For Quick Alerts
ALLOW NOTIFICATIONS  
For Daily Alerts

2019ರ ಅದೃಷ್ಟ ಹಾಗೂ ದುರಾದೃಷ್ಟದ ರಾಶಿಚಕ್ರಗಳ ಕಂಪ್ಲೀಟ್ ಡಿಟೇಲ್ಸ್

|

ಹೊಸ ವರ್ಷದ ಆರಂಭ ಎಂದರೆ ಎಲ್ಲರಿಗೂ ಅದೇನೋ ಒಂದು ಬಗೆಯ ಸಂಭ್ರಮ ಮತ್ತು ಸಡಗರ. ಆ ಸಡಗರವು ವರ್ಷಪೂರ್ತಿ ಇರಬೇಕೆಂದು ಸಹ ಬಯಸುತ್ತಾರೆ. ಅದೃಷ್ಟ ಎನ್ನುವುದು ಅವರವರ ರಾಶಿಚಕ್ರಗಳಿಗೆ ಅನುಗುಣವಾಗಿರುವುದರಿಂದ ಎಲ್ಲರಿಗೂ ಒಂದೇ ರೀತಿಯ ಅದೃಷ್ಟವು ಒಲಿದು ಬರುವುದಿಲ್ಲ. ಕೆಲವರಿಗೆ ಸಾಕಷ್ಟು ಶ್ರಮದಿಂದ ಯಶಸ್ಸು ಅಥವಾ ಅದೃಷ್ಟ ಒಲಿಯಬಹುದು. ಅದೇ ಕೆಲವರಿಗೆ ಪ್ರಯತ್ನವಿಲ್ಲದೆಯೇ ಅದೃಷ್ಟ ಎನ್ನುವುದು ಬಹಳ ಸುಲಭವಾಗಿ ದೊರೆಯುವುದು.

ಹೊಸ ವರ್ಷದ ಸಂಭ್ರಮವು ಕೆಲವರಿಗೆ ಆ ದಿನಕ್ಕೆ ಮಾತ್ರ ಸೀಮಿತವಾಗಿರಬಹುದು. ಸಾಕಷ್ಟು ತೊಂದರೆಗಳು ಹಾಗೂ ಅಸಹನೀಯ ಸಂಗತಿಗಳು ಎದುರಾಗಬಹುದು. ಅದು ಅವರ ಜೀವನದಲ್ಲಿ ಕಷ್ಟದ ಸಮಯ ಅಥವಾ ಯಾವುದೋ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ಇದ್ದ ಕಷ್ಟದ ಹಾದಿ ಎಂದು ಸಹ ಹೇಳಬಹುದು. ಆ ವರ್ಷಕ್ಕೆ ಅದು ಅವರ ಪಾಲಿಗೆ ದುರಾದೃಷ್ಟದ ವರ್ಷ ಎಂದು ಸಹ ಅನಿಸಬಹುದು. ಅದೇ ಮುಂದೆ ಬರುವ ವರ್ಷಗಳಿಂದ ಸಾಕಷ್ಟು ಒಳ್ಳೆಯ ಸಮಯಗಳು ಅವಕಾಶಗಳು ಕಾದಿರಬಹುದು. ಹಾಗಾಗಿ ಬಂದ ಪರಿಸ್ಥಿತಿ ಹಾಗೂ ವಿಷಯಗಳ ಬಗ್ಗೆ ಸಾಕಷ್ಟು ತಾಳ್ಮೆಯಿಂದ ಕುಳಿತು ಚಿಂತನೆ ನಡೆಸಿದರೆ ಪರಿಹಾರಗಳು ಹಾಗೂ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ....

