Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನಿಮ್ಮ ಆಕರ್ಷಕ ಮೈಮಾಟವನ್ನು ರಾಶಿಚಕ್ರ ನಿರ್ಧರಿಸುತ್ತದೆ!
ವ್ಯಕ್ತಿಯನ್ನು ನೋಡಿದಾಗ ಮೊದಲು ಗೋಚರವಾಗುವುದು ಅವರ ವ್ಯಕ್ತಿತ್ವ ಹಾಗೂ ಅವರ ಹಾವ ಭಾವ. ನೋಡಲು ಸುಂದರವಾದ ವ್ಯಕ್ತಿತ್ವ ಹೊಂದಿದ್ದರೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ. ಅದು ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ. ಪ್ರತಿಯೊಬ್ಬರು ಸುಂದರವಾದ ದೇಹ ಹಾಗೂ ಆಕರ್ಷಕ ಮೈಮಾಟವನ್ನು ಹೊಂದಿರಬೇಕು ಎಂದು ಬಯಸುತ್ತಾರೆ. ಆದರೆ ಹಲವರಿಗೆ ಕೆಲವು ನ್ಯೂನತೆಗಳಿರುತ್ತವೆ. ಹಾಗೆಯೇ ಪರಿಪೂರ್ಣವಾದ ಸೌಂದರ್ಯ ಹೊಂದಿದವರು ಕೇವಲ ಬೆರಳೆಣಿಕೆಯಲ್ಲಿ ಸಿಗಬಹುದು. ಬಹುತೇಕರಿಗೆ ಎಲ್ಲಾ ಬಗೆಯ ಸೌಂದರ್ಯ ಇರುವುದಿಲ್ಲ ಎಂದೇ ಹೇಳಬಹುದು.
ವ್ಯಕ್ತಿಯ ಸುಂದರವಾದ ಮೈಕಷ್ಟು, ಮುಖಚರ್ಯೆ ಹಾಗೂ ಬಣ್ಣಗಳೆಲ್ಲವೂ ರಾಶಿಚಕ್ರ ಹಾಗೂ ಹುಟ್ಟಿದ ಸಮಯದ ಅನ್ವಯದಲ್ಲಿಯೇ ನಿರ್ಣಯವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದರಲ್ಲೂ ರಾಶಿ ಚಕ್ರಕ್ಕೆ ಅನ್ವಯವಾಗಿ ಕೆಲವು ದೇಹ ರಚನೆಗಳು ಇರುತ್ತವೆ. ಅವುಗಳ ಅನ್ವಯದಂತೆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ವರ್ತನೆ ವ್ಯಕ್ತಿತ್ವ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ಮೈಮಾಟ ಅಥವಾ ವ್ಯಕ್ತಿತ್ವ ಯಾವ ಪರಿಯಿಂದ ಕೂಡಿದೆ ಎನ್ನುವುದನ್ನು ತಿಳಿಯಲು ಮನಸ್ಸಾದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...
ಮೇಷ
ಈ ರಾಶಿಯವರ ಹುಬ್ಬು , ಮೂಗು ಮತ್ತು ಗದ್ದಗಳು ಮೊನಚಾದ ಆಕಾರವನ್ನು ಹೊಂದಿರುತ್ತವೆ. ಚೂಪಾದ ಮುಖದ ಲಕ್ಷಣ ಹೊಂದಿರುವ ಇವರು ಮುಖದ ಮೇಲೆ ಒಂದು ಕಪ್ಪು ಕಲೆ ಅಥವಾ ಮಚ್ಚೆಯನ್ನು ಹೊಂದಿರುತ್ತಾರೆ. ಅದೇ ಅವರ ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಎನ್ನಬಹುದು. ಪುರುಷರು ದೊಡ್ಡದಾದ ಸುಂದರವಾಗಿರದ ಮೂಗನ್ನು ಹೊಂದಿರುತ್ತಾರೆ.
ವೃಷಭ
ಈ ರಾಶಿಯ ವ್ಯಕ್ತಿಗಳು ಕಪ್ಪು ಕೂದಲು ಮತ್ತು ಆಕರ್ಷಣೀಯ ಕಣ್ಣನ್ನು ಹೊಂದಿರುತ್ತಾರೆ. ಈ ರಾಶಿಯ ಮಹಿಳೆಯರು ದುರಾದೃಷ್ಟ ಎನ್ನುವ ರೀತಿಯಲ್ಲಿ ಬಹು ಬೇಗ ದೇಹದ ತೂಕವನ್ನು ಹೊಂದುತ್ತಾರೆ. ಪುರುಷರು ದೇಹ ಪೂರ್ತಿ ಕೂದಲನ್ನು ಹೊಂದಿರುತ್ತಾರೆ ಎನ್ನಲಾಗುವುದು.
