For Quick Alerts
ALLOW NOTIFICATIONS  
For Daily Alerts

ಮಾರ್ಚ್ ತಿಂಗಳಲ್ಲಿ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

By Deepu
|

ಅದೃಷ್ಟ ಎನ್ನುವುದು ಗ್ರಹಗತಿಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಹೊಸ ವರ್ಷದ ಆರಂಭದಲ್ಲಿರುವ ನಾವು ಹೊಸ ಕನಸುಗಳನ್ನು ಹಾಗೂ ಅದೃಷ್ಟಗಳನ್ನು ಹುಡುಕುವುದು ಸಾಮಾನ್ಯ. ಆದರೆ ನಮ್ಮ ಕುಂಡಲಿ ಹಾಗೂ ರಾಶಿಚಕ್ರಗಳ ಅನುಸಾರ ನಮ್ಮ ಜೀವನದ ಆಗು ಹೋಗುಗಳು ನಿರ್ಧಾರವಾಗುತ್ತದೆ. ಕೆಲವು ರಾಶಿಚಕ್ರದವರಿಗೆ ಅದೃಷ್ಟವನ್ನು ತಂದರೆ ಇನ್ನೂ ಕೆಲವು ರಾಶಿಚಕ್ರಗಳಿಗೆ ದುರಾದೃಷ್ಟ ಕಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಮಯ ಹಾಗೂ ಸಂದರ್ಭ ನಮ್ಮ ಜೀವನದಲ್ಲಿ ಹೇಗೆ ತಿರುವನ್ನು ನೀಡುತ್ತದೆಯೋ ಹಾಗೆ ಮುಂದುವರಿಯುವುದು ಉತ್ತಮ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2018ರ ವರ್ಷ ಅನೇಕ ಉತ್ತಮ ಫಲಗಳನ್ನು ನೀಡಲಿದೆ. ಅದರಲ್ಲೂ ಕೆಲವು ರಾಶಿಚಕ್ರದವರಿಗೆ ಮಾರ್ಚ್ ತಿಂಗಳು ಅಧಿಕ ಮಟ್ಟದ ಅದೃಷ್ಟವನ್ನು ನೀಡುತ್ತದೆ. ಕೆಲವರಿಗೆ ಜೀವನದಲ್ಲಿ ಅದ್ಭುತವಾದ ತಿರುವನ್ನು ನೀಡಲಿದೆ. ಇನ್ನೂ ಕೆಲವರಿಗೆ ಸಮಾಧಾನಕರವಾದ ಸ್ಥಿತಿ ಮುಂದುವರಿಯುವುದು ಎಂದು ಹೇಳುತ್ತದೆ. ನಿಮಗೆ ನಿಮ್ಮ ರಾಶಿ ಚಕ್ರದ ಅನುಸಾರ ಯಾವೆಲ್ಲಾ ಅದೃಷ್ಟ ದೊರೆಯಬಹುದೇ? ಮಾರ್ಚ್ ತಿಂಗಳ ಅದೃಷ್ಟ ರಾಶಿಚಕ್ರದವರಲ್ಲಿ ನೀವು ಇದ್ದೀರಾ? ಎನ್ನುವುದನ್ನು ತಿಳಿಯಲು ಮುಂದೆ ಓದಿ...

1.ಕರ್ಕ

1.ಕರ್ಕ

ಈ ರಾಶಿ ಚಕ್ರದವರಿಗೆ ಮಾರ್ಚ್ ತಿಂಗಳು ಅದೃಷ್ಟವನ್ನು ನೀಡುವುದು. ಅನೇಕ ಕೆಲಸಗಳನ್ನು ಈ ತಿಂಗಳಲ್ಲಿ ಮಾಡಿ ಮುಗಿಸಲಿದ್ದಾರೆ. ಈ ತಿಂಗಳಲ್ಲಿ ತಮ್ಮ ಹೆಚಿನ ಶ್ರಮ ಹಾಗೂ ಸಮಯವನ್ನು ಕೆಲಸದಲ್ಲಿ ವ್ಯಯಿಸುವರು. ಇದಕ್ಕೆ ಪ್ರತಿಫಲವಾಗಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಮಾರ್ಚ್ ತಿಂಗಳು ಉತ್ತಮವಾದ ಅಥವಾ ಫಲಪ್ರದವಾದ ತಿಂಗಳು ಎಂದು ಹೇಳಬಹುದು.

