For Quick Alerts
ALLOW NOTIFICATIONS  
For Daily Alerts

ನಿಮ್ಮ ಆಸೆ ಏನೇ ಇರಲಿ,ವಿವಾಹ ಮಾತ್ರ ರಾಶಿಚಕ್ರದ ಅನುಸಾರವೇ ನೆರವೇರುವುದು!

|

ವಿವಾಹ ಎಂದರೆ ಅದೇನೋ ಹೊಸ ಭಾವ. ಹುಡುಗಾಟದ ಜೀವನವನ್ನು ತೊರೆದು ಜವಾಬ್ದಾರಿಯ ಹೊರೆ ಹೊರಲು ಸಿದ್ಧರಾಗುವ ಸಂಭ್ರಮದ ಕ್ಷಣ. ಒಂದು ಜೀವಕ್ಕೆ ಜೀವನ ಪೂರ್ತಿ ಸಹಕಾರ, ಪ್ರೀತಿ, ಆರೈಕೆ, ಸ್ನೇಹದ ಬಾಳನ್ನು ನೀಡುತ್ತೇನೆ ಎನ್ನುವ ಭರವಸೆಯ ಪ್ರೌಢಿಮೆ ಬರುವುದು. ನಮ್ಮ ಹವ್ಯಾಸಕ್ಕೆ ಮತ್ತು ಆಕ್ತಿಗೆ ಅನುಗುಣವಾಗಿ ಜೀವನದ ಸಂಗಾತಿ ಸಿಗಬೇಕು ಎಂದು ಬಯಸುವುದು ಸಹಜ. ಈ ನಿಟ್ಟಿನಲ್ಲಿ ಸಾಕಷ್ಟು ಹುಡುಕಾಟ, ಕಾತುರಗಳು ಒಟ್ಟೊಟ್ಟಿಗೆ ಬರುತ್ತವೆ. ಒಟ್ಟಿನಲ್ಲಿ ನಾವು ಅಂದುಕೊಂಡಂತೆ ನಮ್ಮ ವಿವಾಹ ನಡೆಯಬೇಕು. ಜೀವನದ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು ಎಂದು ಎಲ್ಲರ ಮನಸ್ಸು ಹಾಗೂ ಹೃದಯ ಮಿಡಿಯುವುದು.

ಕೆಲವೊಮ್ಮೆ ನಮ್ಮಿಂದ ಆದ ಆಯ್ಕೆ ಅಥವಾ ತಪ್ಪು ನಿರ್ಧಾರಗಳಿಂದ ನಾವಂದುಕೊಂಡಂತೆ ಜೀವನ ಸಾಗುತ್ತಿಲ್ಲ ಎನ್ನುವ ಭಾವನೆಯನ್ನು ತಳೆಯುತ್ತಾರೆ. ಇದರಿಂದ ಸಂಗಾತಿಗಳ ನಡುವೆ ಬಿರುಕು, ಬೇಸರ ಹಾಗೂ ದೂರ ಸರಿಯುವ ನಿರ್ಧಾರವನ್ನು ಕೈಗೊಳ್ಳುವರು. ಅಲ್ಲದೆ ಜೀವನದಲ್ಲಿ ಮತ್ತೆ ಅಪರಿಚಿತರಂತೆ ದೂರವಾಗಿ ಬದುಕನ್ನು ಸಾಗಿಸುವರು. ಇದರಿಂದ ಎರಡು ಮನಸ್ಸಿಗೂ ಸಾಕಷ್ಟು ನೋವು ಹಾಗೂ ಮಾನಸಿಕ ನೆಮ್ಮದಿ ಹಾಳಾಗುವುದು ಖಚಿತವಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ವ್ಯಕ್ತಿಯಲ್ಲಿ ಇರುವ ಹೊಂದಾಣಿಕೆಯ ಸಮಸ್ಯೆ ಹಾಗೂ ಸಂಗಾತಿಯಿಂದ ಬಯಸುವ ಅತಿಯಾದ ನಿರೀಕ್ಷೆಗಳು ಬಹುಮುಖ್ಯ ಕಾರಣವಾಗಿರುತ್ತವೆ.

