For Quick Alerts
ALLOW NOTIFICATIONS  
For Daily Alerts

  ಯಾವ್ಯಾವ ರಾಶಿಯವರ ಮೇಲೆ ಶನಿಯ ಪ್ರಭಾವ ಹೇಗಿದೆ ನೋಡಿ...

  By Deepu
  |

  ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಒಮ್ಮೆ ಶನಿಯ ಪ್ರಭಾವಕ್ಕೆ ಒಳಗಾಗುತ್ತಾನೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತ, ಧೈರ್ಯದ ಭಾವನೆಯಲ್ಲಿ ಮುನ್ನಡೆಯುವುದನ್ನು ಶನಿ ತಿಳಿಸಿಕೊಡುತ್ತಾನೆ ಎನ್ನಲಾಗುವುದು. ಧೈರ್ಯ ಹಾಗೂ ಜೀವನದ ಸತ್ಯವನ್ನು ತಿಳಿಸಿಕೊಡುವ ಗ್ರಹ ಶನಿಗ್ರಹ. ಇದರ ಪ್ರಭಾವಕ್ಕೆ ಒಳಗಾದಾಗ ವ್ಯಕ್ತಿ ಆರಂಭದಲ್ಲಿ ಕಷ್ಟಗಳು ಬಂದರೆ ಅಂತ್ಯದ ವೇಳೆಯಲ್ಲಿ ಸಂತೋಷದ ದಿನಗಳನ್ನು ತಂದು ಕೊಡುತ್ತಾನೆ. ಸುಖ ಮತ್ತು ದುಃಖದ ಅರಿವನ್ನುಂಟುಮಾಡುವುದೇ ಶನಿಗ್ರಹದ ಕೆಲಸ ಎಂತಲೂ ಸಹ ಹೇಳಲಾಗುತ್ತದೆ.

  ಶನಿಯ ಪ್ರಭಾವ ಇದ್ದಾಗ ವ್ಯಕ್ತಿಯ ಸ್ಥಿತಿಯು ಅತ್ಯಂತ ಕಷ್ಟ, ನಷ್ಟ, ನೋವು ಹಾಗೂ ಹತಾಶೆಗಳನ್ನು ಅನುಭವಿಸ ಬೇಕಾಗುತ್ತದೆ. ಹಾಗಾಗಿಯೇ ಜನರು ಶನಿಯನ್ನು ಬೈದುಕೊಳ್ಳುತ್ತಾರೆ. ಅನೇಕ ಮನಸ್ಸಿನಲ್ಲಿ ಶನಿ ಎಂದರೆ ಅಶುಭ ಹಾಗೂ ಜೀವನದಲ್ಲಿ ದಾರಿದ್ರ್ಯ ಎದುರಾಗುತ್ತದೆ ಎನ್ನುವ ಭಾವನೆ ಇದೆ. ಆದರೆ ಅದು ತಪ್ಪು ಎನ್ನುವುದನ್ನು ಅರಿಯಬೇಕಾಗಿದೆ. 

  ಇನ್ನು ಜ್ಯೋತಿಶಾಸ್ತ್ರದ ಪ್ರಕಾರ ಮುಂಬರುವ ತಿಂಗಳಲ್ಲಿ ಶನಿಯು ಪ್ರತಿಯೊಂದು ರಾಶಿ ಚಕ್ರದ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಅದರ ಪ್ರತಿಫಲವು ಕೆಲವರಿಗೆ ಅನುಕೂಲವನ್ನು ತಂದೊಡ್ಡಬಹುದು. ಕೆಲವರಿಗೆ ಸಂಕಷ್ಟಗಳ ಸಂದರ್ಭ ಆಗಿರಬಹುದು. ಪುರಾತನ ಅಧ್ಯಯನಗಳ ಪ್ರಕಾರ ಜ್ಯೋತಿಷ್ಯ ಶಾಸ್ತ್ರಜ್ಞರು ಗ್ರಹಗತಿಗಳ ಆಗು ಹೋಗುಗಳನ್ನು ಮೊದಲೆ ಅಧ್ಯಯನ ನಡೆಸುವುದರಿಂದ ರಾಶಿ ಚಕ್ರದ ಮೇಲೆ ಯಾವೆಲ್ಲಾ ಪ್ರಭಾವ ಬೀರಲಿದೆ ಎನ್ನುವುದನ್ನು ತಿಳಿಸಿಕೊಳ್ಳುತ್ತಾರೆ. ಇದು ಮನುಜ ಸಮಾಜಕ್ಕೆ ಒಂದು ಅತ್ಯುತ್ತಮ ಸಹಾಯ ಎನ್ನಬಹುದು. ಹಾಗಾದರೆ ಬನ್ನಿ ಮುಂದಿನ ವಿವರಣೆಯಲ್ಲಿ ರಾಶಿ ಚಕ್ರದ ಮೇಲೆ ಉಂಟಾಗುವ ಪರಿಣಾಮ ಅರಿಯಿರಿ.... 

