ಈ ಕೆರೆಯ ಬಳಿ ಬಂದ ಪ್ರಾಣಿಗಳೆಲ್ಲಾ, ಕಲ್ಲು ಶಿಲೆಯಾಗಿ ಬಿಡುತ್ತವೆ!!

Posted By: Arshad
Subscribe to Boldsky

ಹೊಸ ಸ್ಥಳವನ್ನು ಸಂದರ್ಶಿಸುವಾಗ ಒಂದು ಸ್ಥಳ ದೂರದಿಂದ ನೋಡಲು ಸುಂದರವಾಗಿದ್ದರೂ ಬಳಿಬಂದಾಗ ಕೊಂಚ ವಿಚಿತ್ರ, ಅಸ್ವಾಭಾವಿಕ ಹಾಗೂ ಭಿನ್ನವಾಗಿ ಕಂಡುಬಂದರೆ? ಪುತ್ತೂರಿನ ಬಳಿಯ ಬೆಂದ್ರೆತೀರ್ಥ ಎಂಬ ಬಿಸಿನೀರಿನ ನದಿ ಇದಕ್ಕೊಂದು ಉದಾಹರಣೆ. ದೂರದಿಂದ ತಣ್ಣಗಿದ್ದಂತೆ ಕಂಡುಬಂದರೂ ಈ ನೀರು ಬಿಸಿಯಾಗಿರುತ್ತದೆ.

ಆಫ್ರಿಕಾದಲ್ಲಿರುವ ನ್ಯಾಟ್ರಾನ್ ಎಂಬ ಕೆರೆಯಲ್ಲಿಯೂ ಕೊಂಚ ಇಂತಹದ್ದೇ ವಿಚಿತ್ರ ನೈಸರ್ಗಿಕ ವಿದ್ಯಮಾನ ನಡೆಯುತ್ತದೆ. ದೂರದಿಂದ ಸುಂದರವಾಗಿಯೇ ಕಾಣುವ ಈ ಕೆರೆಯ ಬಳಿ ಬಂದಾಗ ಮಾತ್ರ ಈ ಕೆರೆಯ ಅಂಚಿನ ನೀರಿನಲ್ಲಿ ಮುಳುಗಿರುವ ಅಥವಾ ದಡದಲ್ಲಿರುವ ಪ್ರಾಣಿಗಳು ಕ್ಯಾಲ್ಸಿಯಂನಂತೆ ಕಲ್ಲುಶಿಲೆಗಳಾಗಿ ನಿಶ್ಚಲವಾಗಿ ಬಿದ್ದಿವೆ. ಬನ್ನಿ, ಈ ವಿಚಿತ್ರ ಕೆರೆಯ ಬಗ್ಗೆ ಅರಿಯೋಣ...

ಈ ಕೆರೆ ವಾಸ್ತವವಾಗಿ ಒಂದು ಪ್ರಸೂತಿ ಗೃಹ

ಈ ಕೆರೆ ವಾಸ್ತವವಾಗಿ ಒಂದು ಪ್ರಸೂತಿ ಗೃಹ

ಸಂಶೋಧಕರ ಪ್ರಕಾರ, ನ್ಯಾಟ್ರನ್ ಕೆರೆ ಲೆಸ್ಸರ್ ಫ್ಲೆಮಿಂಗೋ ಎಂಬ ಹಕ್ಕಿಗಳು ಮೊಟ್ಟೆಯಿಟ್ಟು ಮರಿ ಮಾಡುವ ಸ್ಥಳವಾಗಿದೆ. ಅಲ್ಲದೇ ಇದರ ನೀರಿನಲ್ಲಿಯೂ ಸಾವಿರಾರು ಬಗೆಯ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳು ಪುಷ್ಕಳವಾಗಿ ಬೆಳೆದು ಸಂಖ್ಯೆಯನ್ನು ವೃದ್ದಿಸಿಕೊಳ್ಳುತ್ತವೆ.

Image Courtesy

ಈ ಕೆರೆಯಲ್ಲೇನಿದೆ ವಿಶೇಷ?

ಈ ಕೆರೆಯಲ್ಲೇನಿದೆ ವಿಶೇಷ?

