For Quick Alerts
ALLOW NOTIFICATIONS  
For Daily Alerts

2018ರಲ್ಲಿ ನಿಮ್ಮ ಅದೃಷ್ಟವನ್ನು ಬದಲಿಸಲಿರುವ ಲಕ್ಕಿ ಸಂಖ್ಯೆಗಳು!

By Deepu
|

ಮಾಡುವ ಕೆಲಸದಲ್ಲಿ ಯಶಸ್ಸನ್ನು ನೀವು ಬಯಸುತ್ತೀರಾ ಎಂದಾದರೆ ನಿಮ್ಮ ಕೆಲಸ ಆರಂಭ ಮಾಡಿರುವ ದಿನದ ಸಂಖ್ಯೆ ಹಾಗೂ ಸಮಯದ ಸಂಖ್ಯೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಕೆಲಸವು ಪರಿಪೂರ್ಣತೆ ಪಡೆಯಬೇಕು ಎಂದಾದರೆ ಆ ಕೆಲಸದ ಆಧಾರವಾಗಿ ನಿಂತಿರುವ ಸಂಖ್ಯೆಗಳು ನಮ್ಮ ರಾಶಿ ಚಕ್ರದ ಅದೃಷ್ಟ ಸಂಖ್ಯೆಯಲ್ಲಿ ಒಂದಾಗಿರಬೇಕು. ಇಲ್ಲವಾದರೆ ಅದೆಷ್ಟೇ ಪ್ರಯತ್ನ ಅಥವಾ ಪರಿಶ್ರಮ ಹಾಕಿದರೂ ಯಶಸ್ಸು ಅಥವಾ ಗುರಿ ಸಾಧನೆಯ ಹಂತವನ್ನು ತಲುಪಲು ಕಷ್ಟವಾಗುವುದು.

ಸಂಖ್ಯಾ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿ, ನಕ್ಷತ್ರ ಹಾಗೂ ಗ್ರಹಗಳು ಅವರದ್ದೇ ಆದ ವಿಶೇಷ ಸಂಖ್ಯೆಗಳ ಅದೃಷ್ಟವನ್ನು ಹೊಂದಿರುತ್ತವೆ. ನಮ್ಮ ನಕ್ಷತ್ರ ಹಾಗೂ ರಾಶಿಗಳಿಗೆ ಅದೃಷ್ಟವನ್ನು ನೀಡುವ ಸಂಖ್ಯೆಗಳ ಅನುಗುಣವಾಗಿ ನಾವು ಪ್ರತಿಯೊಂದು ಶುಭ ಕೆಲಸಕ್ಕೆ ಮುಂದುವರಿಯಬೇಕು. ಆಗಲೇ ಬದುಕು ಹಸನಾಗಿರುತ್ತದೆ. ನಾವು ಅಂದುಕೊಂಡಿದ್ದನ್ನು ಸಾಧಿಸುತ್ತೇವೆ. ಈ ವಿಚಾರ ನಿಮಗೂ ಕುತೂಹಲವನ್ನು ಮೂಡಿಸಿದ್ದರೆ ಈ ಮುಂದೆ ನೀಡಿರುವ ರಾಶಿಚಕ್ರಗಳ ಅದೃಷ್ಟ ಸಂಖ್ಯೆಗಳನ್ನು ಅರಿಯಿರಿ....

