Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ಜುಲೈ 18 ರಿಂದ 24ರ ವಾರ ಭವಿಷ್ಯ
ಭವಿಷ್ಯ ಎನ್ನುವುದು ನಮ್ಮ ನಂಬಿಕೆ ಹಾಗೂ ಭರವಸೆಯ ಮಟ್ಟವನ್ನು ಗಟ್ಟಿಗೊಳಿಸುತ್ತದೆ. ಭವಿಷ್ಯದಲ್ಲಿ ಉತ್ತಮ ಫಲಗಳು ದೊರೆಯುತ್ತವೆ ಅಥವಾ ದೊರೆಯಬಹುದು ಎನ್ನುವ ನಂಬಿಕೆಯಿಂದಲೇ ದಿನವನ್ನು ಕಳೆಯುತ್ತಲಿರುತ್ತೇವೆ. ನಮ್ಮ ನಂಬಿಕೆಗೆ ವಿರುದ್ಧವಾಗಿ ಭವಿಷ್ಯದಲ್ಲಿ ನಡೆದರೆ ಅದನ್ನು ಸಹಿಸಿಕೊಂಡು, ಪುನಃ ಒಳ್ಳೆಯದಾಗಬಹುದು ಎನ್ನುವ ಭರವಸೆಯನ್ನು ಮತ್ತೆ ಹೊಂದುತ್ತೇವೆ.
ಜ್ಯೋತಿಷ್ಯ ತಜ್ಞರ ಪ್ರಕಾರ ಜುಲೈ 18ರಿಂದ 24ರವರೆಗೆ ವಿವಿಧ ಗ್ರಹಗಳು ತಾವು ಇರುವ ಮನೆಯಿಂದ ವಿಭಿನ್ನ ಪರಿವರ್ತನೆಯನ್ನು ತೆಗೆದುಕೊಳ್ಳುತ್ತವೆ. ಇದರ ಪರಿಣಾಮವಾಗಿ ಪ್ರತಿಯೊಂದು ರಾಶಿಚಕ್ರದವರು ವಿವಿಧ ಅನುಭವಗಳನ್ನು ಪಡೆದುಕೊಳ್ಳುವರು. ಅದರಲ್ಲೂ ಪ್ರಮುಖವಾಗಿ ವೃತ್ತಿ ಜೀವನ ಮತ್ತು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಬದಲಾವಣೆಯನ್ನು ಪಡೆದುಕೊಳ್ಳುವರು ಎಂದು ಹೇಳಲಾಗುತ್ತದೆ. ನಿಮಗೂ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

ಮೇಷ
ಈ ವಾರದಲ್ಲಿ ಗುರುವುದು ವಿಸ್ತರಣೆ ಹಾಗೂ ವರ್ಧನೆಯ ಗ್ರಹವಾಗಿ ಪರಿವರ್ತನೆ ಹೊಂದುವುದರಿಂದ ಗುರುವು ನಿಮ್ಮ ಹಣಕಾಸುಗಳ ಮೇಲೆ ಸ್ವಲ್ಪ ಸಮಯ ನಿರ್ಬಂಧನೆ ಹೇರುವನು. ಇದರಿಂದ ನೀವು ಭಾವನಾತ್ಮಕ ಮತ್ತು ದೈಹಿಕ ಸಮಸ್ಯೆಯನ್ನು ಎದುರಿಸಬೇಕಾಗುವುದು. ಮುಂದಿನ ವಾರ ಆರಂಭವಾಗುವ ಹೊತ್ತಿಗೆ ನಿಧಾನಗತಿಯಲ್ಲಿ ಆರೋಗ್ಯ ಚೇತರಿಕೆ ಹಾಗೂ ಸಂಪತ್ತನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ.