ಇತ್ತೀಚಿನ ದಿನದಲ್ಲಿ ವಿವಾಹದ ಅಡಿಪಾಯ ಅಷ್ಟು ಗಟ್ಟಿಯಾಗಿರುವುದಿಲ್ಲ. ಇದಕ್ಕೆ ಕಾರಣ ಸಂಗಾತಿಗಳ ನಡುವೆ ಇರುವ ಭರವಸೆಯ ಕೊರತೆ, ಅಪೇಕ್ಷೆಗಳು, ಹೊಂದಾಣಿಕೆಯ ಸಮಸ್ಯೆ, ಬೆಳೆದು ಬಂದ ವಾತಾವರಣದ ಸಮಸ್ಯೆ, ಸಂಗಾತಿಯ ಆಸಕ್ತಿಗೆ ಸಾಕಷ್ಟು ಮಹತ್ವ ಹಾಗೂ ಪ್ರೀತ್ಸಾಹ ನೀಡದೆ ಇರುವುದು ಹಾಗೂ ಆರ್ಥಿಕ ಸ್ಥಿತಿಯ ಸಮಸ್ಯೆ, ಸ್ವಾವಲಂಭನೆ ಸೇರಿದಂತೆ ಅನೇಕ ಕಾರಣಗಳಿಂದ ವಿವಾಹ ಎನ್ನುವ ಅಡಿಪಾಯ ಅಲುಗಾಡಲು ಪ್ರಾರಂಭಿಸಿದೆ ಎನ್ನಲಾಗುತ್ತಿದೆ. ಈ ಕಾರಣಗಳಿಂದಾಗಿ ಇತ್ತೀಚಿನ ದಿನದಲ್ಲಿ ಬಹುತೇಕ ಜನರು ವಿವಾಹದ ಬಗ್ಗೆ ಗೊಂದಲ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ನಮ್ಮ ಹೊಸ ಜೀವನ ಅಥವಾ ಪ್ರೀತಿಯ ಜೀವನ ಎಂದು ಯಾವುದನ್ನು ಕರೆಯುತ್ತೇವೆಯೋ ಅದು ಸಹ ನಮ್ಮ ಎಣಿಕೆಯಂತೆ ಇರದು. ಎಲ್ಲವೂ ನಮ್ಮ ರಾಶಿಚಕ್ರ ಹಾಗೂ ಗ್ರಹಗಳ ಪ್ರಭಾವದಿಂದ ನೆರವೇರುವುದು. ನಾವು ಎಂತಹದದ್ದೇ ಕನಸು ಭರವಸೆ ಹೊಂದಿದ್ದರೂ ಸಹ ಅದು ನಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಇದೆ ಎಂದಾಗ ಮಾತ್ರ ಹಾಗೆ ಆಗುವುದು. ಇಲ್ಲವಾದರೆ ನಮ್ಮ ಭವಿಷ್ಯದಲ್ಲಿ ಏನು ನೆರವೇರಬೇಕೋ ಅದೇ ನಡೆಯುತ್ತದೆ ಎಂದು ಹೇಳಲಾಗವುದು. ನಿಮಗೆ ನಿಮ್ಮ ರಾಶಿಚಕ್ರದ ಅನುಸಾರ ಯಾವ ರೀತಿಯ ವ್ಯಕ್ತಿಯನ್ನು ವಿವಾಹವಾಗುವಿರಿ? ನಿಮ್ಮ ಸಂಗಾತಿಯೊಂದಿಗಿನ ಹೊಸ ಜೀವನ ಹೇಗಿರುತ್ತದೆ? ಎನ್ನುವುದನ್ನು ತಿಳಿದುಕೊಳ್ಳಲು ಆಸಕ್ತಿ ಇದ್ದರೆ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ: ಹವ್ಯಾಸಗಳಿಗೆ ಅನುಗುಣವಾಗಿ ವಿವಾಹ ಆಗುವರು