ಮೇಷ: ಮಾರ್ಚ್21-ಏಪ್ರಿಲ್19

ಮೇಷ: ಮಾರ್ಚ್21-ಏಪ್ರಿಲ್19

ಈ ರಾಶಿಯವರ ಆಳುವ ಗ್ರಹ ಮಂಗಳ. ಇವರು ಸೃಜನಾತ್ಮಕ, ಪ್ರತಿಭಾವಂತ, ಕುತೂಹಲ, ಉತ್ಸಾಹ ಭರಿತ, ಸಾಹಸ ಮತ್ತು ಮಹುಮುಖ ಶಕ್ತಿ ಮತ್ತು ಕೆಚ್ಚೆದೆಯ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರಿಗೆ 2018ರಲ್ಲಿ ಅದೃಷ್ಟ ತರುವ ಸಂಖ್ಯೆ ಎಂದರೆ 6, 18, 77 ಮತ್ತು 83. ಈ ರಾಶಿಯವರಿಗೆ ಶುಕ್ರವಾರ ಶುಭ ತರುತ್ತದೆ. ಇವರ ನೆಚ್ಚಿನ ವಸ್ತು ತಾಮ್ರ. ತಾಮ್ರದಿಂದ ತಯಾರಿಸಿದ ಆಭರಣಗಳನ್ನು ಧರಿಸುವುದರಿಂದ ಶುಭ ಉಂಟಾಗುವುದು. ಅಲ್ಲದೆ ಭೂಮಿಯು ಇವರಿಗೆ ಶುಭ ಸಂಕೇತವಾಗಿದ್ದರಿಂದ ಭೂಮಿಗೆ ಸಮಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯುವುದು.

ವೃಷಭ: ಏಪ್ರಿಲ್ 20-ಮೇ20

ವೃಷಭ: ಏಪ್ರಿಲ್ 20-ಮೇ20

ಈ ರಾಶಿಯವರು ಭೂಮಿಯ ಚಿಹ್ನೆಯನ್ನು ಹೊಂದಿದವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ತಾಳ್ಮೆಯಿಂದ ಕೂಡಿರುವ ವ್ಯಕ್ತಿಗಳಾಗಿರುತ್ತಾರೆ. ಇವರ ಮೇಲೆ ಶುಕ್ರನು ಹೆಚ್ಚು ಪ್ರಭಾವ ಬೀರುತ್ತಾನೆ. ಆದ್ದರಿಂದ ಇವರು ಬುದ್ಧಿವಂತರು, ನಿರ್ಣಾಯಕ ಸ್ವಭಾವದವರು, ಪ್ರಣಯ ಪೂರ್ಣ ಸ್ವಭಾವ ಹಾಗೂ ತಾರ್ಕಿಕ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಈ ವರ್ಷ ಶುಭವ ತರುವ ಸಂಖ್ಯೆಗಳೆಂದರೆ 5, 35, 50, 57. ಇನ್ನು ಈ ರಾಶಿಯವರು ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿ ಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ.ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು,ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಮಿಥುನ: ಮೇ21-ಜೂನ್20

ಮಿಥುನ: ಮೇ21-ಜೂನ್20

ಈ ರಾಶಿಯವರು ಬುಧ ಗ್ರಹದಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. 2018 ಅತ್ಯಂತ ಅದೃಷ್ಟವನ್ನು ತರುವ ವರ್ಷವಾಗಿದೆ ಎಂದು ಹೇಳಬಹುದು. ಈ ವರ್ಷ ನೀವು ಕೈಗೊಳ್ಳುವ ಶುಭ ಕಾರ್ಯಕ್ಕೆ ಅದೃಷ್ಟ ತರುವ ಸಂಖ್ಯೆಗಳೆಂದರೆ 1,10, 18, 35 ಮತ್ತು 86. ಇನ್ನು ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ. ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಸೂರ್ಯನಿಂದ ಆಳಲ್ಪಡುವ ಈ ರಾಶಿಯವರು ವಿಶೇಷವಾದ ಕಲ್ಪನೆಯ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಅದೃಷ್ಟ ತರುವ ಸಂಖ್ಯೆಗಳು 1,21,24, 58 ಮತ್ತು 66. ಇನ್ನು ಈ ರಾಶಿಯವರು ಕರಣಾಮಯಿಗಳು, ಕಲಾತ್ಮಕತೆ ಹಾಗೂ ರಕ್ಷಣಾತ್ಮಕವಾಗಿರುವ ವ್ಯಕ್ತಿ ಗಳಾಗಿರುತ್ತಾರೆ. ಇವರು ಚರ್ಚೆ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳುವಲ್ಲಿ ನೈಪುಣ್ಯರು. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಸರ್ಕಾರಿ ಕೆಲಸ, ಕಾನೂನು ಸೇವೆ, ಜಾಹೀರಾತು, ಉನ್ನತ ಶಿಕ್ಷಣ, ಯಂತ್ರಗಳ ನಿರ್ವಹಣೆ, ಸಾರಿಗೆ ಮತ್ತು ಸೇನೆ.