ವೃಷಭ
ಈ ವಾರದಲ್ಲಿ ಉಂಟಾದ ಗ್ರಹಗತಿಗಳ ಪರಿಣಾಮದಿಂದ ಇವರು ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿತ ವಿಚಾರದಲ್ಲಿ ಪ್ರಚೋದನೆಯನ್ನು ಪಡೆದುಕೊಳ್ಳುವರು. ಈ ಹಿಂದೆ ಕೆಲ ತಿಂಗಳ ಕಾಲ ಸಮಸ್ಯೆಯನ್ನು ಹೊಂದಿದ್ದೀರಿ. ಇದೀಗ ನಿಮ್ಮ ಸಂಬಂಧ ಸುಧಾರಣೆಗೆ ಸೂಕ್ತ ಸಮಯ. ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಉತ್ತಮವಾದ ಸಮಯವಾಗುತ್ತದೆ ಎಂದು ಹೇಳಲಾಗುವುದು.

ಮಿಥುನ
ಗುರು ಗ್ರಹದ ನೇರ ಮತ್ತು ಸ್ಥಿರವಾದ ಕ್ರಮದ ಅನುಸಾರ ಇವರು ಕೆಲಸ ಹಾಗೂ ಆರೋಗ್ಯದ ವಿಚಾರದಲ್ಲಿ ಹೆಚ್ಚು ಪ್ರಚೋದನೆಯನ್ನು ಪಡೆದುಕೊಳ್ಳುವರು. ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಸೂಕ್ತ ಚಿಂತನೆ ಹಾಗೂ ಕಾಳಜಿಯಿಂದ ಇರಬೇಕು. ವೃತ್ತಿ ಕ್ಷೇತ್ರದಲ್ಲಿ ಉಂಟಾಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರ ಮೂಲಕ ಮುನ್ನೆಚ್ಚರಿಕೆ ವಹಿಸಿ.

ಕರ್ಕ
ಗುರುವಿನ ಪ್ರಗತಿಶೀಲ ಪರಿಣಾಮದಿಂದ ಇವರು ಹೆಚ್ಚು ವೈಯಕ್ತಿಕ ವಿಚಾರದ ಬಗ್ಗೆ ಪ್ರಾಮುಖ್ಯತೆ ನೀಡುವಿರಿ. ಇವರು ಪ್ರಣಯ, ಮನರಂಜನೆ, ಸೃಜನಶೀಲತೆ, ಸ್ವಯಂ ಪ್ರಚಾರ, ಉದ್ಯಮಗಳ ಮೇಲೆ ಕೇಂದ್ರೀಕರಿಸುವಿರಿ. ಸೂಕ್ತ ನಿರ್ಣಯ ಕೈಗೊಳ್ಳುವುದರ ಮೂಲಕ ಜೀವನದ ಬಗ್ಗೆ ಸೂಕ್ತ ನಿರ್ಣಯವನ್ನು ಕೈಗೊಳ್ಳಬೇಕು. ಅದಕ್ಕೆ ಈ ವಾರ ಅತ್ಯುತ್ತಮವಾದದ್ದು ಎಂದು ಹೇಳಲಾಗುವುದು.

ಸಿಂಹ
ಕುಟುಂಬ ಸಂಬಂಧಿತ ಸಮಸ್ಯೆಗಳು ಅಂತಿಮವಾಗಿ ಗುರುಗ್ರಹದ ನೇರ ಕ್ರಮದೊಂದಿಗೆ ಪರಿಹಾರವನ್ನು ಕಂಡುಕೊಳ್ಳುವ ಸಮಯ. ಹಾಗಾಗಿ ಕೆಲವು ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಉತ್ತಮ ಸಮಯ. ಸ್ಥಳಾಂತರಕ್ಕೆ ತಕ್ಷಣ ಯೋಜನೆಯನ್ನು ಕೈಗೊಳ್ಳುವಿರಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಈ ವಾರ ನಿಮಗೆ ಅತ್ಯುತ್ತಮವಾದ ಸಮಯ ಎಂದು ಹೇಳಲಾಗುವುದು.

