Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಬೆರಳುಗಳ ಗಾತ್ರ ನೋಡಿ, ಲೈಂಗಿಕ ಜೀವನದ ಬಗ್ಗೆ ತಿಳಿಯಬಹುದಂತೆ!!
ಕೆಲವೊಂದು ಅಧ್ಯಯನಗಳು ಈಗ ದೇಹದ ಪ್ರತಿಯೊಂದು ಅಂಗಾಂಗಳಿಂದ ಏನೆಲ್ಲಾ ತಿಳಿಯಬಹುದು ಎಂದು ಹೇಳುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚು ಆಸಕ್ತಿ ಕೆರಳಿಸುವಂತಹ ಸೆಕ್ಸ್ ವಿಚಾರದ ಬಗ್ಗೆ ನಡೆಯುವಂತಹ ಅಧ್ಯಯನಗಳು ನಿಜವಾಗಿಯೂ ಗಮನಾರ್ಹವಾಗಿದೆ. ಇತ್ತೀಚೆಗೆ ಅಧ್ಯಯನವೊಂದು ಕಂಡುಕೊಂಡ ವಿಚಾರವೆಂದರೆ ನಿಮ್ಮ ಕೈಯ ಬೆರಳುಗಳ ಗಾತ್ರವನ್ನು ನೋಡಿಕೊಂಡು ಸೆಕ್ಸ್ ಜೀವನದ ಬಗ್ಗೆ ಹೇಳಬಹುದು. ಬಲಗೈಯನ್ನು ನೀವು ನೋಡಿಕೊಂಡು ಉಂಗುರು ಬೆರಳು ತೋರು ಬೆರಳಿಗಿಂತ ಉದ್ದ ಇದೆಯಾ ಎಂದು ನೀವು ನೋಡಬೇಕಾಗಿದೆ.

ತೋರು ಬೆರಳಿಗಿಂತ ಉಂಗುರ ಬೆರಳು ದೊಡ್ಡದಾಗಿದ್ದರೆ ಆಗ ನೀವು ಒಂದಕ್ಕಿಂತ ಹೆಚ್ಚಿನ ಸಂಗಾತಿಯನ್ನು ಹೊಂದಿರುತ್ತೀರಿ ಎಂದು ಅಧ್ಯಯನಗಳು ಹೇಳಿವೆ. ಕೈಬೆರಳಿನ ಗಾತ್ರ ನೋಡಿಕೊಂಡು ಲೈಂಗಿಕ ಜೀವನದ ಬಗ್ಗೆ ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ.

ಉಂಗುರು ಬೆರಳು ಮತ್ತು ತೋರು ಬೆರಳು ಸಮಾನವಾಗಿದ್ದರೆ...
ಅಧ್ಯಯನಗಳು ಕಂಡುಕೊಂಡಿರುವ ವಿಚಾರದ ಪ್ರಕಾರ ತೋರು ಬೆರಳು ಹಾಗೂ ಉಂಗುರ ಬೆರಳಿನ ಗಾತ್ರವು ಸಮಾನವಾಗಿದ್ದರೆ ಆಗ ತಳೀಯವಾಗಿ ಪೂರ್ವಯೋಜಿತವಾಗಿರುವಿರಿ. ಇದರ ಪರಿಣಾಮವಾಗಿ ನೀವು ಲೈಂಗಿಕ ಜೀವನಕ್ಕೆ ಏಕಸಂಗಾತಿಯನ್ನು ದೀರ್ಘಕಾಲಕ್ಕೆ ಆಯ್ಕೆ ಮಾಡುವಿರಿ. ಈ ವ್ಯಕ್ತಿಗಳು ತುಂಬಾ ನಿಷ್ಠ ಮತ್ತು ದೀರ್ಘಕಾಲದ ಸಂಬಂಧವನ್ನು ಇಷ್ಟಪಡುವವರು.