2019ರ ವರ್ಷದ ಅದೃಷ್ಟ ಹಾಗೂ ದುರಾದೃಷ್ಟ

2019ರ ವರ್ಷದ ಅದೃಷ್ಟ ಹಾಗೂ ದುರಾದೃಷ್ಟ

ಅದೃಷ್ಟ ಎನ್ನುವುದು ಅಥವಾ ಉತ್ತಮ ಸಮಯವು ನಮಗೆ ದೊರೆಯಬೇಕು ಎಂದರೆ ನಮ್ಮ ಕುಂಡಲಿ, ಗ್ರಹಗತಿಗಳು ಹಾಗೂ ರಾಶಿಚಕ್ರಗಳ ಪ್ರಭಾವ ಅನುಕೂಲಕರವಾದ ರೀತಿಯಲ್ಲಿ ಇರಬೇಕು. 2019ರಲ್ಲಿ ನಡೆಯುವ ಗ್ರಹಗಳ ಚಲನೆ ಅಥವಾ ಬದಲಾವಣೆಯು ಕೆಲವರಿಗೆ ಉತ್ತಮ ಅದೃಷ್ಟವನ್ನು ಹಾಗೂ ಕೆಲವರಿಗೆ ದುರಾದೃಷ್ಟವನ್ನು ತಂದೊಡ್ಡಬಹುದು. ಅದನ್ನು ಸಮನಾದ ರೀತಿಯಲ್ಲಿ ಸ್ವೀಕರಿಸಿ, ಸನ್ನಿವೇಶಗಳನ್ನು ಎದುರಿಸುವುದು ನಮ್ಮ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ರಾಶಿಚಕ್ರದ ಪ್ರಕಾರ 2019ರ ವರ್ಷ ಅದೃಷ್ಟವನ್ನು ತರುವುದೇ ಅಥವಾ ದುರಾದೃಷ್ಟವನ್ನು ಅನುಭವಿಸಬೇಖಾಗುವುದೇ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದೆ ಎಂದಾದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಗಳನ್ನು ಪರಿಶೀಲಿಸಿ. ನಿಮ್ಮ ಅದೃಷ್ಟವನ್ನು ಎದುರಿಸಲು ಸಿದ್ಧರಾಗಿ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಸ್ವಭಾವತಃ ಹುಟ್ಟಿನಿಂದಲೇ ತೀರಾ ನಿಗೂಢವಾದ ಸೆಳೆವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಕೆಲವೊಮ್ಮೆ ತೋರುವ ಸ್ವಾಮ್ಯ ಸೂಚಕ ಸ್ವಭಾವ ಹಾಗೂ ರಹಸ್ಯ ನಡವಳಿಕೆಯಿಂದ ಇದು ನಿಜವಾಗಿದೆ. ಇವರು ತಮಗೆ ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಕಷ್ಟು ಸಾಧನೆಯನ್ನು ಮಾಡುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇಲ್ಲಿಯ ವರೆಗೆ ಇವರಿಗೆ ವೃತ್ತಿ ಕ್ಷೇತ್ರದಲ್ಲಿ ಹಾಗೂ ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಕಷ್ಟ ಹಾಗೂ ಅನಾನುಕೂಲತೆಯನ್ನು ಎದುರಿಸುತ್ತಿದ್ದರಾದರೂ ಮುಂದಿನ ವರ್ಷ ಅಂದರೆ 2019ರ ವರ್ಷವು ಅವರಿಗೆ ಸಾಕಷ್ಟು ಅದೃಷ್ಟವನ್ನು ತಂದುಕೊಡುವುದು. 2019ರಲ್ಲಿ ಇವರು ಕೈಗೊಳ್ಳುವ ಕೆಲಸ ಅಥವಾ ಹೊಸ ಯೋಜನೆಗಳು ಉತ್ತಮ ರೀತಿಯಲ್ಲಿ ಯಸ್ಸನ್ನು ಸಾಧಿಸಲು ಸಹಾಯ ಮಾಡುವುದು.