  ಮೇಷ ರಾಶಿ

  ಮೇಷ ರಾಶಿ

  ಮುಂಬರಿಲಿರುವ ದಿನಗಳಲ್ಲಿ ಶನಿಯ ಪ್ರಭಾವದಿಂದ ವರ್ಷದುದ್ದಕ್ಕೂ ಅನಿರೀಕ್ಷಿತ ಮತ್ತು ಅಸ್ಥಿರ ಸನ್ನಿವೇಶಗಳನ್ನು ಎದುರಿಸುತ್ತೀರಿ. ಆದರೆ ಆರೋಗ್ಯ ಮತ್ತು ಬುದ್ಧಿವಂತಿಕೆಯ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಸ್ವಲ್ಪ ಇಳಿಮುಖವನ್ನು ಅನುಭವಿಸುವ ಸಾಧ್ಯತೆಗಳಿವೆ. ನಿಮ್ಮ ಶತ್ರುಗಳು ನಿಮ್ಮ ನಿಲುವನ್ನು ಕಡಿಮೆ ಮಾಡುವರು. ಅಲ್ಲದೆ ಸುಳ್ಳು ಆರೋಪಗಳು ನಿಮ್ಮ ಹೆಗಲೇರುವ ಸಾಧ್ಯತೆಗಳಿವೆ. ಇನ್ನು ಈ ವರ್ಷ ನಿಮ್ಮ ಮೇಲೆ ಶನಿಯ ಪ್ರಭಾವದಿಂದ ವರ್ಷದುದ್ದಕ್ಕೂ ಅನಿರೀಕ್ಷಿತ ಮತ್ತು ಅಸ್ಥಿರ ಸನ್ನಿವೇಶಗಳನ್ನು ಎದುರಿಸುತ್ತೀರಿ. ಆದರೆ ಆರೋಗ್ಯ ಮತ್ತು ಬುದ್ಧಿವಂತಿಕೆಯ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಸ್ವಲ್ಪ ಇಳಿಮುಖವನ್ನು ಅನುಭವಿಸುವ ಸಾಧ್ಯತೆಗಳಿವೆ. ನಿಮ್ಮ ಶತ್ರುಗಳು ನಿಮ್ಮ ನಿಲುವನ್ನು ಕಡಿಮೆ ಮಾಡುವರು. ಅಲ್ಲದೆ ಸುಳ್ಳು ಆರೋಪಗಳು ನಿಮ್ಮ ಹೆಗಲೇರುವ ಸಾಧ್ಯತೆಗಳಿವೆ.

