ಸೂರ್ಯಹರಳು (Sunstone)
ಇದು ಮಣ್ಣಿನ ಬಣ್ಣದ ನೈಸರ್ಗಿಕ ಹರಳಾಗಿದ್ದು ಸಂಪತ್ತನ್ನು ಆಕರ್ಶಿಸಲು ಧನಾತ್ಮಕ ಶಕ್ತಿಯನ್ನು ಹೊಂದಿದೆ. ಇದನ್ನು ಧರಿಸಿದವರ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಚಕ್ರದೊಂದಿಗೆ ಇದರ ಪ್ರಭಾವವೂ ಜೊತೆಗೂಡಿ ಧನ ಸಂಪಾದಿಸಲು ಎದುರಾಗುವ ಹೆದರಿಕೆಯನ್ನು ನಿವಾರಿಸುತ್ತದೆ. ಈ ಹರಳಿನ ಆಭರಣ ಧರಿಸುವುದು ಅಥವಾ ಕುಳಿತುಕೊಳ್ಳುವ ಸ್ಥಳದ ಅಕ್ಕಪಕ್ಕದಲ್ಲಿರುವಂತೆ ಇರಿಸಿದರೆ ಅದೃಷ್ಟ ಹಾಗೂ ಸಂಪತ್ತು ಶೀಘ್ರವೇ ಆಗಮಿಸುತ್ತದೆ.
ಅವೆಂಚುರಿನ್ (Aventurine)
ಇದೊಂದು ಪಚ್ಚೆ ಹಸಿರು ಬಣ್ಣದ ಹರಳಾಗಿದ್ದು ಇದಕ್ಕೆ ಜೂಜುಕೋರರ ಹರಳು ಎಂಬ ಅನ್ವರ್ಥನಾಮವೂ ಇದೆ. ಈ ಹರಳನ್ನು ಹೊಂದಿರುವವರಿಗೆ ಹಲವಾರು ಅವಕಾಶಗಳು ಎದುರಾಗುತ್ತವೆ ಹಾಗೂ ಇವುಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕ ಸಮೃದ್ಧಿ ಪಡೆಯಲು ನೆರವಾಗುತ್ತದೆ.
ಅವೆಂಚುರಿನ್ (Aventurine)
ಇದೊಂದು ಪಚ್ಚೆ ಹಸಿರು ಬಣ್ಣದ ಹರಳಾಗಿದ್ದು ಇದಕ್ಕೆ ಜೂಜುಕೋರರ ಹರಳು ಎಂಬ ಅನ್ವರ್ಥನಾಮವೂ ಇದೆ. ಈ ಹರಳನ್ನು ಹೊಂದಿರುವವರಿಗೆ ಹಲವಾರು ಅವಕಾಶಗಳು ಎದುರಾಗುತ್ತವೆ ಹಾಗೂ ಇವುಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕ ಸಮೃದ್ಧಿ ಪಡೆಯಲು ನೆರವಾಗುತ್ತದೆ.
ಸಿಟ್ರಿನ್ (Citrine)
ಇದೊಂದು ಹಳದಿ ಬಣ್ಣದ ಗಾಜಿನಂತಹ, ಸುಲಭವಾಗಿ ಒಡೆಯುವ ಕ್ವಾರ್ಟ್ಸ್ ಹರಳಾಗಿದ್ದು ಇದಕ್ಕೆ 'ವರ್ತಕರ ಹರಳು' ಎಂಬ ಅನ್ವರ್ಥ ನಾಮವೂ ಇದೆ. ಈ ಹರಳನ್ನು ಹೊಂದಿರುವ ವರ್ತಕರು ಹಾಗೂ ಇತರ ಮಾರಾಟ ವಿಭಾಗದ ವ್ಯಕ್ತಿಗಳಿಗೆ ಸಮೃದ್ಧತೆಯನ್ನು ತರುತ್ತದೆ. ವಿಶೇಷವಾಗಿ ಯಾವುದೇ ವ್ಯಾಪಾರ ನಡೆಸುವ ವ್ಯಕ್ತಿಗಳು ತಮ್ಮ ಬಳಿ ಇರಿಸುವ ಮೂಲಕ ವ್ಯಾಪಾರದ ಅಭಿವೃದ್ಧಿಯ ಮೂಲಕ ಅಪಾರ ಸಂಪತ್ತನ್ನು ಪಡೆಯಬಹುದು.
ಐರನ್ ಪೈರೈಟ್ (Iron Pyrite)
'ಮೂರ್ಖರ ಚಿನ್ನ' ಎಂದೇ ಪರಿಚಿತವಾಗಿರುವ ಈ ಹರಳು ಗಾಢವಾದ ಹೊಳಪಿನ ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿದೆ. ಈ ಹರಳನ್ನು ಹೊಂದಿರುವವರನ್ನು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ ಹಾಗೂ ಧರಿಸಿದ ವ್ಯಕ್ತಿಯನ್ನು ಮೋಸಗಾರರಿಂದಲೂ ರಕ್ಷಿಸುತ್ತದೆ.
ಜೇಡ್ (Jade)
ಸಿಟ್ರೀನ್ ನಂತೆಯೇ ಈ ಹರಳು ಸಹಾ ಅದೃಷ್ಟ ಹಾಗೂ ಸಮೃದ್ದಿಯನ್ನು ತರುತ್ತದೆ. ಗಾಢಹಸಿರು ಮತ್ತು ನಡುನಡುವೆ ಕೊಂಚ ಕಪ್ಪು ಬಣ್ಣವಿರುವ ಈ ಹರಳು ಇದನ್ನು ಹೊಂದಿರುವ ವ್ಯಕ್ತಿಯ ಭಾಗ್ಯವನ್ನು ಬದಲಿಸುತ್ತದೆ. ಈ ಹರಳನ್ನು ಶರೀರಕ್ಕೆ ತಾಕುವಂತೆ ಇರಿಸಿದರೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಧರಿಸಿದವರ ಹೃದಯ ಚಕ್ರದೊಂದಿಗೆ ಹೊಂದಿಕೊಳ್ಳುವ ಮೂಲಕ ನಿಮ್ಮ ಸಂಪತ್ತು ಹೊಂದುವ ಬಯಕೆಯನ್ನು ಈಡೇರಿಸುತ್ತದೆ ಹಾಗೂ ನಿಮ್ಮ ಭಾವನಾತ್ಮಕ ಬಯಕೆಗಳನ್ನೂ ಸಮತೋಲನದಲ್ಲಿ ಈಡೇರಿಸಲು ನೆರವಾಗುತ್ತದೆ.
ಸೋಡಲೈಟ್ (Sodalite)
ಈ ಹರಳಿಗೆ 'ಕವಿಗಳ ಹರಳು' ಎಂದೂ ಕರೆಯುತ್ತಾರೆ. ಸತ್ಯವನ್ನು ಕಂಡುಕೊಳ್ಳಲು ಯಾವುದೇ ಬಗೆಯ ಸಂಚು ನಡೆಸಲು ಈ ಕಲ್ಲು ನೆರವಾಗುತ್ತದೆ. ಸಾಮಾನ್ಯವಾಗಿ ಈ ಹರಳನ್ನು ಧರಿಸಿದ ವ್ಯಕ್ತಿಯ ಯಶಸ್ಸಿನ ದಾರಿಯಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಲು ಈ ಹರಳು ನೆರವಾಗುತ್ತದೆ.