For Quick Alerts
ALLOW NOTIFICATIONS  
For Daily Alerts

    2019ರಲ್ಲಿ ಈ ಐದು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಕಾಣಲಿದೆಯಂತೆ!

    |

    ಹೊಸ ವರ್ಷದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದು. ಅದರಲ್ಲೂ ರಾಶಿಚಕ್ರದ ಪ್ರಭಾವದಿಂದಾಗಿ ಬದಲಾವಣೆಗಳು ಕಂಡುಬರುವುದು. ಹೀಗಾಗಿ ಪ್ರತಿಯೊಬ್ಬರು ಹೊಸ ವರ್ಷದಲ್ಲಿ ತಮ್ಮ ರಾಶಿಫಲವು ಹೇಗಿರಲಿದೆ ಎಂದು ತಿಳಿಯುವರು. ಯಾಕೆಂದರೆ ರಾಶಿ ಪಲ ನೋಡಿಕೊಂಡು ಅದರ ಅನುಸಾರ ಕೆಲವೊಂದು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ಇರುವ ಕಾರಣದಿಂದಾಗಿ ಹೊಸ ವರ್ಷವು ಹೊಸತನ ಹಾಗೂ ಒಳ್ಳೆಯದನ್ನು ಉಂಟು ಮಾಡಲಿ ಎಂದು ಬಯಸುವರು.

    ವೈಯಕ್ತಿಕ ಜೀವನ, ವೃತ್ತಿ ಹಾಗೂ ಶೈಕ್ಷಣಿಕ ಜೀವನದಲ್ಲೂ ರಾಶಿ ಚಕ್ರವು ಪರಿಣಾಮ ಉಂಟು ಮಾಡುವುದು. ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗಬೇಕೆಂದು ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ಬಯಸುವರು. ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ಬದಲಾವಣೆಗಳು ನಮ್ಮ ಜೀವನದಲ್ಲಿ ಆಗಿಯೇ ಆಗುವುದು. ಹೊಸ ವರ್ಷದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಕಾಣಲಿರುವಂತಹ ಐದು ರಾಶಿಚಕ್ರಗಳು ಯಾವುದು ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ಓದಿಕೊಂಡು ತಿಳಿಯಿರಿ.

    ವೃಷಭ

    ವೃಷಭ

    ಈ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರಲಿದೆ. ನೀವು ತುಂಬಾ ದೀರ್ಘ ಸಮಯ ಉಳಿಸಲು ಬಯಸುವಿರೋ 2019ರಲ್ಲಿ ಅದನ್ನು ನೀವು ಎದುರಿಸಲಿದ್ದೀರಿ. ನೀವು ಮುಂದೆ ಸಾಗಲು ಬದ್ಧರಾಗಿರಬೇಕು. ಯಾಕೆಂದರೆ ಇದನ್ನು ನಿಭಾಯಿಸುವ ವೇಳೆ ತುಂಬಾ ದಣಿದಿರಬಹುದು. ಇದರಿಂದಾಗಿ ಮುಂದೆ ಸಾಗುವುದು ಅಗತ್ಯವಾಗಿರುವುದು. ನಿಮ್ಮ ಪ್ರೇಮ ಸಂಬಂಧವು ಇಲ್ಲಿ ತೊಂದರೆಗೀಡಾಗಲಿದೆ. ಅನಿರೀಕ್ಷಿತವಾಗಿರುವುದು ಏನೋ ನಡೆಯಲಿದೆ ಮತ್ತು ಅದು ಈಗ ನಿಮಗೆ ಗೋಚರಿಸದೆ ಇರಬಹುದು. ಆದರೆ ಅದು ನಡೆದಾಗ ನಿಮಗೆ ತುಂಬಾ ಭಾವನೆಯಾಗಬಹುದು. ನೀವು ಬಯಸುತ್ತಾ ಇರುವಂತಹ ಮನ್ನಣೆಯು ನಿಮಗೆ ಸಿಗುವುದು.