ಮೇಷ: ಹವ್ಯಾಸಗಳಿಗೆ ಅನುಗುಣವಾಗಿ ವಿವಾಹ ಆಗುವರು

ಮೇಷರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಧೈರ್ಯವಂತರು. ಸದಾ ಚಟುವಟಿಕಾ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸಾಹಸ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಜೀವನದ ಸಂಗಾತಿಯಾಗುವವರು ಸಹ ತಮ್ಮ ಹವ್ಯಾಸ ಹಾಗೂ ಭಾವನೆಗಳಿಗೆ ಅನುಗುಣವಾದ ವ್ಯಕ್ತಿತ್ವದ ವ್ಯಕ್ತಿಯಾಗಿರಬೇಕು ಎಂದು ಬಯಸುತ್ತಾರೆ. ತಮ್ಮ ಸಂಗಾತಿಯು ಕ್ರೀಡಾಪಟುವಾಗಿರಬೇಕು. ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಹಾಗೂ ಸಾಧನೆ ಗೈಯುವಂತಹ ಮನೋಭಾವ ಹೊಂದಿರಬೇಕು ಎಂದು ಬಯಸುತ್ತಾರೆ. ಸ್ವಾತಂತ್ರ್ಯ ಹಾಗೂ ಸ್ವಾವಲಂಭನೆಯನ್ನು ಬಯಸುವ ವ್ಯಕ್ತಿಗಳಾಗಿರುವುದರಿಂದ ಸಂಗಾತಿಯೂ ಹಾಗೆಯೇ ಇರಬೇಕು ಎಂದು ಬಯಸುತ್ತಾರೆ. ಇವರ ಭಾವನೆಗಳು ಹಾಗೂ ವರ್ತನೆಗಳು ರಾಶಿ ಚಕ್ರಕ್ಕೆ ಅನುಗುಣವಾಗಿಯೇ ಇರುವುದರಿಂದ ಆಸೆಯಂತಹ ಸಂಗಾತಿಯೇ ದೊರೆಯುವರು. ಅಲ್ಲದೆ ಲೈಂಗಿಕ ಜೀವನವು ಹೆಚ್ಚು ಉತ್ಸಾಹ ಹಾಗೂ ಖುಷಿಯಲ್ಲಿಯೇ ನೆರವೇರುವುದು ಎಂದು ಹೇಳಲಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಷಭ: ಬಲವಾದ ಇಚ್ಛೆ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ವೃಷಭ: ಬಲವಾದ ಇಚ್ಛೆ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಮೇಷ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಸ್ಥಿರ ಹಾಗೂ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರು ವಿವಾಹವಾಗುವ ವ್ಯಕ್ತಿಯು ಅತ್ಯಂತ ಒಳ್ಳೆಯ ಸ್ವಭಾವದವರಾಗಿರುತ್ತಾರೆ. ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುವುದರಿಂದ ಇಂದ್ರೀಯ ಸುಖ, ಸಂತೋಷವನ್ನು ನೀಡುವರು. ಜೀವನದಲ್ಲಿ ಸಾಕಷ್ಟು ಸೌಕರ್ಯದ ಸವಲತ್ತನ್ನು ನೀಡುವರು. ಬಹಳ ಪ್ರಬಲವಾದ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು. ಇವರ ಭಾವನೆಯಲ್ಲಿ ಯಾವುದೇ ದುರುದ್ದೇಶಗಳಿರುವುದಿಲ್ಲ ಎಂದು ಹೇಳಲಾಗುವುದು. ಇವರು ತಾವು ಹಂಬಲಿಸಿದ ಹಾಗೂ ಬೆಂಬಲಿಸಿದ ರೀತಿಯಲ್ಲಿಯೇ ಜೀವನ ನಡೆಸುವರು. ಸಂಗಾತಿಯನ್ನು ಪಡೆದುಕೊಳ್ಳುವರು. ಇವರ ಸಂಗಾತಿಯು ಸದಾ ಇವರ ಹಿಂದೆಯೇ ಇರುತ್ತಾರೆ ಎಂದು ಹೇಳಲಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಿಥುನ: ಉತ್ತಮ ಸಂಭಾಷಣೆ ಮಾಡುವ ವ್ಯಕ್ತಿಯನ್ನು ವಿವಾಹವಾಗುತ್ತಾರೆ

ಮಿಥುನ: ಉತ್ತಮ ಸಂಭಾಷಣೆ ಮಾಡುವ ವ್ಯಕ್ತಿಯನ್ನು ವಿವಾಹವಾಗುತ್ತಾರೆ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿಜೀವಿಗಳಾಗಿರುತ್ತಾರೆ. ಇವರು ಎಲ್ಲರನ್ನೂ ಅಥವಾ ಕುರುಡು ನಂಬಿಕೆಯ ಮೇಲೆ ವಿವಾಹವಾಗುವುದಿಲ್ಲ. ಇವರು ವಿವಾಹವಾಗುವ ವ್ಯಕ್ತಿಗಳು ಅತ್ಯುತ್ತಮ ಸಂಭಾಷಣಾಕಾರರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳೊಂದಿಗೆ ಇರುವಾಗ ಅತ್ಯಂತ ಸಂತೋಷ ದೊರೆಯುವುದು. ಇವರು ತಮ್ಮ ಸಂಗಾತಿಯನ್ನು ಸದಾ ಸಂತೋಷದಲ್ಲಿ ಇರುವಂತೆ ನೋಡಿಕೊಳ್ಳುವರು. ಇವರೊಂದಿಗೆ ಜೀವನವು ಎಂದಿಗೂ ಮಂದಗತಿಯನ್ನು ಹೊಂದಿರದು. ಇವರು ಸದಾ ಊಹೆಯನ್ನು ಮಾಡುವುದರ ಮೂಲಕ ಸನ್ನಿವೇಶವನ್ನು ನಿಭಾಯಿಸುವರು. ಹಾಗಾಗಿ ಇದರಿಂದ ಸಂಗಾತಿಗಳ ನಡುವೆ ಯಾವುದೇ ಬೇಸರ ಸೃಷ್ಟಿಯಾಘದು ಎಂದು ಹೇಳುತ್ತಾರೆ. ಇವರು ವಯಸ್ಸಾದಂತೆ ಲೈಂಗಿಕ ಜೀವನವನ್ನು ನರಕದಂತೆ ಭಾವಿಸುವ ಸಾಧ್ಯತೆಗಳಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕರ್ಕ: ಸುರಕ್ಷತೆಯ ಭಾವ ಹೊಂದಿರುವ ವ್ಯಕ್ತಿಗಳನ್ನು ವಿವಾಹವಾಗುವರು

