Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ್ನು ದೇವರೆಂದು ಪೂಜಿಸುವ ವ್ಯಕ್ತಿ!
ನಮ್ಮ ದೇಶವನ್ನು ಮೂಢನಂಬಿಕೆಗಳ ಆಗರ ಎಂದು ಕರೆಯುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಭಾರತೀಯರು ಅನುಸರಿಸುವ ಕೆಲವೊಂದು ಸಂಪ್ರದಾಯಗಳು ವಿಚಿತ್ರವಾಗಿದ್ದು ಇಂತಹವರೂ ಇದ್ದಾರೆಯೇ ಎಂದು ಮೂಗಿನ ಮೇಲೆ ಬೆರಳಿಡುವಂತಹ ಪರಿಸ್ಥಿತಿ ಬಂದೊದಗುತ್ತದೆ.
ವಿಶ್ವದಲ್ಲಿ ವಿಸ್ಮಯವನ್ನುಂಟು ಮಾಡುವ ಜನರಿದ್ದಾರೆ ಎಂದು ನಾವು ಕೇಳಿದ್ದೇವೆ ಆದರೆ ನಮ್ಮ ದೇಶದಲ್ಲಿ ಚಿತ್ರ ವಿಚಿತ್ರ ಸಂಗತಿಗಳನ್ನು ಮಾಡುವವರು ಇದ್ದಾರೆ. ಇಂದಿನ ನಮ್ಮ ಲೇಖನದಲ್ಲಿ ನಾವು ಇಂತಹುದೇ ಒಂದು ವಿಸ್ಮಯವಾಗಿರುವ ಸಂಗತಿಯನ್ನು ನಾವು ತಿಳಿಸುತ್ತಿದ್ದು ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಡೊನಾಲ್ಡ್ ಟ್ರಂಪ್ ಅನ್ನು ಪೂಜಿಸುತ್ತಿರುವ ದೃಶ್ಯವನ್ನು ತೋರಿಸುತ್ತಿದ್ದೇವೆ. ಮೂರು ವರ್ಷಗಳಿಂದ ಈ ವ್ಯಕ್ತಿ ಟ್ರಂಪ್ ಅನ್ನು ಪೂಜಿಸುತ್ತಿದ್ದಾರಂತೆ.

ಈತ ಡೊನಾಲ್ಡ್ ಟ್ರಂಪ್‌ನ ಪೋಟೋಗೆ ದಿನಾ ಪೂಜೆ ಮಾಡುತ್ತಾನೆ
ಈ ವ್ಯಕ್ತಿಗೆ ಡೊನಾಲ್ಡ್ ಟ್ರಂಪ್ ದೇವರಾಗಿದ್ದು ವಿಡಿಯೋದಲ್ಲಿ ಈ ವ್ಯಕ್ತಿಯ ಸಮಗ್ರ ವಿವರವನ್ನು ನಾವು ನೀಡಿದ್ದೇವೆ. 31 ರ ಹರೆಯದ ಬುಸ್ಸಾ ಖಾನ್ ಕೃಷಿಕನಾಗಿದ್ದು ತೆಲಂಗಾಣದ ವಾಸಿಯಾಗಿದ್ದಾರೆ. ತಮ್ಮ ಪೂಜಾ ಕೊಠಡಿಯಲ್ಲಿ ಇವರು ಟ್ರಂಪ್ ಫೋಟೋವನ್ನಿರಿಸಿದ್ದು ಇತರ ದೇವರುಗಳೊಂದಿಗೆ ಈತ ಡೊನಾಲ್ಡ್ ಟ್ರಂಪ್ ಅನ್ನು ಕೂಡ ಪೂಜಿಸುತ್ತಾರೆ.