ಸಿಂಹ: ಜುಲೈ23-ಆಗಸ್ಟ್ 23

ಸಿಂಹ: ಜುಲೈ23-ಆಗಸ್ಟ್ 23

ಈ ರಾಶಿಚಕ್ರ ಚಿಹ್ನೆಯು ದತ್ತಿ, ನಿಷ್ಠಾವಂತ ಮತ್ತು ಉತ್ಸಾಹಪೂರ್ಣ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಈ ಚಿಹ್ನೆಯು ಸೂರ್ಯನಿಂದ ಆಳಲ್ಪಡುತ್ತದೆ. ಈ ರಾಶಿಯವರನ್ನು ಸೂರ್ಯನು ಆಳುತ್ತಾನೆ. ಉತ್ಸಾಹ, ದಾನ ಮತ್ತು ನಿಷ್ಠೆಯ ಗುಣವನ್ನು ಹೊಂದಿದವರಾಗಿರುತ್ತಾರೆ. ಇವರಿಗೆ 2018ರಲ್ಲಿ ಅದೃಷ್ಟ ತರುವ ಸಂಖ್ಯೆಗಳು ಎಂದರೆ 6, 24, 39,59 ಮತ್ತು 83. ಈ ಸಂಖ್ಯೆಗಳು ಬಹುನಿರೀಕ್ಷಿತ ಧನಾತ್ಮಕ ಬದಲಾವಣೆಗೆ ಕಾರಣವಾಗಬಹುದು. ಇನ್ನು ಜನರ ನಡುವೆ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಿಕೆ ಇವರಿಗೆ ಜನ್ಮಜಾತವಾಗಿ ಬಂದಿರುತ್ತದೆ. ಇದನ್ನು ಬಳಸಿಕೊಂಡರೆ ಸಾಕು ಇವರು ಯಶಸ್ಸು ಗಳಿಸಬಹುದು. ಅಲ್ಲದೆ ಅಧಿಕಾರ ಹಾಗೂ ನಾಯಕತ್ವದ ನಿಜವಾದ ಅಭಿಲಾಷೆ ಇವರಲ್ಲಿ ಇರುತ್ತದೆ. ಇವರು ತುಂಬಾ ಆತ್ಮವಿಶ್ವಾಸ, ಆಶಾವಾದಿ, ವರ್ಚಸ್ವಿ ಮತ್ತು ಹುಟ್ಟು ಮನೋರಂಜಕರಾಗಿರುತ್ತಾರೆ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಕನ್ಯಾ: ಆಗಸ್ಟ್ 24-ಸೆಪ್ಟೆಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟೆಂಬರ್ 23

ಇವರು ನಮ್ರತೆ, ಸೊಬಗು ಮತ್ತು ಸಹಾಯಕ ಗುಣಗಳಿಗೆ ಪರಿಪೂರ್ಣ ರಾಗಿರುತ್ತಾರೆ. ಇವರಿಗೆ 2018ರಲ್ಲಿ ಅದೃಷ್ಟ ತರುವ ವರ್ಷವೆಂದರೆ 16, 29, 79, 80 ಮತ್ತು 90 ಆಗಿರುತ್ತದೆ. ಇವರ ರಾಶಿಯ ಪ್ರಕಾರ ಇವರು ಕಠಿಣತೆಯನ್ನೇ ಮೈಗೂಡಿಸಿಕೊಂಡಿರುತ್ತಾರೆ. ಯಾವುದಕ್ಕೂ ರಾಜಿಯಾಗುವುದಿಲ್ಲ. ಎಲ್ಲದರ ಮೇಲೆ ನಿಯಂತ್ರಣ ಸಾಧಿಸುವುದನ್ನು ಇವರು ಬಿಡಬೇಕು. ಸ್ವಲ್ಪ ರಿಲ್ಯಾಕ್ಸ್ ಆಗಿದ್ದಲ್ಲಿ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಲ್ಲದೆ ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತ ರಾಗುವಂತಹ ವ್ಯಕ್ತಿಗಳಾಗಿರುತ್ತಾರೆ.ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