ಕರ್ಕ: ಸುರಕ್ಷತೆಯ ಭಾವ ಹೊಂದಿರುವ ವ್ಯಕ್ತಿಗಳನ್ನು ವಿವಾಹವಾಗುವರು

ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಭಾವನಾತ್ಮಕ ಜೀವಿಗಳಾಗಿ ಹಾಗೂ ಸೂಕ್ಷ್ಮ ವ್ಯಕ್ತಿಗಳಾಗಿ ಆಕರ್ಷಣೆಗೆ ಒಳಗಾಗುವರು. ಇವರು ಸದಾ ತಂದೆಯ ರೀತಿಯ ರಕ್ಷಣಾತ್ಮಕ ಭಾವನೆಯನ್ನು ನೀಡುವರು. ಇವರು ವಿವಾಹವಾಗುವಾಗ ಸ್ವಲ್ಪ ವಯಸ್ಸಾಗಬಹುದು. ಇವರು ಸ್ವಲ್ಪ ವಯಸ್ಸಾದವರಾಗಿರುವುದರಿಂದ ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಸುರಕ್ಷತೆಯನ್ನು ನೀಡುವರು. ಹಾಗಂತ ಇವರು ಮುದುಕರು ಎಂದರ್ಥವಲ್ಲ. ತಮ್ಮ ಕುಟುಂಬದವರನ್ನು ಹಾಗೂ ಪ್ರೀತಿ ಪಾತ್ರರಿಗೆ ಹೆಚ್ಚು ರಕ್ಷಣೆ ಹಾಗೂ ಪ್ರೀತಿಯನ್ನು ನೀಡುವರು. ತಮ್ಮ ಸಂಗಾತಿಯು ಅದೇ ರೀತಿಯಲ್ಲಿ ಇರಬೇಕು ಎಂದು ಬಯಸುವರು. ಉತ್ತಮ ಹೊಂದಾಣಿಕೆ ಇರುವುದರಿಂದ ಜೀವನ ಸುಲಲಿತವಾಗಿ ಸಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಸಿಂಹ: ಹೆಚ್ಚು ಪ್ರಸಿದ್ಧಿ ಹಾಗೂ ವರ್ಚಸ್ಸು ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಸಿಂಹ: ಹೆಚ್ಚು ಪ್ರಸಿದ್ಧಿ ಹಾಗೂ ವರ್ಚಸ್ಸು ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಸ್ವತಂತ್ರ ವ್ಯಕ್ತಿಗಳು ಹಾಗೂ ಸಾಧನೆಯನ್ನು ಗೈಯಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಇವರ ರಾಶಿಚಕ್ರಕ್ಕೆ ಅನುಗುಣವಾಗಿ ಹೆಚ್ಚು ಯಶಸ್ಸನ್ನು ಹೊಂದಿದವರು ಹಾಗೂ ವರ್ಚಸ್ಸನ್ನು ಹೊಂದಿರುವ ವ್ಯಕ್ತಿಯನ್ನು ವಿವಾಹವಾಗಲು ಬಯಸುತ್ತಾರೆ. ಇವರನ್ನು ವಿವಾಹವಾಗುವ ವ್ಯಕ್ತಿಗಳಿಗೆ ಯಶಸ್ಸನ್ನು ಸಾಧಿಸಲು ಹಾಗೂ ವರ್ಚಸ್ಸನ್ನು ಹೊಂದಲು ಅವಕಾಶವಿರುತ್ತದೆ. ಇವರು ಅತ್ಯಂತ ಉದಾರವಾದಿಗಳಾಗಿರುವುದರಿಂದ ಪ್ರೀತಿಯಿಂದ ಪ್ರೀತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಅಲ್ಲದೆ ಸಂಬಂಧದಲ್ಲಿ ಅದ್ಭುತವನ್ನು ಸೃಷ್ಟಿಸುತ್ತಾರೆ. ಅಲ್ಲದೆ ಸಂಗಾತಿಯಿಂದ ಪ್ರಶಂಸೆಯನ್ನು ಪಡೆದುಕೊಳ್ಳುವರು. ಒಟ್ಟಿನಲ್ಲಿ ಒಟ್ಟಾಗಿ ಇಬ್ಬರು ವಿಶ್ವವನ್ನು ಆಳುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕನ್ಯಾ: ಎಲ್ಲಾ ವಿಚಾರದಲ್ಲೂ ಒಳ್ಳೆಯ ನಡತೆ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುತ್ತಾರೆ

