For Quick Alerts
ALLOW NOTIFICATIONS  
For Daily Alerts

ಈ ಗ್ರಾಮದಲ್ಲಿ ಮನುಷ್ಯರು ಮತ್ತು ಪಕ್ಷಿಗಳಿಗೆ ಕಣ್ಣುಗಳೇ ಕಾಣಿಸುವುದಿಲ್ಲವಂತೆ!

|

ಭೌಗೋಳಿಕ ಹಾಗೂ ಪ್ರಾಕೃತಿಕ ಅಂಶಗಳು ಕೆಲವೊಂದು ಪ್ರದೇಶಗಳಲ್ಲಿ ವಾಸಿಸುವಂತಹ ಜೀವಿಗಳ ಮೇಲೆ ಪರಿಣಾಮ ಬೀರುವುದು. ಕೆಲವೊಂದು ತಳಿಯ ಪ್ರಾಣಿಗಳ ಮರಿಗಳಲ್ಲಿ ಬದಲಾವಣೆಗಳು ಆಗಿ ಆ ತಳಿಯೇ ಅಳಿದು ಹೋಗಿದೆ. ಇಂತಹ ಹಲವಾರು ಪರಿಣಾಮಗಳು ಆಗುವುದು. ಈ ಪ್ರದೇಶದಲ್ಲಿ ಜನರು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಬಗ್ಗೆ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಈ ಗ್ರಾಮದಲ್ಲಿ ಜನರು ಮಾತ್ರ ದೃಷ್ಟಿ ಕಳೆದುಕೊಳ್ಳುತ್ತಿಲ್ಲ. ಬದಲಿಗೆ ಪಕ್ಷಿಗಳಿಗೂ ಈ ಸಮಸ್ಯೆಯು ಕಾಡುತ್ತಲಿದೆ ಎಂದು ಸಂಶೋಧನೆಗಳು ಹೇಳಿವೆ. ಇದರ ಬಗ್ಗೆ ವಿವರ ತಿಳಿಯಿರಿ.

Image Source

ಇಲ್ಲಿ ಹೆಚ್ಚೆಂದರೆ 70 ಮನೆಗಳು ಮಾತ್ರ ಇದೆ

ಇಲ್ಲಿ ಹೆಚ್ಚೆಂದರೆ 70 ಮನೆಗಳು ಮಾತ್ರ ಇದೆ

ಭಾರತದಲ್ಲೇ ಇರುವಂತಹ ಈ ಗ್ರಾಮದಲ್ಲಿ ಹೆಚ್ಚೆಂದರೆ 70 ಮನೆಗಳು ಮಾತ್ರ ಇವೆ. ಆದರೆ ವಿಚಿತ್ರವೆಂದರೆ ಈ ಮನೆಗಳಿಗೆ ಯಾವುದೇ ಕಿಟಕಿಗಳು ಇಲ್ಲ.

ಜನರ ನಂಬಿಕೆ

ಜನರ ನಂಬಿಕೆ

ಲಾವುಜೆಯಾ ಎನ್ನುವ ಮರವನ್ನು ನೋಡಲು ಆರಂಭಿಸಿದ ಬಳಿಕ ಜನರು ದೃಷ್ಟಿ ಕಳೆದುಕೊಳ್ಳಲು ಆರಂಭಿಸಿದ್ದಾರೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಮರ ನೋಡಿದ ಬಳಿಕ ಜನರು ದೃಷ್ಟಿ ಕಳೆದು ಕೊಂಡಿದ್ದಾರೆಂದು ನೆರೆಯ ಗ್ರಾಮಸ್ಥರು ಹೇಳುವರು.

Most Read: ನೀವು ಮಿಥುನ ರಾಶಿಯವರಲ್ಲಿ ಈ 5 ವಿಷಯಗಳನ್ನು ಕೇಳಲೇಬಾರದು!

