Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ನಿಮ್ಮ ಭವಿಷ್ಯವನ್ನೇ ಬಿಚ್ಚಿಡುತ್ತದೆ, ಎಡಗೈ ಹಸ್ತದಲ್ಲಿ ಮೂಡುವ ರೇಖೆ!
ಸಾವಿರಾರು ವರ್ಷಗಳಿಂದಲೂ ಜ್ಯೋತಿಷ್ಯವೆನ್ನುವುದು ಭಾರತದಲ್ಲಿ ಇತ್ತು. ಇದನ್ನು ಆಗಿನ ರಾಜರು ಕೂಡ ಬಳಸಿಕೊಳ್ಳುತ್ತಿದ್ದರು. ಅದರಲ್ಲೂ ಹಸ್ತರೇಖೆಗಳನ್ನು ನೋಡಿಕೊಂಡು ನಿಮ್ಮ ಭವಿಷ್ಯ, ನಡವಳಿಕೆ, ಆರೋಗ್ಯ ಮತ್ತು ಪ್ರತಿಭೆಯನ್ನು ಹೇಳಬಹುದಾಗಿದೆ. ಇದು ಅಂಗೈ ಮೇಲಿರುವ ರೇಖೆಗಳು ಮತ್ತು ಅದು ಎಲ್ಲಿ ಆರಂಭವಾಗಿ, ಎಲ್ಲಿ ಅಂತ್ಯವಾಗುವುದು ಎನ್ನುವುದನ್ನು ಅವಲಂಬಿಸಿದೆ.
ಜೀವನ ರೇಖೆಯನ್ನು ಮೊದಲಿಗೆ ನೋಡಿಕೊಂಡು ಸಂಪೂರ್ಣ ಭವಿಷ್ಯ ನುಡಿಯಲಾಗುತ್ತದೆ. ಬಲಗೈಯನ್ನು ಬಳಸುವವರ ಎಡಗೈಯನ್ನು ನೋಡಿಕೊಂಡು ಇದನ್ನು ಹೇಳಲಾಗುತ್ತದೆ. ಅದೇ ರೀತಿ ಎಡಗೈ ಬಳಸುವವರ ಬಲಗೈ ನೋಡಲಾಗುವುದು. ಹಸ್ತ ನೋಡುವಂತಹ ಕಲೆಯು ಇಂದು ಭಾರತ, ಚೀನಾ, ಈಜಿಪ್ಟ್, ಅರಬ್ ಮತ್ತು ಗ್ರೀಕ್ ನಲ್ಲಿ ತುಂಬಾ ಜನಪ್ರಿಯವಾಗಿದೆ. ಆದರೆ ಹೆಚ್ಚಿನವರು ಕೇಳುವಂತಹ ಪ್ರಶ್ನೆಯೆಂದರೆ ಅಂಗೈ ಮೇಲಿನ ರೇಖೆಗಳು ಮಾಯವಾಗುವುದೇ ಮತ್ತು ಬದಲಾಗುವುದೇ ಎಂದು.
ಇದಕ್ಕೆ ಉತ್ತರ ಹೌದು. ಅಂಗೈಯ ಮೇಲಿನ ರೇಖೆಗಳು ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಲೇ ಇರುವುದು. ಗೆರೆಗಳು ಮೂಡಿ, ಮಾಯವಾಗುವುದಕ್ಕೆ ಗುರುತು' ಎಂದು ಕರೆಯಲಾಗುತ್ತದೆ. ನಿಮ್ಮ ಎಡ ಅಂಗೈಯ ಮೇಲಿರುವಂತಹ ಪ್ರಮುಖ ರೇಖೆಗಳ ಬಗ್ಗೆ ತಿಳಿಯಿರಿ. ಇದು ನಿಮಗೆ ಅಚ್ಚರಿಯನ್ನುಂಟು ಮಾಡಲಿದೆ....

ಜೀವನ ರೇಖೆ
ಈ ರೇಖೆಯು ವ್ಯಕ್ತಿ ಜೀವಶಕ್ತಿ ಮತ್ತು ದೈಹಿಕ ಶಕ್ತಿ ತೋರಿಸುವುದು. ಇದು ಆರೋಗ್ಯ ಪರಿಸ್ಥಿತಿ ಮತ್ತು ಜೀವನದಲ್ಲಿ ಬದಲಾಗುವ ಪರಿಸ್ಥಿತಿಯನ್ನು ತೋರಿಸುವುದು. ದಪ್ಪಗಿನ ಗೆರೆಯು ಒಳ್ಳೆಯ ಆರೋಗ್ಯ ಸೂಚಿಸುವುದು. ತುಂಡಾಗಿರುವ ರೇಖೆಯು ನೀವು ಒತ್ತಡ, ಗಾಯ ಮತ್ತು ರೋಗಕ್ಕೆ ತುಂಬಾ ಸೂಕ್ಷ್ಮವಾಗಿದ್ದೀರಿ ಎಂದು ಹೇಳುವುದು.