    ಮಿಥುನ

    ಮಿಥುನ

    2019ರ ವರ್ಷವು ನಿಮಗೆ ತುಂಬಾ ಅದೃಷ್ಟವನ್ನು ತರಲಿದೆ ಎನ್ನುವುದು ತುಂಬಾ ಒಳ್ಳೆಯ ಸುದ್ದಿಯಾಗಿದೆ. ನೀವು ಪ್ರೀತಿಸುತ್ತಾ ಇರುವಂತಹ ಜಾಗದಲ್ಲಿ ನಿಮಗೆ ಅಂತಿಮವಾಗಿ ಒಂದು ಸ್ಥಾನವು ಸಿಗುವುದು. ಮೊದಲ ಸಲ ಬದಲಾವಣಿಯು ನಿಮಗೆ ರೂಢಿಯಾಗದೆ ಇರಬಹುದು ಮತ್ತು ಎಲ್ಲಾ ರೀತಿಯಿಂದಲೂ ನಿಮಗೆ ಆರಾಮವಾಗಿರದೆ ಇರಬಹುದು. ಆದರೆ ಇದು ಅನಿವಾವಾರ್ಯವೆಂದು ನೀವು ನಂಬಬೇಕು. ಈ ಎಲ್ಲಾ ಅನುಭವವು ನಿಮ್ಮನ್ನು ಭವಿಷ್ಯಕ್ಕಾಗಿ ನಿರ್ಮಿಸಲಿದೆ. ಇದರಿಂದ ನೀವು ಬದಲಾವಣೆಗಳನ್ನು ಸ್ವೀಕರಿಸಿದ ಮತ್ತು ಖರ್ಚಿನ ಮೇಲೆ ಸ್ವಲ್ಪ ಮಟ್ಟಿಗೆ ನಿಗಾ ಇಡಿ.

    Most Read: ಜನ್ಮ ತಿಂಗಳ ಪ್ರಕಾರ 2019ರ ನಿಮ್ಮ ಭವಿಷ್ಯವನ್ನು ತಿಳಿಯಿರಿ

    ಕರ್ಕಾಟಕ

    ಕರ್ಕಾಟಕ

    2019ನೇ ವರ್ಷವು ನಿಮಗೆ ತುಂಬಾ ಕಠಿಣವಾಗಿರಲಿದೆ. ನೀವು ಹಲವಾರು ಬದಲಾವಣೆಗಳನ್ನು ಕಾಣಲಿದ್ದೀರಿ ಮತ್ತು ಹೆಚ್ಚಿನವು ಇದರಲ್ಲಿ ತುಂಬಾ ಅಹಿತಕರವಾಗಿರುವುದು. ನಿಮ್ಮದೇ ಜನರು ನಿಮ್ಮನ್ನು ತುಂಬಾ ಸಂಕಷ್ಟದ ಸ್ಥಿತಿಗೆ ತಳ್ಳುವರು. ಆದರೆ ಇದನ್ನು ನೀವು ಸಹಿಸಿಕೊಳ್ಳಬೇಕು. ಇದರಿಂದ ನೀವು ಭಯ ಪಡುವುದು ಬೇಡ. ನಿಮಗೆ ತಿಳಿಯುವ ಮೊದಲೇ ಎಲ್ಲವೂ ನಿಮ್ಮ ಕೈಜಾರಿ ಹೋಗಲಿದೆ. ಸಂಬಂಧದಲ್ಲಿ ನಿಮಗೆ ಈ ವರ್ಷವು ತುಂಬಾ ಕಠಿಣವಾಗಿರಲಿದೆ ಮತ್ತು ನಿಮ್ಮ ಸ್ವಾಭಿಮಾನಕ್ಕೆ ದೊಡ್ಡ ಹೊಡೆತ ಬೀಳಬಹುದು.

    Most Read:2019ರಲ್ಲಿ ಎಲ್ಲಾ 12 ರಾಶಿ ಚಕ್ರಗಳ ಮದುವೆ ಭವಿಷ್ಯವು ಹೇಗಿರಲಿದೆ?

