For Quick Alerts
ALLOW NOTIFICATIONS  
For Daily Alerts

ಜಪಾನ್‌ನ ಶಾಲೆಗಳ ಕಠಿಣ ನಿಯಮಗಳು! ಮಕ್ಕಳ ಪಾಡು ಆ ದೇವರೆ ಬಲ್ಲ...

By Hemanth
|

ಮಕ್ಕಳು ದೊಡ್ಡವರಾದಂತೆ ಅವರಿಗೆ ಸಿಗುವಂತಹ ಶಿಕ್ಷಣವು ಜೀವನದಲ್ಲಿ ಅವರನ್ನು ಒಬ್ಬ ಸತ್ಪ್ರಜೆಯಾಗಿ ರೂಪಿಸುವುದು. ಜೀವನದಲ್ಲಿ ಶಿಕ್ಷಣ ತುಂಬಾ ಮುಖ್ಯ. ಶಿಕ್ಷಣವಿಲ್ಲದೆ ಇದ್ದರೆ ಆ ವ್ಯಕ್ತಿ ಎಷ್ಟೇ ಯಶಸ್ಸು ಪಡೆದರೂ ಆತನ ಮನದ ಮೂಲೆಯಲ್ಲಿ ವಿದ್ಯೆಯಿಲ್ಲವೆಂಬ ಕೊರಗು ಇದ್ದೇ ಇರುತ್ತದೆ. ನಮ್ಮ ದೇಶದಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣದ ಮಟ್ಟವು ಭಿನ್ನವಾಗಿರುವುದು. ಕೆಲವೊಂದು ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆ ನೋಡಿಕೊಂಡು ಆ ದೇಶಕ್ಕೆ ಬೇರೆ ದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಒಂದೊಂದು ದೇಶಗಳಲ್ಲಿ ಶಿಕ್ಷಣವು ಒಂದೊಂದು ರೀತಿಯಲ್ಲಿರುವುದು. ಜಪಾನ್ ನಲ್ಲಿ ಶಾಲಾ ಶಿಕ್ಷಣವು ಅಮೆರಿಕಾಕ್ಕಿಂತ ಭಿನ್ನ. ಜಪಾನ್ ನಲ್ಲಿ ಇರುವ ಕೆಲವು ಕಠಿಣ ನಿಯಮಗಳ ಬಗ್ಗೆ ನೀವು ಓದಿ ತಿಳಿಯಿರಿ.

1. ಪ್ರತೀ ಶಾಲೆಯಲ್ಲಿ ನಿಯಮಪಾಲನೆ ಅಗತ್ಯ

1. ಪ್ರತೀ ಶಾಲೆಯಲ್ಲಿ ನಿಯಮಪಾಲನೆ ಅಗತ್ಯ

ಆದರೆ ಜಪಾನ್ ನಲ್ಲಿ ಇದು ತುಂಬಾ ಮುಖ್ಯ. ಮಕ್ಕಳು ಬೆಳಗ್ಗೆ ಸರಿಯಾಗಿ 8.30ರ ವೇಳೆಗೆ ಶಾಲೆಯಲ್ಲಿರಬೇಕು. ಶಾಲೆಗೆ ಐದು ನಿಮಿಷಕ್ಕಿಂತ ಹೆಚ್ಚು ವಿಳಂಬವಾಗಿ ಆಗಮಿಸಿದರೆ ಆಗ ಅವರಿಗೆ ಶಿಕ್ಷೆಯ ರೂಪದಲ್ಲಿ ಸ್ವಚ್ಛ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಪ್ರತೀ ದಿನ ಬೆಳಗ್ಗೆ ಒಂದು ವಾರ ಇದನ್ನು ಮಾಡಬೇಕು.

Image Courtesy

2. ವಿದ್ಯಾರ್ಥಿಗಳೇ ಸ್ವಚ್ಛತಾ ಸಿಬ್ಬಂದಿ

2. ವಿದ್ಯಾರ್ಥಿಗಳೇ ಸ್ವಚ್ಛತಾ ಸಿಬ್ಬಂದಿ

ಭಾರತದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕೆಲಸ ಮಾಡಿದರೆ ದೊಡ್ಡ ವಿವಾದವಾಗುವುದು. ಆದರೆ ಜಪಾನ್ ನಲ್ಲಿ ವಿದ್ಯಾರ್ಥಿಗಳೇ ತರಗತಿ ಕೋಣೆ, ಶೌಚಾಲಯ ಮತ್ತು ಸಂಪೂರ್ಣ ಶಾಲೆಯ ಸ್ವಚ್ಛತೆ ನೋಡಿಕೊಳ್ಳುವರು. ಧೂಳು ತೆಗೆಯುವುದು, ಗುಡಿಸುವುದು, ಒರೆಸುವುದು ಮತ್ತು ಕರಿಹಲಗೆ ಸ್ವಚ್ಛಗೊಳಿಸುವುದು ಅವರ ಜವಾಬ್ದಾರಿ.