ಕನ್ಯಾ: ಎಲ್ಲಾ ವಿಚಾರದಲ್ಲೂ ಒಳ್ಳೆಯ ನಡತೆ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುತ್ತಾರೆ

ಈ ರಾಶಿಯ ವ್ಯಕ್ತಿಗಳಲ್ಲಿ ಸಾಕಷ್ಟು ವಿಚಾರದಲ್ಲಿ ಪ್ರೌಢಿಮೆ ಹಾಗೂ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ಎಲ್ಲಾ ವಿಷಯಗಳನ್ನು ವಿಶ್ಲೇಷಣೆ ಹಾಗೂ ವಿಮರ್ಶಾತ್ಮಕವಾಗಿ ನೋಡುತ್ತಾರೆ. ಇವರ ವಿಶ್ಲೇಷಣಾತ್ಮಕ ಜಗತ್ತಿನಲ್ಲಿ ಸಾಕಷ್ಟು ಸೃಜನಶೀಲತೆ ಹಾಗೂ ಹಾಸವು ಅಡಗಿರುತ್ತದೆ. ಬುದ್ಧಿವಂತ ವ್ಯಕ್ತಿಗಳಾಗಿರುವ ಇವರು ಸಭ್ಯರು, ಪ್ರಭುದ್ಧರು ಆಗಿರುತ್ತಾರೆ. ಇವರು ಉದ್ವಿಘ್ನತೆಯ ಪರಿಸ್ಥಿತಿಯನ್ನು ತಗ್ಗಿಸುವರು. ಸಾರ್ವಜನಿಕವಾಗಿ ಅಸಹಜ ವರ್ತನೆ ಹೊಮದಿರುವವರು ಹಾಗೂ ಅಸಭ್ಯವ್ಯಕ್ತಿಗಳು ಇವರಿಗೆ ಇಷ್ಟವಾಗುವುದಿಲ್ಲ. ಇವರ ಅಂತರಾಳದ ಗುಣದಲ್ಲಿ ಸ್ವಲ್ಪ ಕ್ರೂರತೆಯು ಅಡಗಿರುತ್ತವೆ. ತಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಂತೋಷದ ಜೀವನ ನಡೆಸುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ತುಲಾ: ಉತ್ತಮ ಜೀವನ ನಡೆಸುವವರನ್ನು ವಿವಾಹವಾಗಲು ಬಯಸುವರು

ತುಲಾ: ಉತ್ತಮ ಜೀವನ ನಡೆಸುವವರನ್ನು ವಿವಾಹವಾಗಲು ಬಯಸುವರು

ಎಲ್ಲಾ ವಿಚಾರದಲ್ಲೂ ಸಮತೋಲನವನ್ನು ಬಯಸುವ ವ್ಯಕ್ತಿಗಳು ತುಲಾ ರಾಶಿಯವರು. ಉತ್ತಮ ಜೀವನ ನಡೆಸುವ ಹಂಬಲವನ್ನು ಗಹೊಂದಿರುವ ವ್ಯಕ್ತಿಗಳೂ ಹೌದು. ಇವರು ಇನ್ನೊಬ್ಬ ತುಲಾ ರಾಶಿಯ ವ್ಯಕ್ತಿಗಳನ್ನು ವಿವಾಹವಾಗಲು ಬಯಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾಜಿಕವಾಗಿ ಉತ್ತಮ ವರ್ತನೆ ಹಾಗೂ ಸ್ಥಾನವನ್ನು ಪಡೆದುಕೊಳ್ಳಲು ಬಯಸುವ ವ್ಯಕ್ತಿಗಳು ಇವರು. ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನದಲ್ಲಿ ಇರುವವರನ್ನು ವಿವಾಹವಾಗಲು ಬಯಸುವರು. ಇವರು ವಿವಾಹ ಆಗುವ ವ್ಯಕ್ತಿಗಳು ಅತ್ಯುತ್ತಮ ಮಾತುಗಾರಿಕೆಯನ್ನು ಅರಿತವರಾಗಿರುತ್ತಾರೆ. ಹೊರ ಹೋಗುವ ಹಾಗೂ ಹೆಚ್ಚು ತಮಾಷೆಯನ್ನು ಮಾಡುವ ವ್ಯಕ್ತಿಗಳೂ ಹೌದು. ಅತ್ಯುತ್ತಮ ಆಕರ್ಷಣೆಯನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ವಿವಿಧ ಹವ್ಯಾಸಗಳಿಂದ ಹೆಚ್ಚು ಆಕರ್ಷಿತರಾಗಿರುತ್ತಾರೆ. ವಿವಾಹದ ನಂತರವೂ ಪ್ರಣಯದ ಸನ್ನೆಗಳನ್ನು ತೋರಿಸುವುದಿಲ್ಲ ಎಂದು ಹೇಳಲಾಗುವುದು. ಕೆಲವೊಮ್ಮೆ ಇವರ ವರ್ತನೆಗಳು ಇತರರಿಗೆ ಮೂರ್ಛೆ ತಪ್ಪುವಂತೆ ಮಾಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಶ್ಚಿಕ: ನಿಗೂಢ ವ್ಯಕ್ತಿಗಳನ್ನು ವಿವಾಹವಾಗುತ್ತಾರೆ

