Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಭಾವನೆಗಳೊಂದಿಗೆ ಸಂಬಂಧಗಳನ್ನು ಬೆಸೆಯುವ ರಾಶಿಚಕ್ರಗಳು
ಸಂಬಂಧ ಎನ್ನುವುದು ಒಂದು ಕನ್ನಡಿ ಇದ್ದಂತೆ. ಕನ್ನಡಿಯ ಮುಂದೆ ನಿಂತು ನಾವು ಹೇಗೆ ವರ್ತಿಸುತ್ತೇವೆಯೋ ಅದರ ಪ್ರತಿಬಿಂಬವೂ ನಮಗೆ ಹಾಗೆಯೇ ತೋರಿಸುತ್ತದೆ. ಅಂತೆಯೇ ಸಂಬಂಧಗಳ ನಡುವೆ ನಾವು ಯಾವ ರೀತಿಯ ವರ್ತನೆಯನ್ನು ತೋರುತ್ತೇವೋ ಅದೇ ರೀತಿಯ ವರ್ತನೆಗಳನ್ನು ಅವರು ನಮಗೆ ಪ್ರತ್ಯುತ್ತರವಾಗಿ ನೀಡುತ್ತಾರೆ. ಅಂದರೆ ನಾವು ನಮ್ಮವರಿಗಾಗಿ ಒಂದಿಷ್ಟು ಸಮಯ, ಪ್ರೀತಿ, ವಾತ್ಸಲ್ಯ, ಆರೈಕೆ ಮಾಡಿದರೆ ಅವರೂ ನಮಗೆ ಅದೇ ರೀತಿಯ ಸಮ್ಮಾನಗಳನ್ನು ಮಾಡುತ್ತಾರೆ.
ನಾವು ನಮ್ಮವರೊಂದಿಗೆ ಬಹಳ ಆತ್ಮೀಯವಾಗಿ ಹಾಗೂ ಪ್ರೀತಿ ಪೂರ್ಣರಾಗಿ ನಮ್ಮ ಭಾವನೆಗಳನ್ನು ಹಂಚಿಕೊಂಡರೆ ಸಂಬಂಧವು ಸುಂದರವಾಗಿರುತ್ತದೆ. ಸಂಬಂಧಗಳ ನಡುವೆಯೂ ಯಾವುದೇ ಅನುಮಾನ ಇರುವುದಿಲ್ಲ. ಆದರೆ ಬಹುತೇಕ ಜನರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಹಾಗಾಗಿಯೇ ಸಂಬಂಧದಲ್ಲಿ ಬೇಸರ ಅಥವಾ ಅನುಮಾನಗಳು ಹುಟ್ಟುವ ಸಾಧ್ಯತೆಗಳಿರುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹುತೇಕ ರಾಶಿಚಕ್ರದವರು ತಮ್ಮ ಆಂತರಿಕ ಭಾವನೆಗಳನ್ನು ಅಡಗಿಸುತ್ತಾರೆ. ಇದರಿಂದ ಅನೇಕ ಅನಾನೂಕೂಲತೆಗಳಿಗೂ ಒಳಗಾಗುತ್ತಾರೆ ಎಂದು ಹೇಳಲಾಗುವುದು. ಅದೇ ಬೆರಳೆಣಿಕೆಯ ರಾಶಿಚಕ್ರದ ವ್ಯಕ್ತಿಗಳು ಮಾತ್ರ ಬಹಳ ಸರಳ ಹಾಗೂ ಮುಕ್ತವಾದ ಭಾವನೆಗಳನ್ನು ಹೊಂದಿರುತ್ತಾರೆ. ಇವರೊಂದಿಗೆ ಸ್ನೇಹ ಹಾಗೂ ಸಂಬಂಧಗಳನ್ನು ಬೆಳಸುವುದು ಬಹಳ ಸುಲಭ. ಅಲ್ಲದೆ ಹೆಚ್ಚಿನ ವಾತ್ಸಲ್ಯ ಹಾಗೂ ಪ್ರೀತಿಯನ್ನು ನೀಡುವರು ಎಂದು ಹೇಳಲಾಗುವುದು. ಹಾಗಾದರೆ ಆ ಮೂರು ರಾಶಿಚಕ್ರಗಳು ಯಾವವು? ಅವುಗಳ ಪ್ರಭಾವದಿಂದ ವ್ಯಕ್ತಿಯ ಭಾವನೆಗಳು ಹೇಗಿರುತ್ತವೆ ಎನ್ನುವುದರ ವಿವರಣೆಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.

