Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಯಾರ ಹಂಗಿಲ್ಲದೆ ಸ್ವಾವಲಂಬಿಯಾಗಿ ಬದುಕಲು ಇಷ್ಟಪಡುವ ರಾಶಿಚಕ್ರದವರು!
ಸ್ವಾವಲಂಬಿಯಾಗಿ ಬದುಕಬೇಕೆಂಬ ಕನಸು ಹೆಚ್ಚಿನವರಲ್ಲಿ ಇರುವುದು. ಅದೇ ಅವರನ್ನು ಪ್ರೇರೇಪಿಸುವುದು. ಸ್ವತಂತ್ರ ಹಾಗೂ ಸ್ವಾವಲಂಬಿ ಬದುಕಿನಿಂದ ಮನಸ್ಸಿಗೆ ಕೂಡ ನೆಮ್ಮದಿ ಸಿಗುವುದು. ಬೇರೆಯವರೊಂದಿಗೆ ದ್ವೇಷ ಕಟ್ಟಿಕೊಂಡು ಸ್ವತಂತ್ರ ವಾಗಿರುವ ಬದಲು ಎಲ್ಲರೊಂದಿಗೆ ಪ್ರೀತಿಯಿಂದ ಇದ್ದು ಸ್ವತಂತ್ರವಾಗಿರುವುದು ಒಲಿತು. ಸ್ವತಂತ್ರ ಬದುಕು ಎನ್ನುವುದು ನಿಜವಾಗಿಯೂ ಒಳ್ಳೆಯದು.
ಇದರಲ್ಲಿ ವ್ಯಕ್ತಿಯು ಯಾರ ಹಂಗಿಗೂ ಬೀಳುವುದಿಲ್ಲ. ಸ್ವಾವಲಂಬಿಯಾಗಿರಲು ಪ್ರಮುಖ ಕಾರಣವೆಂದರೆ ಅದು ನಿಮ್ಮ ರಾಶಿಚಕ್ರಗಳು ಎಂದು ನಿಮಗೆ ತಿಳಿದಿದೆಯಾ? ಹಾಗಾದರೆ ಈ ಲೇಖನ ಮೂಲಕ ನೀವು ಸ್ವಾವಲಂಬಿ ಹಾಗೂ ಸ್ವತಂತ್ರ ಬದುಕು ಬಯಸುವಂತಹ ರಾಶಿಗಳ ಬಗ್ಗೆ ತಿಳಿದುಕೊಳ್ಳಲಿದ್ದೀರಿ. ಈ ರಾಶಿಯಗಳು ಯಾವುದು ಮತ್ತು ನಿಮ್ಮ ರಾಶಿ ಇದರಲ್ಲಿ ಇದೆಯಾ ಎನ್ನುವುದನ್ನು ನೀವು ತಿಳಿಯಲು ಮುಂದಕ್ಕೆ ಓದಿಕೊಳ್ಳಿ...

ಧನು: ನ.23-ಡಿ-22
ಧನು ರಾಶಿಯವರು ಯಾವಾಗಲೂ ಸ್ವತಂತ್ರವಾಗಿರಬೇಕೆಂದು ಬಯಸುವರು. ಅದರಲ್ಲೂ ಮುಖ್ಯವಾಗಿ ಪ್ರವಾಸದಲ್ಲಿ. ಇವರ ಕೆಲಸ ಬೇರೆಯವರು ಮಾಡುವ ತನಕ ಕಾಯಲು ಇವರು ತಯಾರಿರುವುದಿಲ್ಲ. ತನ್ನೊಂದಿಗೆ ಇರುವ ವ್ಯಕ್ತಿಯಿಂದಾಗಿ ತನ್ನ ಕೆಲಸವು ಆಗದೆ ಇರುವುದನ್ನು ಇವರು ದ್ವೇಷಿಸುವರು. ಇವರು ಏಕಾಂಗಿಯಾಗಿ ಸಮಯ ಕಳೆಯಲು ಬಯಸುವರು ಮತ್ತು ಇದರಿಂದ ಅವರು ಸಂಬಂಧಕ್ಕಾಗಿ ಹಾತೊರೆಯುವರು. ಇವರು ಏಕಾಂಗಿಯಾಗಿ ಸಮಯ ಕಳೆಯುವುದರಿಂದಾಗಿ ತಮ್ಮ ಮೌಲ್ಯ ಏನೆಂದು ಇವರಿಗೆ ತಿಳಿಯುವುದು.