ಕರ್ಕ

ಕರ್ಕ

ಇನ್ನು ಇವರು ಸಾಕಷ್ಟು ಸ್ವಯಂ ಆತ್ಮಾವಲೋಕನವನ್ನು ಮಾಡಬೇಕಾಗುತ್ತದೆ. ಜೀವನದಲ್ಲಿ ಯಶಸ್ವಿಯಾಗಿ ಮುಂದುವರಿಯಲು ಸರಿಯಾದ ತೀರ್ಮಾನವನ್ನು ಮಾಡಬೇಕಾಗುತ್ತದೆ. ಅವರು ಕೆಲಸದಲ್ಲಿ ಸೃಜನಾತ್ಮಕ ಯೋಚನೆಗಳೊಂದಿಗೆ ಬರಬೇಕು. ಹಳೆಯ ಪರಿಕಲ್ಪನೆಗಳನ್ನು ಬಿಟ್ಟುಬಿಡಬೇಕು. ತಿಂಗಳ ಅಂತ್ಯದ ವೇಳೆಗೆ ಅವುಗಳು ಅದೃಷ್ಟ ಪಡೆಯುತ್ತವೆ. ಏಕೆಂದರೆ ಮೋಡಗಳು ತೆರವುಗೊಳ್ಳುತ್ತವೆ ಮತ್ತು ಪ್ರಕಾಶಮಾನವಾದ ಸೂರ್ಯನನ್ನು ಬಹಿರಂಗಪಡಿಸುತ್ತವೆ. ಅವರು ತಮ್ಮ ಅಂತಃಪ್ರಜ್ಞೆಯ ಮೂಲಕ ಹೋಗಿ ಈ ಸಮಯದಲ್ಲಿ ಹೊಸದನ್ನು ರಚಿಸಬೇಕಾಗಿದೆ. ಸಲಹೆ: ತಮ್ಮ ಪ್ರಿಯವಾದ ಜೀವನವನ್ನು ಭದ್ರಪಡಿಸುವ ಕಡೆಗೆ ಅವರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಮತ್ತು ಅವರಿಗೆ ದೀರ್ಘಕಾಲದವರೆಗೆ ಹಣಪಾವತಿ ಮಾಡಬೇಕು.

2. ಮಕರ

2. ಮಕರ

ಈ ರಾಶಿಯವರಿಗೆ ಉತ್ತಮವಾದ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ವ್ಯವಹಾರ ನಡೆಸುತ್ತಿರುವವರಿಗೆ ತಮ್ಮ ಆದಾಯದಲ್ಲಿ ತಕ್ಷಣದ ಆರ್ಥಿಕ ಹರಿವನ್ನು ಕಾಣುವರು. ಕೆಲಸವು ಈ ತಿಂಗಳಲ್ಲಿ ದುಪ್ಪಟ್ಟಾಗುವುದು. ಇವರ ಲಾಭವೂ ಸಹ ನಾಲ್ಕು ಬಾರಿ ದೊರೆಯುವುದು. ಪೂರ್ಣವಾಗದ ಇವರ ಕೆಲಸವು ಈ ತಿಂಗಳ ಕೊನೆಯಲ್ಲಿ ಪೂರ್ಣಗೊಳ್ಳುವುದು.