Most Read:ಸಂಖ್ಯಾ ಶಾಸ್ತ್ರದ ಪ್ರಕಾರ 2019ರಲ್ಲಿ, ನಿಮ್ಮ ಭವಿಷ್ಯ ಹೇಗಿದೆ ಎಂದು ನೋಡಿ

ಧನು

ಧನು

ಗುರುವಿನ ಆಳ್ವಿಕೆಗೆ ಒಳಗಾಗುವ ಧನು ರಾಶಿಯವರು 2019ರ ವರ್ಷದಲ್ಲಿ ಸಾಕಷ್ಟು ಅನುಗ್ರಹವನ್ನು ಪಡೆದುಕೊಳ್ಳುವರು. ಅವರು ಅಂದುಕೊಂಡಂತಹ ಕೆಲಸ ಕಾರ್ಯಗಳು ಅತ್ಯುತ್ತಮ ರೀತಿಯಲ್ಲಿ ನೆರವೇರುವುದು. ಮೋಡಗಳ ರಾಶಿಯಲ್ಲಿ ಬೆಳ್ಳಿಯ ಪರದೆಯನ್ನು ಕಾಣುವಂತಹ ಮಹತ್ವಾಕಾಂಕ್ಷೆಯ ವ್ಯಕ್ತಿಗಳು ಇವರು. ಇವರ ಇಂತಹ ಒಂದು ಆಕಾಂಕ್ಷೆಗಳಂತಹ ಬಯಕೆಗಳು ಸಹ ನೆರವೇರುವುದು ಎಂದು ಹೇಳಲಾಗುವುದು. ಕೆಲವು ಕಠಿಣ ಸಮಯಗಳು ಎದುರಾಗಬಹುದು ಆದರೆ ಸನ್ನಿವೇಶಗಳ ಮೂಲಕ ಅತ್ಯುತ್ತಮ ಸಮಯವು ತಂಗಾಳಿಯಂತೆ ಅನುಕೂಲತೆಯನ್ನು ಕಲ್ಪಿಸಿಕೊಡುವುದು.

ಸಿಂಹ

ಸಿಂಹ

ಸದಾ ಕೇಂದ್ರ ವ್ಯಕ್ತಿಯಂತೆ ಆಕರ್ಷಿಸಲ್ಪಡುವವರು ಸಿಂಹ ರಾಶಿಯವರು. ಇವರ ಉತ್ಸಾಹ ಭರಿತವಾದ ವರ್ತನೆಯು ಹಾಗೂ ಕೆಲಸದ ಹುಮ್ಮಸ್ಸು ಇವರಿಗೆ ಅತ್ಯುತ್ತಮ ರೀತಿಯಲ್ಲಿ ಅನುಕೂಲತೆಯನ್ನು ತಂದುಕೊಡುವುದು. ಇವರು ಅತ್ಯುತ್ತಮ ಶಕ್ತಿವಂತರು ಹಾಗೂ ಗುರಿ ಸಾಧನೆಯ ಪ್ರವೃತ್ತಿಯವರು ಎನ್ನಲಾಗುವುದು. ಇವರು ತಮ್ಮ ವರ್ತನೆ ಹಾಗೂ ಕೆಲಸದಿಂದಲೇ ಇತರರನ್ನು ಬಹಳ ಆಕರ್ಷಣೆಗೆ ಒಳಪಡಿಸುತ್ತಾರೆ. ಇವರು ತಮ್ಮ ಮನೋಭಾವದ ನಡವಳಿಕೆಯಿಂದ ಉತ್ತಮ ಯಶಸ್ಸನ್ನು ಕಾಣುತ್ತಾರೆ ಎಂದು ಹೇಳಲಾಗುವುದು.

ಕುಂಭ

ಕುಂಭ

ಸ್ವತಂತ್ರ ಜೀವಿಗಳಾದ ಕುಂಭ ರಾಶಿಯವರು ಬಹುತೇಕ ಸಂದರ್ಭದಲ್ಲಿ ಕಲ್ಪನೆಯ ಲೋಕದಲ್ಲಿಯೇ ಮುಳುಗಿರುತ್ತಾರೆ. ಕೆಲವೊಮ್ಮೆ ಇವರ ಸೃಜನಾತ್ಮಕ ಕಲ್ಪನೆ ಹಾಗೂ ಕೆಲಸವೇ ಇವರಿಗೆ ಅತ್ಯುತ್ತಮ ಯಶಸ್ಸು ಹಾಗೂ ಹೆಸರನ್ನು ತಂದುಕೊಡುವುದು. ಅತ್ಯುತ್ತಮ ಬದಲಾವಣೆಯನ್ನು ಜೀವನದಲ್ಲಿ ಅನ್ವಯಿಸಿ ಕೊಳ್ಳುವುದರ ಮೂಲಕ ತಮ್ಮ ಸಾರ್ಥಕತೆಯನ್ನು ಕಂಡು ಕೊಳ್ಳುವರು. 2019ರಲ್ಲಿ ಇವರು ಅತ್ಯುತ್ತಮ ಅವಕಾಶ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವರು ಎನ್ನಲಾಗುವುದು.