ವೃಶ್ಚಿಕ: ನಿಗೂಢ ವ್ಯಕ್ತಿಗಳನ್ನು ವಿವಾಹವಾಗುತ್ತಾರೆ

ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ನಿಗೂಢವಾದ, ತೀಕ್ಷ್ಣವಾದ ಮತ್ತು ಸ್ವಲ್ಪ ಅಪಾಯಕಾರಿ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳಿಂದ ಹೆಚ್ಚು ಆಕರ್ಷಿತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಬಲವಾದ ಇಚ್ಛಾಶಕ್ತಿ ಇಲ್ಲದ ಸ್ವಾಮ್ಯ ಸೂಚಕವಾದ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು. ಇವರಲ್ಲಿ ಸ್ವಲ್ಪ ಗೀಳಿನ ಸ್ವಭಾವ ಇರುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಇವರನ್ನು ವಿವಾಹವಾಗುವ ವ್ಯಕ್ತಿಗಳಿಗೆ ಸ್ವಲ್ಪ ಆಘಾತಕಾರಿಯಾಗಿರುತ್ತದೆ ಎಂದು ಹೇಳಲಾಗುವುದು. ಮಾನಸಿಕವಾಗಿ ಇವರು ನಿರತಂತರವಾದ ಉತ್ಸಾಹದಲ್ಲಿ ಇರುತ್ತಾರೆ. ಇವರು ತಮ್ಮ ಸಂಗಾತಿಯೊಂದಿಗೆ ಅತ್ಯದ್ಭುತವಾದ ಲೈಂಗಿಕ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಸಂಗಾತಿಗಳು ಜೀವನದ ಉದ್ದಕ್ಕೂ ಉತ್ತಮ ಸಂತೋಷ ಹಾಗೂ ಪ್ರೀತಿಯಿಂದ ಸಮಯವನ್ನು ಕಳೆಯುವರು ಎಂದು ಹೇಳಲಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಧನು: ತಾತ್ವಿಕ ಪ್ರವಾಸಿಗರನ್ನು ವಿವಾಹವಾಗುವರು