ಯುಎಸ್‌ನಲ್ಲಿ ಭಾರತೀಯರಿಗೆ ನೀಡುತ್ತಿದ್ದ ಶಿಕ್ಷೆ
ಅಂದು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶ್ರೀನಿವಾಸ ಕುಚಿಬೋಟ್ಲಾ ಅವರನ್ನು ಕಳೆದ ಫೆಬ್ರವರಿಯಂದು ಯುಎಸ್ ನೌಕಾಪಡೆಯವರು ಮರಣ ದಂಡನೆ ವಿಧಿಸಿ ಕೊಂದರು. ಇದರಿಂದಾಗಿ ತುಂಬಾ ನೊಂದ ಬುಸ್ಸಾ ಖಾನ್, ಅನಾವಶ್ಯಕವಾಗಿ ಸೇಡು ತೀರಿಸಿಕೊಳ್ಳುವುದಕ್ಕಿಂತ, ಡೊನಾಲ್ಡ್ ಟ್ರಂಪ್ ಅನ್ನು ಪೂಜಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಅಲ್ಲದೆ ಇದರಿಂದಾಗಿ ಆದರೂ ಎರಡೂ ದೇಶಗಳು ಶಾಂತಿ, ಸೌಹಾರ್ದಯುತವಾಗಿರಲಿ ಎಂಬುದೇ ಆತನ ಆಶಯವಾಗಿದೆ.

ಪ್ರೀತಿಯಿಂದ ಟ್ರಂಪ್‌ನ ಮನಗೆಲ್ಲುವ ಪ್ರಯತ್ನ
ಈ ಘಟನೆಯಿಂದ ತುಂಬಾ ಬೇಸರಗೊಂಡ ಬುಸ್ಸಾ ಖಾನ್ ಯುಎಸ್ ಅಧ್ಯಕ್ಷ ಮತ್ತು ಅಲ್ಲಿನ ಜನರಿಗೆ ಭಾರತೀಯರು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೆ ಮುಂದಾದರು. ಅವರುಗಳು ನಮ್ಮ ದೇಶದ ವ್ಯಕ್ತಿಯನ್ನು ಮರಣ ದಂಡನೆ ವಿಧಿಸಿ ಕೊಂದರೂ ಕೂಡ ನಾವು ಅವರನ್ನು ಗೌರವಿಸಿ ಪ್ರೀತಿಯಿಂದಲೇ ಯುಎಸ್ ನಿವಾಸಿಗಳ ಮನ ಗೆಲ್ಲೋಣ ಮತ್ತು ಟ್ರಂಪ್‌ಗೆ ಭಾರತೀಯರ ಪ್ರೇಮ ಹಾಗೂ ಕ್ಷಮಾ ಗುಣವನ್ನು ಮನವರಿಕೆ ಮಾಡಿಕೊಡೋಣ ಎಂಬುದು ಬುಸ್ಸಾ ಖಾನ್ ಮನದಿಂಗಿತವಾಗಿದೆ.

ಪ್ರೀತಿಯಿಂದಲೇ ಸ್ನೇಹ ಸಂಪಾದಿಸಿಕೊಳ್ಳೋಣ
ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭಾರತೀಯರು ಯಾರನ್ನೂ ಕೂಡ ಗೆಲ್ಲುತ್ತಾರೆ. ಪ್ರೀತಿ ಮತ್ತು ಪೂಜನೀಯ ಗುಣಗಳಿಂದ ನೀವು ಆ ವ್ಯಕ್ತಿಯ ಸ್ನೇಹವನ್ನು ಸಂಪಾದಿಸಿಕೊಳ್ಳಬಹುದು ಎಂಬುದು ಬುಸ್ಸಾ ಖಾನ್ ಹೇಳುವ ಮಾತಾಗಿದೆ. ಆದ್ದರಿಂದಲೇ ನಾನು ಟ್ರಂಪ್ ಅನ್ನು ಪೂಜಿಸುತ್ತಿದ್ದೇನೆ ಎಂಬುದು ಖಾನ್ ಮಾತಾಗಿದೆ. ರಾಜಕೀಯ ವ್ಯಕ್ತಿಗಳನ್ನು ನಮ್ಮ ದೇಶದಲ್ಲಿ ಪೂಜಿಸುವವರಿದ್ದಾರೆ ಅಂತೆಯೇ ತಮ್ಮ ಮೆಚ್ಚಿನವರಿಗಾಗಿ ದೇವಾಲಯಗಳನ್ನು ಕಟ್ಟಿಸುವವರಿದ್ದಾರೆ. ಅಂತೆಯೇ ಈ ವ್ಯಕ್ತಿ ಕೂಡ ವಿಶೇಷವಾಗಿದ್ದಾರೆ.



Click it and Unblock the Notifications