ಈ ಕೆರೆಯ ವಿಶೇಷತೆ ಇದರ ನೀರಿನಲ್ಲಿದೆ. ಇದರ ನೀರು ಅತಿ ಹೆಚ್ಚು ಕ್ಷಾರೀಯವಾಗಿದೆ. ಇದೇ ಕಾರಣಕ್ಕೆ ಇದಕ್ಕೆ 'ಸೋಡಾ ಕೆರೆ' ಅಥವಾ 'ಆಲ್ಕಲೈನ್ ಕೆರೆ' ಎಂದೂ ಕರೆಯಲಾಗುತ್ತದೆ. ಇದರ ನೀರಿನಲ್ಲಿ ಅಸಾಧ್ಯ ಮಟ್ಟದ ಕಾರ್ಬೋನೇಟ್ ಲವಣಗಳ ಸಾಂದ್ರತೆ ಇದೆ. ಎಷ್ಟು ದಟ್ಟ ಎಂದರೆ, ಈ ನೀರಿಗೆ ಬರುವ ಪ್ರಾಣಿ ಪಕ್ಷಿಗಳನ್ನು ಕೊಂದು ಅವುಗಳ ದೇವನನ್ನೆಲ್ಲಾ ಕ್ಯಾಲ್ಸಿಯಂ ನಿಂದ ಆವರಿಸಿ ಕೊಳೆಯದಂತೆ ಶಾಶ್ವತವಾಗಿ ರಕ್ಷಿಸಿಡುತ್ತದೆ.

Image Courtesy

ಈ ಕೆರೆಯ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿದ ಛಾಯಾಗ್ರಾಹಕ ಹೇಳುವ ಪ್ರಕಾರ

ಈ ಕೆರೆಯ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿದ ಛಾಯಾಗ್ರಾಹಕ ಹೇಳುವ ಪ್ರಕಾರ

ಈ ಕೆರೆಗೆ ಭೇಟಿ ನೀಡಿ ಇಲ್ಲಿನ ವಿದ್ಯಮಾನಗಳನ್ನು ಕೆಲದಿನಗಳ ಕಾಲ ಅಭ್ಯಸಿಸಿ ಮಾಧ್ಯಮದ ಮೂಲಕ ಪ್ರಕಟಿಸಿದ ಛಾಯಾಗ್ರಾಹಕನಾದ ನಿಕ್ ಬ್ರಾಂಟ್ ತಿಳಿಸುವಂತೆ ಈ ನೀರಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಸೋಡಾ ಮತ್ತು ಲವಣಗಳಿವೆ. ಎಷ್ಟು ಎಂದರೆ ತನ್ನ ಕೋಡಾಕ್ ಫಿಲ್ಮ್ ಪೆಟ್ಟಿಗೆಗಳಲ್ಲಿ ಮುದ್ರಿತವಾಗಿದ್ದ ಕಠಿಣ ಶಾಯಿಯನ್ನೂ ಕೆಲವೇ ಸೆಕೆಂಡುಗಳಲ್ಲಿ ನಿವಾರಿಸಿತ್ತು.

Image Courtesy

ಈ ನೀರಿನ ತಾಪಮಾನವೂ ಅತಿ ಹೆಚ್ಚು

ಈ ನೀರಿನ ತಾಪಮಾನವೂ ಅತಿ ಹೆಚ್ಚು

ಈ ನೀರು ಸಹಾ ಹೆಚ್ಚೂ ಕಡಿಮೆ ಕುದಿಯುವಷ್ಟು ಬಿಸಿಯಾಗಿರುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳಲ್ಲಿ ಈ ನೀರು ಸುಮಾರು 40 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಹಾಗೂ ಇಲ್ಲಿನ ಆರ್ದ್ರತೆ ಸಹಾ ಗರಿಷ್ಟ ಮಟ್ಟದಲ್ಲಿಯೇ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.