ಮಕರ

ಮಕರ

ಸದಾ ಯಶಸ್ಸನ್ನು ಬಯಸುವ ರಾಶಿಚಕ್ರದವರು ಮಕರ ರಾಶಿಯವರು. ಈ ರಾಶಿಯವರಿಗೆ 2019 ಅತ್ಯುತ್ತಮ ಅದೃಷ್ಟವನ್ನು ತಂದುಕೊಡುವುದು. ಇವರು ಮಾಡುವ ಕೆಲಸ ಹಾಗೂ ಯೋಜನೆಗಳು ವಾರಗಳು ಅಥವಾ ತಿಂಗಳುಗಳೇ ಕಳೆಯಬಹುದು. ಆದರೆ ಕೊನೆಯಲ್ಲಿ ಉತ್ತಮ ಬದಲಾವಣೆ ಅಥವಾ ತಿರುವನ್ನು ಪಡೆದುಕೊಂಡು ಅದೃಷ್ಟವನ್ನು ಅನುಭವಿಸುವುದು. ಸಾಕಷ್ಟು ಕೆಲಸದ ದಾಹ ಅಥವಾ ಗುರಿಯನ್ನು ಸಾಧಿಸುವ ಛಲ ಇರುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರುವುದು.

ವೃಷಭ

ವೃಷಭ

ರಾಶಿ ಚಕ್ರಗಳಲ್ಲಿ ಎರಡನೆಯದಾದ ವೃಷಭ ರಾಶಿಯವರು ಸಾಕಷ್ಟು ನಿಷ್ಠಾವಂತರಾಗಿರುತ್ತಾರೆ. ಕೆಲವೊಮ್ಮೆ ಇವರಲ್ಲಿ ಕೀಳರಿಮೆಯು ಕಾಡುವುದು. ಅವರು ಸಾಕಷ್ಟು ಅದೃಷ್ಟವನ್ನು ಮುಂದಿನ ವರ್ಷದಲ್ಲಿ ಅನುಭವಿಸುವರು. 2019ರ ವರ್ಷದಲ್ಲಿ ಇವರು ಬಯಸಿದ ವಸ್ತು ಮತ್ತು ವ್ಯಕ್ತಿಗಳು ಸಿಗುವರು. ಇವರು ಸದಾ ಅದೃಷ್ಟವನ್ನು ಆಕರ್ಷಿಸುವರು ಎಂದು ಹೇಳಲಾಗುವುದು. ಇವರ ಶ್ರಮ ಎನ್ನುವ ಬಂಡವಾಳವು ಅತ್ಯುತ್ತಮ ಫಲಿತಾಂಶವನ್ನು ತಂದುಕೊಡುವುದು.

Most Read:ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಿಸಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

ಮೀನ

ಮೀನ

ಈ ರಾಶಿಯ ವ್ಯಕ್ತಿಗಳಿಗೆ ಉತ್ತಮ ರೀತಿಯಲ್ಲಿ ಗ್ರಹಗತಿಗಳ ಪ್ರಭಾವ ಇರುವುದರಿಂದ ಮುಟ್ಟಿದ ಕೆಲಸ ಕಾರ್ಯಗಳು ಹಾಗೂ ಮಾನಸಿಕ ಸ್ಥಿತಿಯು ಉತ್ತಮವಾಗಿರುತ್ತವೆ. 2019ರ ವರ್ಷದಲ್ಲಿ ಅನುಕೂಲಕರ ಸ್ಥಿತಿಯನ್ನು ಕಂಡುಕೊಳ್ಳುವರು. ಅಲ್ಲದೆ ತಮ್ಮೊಳಗೆ ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುವರು. ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಉಪಯುಕ್ತವಾದ ಸಂಪರ್ಕವನ್ನು ನಿರ್ಮಿಸಿಕೊಳ್ಳುವರು.