ಧನು: ತಾತ್ವಿಕ ಪ್ರವಾಸಿಗರನ್ನು ವಿವಾಹವಾಗುವರು

ಧನು ರಾಶಿಯವರು ಸಾಮಾನ್ಯವಾಗಿ ಅತ್ಯಂತ ಉತ್ಸಾಹ ಹಾಗೂ ಸಾಹಸವಾದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಾಔಉ ವಿವಾಹವಾಗಲು ಬಯಸುವ ವ್ಯಕ್ತಿಯು ಸಹ ಸಾಹಸ ಪ್ರವೃತ್ತಿಯನ್ನು ಹೊಂದಿರುವ ಹಾಗೂ ತಾತ್ವಿಕ ಚರ್ಚೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳನ್ನು ವಿವಾಹವಾಗಲು ಬಯಸುತ್ತಾರೆ. ಇವರು ವಿವಾಹವಾಗುವ ವ್ಯಕ್ತಿಗಳು ಪ್ರಾಮಾಣಿಕತೆ, ಸಮಗ್ರತೆ, ಆಧ್ಯಾತ್ಮಿಕತೆ ಹಾಗೂ ಹಾಸ್ಯದ ಪರಿಪೂರ್ಣ ಸಮತೋಲನವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರ ಸಂಗಾತಿಯು ಇವರಿಗೆ ಉತ್ತಮ ಸ್ನೇಹಿತ, ಶಿಕ್ಷಕ ಮತ್ತು ಮಾರ್ಗದರ್ಶಿಯಾಗಿರುತ್ತಾರೆ. ಇವರು ಯಾರನ್ನೂ ಮೇಲು ಕೀಳು ಎನ್ನುವ ಭಾವನೆಯಲ್ಲಿ ತುಲನೆ ಮಾಡುವುದಿಲ್ಲ. ಇವರ ವಿವಾಹದ ಜೀವನವು ನಿಜವಾದ ಪ್ರೀತಿಯಿಂದ ಮುಂದುವರಿಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಕರ: ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಮಕರ: ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಇವರಿಗೆ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆಯಾಗಿರುತ್ತದೆ. ನೀವು ಒಂದು ಗಮಭೀರವಾದ ಭವಿಷ್ಯದ ವ್ಯಕ್ತಿಯನ್ನು ನೋಡುವ ಗುರಿಯನ್ನು ಹೊಂದಿರುತೀರಿ. ಯಶಸ್ವೀ ವ್ಯಕ್ತಿಯ ಪರಿಚಯವು ನಿಮಗಾದರೆ ಅವರೊಂದಿಗೆ ಉತ್ತಮು ಸಲುಗೆ ಪ್ರೀತಿಯು ಬೆಳೆದರೆ ಅವರನ್ನೇ ವಿವಾಹವಾಗುವ ಸಾಧ್ಯತೆಗಳಿರುತ್ತವೆ. ಅತ್ಯುತ್ತಮ ಸ್ನೇಹಿತರ ರೂಪದಲ್ಲಿ ಅನುಕೂಲಕರವಾದ ಪರಿಸ್ಥಿತಿಯನ್ನು ಹೊಂದುವಿರಿ. ಇವರು ತಮ್ಮ ಆಸಕ್ತಿಗೆ ಅನುಗುಣವಾದ ವ್ಯಕ್ತಿಯ ಪರಿಚಯವಾದರೆ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಹಾಗೂ ಉತ್ತಮ ಸ್ನೇಹಿತರಾಗಿ ಸಮಯವನ್ನು ಕಳೆಯುವರು. ಇವರ ಆಸಕ್ತಿ ಹಾಗೂ ಸ್ನೇಹವು ಅಂತಿಮವಾಗಿ ವಿವಾಹದ ಹಂತವನ್ನು ಪಡೆದುಕೊಳ್ಳುವುದು. ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಉತ್ತಮ ಸ್ಥಾನವನ್ನು ಪಡೆದುಕೊಳ್ಳುವ ಇವರು ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಂಡುಕೊಳ್ಳುವರು. ಸಂಗಾತಿಗಳಿಬ್ಬರಲ್ಲೂ ಸಾಮಾನ್ಯವಾಗಿ ಒಂದೇ ಭಾವನೆ ಹಾಗೂ ತೀರ್ಮಾನ ಗಳಿರುವುದರಿಂದ ಉತ್ತಮ ಜೀವನ ದೊರೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕುಂಭ: ಆದರ್ಶವಾದಿ ವ್ಯಕ್ತಿಯನ್ನು ವಿವಾಹವಾಗುವರು

ಕುಂಭ: ಆದರ್ಶವಾದಿ ವ್ಯಕ್ತಿಯನ್ನು ವಿವಾಹವಾಗುವರು

ಈ ರಾಶಿಯ ವ್ಯಕ್ತಿಗಳು ತಮ್ಮದೇ ಆದ ಕನಸು ಹಾಗೂ ಗುರಿಯನ್ನು ಹೊಂದಿರುತ್ತಾರೆ. ಇವರು ವಿವಾಹವಾದ ವ್ಯಕ್ತಿಯು ಹೆಚ್ಚು ಆದರ್ಶವಾದಿಗಳಾಗಿರುತ್ತಾರೆ. ಇವರ ಕೆಲವು ಗುರಿಗಳಿಗೆ ಹಾಗೂ ಆಸೆಗಳಿಗೆ ಸಂಗಾಥಿಯೇ ಕೆಲವು ಒಳಸಂಚು ಮಾಡಬಹುದು. ಇದಕ್ಕೆ ಕಾರಣ ಅವರ ಉತ್ತೇಜಕ ಹಾಗೂ ಅಸಂಪ್ರದಾಯಕ ಪ್ರವೃತ್ತಿ ಕಾರಣವಾಗಿರುತ್ತದೆ ಎನ್ನಲಾಗುವುದು. ಇವರು ಬಂಡಾಯ ಗಾರರು ಹಾಗೂ ಇತರರ ಅಭಿಪ್ರಾಯಗಳಿಗೆ ಸ್ವಲ್ಪ ಆಘಾತವನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಮಂದವಾಗಿ ಹಾಗೂ ನಿರಸವಾದ ಪ್ರವೃತ್ತಿ ಹೊಂದುವುದನ್ನು ಬಯಸದ ವ್ಯಕ್ತಿಗಳಾಗಿರುತ್ತಾರೆ. ಅಸಾ ಕಾಲ ಹೊಸ-ಹೊಸ ಸಂಗತಿಗಳ ಬಗ್ಗೆ ಚಿಂತನೆ ನಡೆಸಲು ಹಾಗೂ ಅದನ್ನು ಪ್ರಾಯೋಗಿಕ ರೂಪದಲ್ಲಿ ತರಲು ಬಯಸುತ್ತಾರೆ. ಇದೀ ಪ್ರವೃತ್ತಿಯು ಸಂಗಾತಿಯದದ್ದಾಗಿದ್ದರೆ ಸಂಗಾತಿಯೊಂದಿಗಿನ ಜೀವನ ಸುಂದರವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮೀನ: ಸಂರಕ್ಷಣಾತ್ಮಕ ಪ್ರವೃತ್ತಿ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಮೀನ: ಸಂರಕ್ಷಣಾತ್ಮಕ ಪ್ರವೃತ್ತಿ ಹೊಂದಿರುವ ವ್ಯಕ್ತಿಯನ್ನು ವಿವಾಹವಾಗುವರು