Image Courtesy

3. ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲೇ ತಿನ್ನುವರು

3. ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲೇ ತಿನ್ನುವರು

ಕ್ಯಾಂಟೀನಿಗೆ ಹೋಗಿ ತಿನ್ನುವ ಬದಲು ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲೇ ನೆಲಹಾಸು ಹಾಸಿ ಅದರ ಮೇಲೆ ಪಾತ್ರೆಗಳನ್ನು ಇಡುವರು. ಹುಡುಗಿಯರು ಊಟ ಬಡಿಸುವರು. ಆಹಾರ ವ್ಯರ್ಥ ಮಾಡಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಪ್ಲೇಟ್ ನಲ್ಲಿ ಇರುವುದನ್ನು ತಿನ್ನಬೇಕು.

Image Courtesy

4. ಈಜು ಪಠ್ಯಕ್ರಮದ ಒಂದು ಭಾಗ

4. ಈಜು ಪಠ್ಯಕ್ರಮದ ಒಂದು ಭಾಗ

ಇದು ಪಠ್ಯಕ್ರಮದ ಒಂದು ಭಾಗವಾಗಿದೆ. ಜಪಾನ್ ಹೆಚ್ಚಿನ ಶಾಲೆಗಳಲ್ಲಿ ತಮ್ಮದೇ ಆಗಿರುವಂತಹ ಈಜುಕೊಳಗಳಿವೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ದೂರ ಈಜುವುದನ್ನು ಕಲಿಸಲಾಗುತ್ತದೆ. ಇದರಲ್ಲಿ ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಬೇಸಿಗೆಯಲ್ಲಿ ಶಿಬಿರಗಳಿರುವುದು.

Image Courtesy

5. ಜನ್ಮದತ್ತ ದೇಹ ರಚನೆ ಬದಲಾಯಿಸಲು ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ

5. ಜನ್ಮದತ್ತ ದೇಹ ರಚನೆ ಬದಲಾಯಿಸಲು ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ

ಇದು ಜಪಾನ್ ನಲ್ಲಿರುವ ಹೆಚ್ಚಿನ ಶಾಲೆಗಳಿಗೆ ಅನ್ವಯವಾಗದೆ ಇದ್ದರೂ ಇದು ಶಾಲೆಗಳಲ್ಲಿ ಇರುವ ನಿಯಮವಾಗಿದೆ. ಇದರರ್ಥವೇನೆಂದರೆ ವಿದ್ಯಾರ್ಥಿಗಳು ಮೇಕಪ್, ಕಲರ್ ಲೆನ್ಸ್, ಹೇರ್ ಡೈ, ಉಗುರಿನ ಬಣ್ಣ ಆಥವಾ ಹುಬ್ಬಿನ ಕೂದಲನ್ನು ತೆಗೆಸುವಂತಿಲ್ಲ.

Image Courtesy

6. ವಾರಾಂತ್ಯದ ರಜೆ ಕೇವಲ ಒಂದೇ ದಿನ

6. ವಾರಾಂತ್ಯದ ರಜೆ ಕೇವಲ ಒಂದೇ ದಿನ

1992ರಲ್ಲಿ ಸರ್ಕಾರವು ವಾರಾಂತ್ಯದ ರಜೆಯನ್ನು ಎರಡು ದಿನ ಮಾಡಿತ್ತು. ಆದರೆ ಕೆಲವು ಶಾಲೆಗಳು ಈಗಲೂ ಈ ನಿಯಮ ಪಾಲಿಸದೆ ಶನಿವಾರ ಕೂಡ ತರಗತಿ ನಡೆಸುತ್ತವೆ.

Image Courtesy

7. ವಿದ್ಯಾರ್ಥಿಗಳು ಡೇಟಿಂಗ್ ಅಥವಾ ಮುಕ್ತ ಸಂಬಂಧದಲ್ಲಿ ತೊಡಗಿಕೊಳ್ಳುವಂತಿಲ್ಲ.

7. ವಿದ್ಯಾರ್ಥಿಗಳು ಡೇಟಿಂಗ್ ಅಥವಾ ಮುಕ್ತ ಸಂಬಂಧದಲ್ಲಿ ತೊಡಗಿಕೊಳ್ಳುವಂತಿಲ್ಲ.

ಎಲ್ಲಾ ಜೂನಿಯರ್ ಹೈಸ್ಕೂಲ್ ಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳ ಮನಸ್ಸು ಕಲಿಕೆಯಿಂದ ಬೇರೆಡೆ ತಿರುಗಬಾರದು ಎನ್ನುವುದೇ ಈ ನಿಯಮದ ಉದ್ದೇಶ.