ತುಲಾ: ಸೆಪ್ಟೆಂಬರ್ 24-ಅಕ್ಟೋಬರ್23

ತುಲಾ: ಸೆಪ್ಟೆಂಬರ್ 24-ಅಕ್ಟೋಬರ್23

ಈ ರಾಶಿಯವರು ಶುಕ್ರ ಗ್ರಹದಿಂದ ಆಳಲ್ಪಡುತ್ತಾರೆ. ಇವರು ಆಕರ್ಷಕ, ಸುಂದರ ಮತ್ತು ಬಲವಾದ ಸಾಮಾಜಿಕ ಕೌಶಲ್ಯವನ್ನು ತೋರುತ್ತಾರೆ. ಇವರಿಗೆ ಈ ವರ್ಷದ ಅದೃಷ್ಟ ಸಂಖ್ಯೆಗಳು 7,20, 55, 77 ಮತ್ತು 86 ಆಗಿರುತ್ತದೆ. ಈ ರಾಶಿಯವರು ರಾಜತಾಂತ್ರಿಕ ಮತ್ತು ಸ್ನೇಹಪರರಾಗಿರುತ್ತಾರೆ. ವೃತ್ತಿಯಲ್ಲಿ ಇವರಿಗೆ ಸಂತೋಷ ಸಿಗಬೇಕಾದರೆ ಮನುಷ್ಯ ರೊಂದಿಗೆ ಸಂವಾದ ಮಾಡುತ್ತಾ ಇರಬೇಕು. ಇವರು ತುಂಬಾ ಸಹಕಾರಿಗಳು ಮತ್ತು ಹೊಂದಾಣಿಕೆಯ ಸ್ವಭಾವದವರು. ಇವರಲ್ಲಿ ನ್ಯಾಯ ಹಾಗೂ ನಿಷ್ಠೆಯಿರುತ್ತದೆ. ಇವರಿಗೆ ಸರ್ಕಾರಿ, ಸಾಮಾಜಿಕ ಕೆಲಸ ಮತ್ತು ಕಾನೂನು ಜಾರಿ ವೃತ್ತಿ ಸೂಕ್ತವಾಗಿರುತ್ತದೆ.

ವೃಶ್ಚಿಕ: ಅಕ್ಟೋಬರ್ 24-ನವೆಂಬರ್ 23

ವೃಶ್ಚಿಕ: ಅಕ್ಟೋಬರ್ 24-ನವೆಂಬರ್ 23

ಮಂಗಳ ಗ್ರಹದಿಂದ ಆಳ್ವಿಕೆಗೆ ಒಳಪಡುತ್ತಾರೆ. ಸ್ನೇಹ ಸ್ವಭಾವ, ಧೈರ್ಯವಂತರೂ ಹಾಗೂ ಸ್ವಲ್ಪ ಅಹಂಕಾರದ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ 2018ರಲ್ಲಿ ಅದೃಷ್ಟ ತರುವ ಸಮಖ್ಯೆಯೆಂದರೆ 9 ಮತ್ತು 18. ಇನ್ನು ಈ ರಾಶಿಯವರು ಸಂಪನ್ಮೂಲ, ವಿಶ್ಲೇಷಾತ್ಮಕ ಹಾಗೂ ಅರ್ಥಗರ್ಭಿತ ಸ್ವಭಾವದವರು ಇವರಾಗಿರುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸವೆಂದರೆ ಕಾನೂನು ಸೇವೆ, ಇಂಜಿನಿಯರಿಂಗ್, ವಿಜ್ಞಾನ, ಶಿಕ್ಷಣ ಮತ್ತು ಕಾಮಗಾರಿ.