    ಕನ್ಯಾ

    ಕನ್ಯಾ

    ನಿಮಗೆ ಹೊಸ ವರ್ಷವು ತುಂಬಾ ಒಳ್ಳೆಯದಾಗಿರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು ಮತ್ತು ನಿಮಗೆ ಬೇಕಿರುವಂತಹ ಸ್ಥಳಕ್ಕೆ ನೀವು ಬರಲಿದ್ದೀರಿ. ಆರಂಭಿಕ ದಿನಗಳು ಸ್ವಲ್ಪ ಮಟ್ಟಿಗೆ ಕಠಿಣವಾಗಲಿದೆ. ಇದರಿಂದ ನಿಮಗೆ ಹಿನ್ನಡೆಯಾಗಬಹುದು. ಆದರೆ ಇದರಿಂದ ನೀವು ತುಂಬಾ ಸುಲಭವಾಗಿ ಪಾರಾಗಲಿದ್ದೀರಿ. ಅಸುರಕ್ಷಿತ ಭಾವನೆಯಿಂದ ನೀವು ಹೊರಗೆ ಬರುವುದು ತುಂಬಾ ಒಳ್ಳೆಯ ವಿಚಾರವೆಂದು ಅರಿತುಕೊಳ್ಳಬೇಕು. ಇದರಿಂದಾಗಿ ನಿಮಗೆ ತುಂಬಾ ಹಗುರ ಭಾವನೆ ಮತ್ತು ವ್ಯಕ್ತಿಯಾಗಿ ಬೆಳೆಯಲು ನೆರವಾಗಲಿದೆ.

    ಮಕರ

    ಮಕರ

    ನಿಮ್ಮ ಅಂತರಂಗದ ಮಾತನ್ನು ಕೇಳಲು ನೀವು ಆರಂಭಿಸಿದ ವೇಳೆ 2019ನೇ ವರ್ಷವು ನಿಮಗೆ ಒಳ್ಳೆಯ ಸಮಯವಾಗಲಿದೆ. 2019ರ ಅಂತ್ಯದ ವೇಳೆಗೆ ನೀವು ತುಂಬಾ ಕಡಿಮೆ ಒತ್ತಡ ಹಾಗೂ ಹೆಚ್ಚು ಆರಾಮವಾಗಿ ಇರಲಿದ್ದೀರಿ. ನೀವು ಅತಿಯಾಗಿ ಸಂಭ್ರಮಿಸಲು ಹೋಗಬೇಡಿ ಮತ್ತು ಏನು ನಡೆಯುತ್ತಿದೆಯೋ ಅದಕ್ಕೆ ಒಂದು ಕಾರಣವಿದೆ ಎಂದು ತಿಳಿಯಿರಿ. ನಿಮಗೆ ಹೊಸ ವರ್ಷದಲ್ಲಿ ಒಂದು ಸ್ಪಷ್ಟ ಚಿತ್ರಣವು ಕಾಣಲಿದೆ. ಕೆಟ್ಟ ಜನರಿಗೆ ಒಳ್ಳೆಯ ಜನರನ್ನು ನೀವು ಬೇರ್ಪಡಿಸಲಿದ್ದೀರಿ ಮತ್ತು ಎಲ್ಲಾ ವಿಚಾರಗಳು ಆಗ ನಿಮ್ಮ ಪರವಾಗಿ ಕೆಲಸ ಮಾಡಲು ಆರಂಭವಾಗುವುದು.ಇದರಿಂದಾಗಿ ನೀವು ದೃಢಮನಸ್ಸಿನಿಂದ ಇರಬೇಕು. ಪ್ರತಿಯೊಂದು ಹೊಸ ವರ್ಷ ಕೂಡ ಸ್ವಲ್ಪ ಸಿಹಿ ಹಾಗೂ ಕಹಿ ಉಂಟು ಮಾಡುವುದು. ಆದರೆ ನೀವು ಒಂದು ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೆ ಅನುಭವವು ನಿಮ್ಮನ್ನು ಮತ್ತಷ್ಟು ಜವಾಬ್ದಾರಿಯುತರನ್ನಾಗಿ ಮಾಡುವುದು. ಇದರಿಂದ ನಿಮ್ಮೊಳಗೆ ಒಳ್ಳೆಯತನವು ಹೊರಬರುವುದು.

    English summary

    In 2019 These Zodiac Signs will have a biggest change

    The New Year marks a new beginning for all of us in some way or the other. Every year billions of people resolute to bring about a good change in their life, and, how that resolution is seen going south right in the very first month, is a discussion for some other day.But what is common for all of us is the fact that New Year certainly brings new things on our way. In some way or the other, we see things taking a different shape, altogether. It brings about a change in our lives.Good or bad, the following 5 zodiac signs are going to see some big differences in their lives. Move ahead, read it once and be ready.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more