  ವೃಷಭ

  ವೃಷಭ

  ಮುಂಬರುವ ವರ್ಷದಲ್ಲಿ ಹಲವು ಅಡಚಣೆಗಳನ್ನು ಮತ್ತು ತೊಂದರೆಗಳನ್ನು ಎದುರಿಸಲಿದ್ದಾರೆ, ಆದರೆ ಚಿಂತಿಸುವ ಅವಶ್ಯಕತೆ ಇಲ್ಲ, ಜೀವನದಲ್ಲಿ ಕಷ್ಟವನ್ನು ಮೆಟ್ಟಿ ನಿಲ್ಲುವ ಧರ್ಯ ನಿಮ್ಮಲ್ಲಿ ಮೂಡಲಿದೆ. ಇನ್ನು ಈ ವರ್ಷ ನಿಮ್ಮ ದಾರಿಯಲ್ಲಿ ತೊಂದರೆಗಳು ಅನಿವಾರ್ಯವಾಗಿ ಎದುರಾಗುತ್ತಲೇ ಇರುತ್ತವೆ. ನಿಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಪ್ರಯತ್ನಿಸದಿರಿ. ವ್ಯಾಪಾರದಲ್ಲಿ ಹಾಗೂ ಉದ್ಯೋಗದಲ್ಲಿ ಯಾವುದೇ ಹೆಚ್ಚಳವನ್ನು ಕಾಣಲು ಸಾಧ್ಯವಿಲ್ಲ. ಕೆಲಸದಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಅನೇಕ ಕೆಲಸಗಳು ನೆರವೇರುವುದು. ಪ್ರತಿ ಶನಿವಾರ ಶನಿದೇವನಿಗೆ ಅರ್ಚನೆ ಮಾಡಿಸಿ

   ಮಿಥುನ

  ಮಿಥುನ

  ಕುಟುಂಬ ಮತ್ತು ಸಹಚರರು ನಿಮ್ಮೊಂದಿಗೆ ಸಂಪೂರ್ಣವಾಗಿ ನಂಬಿಕೆ ಹಾಗೂ ಹೊಂದಾಣಿಕೆಯಿಂದ ವರ್ತಿಸುವರು. ಇವರು ವಿವಾಹವಾದರೆ ಸಂಗಾತಿಯೊಂದಿಗೆ ಒಳಜಗಳ ಮತ್ತು ಮುನಿಸುಗಳಿಂದ ಸಂಕಷ್ಟಗಳನ್ನು ಎದುರಿಸಬೇಕಾಗುವುದು. ಆದರೆ ಅದು ವಿಚ್ಛೇದನದ ತನಕ ಹೋಗದು. ಈ ವರ್ಷ ನೀವು ವಾಹನ, ಭೂಮಿ ಅಥವಾ ಆಭರಣಗಳಲ್ಲಿ ಹೂಡಿಕೆ ಮಾಡಬಹುದು. ಇನ್ನು ಕುಟುಂಬದವರು ಹಾಗೂ ನಿಮ್ಮ ಸಹವರ್ತಿಗಳು ವರ್ಷಪೂರ್ತಿ ಸಂಘಟಿತರಾಗಿರುತ್ತಾರೆ. ವಿವಾಹಿತಾಗಿದ್ದವರು ಕೊಂಚ ಘರ್ಷಣೆಯನ್ನು ಕಾಣಬಹುದು. ಈ ವರ್ಷ ನೀವು ವಾಹನ, ಭೂಮಿ ಅಥವಾ ಆಭರಣಗಳಲ್ಲಿ ಹೂಡಿಕೆ ಮಾಡಬಹುದು.

  ಕರ್ಕ

  ಕರ್ಕ

  ವ್ಯವಹಾರಗಳಲ್ಲಿ ಲಾಭ ಮತ್ತು ದೀರ್ಘಾವಧಿಯ ನಿರೀಕ್ಷಿತ ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುತ್ತವೆ. ವ್ಯಕ್ತಿ ಮತ್ತು ಅವರ ಪಾಲುದಾರರು ಗಂಭೀರ ಸಂಘರ್ಷದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಬಹುದು. ಇದಲ್ಲದೆ ವರ್ಷವು ಲಾಭ ದಾಯಕವಾಗಿದ್ದು, ತಮ್ಮ ಬಾಕಿ ಬರುವ ಹಣವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಚಕ್ರದ ಮಹಿಳೆ ಬಂಜೆತನವನ್ನು ಅನುಭವಿಸುತ್ತಿದ್ದರೆ ಈ ವರ್ಷ ಪರಿಹಾರ ಕಂಡುಕೊಳ್ಳುತ್ತಾಳೆ. ಇನ್ನು ಮುಂದಿನ ದಿನಗಳಲ್ಲಿ ನೀವು ವ್ಯಾಪಾರ ವ್ಯವಸ್ಥೆಯಲ್ಲಿ ಹೆಚ್ಚಳ ಕಾಣುವಿರಿ. ನೀವು ಅಂದುಕೊಂಡ ವಿಚಾರ ನೆರವೇರುವುದು. ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುವುದು. ಈ ವರ್ಷ ನಿಮಗೆ ಲಾಭದಾಯಕವಾದ ವರ್ಷ ಎಂತಲೇ ಹೇಳಬಹುದು. ನಿಮಗೆ ಬಂಜೆತನದ ಸಮಸ್ಯೆ ಇದ್ದರೆ ಈ ವರ್ಷ ಪರಿಹಾರ ಕಾಣುವುದು.