ಸಲಿಂಗಿ ಅವಳಿಗಳ ಮೇಲೆ ಅಧ್ಯಯನ ನಡೆಯಿತು
ಅಧ್ಯಯನವು ಸಲಿಂಗಿ ಅವಳಿಗಳ ಮೇಲೆ ಸಂಶೋಧನೆ ನಡೆಸಿತು. ಈ ವೇಳೆ ಸಲಿಂಗಿ ಅವಳಿಗಳ ತೋರು ಬೆರಳು ಹಾಗೂ ಉಂಗುರು ಬೆರಳುಗಳನ್ನು ಗಮನಿಸಿದಾಗ ಅದರಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವು ಕಂಡುಬಂತು. ಮಹಿಳೆಯರಲ್ಲಿ ಈ ವ್ಯತ್ಯಾಸವು ಪ್ರಮುಖವಾಗಿತ್ತು.

ಅವಳಿಗಳ ಮೇಲೆ ಅಧ್ಯಯನ ನಡೆಯಿತು
ಈ ಅಧ್ಯಯನವು 18 ಜತೆ ಮಹಿಳಾ ಅವಳಿಗಳು ಮತ್ತು 14 ಜತೆ ಪುರುಷ ಅವಳಿಗಳ ಮೇಲೆ ನಡೆಯಿತು. ಸಲಿಂಗಿ ಮಹಿಳಾ ಅವಳಿ ಕೈಯ ಬೆರಳುಗಳು ಪುರುಷರ ಬೆರಳುಗಳಿಗೆ ಸಮಾನವಾಗಿತ್ತು. ಆದರೆ ಸಲಿಂಗಿಯಲ್ಲದೆ ಅವಳಿಯಲ್ಲಿ ಇದು ವ್ಯತ್ಯಾಸವಿತ್ತು. ಪುರುಷ ಅವಳಿಗಳಲ್ಲಿ ಸಲಿಂಗಿ ಅವಳಿಯಲ್ಲಿ ಪುರುಷರ ರೀತಿಯ ಕೈಬೆರಳುಗಳಿದ್ದರೆ, ಸಲಿಂಗಿಯಲ್ಲದವನಲ್ಲಿ ಇದು ಭಿನ್ನವಾಗಿತ್ತು.

ಅವಳಿಗಳನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವುದು ಯಾಕೆ?
ವರದಿಯ ಪ್ರಕಾರ ಅವಳಿಗಳಲ್ಲಿ ಶೇ.100ರಷ್ಟು ಜಿನ್ ಗಳು ಸಮಾನವಾಗಿರುವುದು. ಆದರೆ ಇವರ ಲೈಂಗಿಕ ಆಕಾಂಕ್ಷೆಯು ಭಿನ್ನವಾಗಿರಲೂಬಹುದು ಎಂದು ಕಂಡುಕೊಳ್ಳಲಾಗಿದೆ. ಈ ಕಾರಣದಿಂದ ಜೆನೆಟಿಕ್ ಹೊರತುಪಡಿಸಿ ವ್ಯತ್ಯಾಸಗಳು ಕೂಡ ಜವಾಬ್ದಾರವಾಗಿರುತ್ತದೆ.

ಅಧ್ಯಯನಗಳು ಕಂಡುಕೊಂಡಿರುವುದು
ಅಧ್ಯಯನಗಳು ಹೇಳಿರುವಂತಹ ಭ್ರೂಣವು ಪುರುಷ ಹಾರ್ಮೋನು ಟೆಸ್ಟೋಸ್ಟೆರಾನ್ ಗೆ ಹೊಂದಿಕೆಯಾಗಿರುವುದು ಬೆರಳುಗಳಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಿರಬಹುದು ಮತ್ತು ಇವರ ಲೈಂಗಿಕ ಆಕಾಂಕ್ಷೆಯು ಬದಲಾಗಬಹುದು.



Click it and Unblock the Notifications