ನಿಜವಾದ ಕಾರಣ

ನಿಜವಾದ ಕಾರಣ

ಆದರೆ ಸಂಶೋಧನೆಗಳು ಹೇಳುವ ಪ್ರಕಾರ ಇದಕ್ಕೆ ಕಾರಣ ಕೂಡ ತುಂಬಾ ವಿಚಿತ್ರವಾಗಿದೆ. ಇಲ್ಲಿನ ಜನರಿಗೆ ಕಪ್ಪು ಕೀಟವೊಂದು ಕಚ್ಚಿದ ಬಳಿಕ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕಪ್ಪು ನೊಣ ತುಂಬಾ ವಿಷಕಾರಿ

ಕಪ್ಪು ನೊಣ ತುಂಬಾ ವಿಷಕಾರಿ

ಕಪ್ಪು ನೊಣವು ಕಚ್ಚಿದ ಕೂಡಲೇ ಕೀಟಾಣುಗಳು ದೇಹದೊಳಗೆ ಹರಡುವುದು. ಇದು ಎಷ್ಟು ವಿಷಕಾರಿಯೆಂದರೆ ಇದರ ಪರಿಣಾಮ ಕಣ್ಣಿನ ನರಗಳ ಮೇಲೆ ಆಗುವುದು ಮತ್ತು ಜನರು ದೃಷ್ಟಿ ಕಳೆದುಕೊಳ್ಳುವರು ಎಂದು ಅಧ್ಯಯನಗಳು ಹೇಳಿವೆ.

Most Read: ಪಪ್ಪಾಯಿ ತಿಂದರೂ ಸಾಕು-ದೇಹದ ತೂಕ ಹಾಗೂ ಬೊಜ್ಜು ಇಳಿಸಿಕೊಳ್ಳಬಹುದು

ಕಪ್ಪು ನೊಣಗಳ ಬಗ್ಗೆ…

ಕಪ್ಪು ನೊಣಗಳ ಬಗ್ಗೆ…

ಕಪ್ಪು ನೊಣಗಳನ್ನು `ಎಮ್ಮೆ ಗುಂಗರೆ' ಅಥವಾ `ಟರ್ಕಿ ಗುಂಗರೆ' ಎಂದು ಕರೆಯಲಾಗುತ್ತದೆ. ಇವುಗಳನ್ನು ಕಪ್ಪು ನೊಣಗಳು ಎಂದು ಕರೆಯಲಾಗುವುದು. ಇವುಗಳು ಕಪ್ಪು, ಕಂದು ಅಥವಾ ಹಳದಿ ಬಣ್ಣದಲ್ಲಿರಬಹುದು.

ಸೂಚನೆ: ಇಂತಹ ವಿಚಿತ್ರ ಗ್ರಾಮಗಳ ಬಗ್ಗೆ ಹಲವಾರು ರೀತಿಯ ಕಥೆಗಳು ಇವೆ. ಆದರೆ ಇದು ಸತ್ಯವೋ ಅಥವಾ ಸುಳ್ಳೋ ಎನ್ನುವುದು ನಮಗೆ ತಿಳಿದಿಲ್ಲ. ನೀವು ಕೂಡ ಇದೇ ರೀತಿ ನಿರ್ಧರಿಸಿ. ಇಂತಹ ಆಸಕ್ತಿದಾಯಕ ಕಥೆಗಳ ಬಗ್ಗೆ ಓದಲಿಕ್ಕಿದ್ದರೆ ಆಗ ನೀವು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಅನಿಸಿಕೆ ತಿಳಿಸಿ.

English summary

Humans And Birds Are Blind In This Village Of India

Many ecological and environmental factors can cause various health issues in living things. From different living species of animals becoming extinct to a few undergoing changes in their breeds, a lot of things get affected. Here is one such place which can be termed as mysterious as people started going blind in this place. The researchers have noticed that it is not only the humans who are going blind in this village, but also the birds.
X
Desktop Bottom Promotion