   ಸಿಂಹ

  ಸಿಂಹ

  ಈ ರಾಶಿಯವರು ಇಷ್ಟು ದಿನ ಕುಟುಂಬದಲ್ಲಿ ಅನುಭವಿಸುತ್ತಿದ್ದ ತೊಂದರೆ, ಒತ್ತಡ ಹಾಗೂ ಸಮಸ್ಯೆಗಳೆಲ್ಲವೂ ಈ ವರ್ಷದಲ್ಲಿ ಕೊನೆ ಗೊಳ್ಳುವವು. ಇವರು ಈ ವರ್ಷ ಉತ್ತಮ ವಿಚಾರಗಳ ಕುರಿತು ಹೂಡಿಕೆಯನ್ನು ಕೈಗೊಳ್ಳಬಹುದು. ಸಹೋದ್ಯೋಗಿಗಳು ಹೆಚ್ಚಿನ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಇವರು ತಮ್ಮ ಆಕ್ರೋಶವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ಅನೇಕ ಉತ್ತಮ ವಿಷಯಗಳನ್ನು ಅನುಭವಿಸುವುದಕ್ಕಿಂತ ಕಳೆದುಕೊಳ್ಳುವ ಪರಿಸ್ಥಿತಿ ಒದಗಿ ಬರುತ್ತದೆ. ಇನ್ನು ಕುಟುಂಬದಲ್ಲಿರುವ ಗೊಂದಲ ಹಾಗೂ ಅಶಾಂತಿಗಳು ಈ ವರ್ಷ ಕೊನೆಗಾಣಲಿದೆ. ಈ ವರ್ಷ ನೀವು ಭೂಮಿ ಮತ್ತು ಮನೆಯನ್ನು ಖರೀದಿಸಬಹುದು. ಅಲ್ಲದೆ ಬೃಹತ್ ಹೂಡಿಕೆಯನ್ನು ನೀವು ಮಾಡಬಹುದು. ಮೇಲಾಧಿಕಾರಿಗಳು ಮತ್ತು ಹಿರಿಯರು ನಿಮ್ಮೊಂದಿಗೆ ಸಾಕಷ್ಟು ಪ್ರಭಾವಿತರಾಗಿರುತ್ತಾರೆ. ನಿಮ್ಮ ಆಕ್ರೋಶಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಇಲ್ಲವಾದರೆ ಜೀವನದಲ್ಲಿ ಅತ್ಯುತ್ತಮ ವಸ್ತು ಹಾಗೂ ವ್ಯಕ್ತಿಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