ಕನ್ಯಾ
ಇವರು ಈ ವಾರ ಕಿರು ಪ್ರವಾಸ, ಶಿಕ್ಷಣ ಹಾಗೂ ಬರಹಗಳಲ್ಲಿ ವಿಕಾಸವನ್ನು ಕಂಡುಕೊಳ್ಳುವರು. ಈ ಹಿಂದೆ ಸಂವಹನ ನಡೆಸಲು ಹೊಂದಿದ್ದ ಸಮಸ್ಯೆಗಳನ್ನು ಈಗ ನಿವಾರಣೆಹೊಂದುವುದು. ಜೊತೆಗೆ ಸಾಕಷ್ಟು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಮಾಧ್ಯಮದಲ್ಲಿ ನಿಮ್ಮ ಸಕ್ರಿಯತೆ ಕಾಣಬಹುದು. ಕೆಲಸದ ಮುಂಭಾಗದಲ್ಲಿ ಸಾಕಷ್ಟು ತಾಳ್ಮೆಯನ್ನು ನಿರ್ವಹಿಸಬೇಕು. ಸಹೋದ್ಯೋಗಿಗಳ ವಿಚಾರದಲ್ಲಿ ಕೊಂಚ ಜಾಗರೂಕರಾಗಿರಬೇಕು.

ತುಲಾ
ಗುರುಗ್ರಹದ ಪರಿಣಾಮದಿಂದಾಗಿ ಇವರು ಹಣ, ಸ್ವ ಮೌಲ್ಯ, ಕುಟುಂಬ, ಮಾತಿನ ಮತ್ತು ಸ್ಪಸ್ಟವಾದ ಸ್ವತ್ತುಗಳ ಬಗ್ಗೆ ಸಂತೋಷವನ್ನು ಅನುಭವಿಸುವಿರಿ. ಈ ವಾರ ಕೆಲವು ಖರ್ಚುಗಳು ನಿಮ್ಮನ್ನು ಬಾಧಿಸುವುದು. ಮೇಲಾಧಿಕಾರಿಗಳು ಹೆಚ್ಚು ಕೆಲಸವನ್ನು ನೀಡುವರು. ಕೆಲಸದ ವಿಚಾರದಲ್ಲಿ ಕೆಲವೊಮ್ಮೆ ಬಂಧಿತವಾದ ಅನುಭವ ಹೊಂದುವ ಸಾಧ್ಯತೆಗಳಿವೆ. ನಿಮ್ಮ ಕೆಲವು ನಿರ್ಣಯದಿಂದ ಚಿತ್ರದ ಬದಲಾವಣೆಯನ್ನು ಕಂಡುಕೊಳ್ಳಬಹುದು.

ವೃಶ್ಚಿಕ
ಈ ಹಿಂದೆ ನೀವು ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಸಾಕಷ್ಟು ನೋವು ಹಾಗೂ ಕಷ್ಟಗಳನ್ನು ಅನುಭವಿಸಿದ್ದೀರಿ. ಇದೀಗ ಗುರುಗ್ರಹದ ಪ್ರಭಾವದಿಂದ ಈ ವಾರ ಸಾಕಷ್ಟು ಪ್ರಗತಿ ಹಾಗೂ ಸಂತೋಷವನ್ನು ಪಡೆದುಕೊಳ್ಳುವಿರಿ. ಈ ವಾರ ನೀವು ಸಂಬಂಧಿಕರ ಸಮಸ್ಯೆಗಳನ್ನು ಬಗೆ ಹರಿಸುವ ಸಾಧ್ಯತೆಗಳಿವೆ. ವೃತ್ತಿ ಹಾಗೂ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ವಾರ ಉತ್ತಮ ಎಂದು ತೋರುತ್ತದೆ. ನೀವು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಬಹುದು.