Image Courtesy

8. ವಿದ್ಯಾರ್ಥಿಗಳ ಬೇಸಿಗೆ ರಜಾವು ಕೇವಲ 5-6 ವಾರ ಮಾತ್ರ. ಜುಲೈ

8. ವಿದ್ಯಾರ್ಥಿಗಳ ಬೇಸಿಗೆ ರಜಾವು ಕೇವಲ 5-6 ವಾರ ಮಾತ್ರ. ಜುಲೈ

20ರಿಂದ ಆರಂಭವಾಗಿ ಆಗಸ್ಟ್ ಅಂತ್ಯದವರೆಗೆ ಇರುವುದು.

ಇದು ಅಮೆರಿಕಾದಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಧದಷ್ಟು ರಜೆ ಮಾತ್ರ. ಜಪಾನ್ ವಿದ್ಯಾರ್ಥಿಗಳಿಗೆ ಶಾಲಾ ರಜೆಯು ಕಡಿಮೆ ಮಾತ್ರವಲ್ಲ, ಅಲ್ಲಿನ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಕೆಯಲ್ಲಿ, ಮನೆಗೆಲಸ ಮಾಡುತ್ತಾ ಅಥವಾ ಶಾಲೆಯ ಕ್ಲಬ್ ಗಳಲ್ಲಿ ಭಾಗವಹಿಸಿ ರಜೆ ಕಳೆಯಬೇಕು.

Image Courtesy

9. ಹಿರಿಯರನ್ನು ಗೌರವದ ಮೂಲಕ ಸ್ವಾಗತಿಸಲಾಗುವುದು

9. ಹಿರಿಯರನ್ನು ಗೌರವದ ಮೂಲಕ ಸ್ವಾಗತಿಸಲಾಗುವುದು

ಹಿರಿಯರೊಂದಿಗೆ ಯಾವ ರೀತಿ ವರ್ತಿಸಬೇಕು ಎನ್ನುವ ಶಿಕ್ಷಣ ಸಿಗುವುದು ಶಾಲೆಗಳಲ್ಲಿ. ಶಿಕ್ಷಕರನ್ನು ತರಗತಿಗೆ ಮೊದಲು ಮತ್ತು ಬಳಿಕ ಹೇಗೆ ಸ್ವಾಗತಿಸಬೇಕು ಎನ್ನುವುದನ್ನು ಕಲಿಸಲಾಗುತ್ತದೆ.

Image Courtesy

10. ಹುಡುಗ ಹಾಗೂ ಹುಡುಗಿಯರು ತಲೆ ಕೂದಲಿಗೆ ಏನು ಧರಿಸಬೇಕು ಎನ್ನುವ ಬಗ್ಗೆ ಕಠಿಣ ನಿಯಮವಿದೆ.

10. ಹುಡುಗ ಹಾಗೂ ಹುಡುಗಿಯರು ತಲೆ ಕೂದಲಿಗೆ ಏನು ಧರಿಸಬೇಕು ಎನ್ನುವ ಬಗ್ಗೆ ಕಠಿಣ ನಿಯಮವಿದೆ.

ಹುಡುಗಿಯರು ಕೂದಲಿಗೆ ಬಣ್ಣ ಹಾಕಿಕೊಳ್ಳುವಂತಿಲ್ಲ, ಬಣ್ಣಬಣ್ಣದ ಹೇರ್ ಬ್ಯಾಂಡ್ ಧರಿಸುವಂತಿಲ್ಲ ಮತ್ತು ಹುಬ್ಬುಗಳನ್ನು ಹೆಚ್ಚು ಉದ್ದವಾಗಿಡುವಂತಿಲ್ಲ. ಹುಡುಗರು ಮುಖದಲ್ಲಿ ಮೀಸೆ ಮತ್ತು ಗಡ್ಡ ಬಿಡುವಂತಿಲ್ಲ. ಪ್ರತೀ ಸಲ ಗಡ್ಡ ಮೀಸೆ ತೆಗೆಸಿ ತರಗತಿಗೆ ಹಾಜರಾಗಬೇಕು.

Image Courtesy

11. ಶಾಲೆಯೊಳಗೆ ಮೊಬೈಲ್ ಕೊಂಡೊಯ್ಯುವಂತಿಲ್ಲ.

11. ಶಾಲೆಯೊಳಗೆ ಮೊಬೈಲ್ ಕೊಂಡೊಯ್ಯುವಂತಿಲ್ಲ.

ಶಾಲೆಯಲ್ಲಿ ವಿದ್ಯಾರ್ಥಿಗಳು ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಮೊಬೈಲ್ ಬಳಸಬಹುದು. ತರಗತಿಗಳ ಮಧ್ಯೆ ಇರುವ ಸಮಯ ಅಥವಾ ಶಾಲೆ ಬಿಟ್ಟ ಬಳಿಕ ಮೊಬೈಲ್ ಬಳಸಬಹುದು.