ಮೀನ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಕನಸುಗಾರ, ಪ್ರಣಯ ಪೂರ್ಣ ವ್ರವೃತ್ತಿ ಹಾಗೂ ಸೂಕ್ಷ್ಮ ಗುಣದ ವ್ಯಕ್ತಿಗಳಾಗಿರುತ್ತಾರೆ. ಕನಸುಕಾಣುವುದು ಹಾಗೂ ಆಕರ್ಷಕ ವ್ಯಕ್ತಿಗಳನ್ನು ಪ್ರೀತಿಸುತ್ತೀರಿ. ಅಲ್ಲದೆ ಅವರೊಂದಿಗೆ ತಮ್ಮ ಅಗತ್ಯತೆಯನ್ನು ಹಂಚಿಕೊಳ್ಳುವುದು ಹಾಗೂ ಸ್ನೇಹ ಬೆಳೆಸಲು ಮುಂದಾಗುವರು. ಅವರಲ್ಲಿ ತಮ್ಮ ಪ್ರಭಾವವನ್ನು ಹೆಚ್ಚು ಬೀರಲು ಪ್ರಯತ್ನಿಸುವರು. ಇವರು ತಮ್ಮ ಸಂಗಾತಿಯೊಂದಿಗೆ ಸದಾ ಪ್ರಣಯ ಪೂರಕ ವ್ಯಕ್ತಿಗಳಾಗಿ ಉಳಿದುಕೊಳ್ಳಲು ಬಯಸುವರು. ಹತಾಶೆಯ ಪ್ರಣಯವನ್ನು ಬಯಸದ ವ್ಯಕ್ತಿಗಳಾಗಿರುತ್ತಾರೆ. ರಕ್ಷಣಾತ್ಮಕ ಭಾವನೆಯನ್ನು ನೀಡುವ ವ್ಯಕ್ತಿಯನ್ನು ವಿವಾಹವಾಗುವರು. ಇವರ ಅಪರೂಪದ ಮನಃಸ್ಥಿತಿ ಹಾಗೂ ಬಂಧದಿಂದ ಜೀವನವನ್ನು ನಡೆಸುವುದರ ಮೂಲಕ ಸಂತೋಷದ ಜೀವನವನ್ನು ಕಂಡುಕೊಳ್ಳುವಿರಿ. ನಿಮ್ಮ ಸಂಗಾತಿಯು ನಿಮ್ಮ ಭಾವನೆಗೆ ತಕ್ಕಂತೆ ವರ್ತಿಸುವರು. ಅಲ್ಲದೆ ಇವರ ಬಗ್ಗೆ ಹೆಚ್ಚಿನ ಗೌರವ ನೀಡುವರು. ಜೊತೆಗೆ ಉತ್ತಮ ಪ್ರೀತಿಯನ್ನು ಪಡೆದುಕೊಲ್ಳುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

Kind Of Man You're Going To Marry, As per the Zodiac

Are you the kind of woman who has dreamed of her wedding ever since she was a little girl? Have you imagined the venue, the flower arrangements, and even the cake? Have you thought about the qualities that you wanted your groom to possess? Have you discussed your wedding specifics with your friends and families, and in turn, have gotten their pieces of advice and predictions?
Story first published: Tuesday, December 4, 2018, 12:48 [IST]
X
Desktop Bottom Promotion