 ತುಲಾ

ತುಲಾ

ಸಮತೋಲನ ಮನಃ ಸ್ಥಿತಿಯವರು ತುಲಾ ರಾಶಿಯವರು ಎಂದು ಹೇಳಲಾಗುವುದು. ಅದೃಷ್ಟವನ್ನು ಪಡೆದುಕೊಳ್ಳುವ ವಿಷಯದಲ್ಲಿ ಇವರು ಕನಿಷ್ಠ ಆಸಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಅರಿವು ಎನ್ನುವುದನ್ನು ಅವರು ತಮ್ಮ ಕಾಲ್ಬೆರಳಿನ ತುದಿಯಲ್ಲೂ ಇಟ್ಟುಕೊಂಡಿರುತ್ತಾರೆ. ನಿರ್ಮಲ ಚಿಂತನೆ ಹಾಗೂ ಶ್ರಮದಾಯಕ ಕೆಲಸವೇ ಉತ್ತಮ ಫಲಿತಾಂಶ ಹಾಗೂ ನಮ್ಮ ನಿರೀಕ್ಷೆಗಳನ್ನು ಪೂರ್ಣಗೊಳಿಸುತ್ತವೆ ಎಂದು ನಂಬುತ್ತಾರೆ. ಸೂಕ್ತ ಕೆಲಸ ಕಾರ್ಯಗಳು ಹಾಗೂ ಇವರಿಗೆ ಸಂಬಂಧಿಸಿದ ವೈಯಕ್ತಿಕ ಸಂಗತಿಗಳೆಲ್ಲವೂ 2019ರಲ್ಲಿ ಅದೃಷ್ಟವನ್ನು ತಂದುಕೊಡುವುದು.

ಮೇಷ

ಮೇಷ

ರಾಶಿಚಕ್ರಗಳ ಮೊಟ್ಟ ಮೊದಲ ರಾಶಿಚಕ್ರ ಮೇಷ.ಇವರು ಅದೃಷ್ಟದ ವಿಷಯದಲ್ಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಬಹುದು. ಅತ್ಯುತ್ತಮ ಉತ್ಸಾಹ ಹಾಗೂ ಶ್ರಮ ಜೀವಿಗಳಾಗಿ ಕೆಲಸ ನಿರ್ವಹಿಸುವವರು ಇವರು. ವಿಶಿಷ್ಟ ಲಕ್ಷಣವನ್ನು ಪಡೆದುಕೊಂಡ ಇವರು ಅದೃಷ್ಟವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಹೇಗೆ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಎನ್ನಲಾಗುವುದು. ಇವರು 2019ರಲ್ಲಿ ಅತ್ಯುತ್ತಮ ರೀತಿಯಲ್ಲಿ ವಿಷಯವನ್ನು ಕಂಡುಕೊಳ್ಳುತ್ತಾರೆ ಎನ್ನಲಾಗುವುದು. ಗಮನವನ್ನು ವಿಷಯದ ಮೇಲೆ ಸೂಕ್ತ ರೀತಿಯಲ್ಲಿ ಕೇಂದ್ರೀಕರಿಸುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅದು ಎಲ್ಲಾ ಸಂಗತಿಯಲ್ಲೂ ಸಹಾಯ ಮಾಡುವುದು.

ಮಿಥುನ

ಮಿಥುನ

ಮಿಥುನ ರಾಶಿಯವರು ಸಾಕಷ್ಟು ಬೌದ್ಧಿಕ ಶಕ್ತಿಯನ್ನು ಪಡೆದುಕೊಂಡಿರುತ್ತಾರೆ. ಇವರು ಮನಸ್ಸನ್ನು ಉತ್ತೇಜಿಸುವ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವರು. ಹೊಸ ವರ್ಷಕ್ಕೆ ಕೈಗೊಳ್ಳಲಿರುವ ಯೋಜನೆಯನ್ನು ಸಾಕಷ್ಟು ಸಾರಿ ಪರಿಶೀಲಿಸಬೇಕು. ಕೈಗೊಳ್ಳುವ ಕೆಲಸ-ಕಾರ್ಯದಿಂದ ಉಂಟಾಗಬಹುದಾದ ಸಂಗತಿಗಳ ಬಗ್ಗೆ ಸಾಕಷ್ಟು ಚಿಂತನೆ ನಡೆಸಬೇಕಾಗುವುದು. ಇವರು ವೃತ್ತಿ ಜೀವನದಲ್ಲಿ ಮತ್ತು ತಮ್ಮ ವೈಯಕ್ತಿಕ ಜೀವನದಲ್ಲಿ ಸೂಕ್ತ ರೀತಿಯ ಸಮತೋಲನ ಹಾಗೂ ಹಿಡಿತವನ್ನು ಸಾಧಿಸಿದರೆ 2019ರಲ್ಲಿ ಯಶಸ್ಸನ್ನು ಕಂಡುಕೊಳ್ಳುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