Image Courtesy

ಈ ವಿದ್ಯಮಾನಕ್ಕೆ ವೈಜ್ಞಾನಿಕ ಕಾರಣವಿದೆ

ಈ ವಿದ್ಯಮಾನಕ್ಕೆ ವೈಜ್ಞಾನಿಕ ಕಾರಣವಿದೆ

ಈ ನೀರಿನಲ್ಲಿ ಸಿಲುಕಿಕೊಳ್ಳುವ ಪ್ರಾಣಿಗಳು ಕ್ಯಾಲ್ಸಿಯಂ ಲವಣದ ಕಲ್ಲುಗಳಾಗಲಿಕ್ಕೆ ಪ್ರಮುಖ ಕಾರಣ ಇಲ್ಲಿನ ಅತಿ ಹೆಚ್ಚಿನ ತಾಪಮಾನ ಹಾಗೂ ನೀರಿನ ಅತಿ ಹೆಚ್ಚು ಅಂದರೆ 10.5 ರಷ್ಟಿರುವ ಪಿ ಎಚ್ ಮಟ್ಟ. ಈ ಗರಿಷ್ಟ ಕ್ಷಾರೀಯ ನೀರು ಪ್ರಾಣಿಗಳ ಚರ್ಮ ಮತ್ತು ಕಣ್ಣುಗಳಿಗೆ ಸಹಿಸಲಸಾಧ್ಯವಾದ ಉರಿ ತರಿಸುತ್ತವೆ.

Image Courtesy

ಪ್ರಾಣಿಗಳಿಲ್ಲಿ ಕಲ್ಲುಗಳಂತೆ ಕಾಣುತ್ತವೆ

ಪ್ರಾಣಿಗಳಿಲ್ಲಿ ಕಲ್ಲುಗಳಂತೆ ಕಾಣುತ್ತವೆ

ಈ ಕೆರೆಯ ಆಸುಪಾಸಿನ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಈ ನೀರೇ ಅನಿವಾರ್ಯವಾದ ಕಾರಣ ಇವುಗಳನ್ನು ಕುಡಿದ ಪ್ರಾಣಿ ಪಕ್ಷಿಗಳು ಈ ಲವಣವನ್ನು ಸಹಿಸಿಕೊಳ್ಳಲಾಗದೇ ಸಾವನ್ನಪ್ಪುತ್ತವೆ ಹಾಗೂ ಗಾಳಿಯಲ್ಲಿರುವ ಲವಣ ಮೃತದೇಹದ ಮೇಲೆ ಸಂಗ್ರಹವಾಗುತ್ತಾ ಕ್ಯಾಲ್ಸಿಯಂ ಲವಣ ಘನಗೊಳ್ಳುತ್ತಾ ಹೋಗುತ್ತದೆ. ಈ ಲವಣಯುಕ್ತ ಮೃತದೇಹವನ್ನು ಬ್ಯಾಕ್ಟೀರಿಯಾಗಳೂ ಕೊಳೆಸಲು ಅಸಾಧ್ಯವಾದ ಕಾರಣ ಇವು ಹೆಚ್ಚೂ ಕಡಿಮೆ ಶಾಶ್ವತವಾಗಿ ಒಣಗಿ ಹಾಗೇ ಉಳಿಯುತ್ತವೆ. ಈ ಕುತೂಹಲಕರ ವಿದ್ಯಮಾನ ನಿಮಗೆ ಇಷ್ಟವಾಯಿತೇ? ಹೌದೆಂದಾದರೆ ನಿಮ್ಮ ಅತ್ಮೀಯರಿಗೂ ಇದರ ಕೊಂಡಿಯನ್ನು ಕಳುಹಿಸಿ ಅವರೂ ಈ ಅಚ್ಚರಿಯ ಬಗ್ಗೆ ಅರಿಯುವಂತಾಗಲು ನೆರವಾಗಿ.

Image Courtesy

English summary

Lake In Africa Turns Animals To Calcified Stone-like Statues

When you are exploring new places, what happens when you find a mysterious place where things seem to look perfect and beautiful and a closer look at the place would make you realise something is missing? Well, a bizarre lake named Lake Natron in Africa can leave you stunned when you look at the animals found around the lake. Most of the animals seen around this lake or in the lake seem to be calcified! Check out on what makes this place so bizarre.