ಧನು: ನವೆಂಬರ್ 24- ಡಿಸೆಂಬರ್ 22

ಧನು: ನವೆಂಬರ್ 24- ಡಿಸೆಂಬರ್ 22

ಈ ರಾಶಿಯವರು ಗುರುಗ್ರಹದ ಆಳ್ವಿಕೆಗೆ ಒಳಪಡುತ್ತಾರೆ. ಧೈರ್ಯಶಾಲಿಯ ವ್ಯಕ್ತಿಗಳಾದ ಇವರು ಸದಾ ಸಕಾರಾತ್ಮಕ ಮಾರ್ಗದಲ್ಲಿ ಸಂಚರಿಸುತ್ತಾರೆ. ಇವರಿಗೆ ಈ ವರ್ಷ ಅದೃಷ್ಟವನ್ನು ತರುವ ಸಂಖ್ಯೆಗಳೆಂದರೆ 6,16,23,60 ಮತ್ತು 81 ಆಗಿರುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು. ಇವರಿಗೆ ಹೊಂದಾಣಿಕೆಯಾಗುವ ಕೆಲಸವೆಂದರೆ ಸಂಕಲನ, ಬರಹ, ಮಾರ್ಕೆಟಿಂಗ್, ಮನೋರಂಜನೆ, ಸೇನೆ ಮತ್ತು ಸಾರ್ವಜನಿಕ ಸಂಪರ್ಕ.

ಮಕರ: ಡಿಸೆಂಬರ್ 23- ಜನವರಿ 20

ಮಕರ: ಡಿಸೆಂಬರ್ 23- ಜನವರಿ 20

ಶನಿಗ್ರಹದಿಂದ ಆಳಲ್ಪಡುತ್ತಾರೆ. ಇವರು ಎಲ್ಲಾ ವಿಚಾರದಲ್ಲೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಆದರೆ ಕೆಲವು ಬಾರಿ ಅನುಮಾನಾಸ್ಪದವಾದ ಪ್ರವೃತ್ತಿಯನ್ನು ತೋರುತ್ತಾರೆ. ಇವರ ಅದೃಷ್ಟದ ಸಂಖ್ಯೆ 3, 21, 66, 83 ಮತ್ತು 84. ಇನ್ನು ಇವರು ಜನ್ಮತಃ ನಾಯಕರಾಗಿರುತ್ತಾರೆ ಆದರೆ ಇವರು ಯಾವಾಗಲೂ ಇತರರಿಗೆ ಉದಾಹರಣೆಯನ್ನು ನೀಡಲು ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸ್ವಲ್ಪ ಹಿಂದೆ ನಿಂತು ನೋಡುವುದು ಒಳ್ಳೆಯದು. ಯಾವಾಗಲೂ ಮುನ್ನುಗ್ಗಬೇಡಿ. ತಾಳ್ಮೆ ಇರಲಿ. ಇನ್ನು ಈ ರಾಶಿಯವರು ಹಠ, ಜವಾಬ್ದಾರಿ ಹಾಗೂ ರಾಜತಾಂತ್ರಿಕತೆ ಸ್ವಭಾವ ಹೊಂದಿರುತ್ತಾರೆ. ಇವರು ತಂದೆಯ ಸ್ಥಾನದಲ್ಲಿ ನಿಂತು ಆರೈಕೆಯನ್ನು ಮಾಡುವವರಾಗಿರುತ್ತಾರೆ. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಕೃಷಿ ಮತ್ತು ಅಡುಗೆ.