ಧನು
ಈ ವಾರ ನೀವು ಎಲ್ಲಾ ಬಗೆಯ ವಿವಾದಗಳಿಂದ ದೂರ ಇರಬೇಕು. ಯಾವುದೇ ಋಣಾತ್ಮಕ ಜನರು ನಿಮ್ಮ ಬಳಿ ಬರಲು ನೀವು ಅನುಮತಿ ನೀಡುವುದಿಲ್ಲ. ನಿಮ್ಮ ಖರ್ಚುಗಳ ಬಗ್ಗೆ ಸಾಕಷ್ಟು ಜಾಗರೂಕರಾಗಿರಿ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದು ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲು ಸೂಕ್ತ ಸಮಯ. ಯಾವುದೇ ನಕಾರಾತ್ಮಕ ಶಕ್ತಿಯನ್ನು ಮನರಂಜಿಸುವ ಅಗತ್ಯವಿಲ್ಲ. ದೀರ್ಘ ಸಮಯದ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುವುದು.

ಮಕರ
ಯೊಸ ಯೋಜನೆಗಳು ಮತ್ತು ಪ್ರಯತ್ನಗಳಿಗಾಗಿ ಸಮಯವನ್ನು ಪ್ರಚೋದಿಸುವಿರಿ. ಮುಂಬರುವ ದಿನಗಳಲ್ಲಿ ಲಾಭಕ್ಕಾಗಿ ಯೋಜನೆಗಳನ್ನು ಕೈಗೊಳ್ಳುವಿರಿ. ಮಕ್ಕಳು ಹಾಗೂ ಯುವಕರ ಗುಂಪಲ್ಲಿ ಕೆಲಸ ಮಾಡುವ ಸಾಧ್ಯತೆಗಳಿವೆ. ಹಣಕಾಸಿನ ಸುಧಾರಣೆ ಹಾಗೂ ಅರೆಕಾಲಿಕ ಯೋಜನೆಗಳಿಗೂ ಸಹ ನೀವು ಹುಡುಕುತ್ತೀರಿ.

ಕುಂಭ
ಸಾಮಾಜಿಕ ಸ್ಥಿತಿ, ಅಧಿಕಾರ ಮತ್ತು ಮಹತ್ವಕಾಂಕ್ಷೆಗಳು ಈ ವಾರ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ನೀವು ಎದುರಿಸುವ ಸಾಧ್ಯತೆಗಳಿವೆ. ನಿಮ್ಮ ಕೆಲಸದ ವಲಯವು ಹೆಚ್ಚು ವಿಸ್ತಾರವಾಗಿರುತ್ತದೆ. ಅದೇ ಸಮಯದಲ್ಲಿ ನೀವು ನಿಮ್ಮ ಮಾರ್ಗದರ್ಶಕರೊಂದಿಗೆ ಜಾಗರೂಕರಾಗಿರಬೇಕು. ಕೆಲಸ ಹಾಗೂ ಮನೆಯ ವಿಚಾರದಲ್ಲಿ ಸಮತೋಲನವನ್ನು ನಿರ್ವಹಿಸಬೇಕು. ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ನಿರ್ಧಾರ ತೆಗೆದುಕೊಳ್ಳಲು ಉತ್ತಮವಾದ ಸಮಯ.

ಮೀನ
ಈ ವಾರ ನಿಮಗೆ ಪ್ರಯಾಣ, ವಿದೇಶಿ ಸಂಬಂಧ, ಉನ್ನತ ಶಿಕ್ಷಣ ಮತ್ತು ತತ್ವಶಾಸ್ತ್ರದ ಕ್ಷೇತ್ರವನ್ನು ವಿಸ್ತರಿಸುತ್ತದೆ. ದೀರ್ಘ ಪ್ರಯಾಣಕ್ಕಾಗಿ ಯೋಜನೆಯನ್ನು ಕೈಗೊಳ್ಳಬಹುದು. ಪ್ರಾರ್ಥನೆ, ಸಭೆ, ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಒಲವು ತೋರುವಿರಿ. ಹೊಸ ಕೌಶಲ್ಯವನ್ನು ನೀವು ಕಂಡುಕೊಳ್ಳುವಿರಿ. ಅನಾರೋಗ್ಯಕ್ಕೂ ಒಳಗಾಗುವ ಸಾಧ್ಯತೆಗಳಿವೆ. ಹಾಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿಯನ್ನು ನಿರ್ವಹಿಸಬೇಕು.



Click it and Unblock the Notifications