  ಕನ್ಯಾ

  ಕನ್ಯಾ

  ಈ ಮುಂಬರುವ ವರ್ಷವು ಈ ರಾಶಿಚಕ್ರದವರಿಗೆ ಬಹಳ ಕಷ್ಟದ ಸಮಯ ಎನ್ನಬಹುದು. ಏಕೆಂದರೆ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅತಿ ಹೆಚ್ಚು ಹೋರಾಟ ನಡೆಸಬೇಕಾಗುವುದು. ಉದ್ಯೋಗಗಳು ಕೂಡಾ 200% ರಷ್ಟು ಪ್ರಯತ್ನಗಳು ಬೇಕಾಗುತ್ತವೆ. ತಮ್ಮ ವ್ಯವಹಾರವನ್ನು ವಿಸ್ತರಿಸುವ ಪರಿಕಲ್ಪನೆಯು ಒಳ್ಳೆಯದು. ಆದರೆ ಇದು ಯಾವುದೇ ದೊಡ್ಡ ಅನುಕೂಲಕರ ಸ್ಥಾನವಿಲ್ಲ ಎಂದು ಅವರು ಅರ್ಥ ಮಾಡಿಕೊಳ್ಳಬೇಕು. ಮುಂಬರುವ ವರ್ಷದಲ್ಲಿ ಅವರು ಹೆಚ್ಚು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ನಿಮಗೆ ಶೇ.100ರಷ್ಟು ಉದ್ಯೋಗದ ಅಗತ್ಯ ಇರುತ್ತದೆ. ಖಾಸಗಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ವ್ಯಾಪಾರದ ವಿಸ್ತರಣೆ ಹೊಂದುವ ಕಲ್ಪನೆ ಹೊಂದುವುದು ಸೂಕ್ತ. ಆದರೆ ಅದರಿಂದ ದೊಡ್ಡ ಪ್ರಮಾಣದ ಅನುಕೂಲದ ಸ್ಥಾನವನ್ನು ನೀವು ಪಡೆದುಕೊಲ್ಳುವುದಿಲ್ಲ. ಹಣ ಬಂದಂತೆ ಕಂಡರೂ ಬಹುಬೇಗ ಖರ್ಚಾಗುವ ಸಾಧ್ಯತೆ ಇದೆ.

  ತುಲಾ

  ತುಲಾ

  ಈ ರಾಶಿಚಕ್ರ ಜನರು ಆರೋಗ್ಯಕರ ಜೀವನವನ್ನು ಹೊಂದಲಿದ್ದಾರೆ. ಆದರೆ ಇನ್ನೊಂದು ತುದಿಯಲ್ಲಿ ನಗದು ಹರಿವು ಗಮನಾರ್ಹ ಅಸ್ಥಿರತೆಯನ್ನು ತೋರಿಸುತ್ತದೆ. ಕೆಲಸದ ಮುಂಭಾಗದಲ್ಲಿ ಉತ್ತಮ ವರ್ಷವಾಗಲಿದೆ. ಈ ವರ್ಷ ಒಂದು ಕುಟುಂಬವನ್ನು ಯೋಜಿಸಲು ಉತ್ತಮ ವರ್ಷವಾಗಿದೆ ಮತ್ತು ಸುತ್ತಲಿನ ಜನರು ನಿಮ್ಮ ಈ ತೀರ್ಮಾನಕ್ಕೆ ಬೆಂಬಲ ನೀಡುತ್ತಾರೆ. ಈ ವರ್ಷ ನಿಮ್ಮ ಆರೋಗ್ಯದೃಷ್ಟಿಯಿಂದ ಉತ್ತಮವಾಗಿರುತ್ತದೆ. ನೀವು ಸಾಕಷ್ಟು ಹಣವನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ಆದರೆ ನಿಮ್ಮ ನಿರೀಕ್ಷೆಯನ್ನು ತಲುಪಲು ಕಷ್ಟವಾಗುವುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಲು ಉತ್ತಮ ಸಮಯ. ಸುತ್ತಲಿನ ಜನರು ಸಹ ನಿಮಗೆ ಉತ್ತಮ ಬೆಂಬಲ ನೀಡುವರು.