 ಕನ್ಯಾ

ಕನ್ಯಾ

ಹೆಣ್ಣನ್ನು ಪ್ರತಿಬಿಂಬಿಸುವ ರಾಶಿಚಕ್ರ ಎಂದು ಕರೆಯಲಾಗುವುದು. ಈ ರಾಶಿಚಕ್ರದಲ್ಲಿ ಜನಿಸಿದವರು ಸಾಕಷ್ಟು ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಸಾಕಷ್ಟು ನಿಯಮಗಳನ್ನು ಹೊಂದಿರುತ್ತಾರೆ. ಅದರ ಅನುಸಾರವೇ ಕೆಲಸ ಹಾಗೂ ಜೀವನವನ್ನು ನಡಸಲು ಬಯಸುವರು. ಇವರು 2019ರಲ್ಲಿ ಸಾಕಷ್ಟು ಅದೃಷ್ಟವನ್ನು ಸಾಧಿಸಲು ಸ್ವಲ್ಪ ಕಷ್ಟವಾಗುವುದು. ಮಾಡಲು ಬಯಸುವ ಕೆಲಸ ಕಾರ್ಯಗಳಲ್ಲಿ ಕೊಂಚ ವಿಶೇಷತೆಯನ್ನು ಸೇರಿಸುವುದರಿಂದ ಕೆಲಸದಲ್ಲಿ ವಿಶೇಷತೆಯನ್ನು ಮೂಡಿಸಬಹುದು. ಸಾಕಷ್ಟು ಸಮಯದಲ್ಲಿ ಗ್ರಹಗತಿಗಳ ಅನಾನುಕೂಲತೆಯಿಂದ ಅದೃಷ್ಟವು ಕೈ ಕೊಡುವ ಸಾಧ್ಯತೆಗಳಿರುತ್ತವೆ.

ಕರ್ಕ

ಕರ್ಕ

ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಗಳು ಕರ್ಕ ರಾಶಿಯವರು. ಇವರು ಹುಟ್ಟಿನಿಂದಲೇ ಸಾಕಷ್ಟು ಅದೃಷ್ಟವನ್ನು ಹೊಂದಿರುವ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು. ಆದರೆ ಅವರು ಅದೃಷ್ಟದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಲ್ಲ. ಬದಲಿಗೆ ಶ್ರಮದಾಯಕ ಕೆಲಸದಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳುತ್ತೇವೆ. ನಮ್ಮ ಕೆಲಸದ ಗುಣಮಟ್ಟವೇ ಗುರಿಯ ಸಾಧನೆ ಹಾಗೂ ಪರಿಪೂರ್ಣತೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದು ನಂಬುತ್ತಾರೆ. 2019ರ ವರ್ಷ ಇವರಿಗೆ ಒಂದಿಷ್ಟು ಕಷ್ಟಕರವಾದ ಪರಿಸ್ಥಿತಿಯನ್ನು ಒದಗಿಸುವ ಸಾಧ್ಯತೆಗಳಿವೆ. ಗ್ರಹಗತಿಗಳ ಉತ್ತಮ ಸಹಕಾರ ಇರುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

English summary

Lucky and Unlucky Zodiac Signs for 2019

Remember when you won three poker games in a row and everyone called it luck or when you passed that test studying a night before the exam and everyone said you were lucky. Well, call it what you will, maybe it is some part luck and some part effort.
X
Desktop Bottom Promotion