ಮದುವೆ ರೇಖೆ
ಅಂಗೈಯ ರೇಖೆಯಲ್ಲಿ ಇದು ತುಂಬಾ ಪ್ರಮುಖವಾಗಿರುವುದು. ನಿಮ್ಮ ಪ್ರೀತಿಯ ಜೀವನದ ಬಗ್ಗೆ ಈ ರೇಖೆಯು ನಿಮಗೆ ಉತ್ತರ ನೀಡುವುದು. ಸಣ್ಣ ರೇಖೆಯು ನಿಮ್ಮ ಏಕಮುಕ ಪ್ರೀತಿ ತೋರಿಸುವುದು. ಅಂತ್ಯದಲ್ಲಿ ವಿಚ್ಛೇದಿತವಾಗಿರುವಂತಹ ರೇಖೆಯು ನಿಮ್ಮ ವೈವಾಹಿಕ ಜೀವನವು ವಿಚ್ಛೇದನದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳುತ್ತದೆ. ರೇಖೆಗಳು ಪರಸ್ಪರ ದಾಟಿಕೊಂಡು ಹೋಗಿದ್ದರೆ ಇದು ನೀವು ಸರಿಯಾದ ಸಂಗಾತಿಯ ಹುಡುಕಾಟದಲ್ಲಿದ್ದೀರಿ ಎಂದು ತೋರಿಸುವುದು. ನಿಮ್ಮಲ್ಲಿ ಯಾವುದೇ ಮದುವೆ ಗೆರೆಗಳು ಇಲ್ಲದೆ ಇದ್ದರೆ ಆಗ ಚಿಂತೆ ಮಾಡಬೇಡಿ, ಮದುವೆ ವಿಚಾರವು ಈಗ ನಿಮ್ಮ ತಲೆಯಲ್ಲಿಲ್ಲ ಎನ್ನುವುದು.

ತಲೆಯ ರೇಖೆ
ಈ ತಲೆ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನಾ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಕಲ್ಪನೆಯನ್ನು ಸಹ ಒಳಗೊಂಡಿರುತ್ತದೆ. ಒಂದು ವೇಳೆ ಈ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ, ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಎಂದು ಸೂಚಿಸುತ್ತದೆ. ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆ ಗೆರೆಯು ನಿಮ್ಮ ಮನಸ್ಸನ್ನು ಇತರರು ನಿಯಂತ್ರಿಸುತ್ತಾರೆ ಎಂದು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಎಂದು ಸಹ ಸೂಚಿಸುತ್ತದೆ. ಈ ರೇಖೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ, ನೀವು ನಿಮಗೆ ನೀವೇ ಸಾಟಿ ಎನ್ನುವಂತಹ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ. ನಿಮ್ಮ ಆಲೋಚನೆಗಳು, ಸೃಜನಶೀಲತೆ ಇತ್ಯಾದಿಗಳಲ್ಲಿ ನಿಮಗೆ ನೀವೇ ಸಾಟಿ.

ವಿಧಿ ರೇಖೆ
ಈ ವಿಧಿ ರೇಖೆಯು ನಿಮ್ಮ ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ. ದಪ್ಪಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುತ್ತಿರುವ ನಾಟಕೀಯ ಬದಲಾವಣೆಗಳನ್ನು ಸೂಚಿಸುತ್ತದೆ. ತೆಳುವಾದ ರೇಖೆಯು ನಿಮ್ಮ ಜೀವನವನ್ನು ಇತರರು ನಿಯಂತ್ರಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಎರಡು ಅಥವಾ ಹೆಚ್ಚಿನ ರೇಖೆಗಳು ನಿಮ್ಮ ಜೀವನದಲ್ಲಿ ನೀವು ಬುದ್ಧಿವಂತರು ಮತ್ತು ಜನಪ್ರಿಯರು ಸಹ ಆಗಿದ್ದೀರಿ ಎಂದು ತಿಳಿಸುತ್ತದೆ.

ಸಂಪತ್ತಿನ ಗೆರೆ
ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆಯು ಹಣದ ರೇಖೆಯೆಂದು ಗುರುತಿಸಲ್ಪಟ್ಟಿದೆ. ಸಣ್ಣ ರೇಖೆಗಳು ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ. ಉದ್ದವಾದ ರೇಖೆಗಳು ನಿಮಗೆ ಹಣ ಮುಖ್ಯ ಮತ್ತು ನೀವು ಸಮಯವನ್ನು ಸಹ ಉಳಿಸುತ್ತೀರಿ ಎಂದು ಸೂಚಿಸುತ್ತದೆ. ಹಣದ ರೇಖೆಗಳು ಹೆಚ್ಚಾಗಿದ್ದಲ್ಲಿ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ ಎಂದು ತಿಳಿಸುತ್ತದೆ.

ಕೈಬಳೆಗಳು
ನಿಮ್ಮ ಕೈ ಮಣಿಕಟ್ಟಿನ ಬಳಿ ಕಂಕಣದಂತೆ ಕಾಣುವ ರೇಖೆಗಳು, ನೀವು ಹೊಂದಿರುವ ಹಣದ ಪ್ರಮಾಣವನ್ನು ಸೂಚಿಸುತ್ತವೆ. ಜೊತೆಗೆ ನೀವು ಎಷ್ಟು ಪ್ರಮಾಣದ ಹಣವನ್ನು ಪಡೆಯುವಿರಿ ಎಂದು ಸಹ ಇದರಿಂದ ತಿಳಿಯಬಹುದು. ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತವೆ.

ಸಂತೋಷದ ಗೆರೆ
ಇದು ತುಂಬಾ ಅಪರೂಪವಾಗಿರುವ, ಅಂಗೈ ಮೇಲೆ ಮೀನಿನ ಆಕಾರದಲ್ಲಿ ಕಾಣಿಸಿಕೊಳ್ಳುವ ರೇಖೆಯಾಗಿದೆ. ಎಡಗೈ ಮೇಲೆ ಇರುವಂತಹ ಈ ರೇಖೆಯು ನಿಮ್ಮ ಯಶಸ್ಸು ಮತ್ತು ಸಂತೋಷವನ್ನು ಹೇಳುವುದು.



Click it and Unblock the Notifications











