಇಷ್ಟಪಡುವುದು ಯಾಕೆ? ಇಲ್ಲಿದೆ ಎಂಟು ಕಾರಣಗಳು
ಕಾಮವೆನ್ನುವುದು ಅಗ್ನಿಯ ಹಾಗೆ. ಅದನ್ನು ಹಿಡಿದಿಟ್ಟುಕೊಳ್ಳುವುದು ತುಂಬಾ ಅಪಾಯಕಾರಿ ಎನ್ನುವ ಮಾತಿದೆ. ಪ್ರಕೃತಿ ಸಹಜವಾಗಿರುವಂತಹ ಮನುಷ್ಯನ ಲಕ್ಷಣಗಳಲ್ಲಿ ಕಾಮ ಕೂಡ ಒಂದು. ಇದರಿಂದಾಗಿಯೇ ಮನುಷ್ಯ ಕೂಡ ವೈವಾಹಿಕ ಜೀವನ ನಡೆಸುವುದು. ಅದರಲ್ಲೂ ಪುರುಷರು ಪ್ರತೀ ಏಳು ಸೆಕೆಂಡಿಗೆ ಒಮ್ಮೆ ಇದರ ಬಗ್ಗೆ ಆಲೋಚಿಸುತ್ತಾರಂತೆ.
ಇದರಿಂದಾಗಿಯೇ ಅವರು ಹೆಚ್ಚಾಗಿ ಹಸ್ತಮೈಥುನ ಮಾಡಿಕೊಳ್ಳುವುದು! ಹೆಚ್ಚಿನ ಮಹಿಳೆಯರಿಗೆ ಪುರುಷರು ಯಾಕೆ ಹಸ್ತಮೈಥುನ ಮಾಡಿಕೊಳ್ಳುವರು ಎನ್ನುವ ಬಗ್ಗೆ ಗೊಂದಲಗಳು ಇವೆ. ನಾವು ಈ ಲೇಖನದಲ್ಲಿ ಅದನ್ನು ಬಗೆಹರಿಸಲಿದ್ದೇವೆ. ಪುರುಷರು ಹಸ್ತಮೈಥುನ ಮಾಡಿಕೊಳ್ಳಲು ಇರುವಂತಹ ಕೆಲವು ಆಸಕ್ತಿದಾಯಕ ಹಾಗೂ ತಮಾಷೆಯ ಕಾರಣಗಳು ಇಲ್ಲಿವೆ....
ಇದರಲ್ಲಿ ಹೆಚ್ಚು ಗೊಂದಲ ಮೂಡಿಸುವುದು ಯಾವುದೆಂದರೆ, ಕೆಲವೊಂದು ಸಲ ಪುರುಷರು ಮದುವೆಯಾದ ಬಳಿಕ ಕೂಡ ಹಸ್ತಮೈಥುನ ಮಾಡಿಕೊಳ್ಳುವರು. ಇದು ಮಹಿಳೆಗೆ ಗೊಂದಲವನ್ನು ಉಂಟು ಮಾಡುವುದು ಮತ್ತು ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಪುರುಷರು ಹಸ್ತಮೈಥುನ ಮಾಡಿಕೊಳ್ಳಲು ಕಾರಣಗಳು ಏನು ಎಂದು ಸ್ಕ್ರೋಲ್ ಡೌನ್ ಮಾಡುತ್ತಾ ತಿಳಿಯಿರಿ...

ಒತ್ತಡ ನಿವಾರಣೆಗೆ
ಪುರುಷರು ತುಂಬಾ ವಿಚಿತ್ರವಾಗಿರುವ ವಿಧಾನದ ಮೂಲಕ ತಮ್ಮ ಒತ್ತಡವನ್ನು ಹೊರಗೆ ಹಾಕಲು ಬಯಸುವರು. ಪುರುಷರು ಒತ್ತಡ ನಿವಾರಣೆಗೆ ತಮ್ಮ ನೆಚ್ಚಿನ ಯಾವುದಾದರೂ ಆಟದಲ್ಲಿ ತೊಡಗಿಕೊಳ್ಳುವರು ಅಥವಾ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ತಮ್ಮ ಒತ್ತಡ ನಿವಾರಣೆ ಮಾಡುವರು.