ಕುಂಬ: ಜನವರಿ 21- ಫೆಬ್ರವರಿ 18

ಕುಂಬ: ಜನವರಿ 21- ಫೆಬ್ರವರಿ 18

ಬಹಳ ಶಾಂತ, ಸ್ನೇಹಪರ, ಪ್ರೀತಿ ಪಾತ್ರರು, ಸೃಜನಾತ್ಮಕ, ಸಹಿಷ್ಣು ಮತ್ತು ಸೂಕ್ತವಾದ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ. ಈ ರಾಶಿಯವರ ಅದೃಷ್ಟ ಸಂಖ್ಯೆ 17, 40, 46, 61 ಮತ್ತು 76 ಆಗಿರುತ್ತದೆ. ಇನ್ನು ಇವರು ಯಾವಾಗಲು ಪ್ರವಾಸ ಮಾಡುತ್ತಿರುತ್ತಾರೆ. ಇದರಿಂದ ಹಲವಾರು ಜನರನ್ನು ಭೇಟಿ ಮಾಡುತ್ತಾರೆ ಮತ್ತು ದೇಶ ಸುತ್ತಿ ಕಲಿಯುತ್ತಾರೆ. ಇವರ ಪ್ರವಾಸಗಳು ಇವರ ವೃತ್ತಿಗೆ ಸಹಾಯವನ್ನು ಮಾಡುತ್ತದೆ.ಜೊತೆಗೆ ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ ಹಾಗು ಯಶಸ್ಸನ್ನು ನೀಡುತ್ತದೆ. ಇವರು ಮೂಲತಃ ಸಂಶೋಧಕರು ಮತ್ತು ಅಸಂಪ್ರದಾಯಿಕ ಚಿಂತಕರಾಗಿರುತ್ತಾರೆ. ಇವರಿಗೆ ಹೊಸ ತಂತ್ರಜ್ಞಾನವು ಕೊಡುಗೆಯಾಗಿ ಬಂದಿರುತ್ತದೆ. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಖಗೋಲಶಾಸ್ತ್ರ, ಫೋಟೋಗ್ರಾಫಿ, ವಾಯುಯಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನ.

ಮೀನ: ಫೆಬ್ರವರಿ 19- ಮಾರ್ಚ್ 20

ಮೀನ: ಫೆಬ್ರವರಿ 19- ಮಾರ್ಚ್ 20

ಈ ರಾಶಿಯವರು ಸಕಾರಾತ್ಮಕ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಅದೃಷ್ಟವನ್ನು ತರುವ ಸಂಖ್ಯೆ 8, 10, 27, 56 ಮತ್ತು 69 ಆಗಿರುತ್ತದೆ. ಈ ರಾಶಿಯವರು ಒಬ್ಬ ಸ್ವಯಂ ಸೇವಕರಾಗಿ ಜನರಿಗೆ ಸಹಾಯ ಮಾಡುವುದರ ಮೂಲಕ ಇವರ ವ್ಯಕ್ತಿತ್ವ ಪ್ರಕಾಶಮಯವಾಗುತ್ತದೆ. ಹಾಗೆಂದು ಸ್ವಂತ ವಿಚಾರಗಳನ್ನು ಮರೆಯಬೇಡಿ ಎಂದು ನಾವು ಹೇಳುತ್ತಿಲ್ಲ. ಸ್ವಂತ ವಿಚಾರ ಮತ್ತು ಸಮಾಜ ಎರಡನ್ನೂ ಸಮತೋಲನದಿಂದ ನಿಭಾಯಿಸಿದರೆ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯ ಹೆಚ್ಚಿನವರು ಹುತಾತ್ಮರಾಗುತ್ತಾರೆಂದು ಹೇಳಲಾಗುತ್ತದೆ. ಇವರು ತಮ್ಮ ಅಗತ್ಯತೆಯನ್ನು ಬದಿಗಿಟ್ಟು ಇತರರ ಅಗತ್ಯತೆಗಳನ್ನು ಮೊದಲು ಪೂರೈಸುವವರು. ಇವರಿಗೆ ಹೊಂದಿಕೆಯಾಗುವ ವೃತ್ತಿಯೆಂದರೆ ಆರೋಗ್ಯ, ಆರೈಕೆ, ಸಾಮಾಜಿಕ ಕೆಲಸ ಮತ್ತು ಲೋಕೋಪಕಾರ.

English summary

Lucky Numbers to Match Your Zodiac Sign in 2018

A bit of luck is something we all need. We tend of personify objects as lucky charms, outfits as lucky outfits and numbers as lucky numbers. At times when we want to attend an exam satisfactorily or when we desperately seek the success of a deal, we use these “personified” objects. The success rate might not be high all the time but we still believe for magic to happen and it is the best thing. With high probabilities for success and inducing hope to survive 2018, we present lucky numbers corresponding to your zodiac sign. They are as follows...
Story first published: Wednesday, January 3, 2018, 20:15 [IST]
X
Desktop Bottom Promotion