  ವೃಶ್ಚಿಕ

  ವೃಶ್ಚಿಕ

  ಈ ರಾಶಿ ಚಕ್ರದವರು ಅಷ್ಟು ಸುಲಭವಾಗಿ ಚೇತರಿಕೆಯನ್ನು ಕಾಣರು. ಏಕೆಂದರೆ ಅವರು ಈಗಿನ್ನು ಎರಡೂವರೆ ವರ್ಷಗಳಿಂದ ಶನಿಯ ಪ್ರಭಾವವನ್ನು ಅನುಭವಿಸಿದ್ದಾರೆ. ಈಗ ತಾನೆ ಚೇತರಿಕೆಯನ್ನು ಕಾಣುವ ಪ್ರಯತ್ನದಲ್ಲಿರುತ್ತಾರೆ. ಇವರು ದೂರದ ಪ್ರಯಾಣ ಅಥವಾ ತೀರ್ಥಯಾತ್ರೆಗಳನ್ನು ಕೈಗೊಳ್ಳಬಹುದು. ಆದರೆ ಇನ್ನೊಂದೆಡೆ ಇವರ ಅನಾರೋಗ್ಯದ ಸ್ಥಿತಿಯಿಂದಾಗಿ ಕೆಲಸದ ಮೇಲೆ ಹೆಚ್ಚು ಗಮನಕೊಡಲು ಇವರಿಗೆ ಸಾಧ್ಯವಾಗುವುದಿಲ್ಲ. ಕೆಲಸದ ಬಗ್ಗೆ ಅಜಾಗರೂಕತೆಯ ವರ್ತನೆ ತೋರುವುದರಿಂದ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ನಿಮ್ಮ ಕಾರ್ಯದಲ್ಲಿ ಬಲು ಸುಲಭವಾಗಿ ಯಶಸ್ಸು ದೊರೆಯದು. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ನಿಮ್ಮ ಆರೋಗ್ಯ ಸಹಕರಿಸದು. ಕೆಲಸದಲ್ಲಿ ತೋರುವ ಅಸಡ್ಡೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಕಾರಣವಾಗುವ ಸಾಧ್ಯತೆಗಳಿವೆ. ದೂರದ ಪ್ರಯಾಣಕ್ಕೆ ಹಣ ವ್ಯಯಿಸುವ ಸಾಧ್ಯತೆಗಳಿವೆ. ಹೊರಗಿನವರನ್ನು ನಂಬದಿರಿ.

  ಧನು

  ಧನು

  ಮುಂಬರುವ ವರ್ಷವು ಇವರಿಗೆ ಬಹಳ ಕಷ್ಟಕರವಾಗಲಿದೆ. ಶನಿಯು ಈ ರಾಶಿಚಕ್ರಕ್ಕೆ ಪ್ರವೇಶಿಸಲಿದ್ದಾನೆ. ಇವರ ಆರಂಭಿಕ ಕೆಲಸದಲ್ಲಿ ಗುರಿಯನ್ನು ಸಾಧಿಸಲು ಕಷ್ಟವಾಗುವುದು. ಆದಷ್ಟು ತಾಳ್ಮೆಯಿಂದ ಇರಬೇಕು. ಹೆಚ್ಚು ಶ್ರಮಪಟ್ಟು ಫಲಿತಾಂಶವನ್ನು ನಿರೀಕ್ಷಿಸಬೇಕಾಗುವುದು. ಈ ವರ್ಷ ನಿಮಗೆ ಅನಾರೋಗ್ಯದ ಸಮಸ್ಯೆ ಕಾಡುವುದು. ಕೆಲಸದ ಮುಂಭಾಗದಲ್ಲಿ ಗುರಿಯನ್ನು ಸಾಧಿಸಲು ಇದು ಕಠಿಣವಾದ ಅವಧಿ. ಆದಷ್ಟು ತಾಳ್ಮೆಯಿಂದ ಇರಬೇಕು. ನಿಮ್ಮ ವ್ಯವಹಾರದ ಪ್ರತಿಸ್ಪರ್ಧಿಗಳು ನಿಮ್ಮ ಸಹೋದ್ಯೋಗಿಗಳ ಮೂಲಕ ನಿಮ್ಮ ದೌರ್ಬಲ್ಯವನ್ನು ಬಯಲು ಮಾಡಬಹುದು. ಆದಷ್ಟು ಎಚ್ಚರಿಕೆಯಿಂದ ಇರಿ.