ತುಂಬಾ ಬೋರ್ ಆದಾಗ
ಮಾಡಲು ಯಾವುದೇ ರೀತಿಯ ಆಸಕ್ತಿಯ ಕೆಲಸಗಳು ಇಲ್ಲದೆ ಇರುವಾಗ ಅವರು ಹಸ್ತಮೈಥುನ ಮಾಡಿಕೊಳ್ಳುವರು. ಇದು ತುಂಬಾ ಆಕ್ರಮಣಕಾರಿ ಶಬ್ಧಗಳು. ಇದು ಪುರುಷರ ಮೊಣಚನ್ನು ಹೇಳುವುದು. ಆದರೆ ಕಾರಣವಿಲ್ಲದೆ ಅವರು ಹಸ್ತಮೈಥುನ ಮಾಡಿಕೊಳ್ಳುವರು.

ಮನೆಯಲ್ಲಿ ಏಕಾಂಗಿಯಾಗಿರುವಾಗ
ಮನೆಯಲ್ಲಿ ಏಕಾಂಗಿಯಾಗಿರುವುದ ತುಂಬಾ ಅಪರೂಪ ಮತ್ತು ಇದು ಪುರುಷರಿಗೆ ಒಂದು ಅವಕಾಶ ನೀಡುವುದು. ಈ ಸಣ್ಣ ಸಮಯದ ಲಾಭ ಪಡೆದುಕೊಳ್ಳುವನು ಮತ್ತು ಅದರಿಂದ ತನ್ನ ತೃಪ್ತಿಯನ್ನು ಪೂರೈಸಿಕೊಳ್ಳುವನು.

ಇಲ್ಲಿ ಪ್ರದರ್ಶನದ ಚಿಂತೆಯಿಲ್ಲ!
ಹಸ್ತಮೈಥುನವೆನ್ನುವುದು ಸಂಪೂರ್ಣವಾಗಿ ಪುರುಷರ ಪ್ರದರ್ಶನ ಮತ್ತು ಇದರಲ್ಲಿ ಪ್ರಯೋಗ ಮಾಡುವುದಕ್ಕೆ ಅನುಮತಿಯಿದೆ. ಮಹಿಳೆಯನ್ನು ಓಲೈಸಿಕೊಂಡು ತನ್ನ ಪ್ರದರ್ಶನದ ಬಗ್ಗೆ ಚಿಂತಿಸಬೇಕಿಲ್ಲ.

ಸ್ವಪ್ನ ಸ್ಖಲನ ತಡೆಯಲು!
ದೀರ್ಘಕಾಲದಿಂದ ಪುರುಷರು ಹಸ್ತಮೈಥುನ ಮಾಡದೆ ಇದ್ದರೆ ಆಗ ಸ್ವಪ್ನ ಸ್ಖಲನವಾಗುವುದು ಮತ್ತು ಇದರಿಂದ ಬೆಳಗ್ಗೆ ಎದ್ದ ಬಳಿಕ ಎಲ್ಲವನ್ನು ಸ್ವಚ್ಛಗೊಳಿಸಬೇಕು. ಇಂತಹ ಸ್ವಪ್ನ ತಪ್ಪಿಸಲು ಹಸ್ತಮೈಥುನ ಮಾಡಿಕೊಳ್ಳುವರು.

ಹ್ಯಾಂಗ್ ಓವರ್ ನಿವಾರಣೆಗೆ
ಹ್ಯಾಂಗ್ ಓವರ್ ನಿಂದ ಹೊರಬರಲು ಕೆಲವರು ಹಸ್ತಮೈಥುನ ಮಾಡಿಕೊಳ್ಳುವರು. ಇದರಿಂದ ರಕ್ತವು ಮೆದುಳಿಗೆ ಸಂಚಾರವಾಗಿ ಎಲ್ಲಾ ಕ್ರಿಯೆಗಳು ಆರಂಭವಾಗುವುದು. ಹ್ಯಾಂಗ್ ಓವರ್ ಹೆಸರಿನಲ್ಲಿ ಪುರುಷರು ಹಸ್ತಮೈಥುನದ ಲಾಭ ಪಡೆಯುವರು.

ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇರುವಾಗ
ಜೀವನಸಂಗಾತಿಯ ಕೊರತೆ ಇದ್ದಾಗ ಪುರುಷರು ಹೆಚ್ಚಾಗಿ ಹಸ್ತಮೈಥುನ ಮಾಡಿಕೊಳ್ಳುವರು. ಇದರಿಂದ ಅವರು ತಮ್ಮ ಲೈಂಗಿಕಾಸಕ್ತಿ ನಿವಾರಿಸಿಕೊಳ್ಳುವರು.

ತುಂಬಾ ಸುರಕ್ಷಿತ ಸೆಕ್ಸ್
ಪುರುಷರು ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಯಾವುದೇ ರೀತಿಯ ಲೈಂಗಿಕ ರೋಗಗಳು ಬರುತ್ತದೆ ಎಂದು ಹೆದರಿಕೊಳ್ಳಬೇಕಾದ ಅಗತ್ಯವಿಲ್ಲ. ಬೇರೆ ಯಾವುದೇ ಕಾರಣಗಳು ಇದೆ ಎಂದು ನಿಮಗನಿಸುತ್ತಲಿದ್ದರೆ ಖಂಡಿತವಾಗಿಯೂ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

ನೆನಪಿಡಿ
ಯಾವುದೇ ಅಂಗವನ್ನು ಅದರ ಕ್ಷಮತೆಗೂ ಮೀರಿ ಬಳಸಿದರೆ ಏನಾಗುತ್ತದೆ? ಇದು ತನ್ನ ಕ್ಷಮತೆಯನ್ನೇ ಕಳೆದುಕೊಳ್ಳುತ್ತದೆ. ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳಾದ ಗುಪ್ತಾಂಗಗಳೂ ಅಷ್ಟೇ. ಇದರ ಕ್ಷಮತೆ ಮೀರಿ ಈ ಕ್ರಿಯೆ ನಡೆಸುವ ಮೂಲಕ ನಿಮಿರು ದೌರ್ಬಲ್ಯ, ಪೂರ್ಣ ನಿಮಿರುತನ ಪಡೆಯಲು ಅಸಮರ್ಥತೆ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳುವ ಸಮಯದಲ್ಲಿ ಎದುರಾಗುವ ವೈಫಲ್ಯ ಮೊದಲಾದ ತೊಂದರೆಗಳು ಎದುರಾಗುತ್ತವೆ. ವ್ಯಸನದ ಪರಿಣಾಮವಾಗಿ ತೊಡೆಸಂಧುಗಳ ಸ್ನಾಯುಗಳು ಶಿಥಿಲಗೊಳ್ಳುತ್ತವೆ ಹಾಗೂ ಲೈಂಗಿಕ ಕ್ರಿಯೆಗೆ ಅಗತ್ಯವಾದ ಶಕ್ತಿಯನ್ನು ಹೊಂದಲು ಸಾಧ್ಯವಾಗದೇ ಲೈಂಗಿಕ ಚಟುವಟಿಕೆಯೇ ಸಾಧ್ಯವಾಗದೇ ಹೋಗಬಹುದು. ಕೆಲವು ಸಂದರ್ಭಗಳಲ್ಲಿ ಈ ವ್ಯಕ್ತಿಗಳು ಸಂಗಾತಿಯೊಂದಿಗಿನ ಮಿಲನಕ್ಕಿಂತಲೂ ಹಸ್ತಮೈಥುನದಲ್ಲಿಯೇ ತಮ್ಮ ಮನಸ್ಸಿಗೆ ಹೆಚ್ಚಿನ ತೃಪ್ತಿಯನ್ನು ಕಂಡುಕೊಂಡಿದ್ದು ಇದು ದಾಂಪತ್ಯ ಜೀವನವೇ ಬಾಧೆಗೊಳಗಾಗಬಹುದು.



Click it and Unblock the Notifications











