ರಾಶಿಚಕ್ರದ ಪ್ರಭಾವ ವೃತ್ತಿಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ನೋಡಿ

Posted By: Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಗೂ ವೃತ್ತಿ ಎನ್ನುವುದು ಬಹುಮುಖ್ಯವಾದದ್ದು. ತಾವು ಮಾಡುವ ಪ್ರಮುಖ ವೃತ್ತಿಯ ಆಧಾರದ ಮೇಲೆಯೇ ಜೀವನ ಸಾಗಿಸುತ್ತಾರೆ. ಹೊಟ್ಟೆ ಬಟ್ಟೆಯನ್ನು ಕಟ್ಟಿಕೊಂಡು ಕುಟುಂಬವನ್ನು ನಿಭಾಯಿಸುತ್ತಾರೆ. ಯಾರು ವೃತ್ತಿ ಜೀವನದಲ್ಲಿ ಅಧಿಕ ಸಂಪಾದನೆಯನ್ನು ಮಾಡುತ್ತಾರೋ ಅಂತಹವರು ಆರ್ಥಿಕವಾಗಿ ಮೇಲ್ಮಟ್ಟಕ್ಕೆ ಹೋಗುತ್ತಾರೆ. ಯಾರು ತಮ್ಮ ವೃತ್ತಿ ಜೀವನದಲ್ಲಿ ಕಡಿಮೆ ಸಂಪಾದನೆಯನ್ನು ಮಾಡುತ್ತಾರೋ ಅವರು ಜೀವನದಲ್ಲಿ ಆರ್ಥಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಬಹುದು.

ವ್ಯಕ್ತಿಯ ವೃತ್ತಿ, ಸಂಪಾದನೆ, ವೃತ್ತಿಯ ಆಯ್ಕೆ ಎಲ್ಲವೂ ನಮಗೇ ಅರಿವಿಲ್ಲದಂತೆ ರಾಶಿಚಕ್ರದ ಅನ್ವಯದಂತೆ ಆಗುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಹೇಗೆ ಆತನ ಜಾತಕ ಕುಂಡಲಿ ಹಾಗೂ ರಾಶಿಚಕ್ರದ ಅನ್ವಯದಲ್ಲಿ ನಡೆಯುವುದೋ ಹಾಗೆಯೇ ನಮ್ಮ ಕೆಲಸದ ಮೇಲೂ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮಗೂ ನಿಮ್ಮ ರಾಶಿಚಕ್ರ ಹಾಗೂ ಅದರಿಂದ ವೃತ್ತಿ ಜೀವನದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾಗಿರುವ ವಿವರಣೆಯನ್ನು ಅರಿಯಿರಿ....

ಮೇಷ

ಮೇಷ

ಮೇಷ ರಾಶಿಯವರಿಗೆ ಯಶಸ್ಸಿನ ಗುರಿಯನ್ನು ಹೇಗೆ ತಲುಪಬೇಕು ಎನ್ನುವುದು ತಿಳಿದಿದೆ. ಇವರು ಒಮ್ಮೆ ಒಂದು ಸಂಸ್ಥೆಯಲ್ಲಿ ಉತ್ತಮ ಸ್ಥಾನವನ್ನು ಪಡೆದು, ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ ಎಂದಾದರೆ ಯಾವುದೇ ಕಾರಣಕ್ಕೂ ಪುನಃ ಕೆಳಗಿನ ಸ್ಥಿತಿಗೆ ಬರಲು ಇಚ್ಛಿಸುವುದಿಲ್ಲ. ಬದಲಿಗೆ ಬೇರೆ ಸಂಸ್ಥೆಯಲ್ಲಿ ಉತ್ತಮ ಸ್ಥಾನಕ್ಕಾಗಿ ಏಣಿ ಹಾಕುತ್ತಾರೆ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಈ ರಾಶಿಯವರು ಪರಿಶ್ರಮ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಇವರ ನಿಷ್ಠೆ ಮತ್ತು ನಿರ್ಣಯವು ಇವರ ಗುರಿಯ ಮಟ್ಟವನ್ನು ತಲುಪಲು ಸಹಾಯ ಮಾಡುವುದು. ಇವರು ತಮ್ಮನ್ನು ತಾವು ಕೆಲಸದಲ್ಲಿ ತಲ್ಲೀನಗೊಳಿಸಿಕೊಳ್ಳುತ್ತಾರೆ. ಫಲಿತಾಂಶದ ಮೇಲೆ ಹೆಚ್ಚು ಕೇಂದ್ರೀಕರಿಸದೆ ಮುನ್ನುಗ್ಗುತ್ತಾರೆ. ಹೀಗಾಗಿ ಅವರು ತಮ್ಮ ನಿರೀಕ್ಷೆಗೂ ಮುಂಚೆ ತಲುಪುತ್ತಾರೆ ಎನ್ನಲಾಗುವುದು.

