ರಾಶಿ ಭವಿಷ್ಯ: ಈ ಐದು ರಾಶಿಯವರಿಗೆ ತುಂಬಾನೇ ಕೋಪ ಬರುತ್ತದೆಯಂತೆ!

Posted By: Deepu
Subscribe to Boldsky

ಕೋಪ ವ್ಯಕ್ತಿಯ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಕೋಪದಲ್ಲೂ ಅನೇಕ ವಿಧಗಳಿವೆ. ಕೆಲವರಿಗೆ ಚಿಕ್ಕ-ಪುಟ್ಟ ವಿಚಾರಕ್ಕೂ ಸಿಟ್ಟು ಬರುವುದು. ಇನ್ನೂ ಕೆಲವರಿಗೆ ಸೂಕ್ತ ಕಾರಣಗಳಿಗಾಗಿ ಮಾತ್ರ ಸಿಟ್ಟು ಬರುವುದು. ಸಿಟ್ಟಿನ ಬರದಲ್ಲಿ ವ್ಯಕ್ತಿ ಕ್ರೂರತೆಯನ್ನು ತೋರಿಸುತ್ತಾನೆ. ಇದಕ್ಕೆ ಕಾರಣ ಅವನಲ್ಲಿ ಸಹನೆಯ ಮಟ್ಟ ಕಡಿಮೆಯಿದೆ ಎಂದು ಹೇಳಬಹುದು ಅಥವಾ ಸಹಿಸಿಕೊಳ್ಳುವ ಶಕ್ತಿ ಕಡಿಮೆ ಪ್ರಮಾಣದಲ್ಲಿದೆ ಎಂದು ಅಂದಾಜಿಸಬಹುದು. ಸಿಟ್ಟಿನ ಬರದಲ್ಲಿ ಮಾಡಿಕೊಂಡ ಅನಾಹುತ ಸಿಟ್ಟು ಶಾಂತವಾದಾಗ ಸರಿಹೋಗುವುದಿಲ್ಲ. ಹೀಗೆ ಮಾಡಿದರು ಎನ್ನುವ ಪರಿಣಾಮ ಶಾಶ್ವತವಾಗಿ ಹಾಗೆಯೇ ಉಳಿದುಕೊಂಡಿರುತ್ತದೆ ಅಷ್ಟೆ.

ಪದೇ ಪದೇ ಸಿಟ್ಟಿಗೆ ಒಳಗಾಗುವುದು ಹಾಗೂ ಚಿಕ್ಕಪುಟ್ಟ ವಿಚಾರಕ್ಕೆ ತಕ್ಷಣವೇ ಸಿಟ್ಟಿಗೇಳುವುದು ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ವ್ಯಕ್ತಿಯ ಮಾನಸಿಕ ಸ್ಥಿತಿಯು ರಾಶಿಚಕ್ರದ ಅನ್ವಯದಂತೆ ಇರುತ್ತದೆ. ಕೆಲವು ರಾಶಿ ಚಕ್ರದವರು ಶೀಘ್ರ ಕೋಪಿಗಳಾಗಿರುತ್ತಾರೆ. ಹಾಗಂತ ಅವರ ಕೋಪ ದೀರ್ಘಕಾಲದವರೆಗೆ ಉಳಿಯುತ್ತದೆ ಎಂದರ್ಥವಲ್ಲ. ತಕ್ಷಣಕ್ಕೆ ಬಂದ ಕೋಪ ಕೆಲವೇ ನಿಮಿಷದಲ್ಲೂ ಸಮಾಧಾನದ ಸ್ಥಿತಿಗೆ ಮರಳಬಹುದು. ನಿಮಗೂ ಸಿಟ್ಟು ಬಹುಬೇಗ ಬರುತ್ತದೆ ಎಂದಾದರೆ ಬಹುಶಃ ನೀವೂ ಈ ರಾಶಿಚಕ್ರದ ಸಾಲಿನಲ್ಲಿ ನಿಮ್ಮ ರಾಶಿಚಕ್ರವೂ ಇರಬಹುದು. ನೀವೂ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಅರಿಯಿರಿ...

ಮೇಷ

ಮೇಷ

ಈ ರಾಶಿಚಕ್ರದವರು ಅತ್ಯಂತ ಕಿರಕಿರಿಯ ವ್ಯಕ್ತಿಗಳು ಎನ್ನಬಹುದು. ಇವರು ಸಿಟ್ಟಾಗಲು ಇಂತಹದ್ದೇ ಕಾರಣಗಳು ಬೇಕೆಂದಿಲ್ಲ. ಚಿಕ್ಕ ಪುಟ್ಟ ವಿಚಾರಗಳಿಗೂ ಕೋಪಕ್ಕೆ ಒಳಗಾಗುತ್ತಾರೆ. ಇವರಲ್ಲಿ ಅಧಿಕ ಪ್ರಮಾಣದ ಸಹನಾ ಶಕ್ತಿ ಇಲ್ಲದೆ ಇರುವುದೇ ಕೋಪಕ್ಕೆ ಕಾರಣವಾಗುವುದು. ಇವರ ಮಾತು ನಡೆಯುತ್ತಿದ್ದರೆ ಮಾತ್ರ ಶಾಂತಿಯಿಂದ ವರ್ತಿಸುತ್ತಾರೆ. ಹಾಗೊಮ್ಮೆ ಇವರ ಮಾತು ಕೇಳಲಿಲ್ಲ ಎಂದಾದರೆ ಬಹುಬೇಗ ಸಿಟ್ಟಿಗೆ ಒಳಗಾಗುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಇವರು ಸಾಮಾನ್ಯವಾಗಿ ವಿರೋಧಿ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಮತನ್ನು ಹಾಗೂ ವಿಚಾರವನ್ನು ವಿರೋಧಿಸಿದರೆ ತಕ್ಷಣವೇ ಸಿಟ್ಟಿಗೆ ಒಳಗಾಗುತ್ತಾರೆ. ಇವರು ತಮ್ಮನ್ನು ತಾವು ಅತ್ಯಂತ ಬುದ್ಧಿವಂತರು ಅಥವಾ ಚುರುಕು ಸ್ವಭಾವದವರು ಎಂದು ತಿಳಿದುಕೊಂಡಿರುತ್ತಾರೆ. ಹಾಗಾಗಿ ಅವರ ತಪ್ಪನ್ನು ಗುರುತಿಸಿ ಹೇಳಿದರೆ ಅವರು ತಮ್ಮ ಶಾಂತ ಸ್ವಭಾವವನ್ನು ಕಳೆದುಕೊಳ್ಳುತ್ತಾರೆ. ಸಿಟ್ಟಿನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಈ ರಾಶಿಯವರು ತಮ್ಮ ಮಾತನ್ನು ಯಾರಾದರೂ ಕೇಳುತ್ತಿಲ್ಲ ಎಂದಾದರೆ ತಕ್ಷಣವೇ ಕೋಪಗೊಳ್ಳುತ್ತಾರೆ. ಇವರು ತಕ್ಷಣಕ್ಕೆ ನಿರಾಶೆಯ ಭಾವ ಮತ್ತು ಆಶ್ಚರ್ಯಕರ ಪ್ರವೃತ್ತಿಗೆ ಒಳಗಾಗುತ್ತಾರೆ. ಇವರು ಒಂದು ರೀತಿಯ ಕಿರಿಕಿರಿಗೆ ಒಳಗಾದರೆ ಬಹಳ ಬೇಸರ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೆ. ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದನ್ನು ಅವರು ಭಾವಿಸಿದರೆ ಸಿಟ್ಟಿಗೆ ಒಳಗಾಗುವರು. ಕೆಲವು ವಿಚಾರಗಳನ್ನು ಇವರೇ ನಿರ್ಲಕ್ಷಿಸುತ್ತಿದ್ದರೆ ಮಾನಸಿಕವಾಗಿ ಸಮಾಧಾನದಲ್ಲಿ ಇರುತ್ತಾರೆ.

ಮಿಥುನ

ಮಿಥುನ

ಈ ರಾಶಿಚಕ್ರದವರಿಗೆ ಅವರು ಬಯಸಿದ ವಸ್ತು ದೊರೆಯದಿದ್ದಾಗ ಅಥವಾ ಅವರು ಬಯಸಿದ ಫಲಿತಾಂಶ ದೊರೆಯದೆ ಹೋದರೆ ಬಹುಬೇಗ ಸಿಟ್ಟಿಗೆ ಒಳಗಾಗುತ್ತಾರೆ. ಜೀವನದಲ್ಲಿ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ತಿಳಿಯದೆ ಇದ್ದಾಗ ಅವರು ಬಹುಬೇಗ ಕ್ಷೋಭೆಗೆ ಒಳಗಾಗುತ್ತಾರೆ. ನಿರ್ದಿಷ್ಟ ಸನ್ನಿವೇಶಕ್ಕೆ ಅವಶ್ಯಕ ಕೌಶಲ್ಯವನ್ನು ಹೊಂದಿಲ್ಲವೆಂದು ಅವರು ಭಾವಿಸಿದಾಗ ನಿರಾಸೆಗೊಂಡು ಸಿಟ್ಟಿಗೆ ಒಳಗಾಗುತ್ತಾರೆ.

 ಕರ್ಕ

ಕರ್ಕ

ಈ ರಾಶಿಚಕ್ರದವರಿಗೆ ಅವರ ಭಾವನೆ ಅತಿಯಾಗಿದೆ ಎಂದೆನಿಸಿದಾಗ ಬಹು ಬೇಗ ಗಾಬರಿಗೆ ಒಳಗಾಗುತ್ತಾರೆ. ಇವರು ತಮ್ಮದೇ ಆದ ಸಹಾನೂಭೂತಿಯ ಸಂವೇದನಾಶೀಲರಾಗಿರುತ್ತಾರೆ. ಕಲ್ಪನೆಯಂತೆ ನಡೆಯದೆ ಇದ್ದಾಗ ಅಸಮಧಾನ ಉಂಟಾಗಿ ಕೋಪ ಕಾಣಿಸಿಕೊಳ್ಳುವುದು. ಇವರು ಕೆಲವೊಮ್ಮೆ ನಡೆದು ಹೋದ ವಿಚಾರಗಳ ಕುರಿತು ಸಹ ಸಿಟ್ಟಿಗೇಳಬಹುದು.

English summary

List Of Zodiac Signs That Are Short Tempered

If you are a short-tempered person, then you need to blame your zodiac sign for it, as according to astrology, it is revealed that there are a few zodiac signs that have a typical trait of anger running wild in these. From being disturbed, excited, frustrated, moved, to upset, all these things can be related to your zodiac signs. These are the zodiac signs which can easily get agitated. Check on to find out if your zodiac sign is also among the least patient one. Take a look.
Story first published: Sunday, February 25, 2018, 7:01 [IST]