Image Courtesy

12. ಯೂನಿಫಾರಂನ್ನು ವಿರೂಪಗೊಳಿಸುವಂತಿಲ್ಲ

12. ಯೂನಿಫಾರಂನ್ನು ವಿರೂಪಗೊಳಿಸುವಂತಿಲ್ಲ

ವಿದ್ಯಾರ್ಥಿಗಳು ತಮ್ಮ ಯೂನಿಫಾರಂನ್ನು ಯಾವುದೇ ವಿಧದಿಂದಲೂ ವಿರೂಪಗೊಳಿಸುವಂತಿಲ್ಲ. ಯೂನಿಫಾರಂಗೆ ಯಾವುದೇ ರೀತಿಯ ಆಭರಣ ಸಿಕ್ಕಿಸಿ ಅದನ್ನು ಧರಿಸುವಂತಿಲ್ಲ. ಶಾಲೆಯಿಂದ ಮನೆಗೆ ತೆರಳಿದ ಬಳಿಕ ಅಥವಾ ಶಾಲೆಯ ನಿಯಮದಂತೆ ಮತ್ತೆ ಯೂನಿಫಾರಂ ಧರಿಸುವಂತಿಲ್ಲ.

Image Courtesy

13. ಬದಲಿ ಶಿಕ್ಷಕರು ತುಂಬಾ ಅಪರೂಪ

13. ಬದಲಿ ಶಿಕ್ಷಕರು ತುಂಬಾ ಅಪರೂಪ

ವಿದ್ಯಾರ್ಥಿಗಳು ತಾವಾಗಿಯೇ ಕಲಿಯಬೇಕು ಮತ್ತು ತಮ್ಮ ಒಳ್ಳೆಯ ನಡವಳಿಕೆ ತೋರಿಸಬೇಕು. ಸಮಯ ಸಮಯಕ್ಕೆ ಮತ್ತೊಬ್ಬರು ಶಿಕ್ಷಕರು ಬಂದು ತರಗತಿ ಪರಿಶೀಲಿಸುವರು.

14. ಯೂನಿಫಾರಂ ಮೇಲೆ ಬಣ್ಣದ ಹೊರಬಟ್ಟೆ ಧರಿಸಲು ನಿಷೇಧ

14. ಯೂನಿಫಾರಂ ಮೇಲೆ ಬಣ್ಣದ ಹೊರಬಟ್ಟೆ ಧರಿಸಲು ನಿಷೇಧ

ಜಾಕೆಟ್ ಅಥವಾ ಬೇರೆ ಯಾವುದೇ ರೀತಿಯ ಮೇಲ್ಬಟ್ಟೆಯು ಕಂದು, ಕಪ್ಪ, ನೀಲಿಯಾಗಿರಬೇಕು. ವಿದ್ಯಾರ್ಥಿಗಳು ಯಾವುದೇ ರೀತಿಯ ಆಭರಣ ಧರಿಸುವಂತಿಲ್ಲ.

15. 18ರ ಕೆಳಹರೆಯದ ವಿದ್ಯಾರ್ಥಿಗಳಿಗೆ ರಾತ್ರಿ 10 ಬಳಿಕ ಕರ್ಫ್ಯೂ

15. 18ರ ಕೆಳಹರೆಯದ ವಿದ್ಯಾರ್ಥಿಗಳಿಗೆ ರಾತ್ರಿ 10 ಬಳಿಕ ಕರ್ಫ್ಯೂ

ಈ ನಿಯಮ ನಗರದಿಂದ ನಗರಕ್ಕೆ ಬದಲಾಗುವುದು. ಟೋಕಿಯೋ ಮತ್ತು ಯೊಕೊಹಮಾದಲ್ಲಿ 10 ಗಂಟೆ ಬಳಿಕ ವಿದ್ಯಾರ್ಥಿಗಳಿಗೆ ಕರ್ಫ್ಯೂ ಇದೆ. 18ರ ಕೆಳಹರೆಯದ ವಿದ್ಯಾರ್ಥಿಗಳಿಗೆ ರಾತ್ರಿ ಹತ್ತು ಗಂಟೆ ಬಳಿಕ ಸಿನೆಮಾ ಮತ್ತು ಆರ್ಕೆಸ್ಟ್ರಾಗಳಿಗೆ ಹೋಗುವಂತಿಲ್ಲ.

English summary

japanese school rules that will shock you

The most important responsibility children have while growing up is going to school to learn. Although children may groan about waking up early and doing homework, the education they receive in the lo
Story first published: Wednesday, January 3, 2018, 20:10 [IST]
X
Desktop Bottom Promotion