ಮಿಥುನ 22 ಮೇ -21 ಜೂನ್

ಮಿಥುನ 22 ಮೇ -21 ಜೂನ್

ಈ ರಾಶಿಯವರು ತಮ್ಮ ಯಶಸ್ಸಿನ ಕೀಲಿಯನ್ನು ತಮ್ಮ ಆಧ್ಯತೆಗಳಿಗೆ ಅನುಗುಣವಾಗಿ ರಚಿಸುತ್ತಾರೆ. ವ್ಯಾಪಾರ ಸಂಬಂಧಿ ಪ್ರವಾಸಗಳನ್ನ ಅಥವಾ ಪ್ರಯಾಣವನ್ನು ಸ್ವೀಕರಿಸುವುದರ ಜೊತೆಗೆ ಬದಲಾವಣೆಯು ಅತ್ಯಗತ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇವರ ವೃತ್ತಿ ಜೀವನದ ಯಶಸ್ಸು ತಮ್ಮ ಕೆಲಸದ ಮೇಲೆ ಹೇಗೆ ಭಾವನಾತ್ಮಕವಾದ ಹಿಡಿತವನ್ನು ಹೊಂದಿದ್ದಾರೆ ಎನ್ನುವದನ್ನು ಅವಲಂಭಿಸಿರುತ್ತದೆ. ಇವರು ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ ಎಂದಾದರೆ ಯಾವುದೇ ಕಾರಣಕ್ಕೂ ಚಿಂತಿಸುವ ಅಗತ್ಯವಿರುವುದಿಲ್ಲ. ಸರ್ವಕಾಲಿಕವಾಗಿ ತೋರುವ ಧೈರ್ಯದ ಜೊತೆಗೆ ಅವರ ಸಂಬಂಧಗಳ ಬಗ್ಗೆಯು ಹೆಚ್ಚಿನ ಕಾಳಜಿ ವಹಿಸಬೇಕಾಗುವುದು.