3. ಧನು

3. ಧನು

ಈ ರಾಶಿಯವರಿಗೆ ಈ ತಿಂಗಳು ಒಂದು ಅದೃಷ್ಟದ ತಿಂಗಳಾಗಲಿದೆ. ಇವರ ವ್ಯವಹಾರದಲ್ಲಿ ಬಾರಿ ಲಾಭ ಉಂಟಾಗುವುದು. ಜೊತೆಗೆ ಹೊಸ ವ್ಯವಹಾರಗಳ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಇದರೊಟ್ಟಿಗೆ ಉತ್ತಮ ಲಾಭವನ್ನು ಗಳಿಸುವರು. ಹೊಸ ಕೆಲಸಗಳಿಗೆ ಕೈಹಾಕುವ ಸಾಧ್ಯತೆಗಳಿವೆ. ಇವರು ಪ್ರಯತ್ನಿಸುವ ಎಲ್ಲಾ ಕೆಲಸವು ಯಶಸ್ಸು ಹಾಗೂ ಲಾಭವನ್ನು ತಂದುಕೊಡಲಿದೆ.

4. ಸಿಂಹ

4. ಸಿಂಹ

ಈ ರಾಶಿವರಿಗೆ ಸಂಬಂಧದಲ್ಲಿ ಅತ್ಯುತ್ತಮವಾದ ಫಲವನ್ನು ಕಾಣಲಿದ್ದಾರೆ. ಪಾಲುದಾರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಇದಲ್ಲದೆ ವ್ಯವಹಾರದಲ್ಲೂ ಭಾರಿ ಲಾಭವನ್ನು ಗಳಿಸುವರು. ಇನ್ನೊಂದೆಡೆ ಹಣದ ವಹಿವಾಟಿನ ಅಪಾಯಗಳು ಇರಬಹುದು. ಅವರು ತಮ್ಮ ಗುರಿಯ ಬಗ್ಗೆ ನೆನಪಿಟ್ಟುಕೊಳ್ಳಬೇಕು. ಇತರರನ್ನು ಸುಲಭವಾಗಿ ನಂಬದಿರುವುದು ಒಳಿತು. ನಿರುದ್ಯೋಗದಲ್ಲಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.

ಸಿಂಹ

ಸಿಂಹ

ತಮ್ಮ ಸಂಬಂಧಗಳನ್ನು ಸರಿಪಡಿಸಲು ಈ ತಿಂಗಳು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಇವರು ತಮ್ಮ ವಸ್ತುಗಳ ಮೇಲ್ಮೈಗೆ ಆಳವಾಗಿ ನೋಡಬೇಕು. ಜೀವನದ ಬಗ್ಗೆ ಹೊಸದನ್ನು ಮತ್ತು ಮೌಲ್ಯಯುತವಾದದನ್ನು ಕಲಿಯಬೇಕು. ಮತ್ತೊಂದೆಡೆ ಅವರು ಹೊರನೋಟದ ಗೋಚರದಿಂದ ಎಚ್ಚರವಾಗಿರಬಾರದು ಮತ್ತು ಸಾಗಿಸಬಾರದು. ಸಲಹೆ: ಅವರು ಮುಂಬರುವ ಕಾರ್ಯಗಳಿಗಾಗಿ ಚೆನ್ನಾಗಿ ತಯಾರು ಮಾಡಬೇಕಾಗುತ್ತದೆ. ಹತ್ತಿರದ ಮತ್ತು ಆತ್ಮೀಯ ವ್ಯಕ್ತಿಗಳೊಂದಿಗೆ ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುವಲ್ಲಿ ಗಮನಹರಿಸಬೇಕು.

English summary

Lucky Zodiacs For The Month Of March

It's the third month of 2018 and astrology reveals the list of zodiac signs that are going to experience this month as a boon! According to astrology, March 2018 is said to be extremely beneficial for 4 such zodiac signs. While some people will get new jobs, some will experience an influx of money, while a few will open up to new ways of earning a good amount of money and fame.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more