ಕರ್ಕ:
ಈ ರಾಶಿಯ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅಥವಾ ಭಾವನೆಗಳ ಬಗ್ಗೆ ಹೇಳಿಕೊಳ್ಳಲು ಬಹಳ ಇಷ್ಟಪಡುತ್ತಾರೆ. ಇವರು ಸ್ವಭಾವದಲ್ಲಿ ನಾಚಿಕೆಯ ಪ್ರವೃತ್ತಿ ಹೊಂದಿರುತ್ತಾರೆಯಾದರೂ ಆತ್ಮೀಯ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅಲ್ಲದೆ ಜನರು ಸಹ ಇವರ ಗುಣಗಳಿಗೆ ಆಕರ್ಷಿಸತರಾಗುತ್ತಾರೆ. ಒಬ್ಬ ವ್ಯಕ್ತಿಯೊಂದಿಗೆ ವಿಶ್ವಾಸವನ್ನು ಹೊಂದಿದ್ದರೆ ಅದನ್ನು ಸದಾ ಉಳಿಸಿಕೊಳ್ಳುವರು. ತಮ್ಮ ಪಾಲುದಾರರಿಗೆ ಚಿಕ್ಕ-ಪುಟ್ಟ ಸಂಗತಿಗಳನ್ನು ಸಹ ವ್ಯಕ್ತಪಡಿಸುತ್ತಾರೆ. ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಸಂಬಂಧಗಳ ವಿಚಾರದಲ್ಲಿ ಇವರು ಯಾವುದೇ ಮುಚ್ಚುಮರೆಯಿಲ್ಲದೆ ನೈಸರ್ಗಿಕವಾಗಿಯೇ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ತುಲಾ:
ಈ ರಾಶಿಯ ವ್ಯಕ್ತಿಗಳು ತಮ್ಮ ಪಾಲುದಾರರೊಂದಿಗೆ ಹತ್ತಿರವಾಗಲು ಅಥವಾ ಆತ್ಮೀಯತೆ ಬೆಳೆಸಿಕೊಳ್ಳಲು ಹೃದಯ ಪೂರ್ವಕವಾಗಿಯೇ ಸಿದ್ಧರಾಗಿರುತ್ತಾರೆ. ಪ್ರೀತಿ ಹಾಗೂ ಸ್ನೇಹಪರ ಗುಣವು ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂಬುದು ಇವರ ನಿಲುವು. ತಮ್ಮ ಪ್ರೀತಿಪಾತ್ರರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದಲ್ಲದೆ ಆಂತರಿಕ ಭಾವನೆಗಳನ್ನು ಸಹ ಹಂಚಿಕೊಳ್ಳುವರು. ಇವರ ಪ್ರೀತಿಯ ಕಾಳಜಿ ಹಾಗೂ ಹಂಚಿಕೊಳ್ಳುವ ಗುಣದಿಂದ ಪಾಲುದಾರರಿಗೆ ತಾವು ಬಹಳ ಅದೃಷ್ಟವಂತರು ಎನ್ನುವ ಭಾವನೆಯುಂಟಾಗುವುದು. ಇದರೊಟ್ಟಿಗೆ ಇವರು ಸಮಾಜದಲ್ಲಿ ತಮ್ಮ ವ್ಯಕ್ತಿತ್ವವು ಹಾಳಾಗದಂತೆಯೇ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ.
ಮೀನ:
ಈ ರಾಶಿಯ ವ್ಯಕ್ತಿಗಳು ಆಂತರಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ವಾಸ್ತವಿಕತೆಗೆ ಹತ್ತಿರವಾಗಿರುವಂತಹ ಯೋಚನೆಗಳನ್ನೇ ಇವರು ಮಾಡುವುದರಿಂದ ಭಾವನೆಗಳಲ್ಲೂ ಯಾವುದೇ ಅತಿಶಯೋಕ್ತಿಗಳು ಇರುವುದಿಲ್ಲ. ವಾಸ್ತವಕ್ಕೆ ಸೂಕ್ತವಾದ ರೀತಿಯಲ್ಲಿಯೇ ಭಾವನೆಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತಾರೆ. ಇವರು ಹೇಳಿಕೊಳ್ಳುವ ಭಾವನೆಗಳು ಹೃದಯಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ ಎಂದು ಹೇಳಲಾಗುವುದು. ಇವರು ಒಮ್ಮೆ ಇಷ್ಟವಾದ ವ್ಯಕ್ತಿಯ ಮೇಲೆ ತೀವ್ರವಾದ ಭರವಸೆಯನ್ನು ಇಡುತ್ತಾರೆ. ಅವರೊಂದಿಗೆ ಮುಕ್ತವಾದ ಭಾವನೆಯಲ್ಲಿ ಬೆರೆಯುವರು.



Click it and Unblock the Notifications