ಸಿಂಹ: ಜುಲೈ23-ಆಗಸ್ಟ್ 23

ಸಿಂಹ: ಜುಲೈ23-ಆಗಸ್ಟ್ 23

ಇವರು ಸನ್ನಿವೇಶಗಳ ಅನುಕೂಲವನ್ನು ತಮ್ಮ ಯಶಸ್ಸಿಗೆ ಕೇಳಿ ತೆಗೆದುಕೊಳ್ಳುವುದರಿಂದ ಬಹುಬೇಗ ಯಶಸ್ಸನ್ನು ಪಡೆಯುವರು. ಇನ್ನೊಂದೆಡೆ ಇವರು ಸೊಕ್ಕಿನ ವ್ಯಕ್ತಿಗಳಾಗಿ ತೋರಿಸಿಕೊಳ್ಳಬಹುದು.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ಕೆಲಸದಲ್ಲಿ ತೋರುವ ಪ್ರೀತಿಯು ಇವರ ಯಶಸ್ಸಿಗೆ ಕಾರಣವಾಗುವುದು. ಇವರು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಅಂತೆಯೇ ಆಧ್ಯತೆಯ ಪಟ್ಟಿಯ ಮೇಲೆ ಗಮನ ನೀಡುತ್ತಾರೆ. ಇವರ ಅತ್ಯುತ್ತಮ ಗುಣವೆಂದರೆ ಪ್ರಾಮಾಣಿಕತೆ, ಒಳನೋಟ ಹಾಗೂ ಉತ್ತಮ ಸ್ಮರಣ ಶಕ್ತಿ ಎನ್ನಬಹುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರಲ್ಲಿರುವ ಹೊಂದಾಣಿಕೆಯ ಗುಣ ಹಾಗೂ ತಲುಪುವ ವೇಗದ ಪರಿಣಾಮವಾಗಿಯೇ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಘರ್ಷಣೆಯನ್ನು ತಪ್ಪಿಸುವ ಕೌಶಲ್ಯ ಹಾಗೂ ಬುದ್ಧಿವಂತಿಕೆಯಿಂದ ಇವರು ಯಶಸ್ವಿಯ ಹಾದಿಯನ್ನು ತುಳಿಯುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ತಮ್ಮ ಅಂತದೃಷ್ಟಿ ಮತ್ತು ಕೌಶಲ್ಯಗಳಿಂದ ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸರಿಯಾದ ಸಮಸಯದಲ್ಲಿ ಸೂಕ್ತ ರೀತಿಯ ಕೆಲಸ ನಿರ್ವಹಿಸುವುದು ಮತ್ತು ಜೀವನದಲ್ಲಿ ಪ್ರತಿಯೊಂದು ಅವಕಾಶಗಳಿಂದ ಪ್ರಯೋಜನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಇವರು ಶ್ರಮಪಟ್ಟು ದುಡಿಯುವುದರಿಂದ ಯಶಸ್ಸಿನ ಕೀಲಿಯನ್ನು ಬಹುಬೇಗ ಪಡೆಯಬಹುದು ಎಂದು ನಂಬಿರುತ್ತಾರೆ. ಇವರು ತಾವು ಅಂದುಕೊಂಡಂತಹ ವೃತ್ತಿ ಜೀವನವನ್ನೇ ನಡೆಸುತ್ತಾರೆ. ಇತರರೊಂದಿಗೆ ಪ್ರಾಮಾಣಿಕರಾಗಿರುವ ಇವರು ತಮ್ಮ ಶಕ್ತಿಯನ್ನು ಯಶಸ್ಸಿನಲ್ಲಿ ವಿನಿಯೋಗಿಸುತ್ತಾರೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಆಜ್ಞೆಯ ಅಡಿಯಲ್ಲಿ ಇರುವಾಗ ಈ ರಾಶಿಯವರು ಉತ್ತಮ ಕೆಲಸವನ್ನು ನಿರ್ವಹಿಸುತ್ತಾರೆ. ಇವರು ಆದಷ್ಟು ನಿರ್ವಾಹಕ ಗುಣವನ್ನು ಖಚಿತ ಪಡಿಸಿ ಲಾಭವನ್ನು ಪಡೆಯಲು ಪ್ರಯತ್ನಿಸಬೇಕು. ಇವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ ನಂತರ ನಿಜವಾದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎನ್ನಬಹುದು.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ವಿಭಿನ್ನ ಸಂದರ್ಭದಲ್ಲಿ ನಿಜವಾದ ಆಳವನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಪರಿಪೂರ್ಣತೆಯನ್ನು ಪಡೆದುಕೊಳ್ಳುವ ಮೊದಲು ಅನೇಕ ಉದ್ಯೋಗಗಳನ್ನು ಬದಲಿಸುವುದರ ಅರ್ಥವೇನು ಎನ್ನುವುದನ್ನು ತಿಳಿದು ಕೊಳ್ಳಬೇಕು. ತಮ್ಮ ಸ್ವಯಂ ಪ್ರೇರಣೆ ಮತ್ತು ಗಮನವು ಅವರಿಗೆ ಯಶಸ್ಸನ್ನು ತಂದುಕೊಡುವುದು ಎನ್ನುವುದನ್ನು ಅರಿಯಬೇಕು.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಈ ರಾಶಿಯವರು ಹೆಚ್ಚಿನ ಪ್ರಯತ್ನ ತೋರದೆಯೇ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಇವರು ತಾವು ಏನು ಮಾಡಬೇಕು ಹಾಗೂ ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳುತ್ತಾರೆ. ಇದರಿಂದಲೇ ಅವರು ಸುಲಭವಾಗಿ ಯಶಸ್ಸನ್ನು ಸಾಧಿಸುತ್ತಾರೆ.

English summary

how-zodiac-signs-dictate-your-career-growth

Each individual is believed to be dictated by their zodiac sign powers. These powers help in shaping up a person's personality and characteristics. Here, we reveal to you the facts on how the zodiac signs will influence your career growth and success. Find out more..
Story first published: Wednesday, February 28, 2018, 8:27 [IST]