  ಮಕರ

  ಮಕರ

  ಈ ರಾಶಿ ಚಕ್ರದವರು ಸ್ವಲ್ಪ ಸಮಯ ಪ್ರಯಾಣದಲ್ಲಿ ಅಥವಾ ಪ್ರವಾಸ ಕೈಗೊಳ್ಳುವುದರಲ್ಲಿ ಸಮಯವನ್ನು ಕಳೆಯುತ್ತಾರೆ. ಏಕೆಂದರೆ ಇವರ ಭವಿಷ್ಯದಲ್ಲಿ ಪ್ರಯಾಣ ಮತ್ತು ವ್ಯವಹಾರದಲ್ಲಿ ಕೆಲವು ಏರಿಳಿತವನ್ನು ಎದುರಿಸಬೇಕಾಗುವುದು. ಇದು ಅವರ ಮನಸ್ಸಿನ ಶಾಂತಿಯನ್ನು ಹಾಳು ಮಾಡುವುದು. ಅಲ್ಲದೆ ತಮ್ಮ ಸಂಬಂಧಗಳಲ್ಲಿ ಗಣನೀಯವಾದ ಅಸ್ಥಿರತೆಯನ್ನು ನೋಡಬೇಕಾಗುವುದು. ಅನಗತ್ಯ ಪ್ರಯಾಣ ಮತ್ತು ವ್ಯಾಪಾರದ ಏರಿಳಿತಗಳು ನಿಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡುವುದು. ವ್ಯವಹಾರದಲ್ಲಿ ಅಷ್ಟಾಗಿ ಸ್ಥಿರತೆ ಕಾಣದು. ಹೊಸ ಮನೆ ಖರೀದಿಸಲು ನೀವು ಆಸಕ್ತರಾಗಬಹುದು. ಎದುರಾಳಿಗಳು ನಿಮ್ಮ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಇರಿ.

  ಕುಂಭ

  ಕುಂಭ

  ಹಳೆಯ ಸಮಸ್ಯೆಗಳು ಈ ವರ್ಷ ಪರಿಹಾರ ಕಾಣುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಕುಟುಂಬ ಮತ್ತು ಸ್ನೇಹಿತರು ಸಹಕಾರವನ್ನು ನೀಡುವರು. ಹಳೆಯ ವಿವಾದ ಈ ವರ್ಷ ಮುಕ್ತಿಯನ್ನು ಕಾಣುವುದು. ಈ ವರ್ಷ ನಿಮ್ಮ ಕುಟುಂಬಕ್ಕೆ ಒಳ್ಳೆಯ ಸ್ಥಿತಿ ಎದುರಾಗುವುದು. ಇನ್ನು ಹಳೆಯ ಸಮಸ್ಯೆಗಳು ಈ ವರ್ಷ ಪರಿಹಾರ ಕಾಣುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಕುಟುಂಬ ಮತ್ತು ಸ್ನೇಹಿತರು ಸಹಕಾರವನ್ನು ನೀಡುವರು. ಹಳೆಯ ವಿವಾದ ಈ ವರ್ಷ ಮುಕ್ತಿಯನ್ನು ಕಾಣುವುದು. ಈ ವರ್ಷ ನಿಮ್ಮ ಕುಟುಂಬಕ್ಕೆ ಒಳ್ಳೆಯ ಸ್ಥಿತಿ ಎದುರಾಗುವುದು.

  ಮೀನ

  ಮೀನ

  ಆದಾಯದ ಮೂಲ ಈ ವರ್ಷ ಹೆಚ್ಚಳವನ್ನು ಕಾಣುವುದು. ವ್ಯಾಪಾರದ ಮುಂಭಾಗದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಬಹುಮಟ್ಟಿಗೆ ನಿಕಟ ವ್ಯಕ್ತಿಯು ನಿಮ್ಮನ್ನು ವಿಶ್ವಾಸಘಾತ ಉಂಟುಮಾಡುವರು. ಸರ್ಕಾರ ಸಂಬಂಧಿತ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಆದಾಯದ ಮೂಲ ಈ ವರ್ಷ ಹೆಚ್ಚಳವನ್ನು ಕಾಣುವುದು. ವ್ಯಾಪಾರದ ಮುಂಭಾಗದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಬಹುಮಟ್ಟಿಗೆ ನಿಕಟ ವ್ಯಕ್ತಿಯು ನಿಮ್ಮನ್ನು ವಿಶ್ವಾಸಘಾತ ಉಂಟುಮಾಡುವರು. ಸರ್ಕಾರ ಸಂಬಂಧಿತ ಸಮಸ್ಯೆ ಕಾಡುವ ಸಾಧ್ಯತೆಗಳಿವೆ.

  English summary

  Lord Shani in 2018: Is your Zodiac Sign in trouble?

  Here are the details of what each zodiac sign is going to experience from Lord Shani's transition; be it a punishment or getting rewarded for the things you have done in your past. Let's find out...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more