ಕುಂಭ: ಜ.21-ಫೆ.18
ಪ್ರಕೃತಿ ನಡುವೆ, ಪ್ರವಾಸದಲ್ಲಿ ಇವರು ಏಕಾಂಗಿಯಾಗಿ ಇರಬೇಕೆಂದು ಬಯಸುವರು. ಇವರು ಏಕಾಂಗಿಯಾಗಿ ಇರುವಾಗ ತಾವು ಏನು ಯೋಚನೆ ಮಾಡುತ್ತಲಿದ್ದೇವೆಂದು ಇವರಿಗೆ ತಿಳಿಯುವುದು ಮತ್ತು ಇವರ ಒಳಗಿನ ಮಾತನ್ನು ಕೇಳುವರು. ಇವರು ಏಕಾಂಗಿಯಾಗಿರುವ ವೇಳೆ ತಮ್ಮ ಕಡೆ ಗಮನ ಹರಿಸಿಕೊಂಡು ಒಳ್ಳೆಯ ವ್ಯಕ್ತಿಗಳಾಗುವರು. ಇನ್ನೊಂದು ಬದಿಯಲ್ಲಿ ಇವರು ಸ್ವತಂತ್ರವಾಗಿರಬೇಕೆಂದು ಬಯಸುವ ಕಾರಣದಿಂದ ತಮ್ಮ ಕಡೆ ಗಮನಹರಿಸಿದರೆ ಅದು ತಪ್ಪೆಂದು ಇವರು ಭಾವಿಸುವುದಿಲ್ಲ.

ವೃಶ್ಚಿಕ: ಅ.24-ನ.22
ವೃಶ್ಚಿಕ ರಾಶಿಯವರಲ್ಲಿ ಯಾವಾಗಲೂ ಸ್ವಯಂ ಸಂಶಯ ಮತ್ತು ಭೀತಿ ಇರುವುದು. ಇದು ಅವರಿಗೆ ಒಳ್ಳೆಯದಲ್ಲ. ಈ ರಾಶಿಯ ವ್ಯಕ್ತಿಗಳು ಏಕಾಂಗಿಯಾಗಿರುವಾಗ ಅವರಿಗೆ ತಮ್ಮ ಮೌಲ್ಯ ತಿಳಿಯುವುದು. ಮೌಲ್ಯಯುತವಾಗಿರಲು ಇವರಿಗೆ ಬೇರೆಯವರ ಅನುಮತಿ ಬೇಕಿಲ್ಲ. ಇವರು ಏಕಾಂಗಿಯಾಗಿರುವಾಗ ಒತ್ತಡದಲ್ಲಿ ಇರುವುದಿಲ್ಲ. ಸಂಬಂಧಲ್ಲಿ ಕೂಡ ತಮ್ಮಂತೆ ಇರುವ ಸಂಗಾತಿಯ ಹುಡುಕಾಟ ನಡೆಸುವರು.

ಕನ್ಯಾ: ಆ.24-ಸೆ.23
ಕನ್ಯಾ ರಾಶಿಯವರು ಯಾವಾಗಲೂ ಏಕಾಂಗಿ ಹಾಗೂ ಸ್ವತಂತ್ರವಾಗಿರಲು ಬಯಸುವರು. ಇವರು ಬೇರೆಯವರ ಆಲೋಚನೆಗಳನ್ನು ಸ್ವಾಗತಿಸಿದರೂ ತಮ್ಮದಕ್ಕೆ ಹೆಚ್ಚು ಮೌಲ್ಯ ನೀಡುವರು. ಈ ವ್ಯಕ್ತಿಗಳಿಗೆ ತಮ್ಮದೇ ಆಗಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುವುದು. ಏಕಾಂಗಿ ಯಾಗಿರುವಾಗ ಇವರ ಆತ್ಮವಿಶ್ವಾಸವು ಹೆಚ್ಚಾಗುವುದು ಮತ್ತು ಧೈರ್ಯದಿಂದ ಮುನ್ನುಗ್ಗಲು ಬಯಸುವರು.

ವೃಷಭ: ಎಪ್ರಿಲ್ 20- ಮೇ 20
ವೃಷಭ ರಾಶಿಯವರು ಏಕಾಂಗಿಯಾಗಿರಲು ಬಯಸುವರು. ಯಾಕೆಂದರೆ ಇದರಿಂದಾಗಿ ಅವರಿಗೆ ತಮ್ಮ ಭಾವನೆಯೇನು ಎಂದು ತಿಳಿಯುವ ಅವಕಾಶ ಸಿಗುವುದು. ಇವರು ಜನರ ನಡುವಿನಲ್ಲಿ ಇರುವಾಗ ಭಾವನಾತ್ಮಕವಾಗಿ ತಮ್ಮ ಸಂಪರ್ಕ ಕಡಿದು ಕೊಳ್ಳುವರು. ಯಾಕೆಂದರೆ ಇವರು ಬೇರೆಯವರ ಬಗ್ಗೆ ಹೆಚ್ಚು ಕಾಳಜಿ ವಹಿಸುವರು. ಇವರು ಏಕಾಂಗಿಯಾಗಿರುವಾಗ ತಮ್ಮನ್ನು ಆಳವಾಗಿ ಅರ್ಥ ಮಾಡಿಕೊಂಡು ನಿಜವಾಗಿಯೂ ತಮಗೆ ಸಂತೋಷ, ದುಃಖ ಮತ್ತು ಕೋಪ ಉಂಟು ಮಾಡುವುದು ಏನು ಎಂದು ತಿಳಿಯ ಬಹುದು. ಇವರು ಏಕಾಂಗಿಯಾಗಿರುವಾಗ ತಮ್ಮ ಭಾವನಾತ್ಮಕ ಏಳು ಬೀಳುಗಳ ಬಗ್ಗೆ ಯೋಚಿಸುವರು.



Click it and Unblock the Notifications