ಮಿಥುನ
ಈ ವ್ಯಕ್ತಿಗಳು ಚಿಕ್ಕದಾದ ಮುಖ ಹಾಗೂ ಆಕರ್ಷಕ ಮುಖಚರ್ಯೆಯನ್ನು ಹೊಂದಿರುವ ಗೊಂಬೆಯಂತೆ ಇರುತ್ತಾರೆ. ಮಹಿಳೆಯರು ಹೆಚ್ಚು ತೂಕವನ್ನು ಹೊಂದಿರುತ್ತಾರೆ. ಪುರುಷರಿಗೆ ಹೇರಳವಾದ ಕೂದಲನ್ನು ಹೊಂದಿರುತ್ತಾರೆ. ಈ ರಾಶಿಯವರು ಅತ್ಯುತ್ತಮ ಅಂತಃಪ್ರಜ್ಞೆಯ ಶಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಕೆಟ್ಟ ಸಂದರ್ಭಗಳು ಎದುರಾದರೆ ಅಥವಾ ಅನುಭವಕ್ಕೆ ಬಂದರೆ ಮುಂದೇನಾಗುವುದು ಎನ್ನುವುದನ್ನು ಊಹಿಸುವ ಶಕ್ತಿ ಹೊಂದಿರುತ್ತಾರೆ. ಉತ್ತಮ ಸಂವಹನ ಕಾರರಾಗಿರುವ ಇವರು ಮುಂಬರುವ ಸಮಸ್ಯೆಗಳಿಂದ ಹೇಗೆ ಪಾರಾಗಬಹುದು ಎನ್ನುವುದನ್ನು ಅವರು ಯೋಚಿಸಿರುತ್ತಾರೆ ಮತ್ತು ಪಾರಾಗುತ್ತರೆ ಸಹ. ಇನ್ನು ಇವರು ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿ ಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ.
ಕರ್ಕ
ಇವರು ಅಭಿವ್ಯಕ್ತ ಮುಖಚರ್ಯೆಯನ್ನು ಹೊಂದಿರುತ್ತಾರೆ. ಇವರು ಆಕರ್ಷಕ ಕಿವಿ, ಗಲ್ಲ, ಕಣ್ಣು ಮತ್ತು ಹುಬ್ಬುಗಳನ್ನು ಹೊಂದಿರುತ್ತಾರೆ. ಅದು ಅವರ ಆಕರ್ಷಕ ಅಂಗ ಎನ್ನಬಹುದು. ಸ್ತ್ರೀಯರು ದೊಡ್ಡ ಎದೆಯ ಗಾತ್ರವನ್ನು ಹೊಂದಿರುತ್ತಾರೆ. ಪುರುಷರಿಗೆ ಉದ್ದವಾದ ಹಲ್ಲುಗಳು ಇರುತ್ತವೆ ಎನ್ನಲಾಗುವುದು.
ಸಿಂಹ
ಈ ರಾಶಿಯ ವ್ಯಕ್ತಿಗಳು ಬೆಕ್ಕಿನಂತಹ ದೇಹವನ್ನು ಹೊಂದಿರುತ್ತಾರೆ ಎನ್ನುತ್ತಾರೆ. ಹೆಂಗಸರಿಗೆ ಸಣ್ಣದಾದ ಕೈಕಾಲುಗಳು ಇರುತ್ತವೆ. ಹಾಗಾಗಿಯೇ ಅವರು ಕೊಂಚ ದಪ್ಪಗಿರುವ ವ್ಯಕ್ತಿಗಳಂತೆ ತೋರುತ್ತಾರೆ. ಪುರುಷರು ದೊಡ್ಡ ದೇಹ ಹಾಗೂ ಅದರ ಮೇಲೆ ತೆಳುವಾದ ಕೂದಲುಗಳು ಇರುತ್ತವೆ. ಇವರು ದೈಹಿಕವಾಗಿ ನೋಡಲು ಸುಂದರವಾಗಿ ಕಾಣದೆ ಇರಬಹುದು. ಆದರೆ ಆಕರ್ಷಕವಾಗಿ ಹೇಗೆ ಕಾಣಿಸಿಕೊಳ್ಳುವುದು ಎನ್ನುವುದನ್ನು ಇವರು ತಿಳಿದಿದ್ದಾರೆ.
ಕನ್ಯಾ
ಈ ರಾಶಿಯವರು ಆಕರ್ಷಕ ಕಣ್ಣುಗಳು ಮತ್ತು ತೆಳುವಾದ ತುಟಿಯನ್ನು ಹೊಂದಿರುತ್ತಾರೆ. ಸೌಮ್ಯವಾದ ಮುಖ ಚರ್ಯೆಯನ್ನು ಹೊಂದಿರುತ್ತಾರೆ. ವಯಸ್ಸು ಹೆಚಾಗಿದ್ದರೂ ಅವರು ನೋಡಲು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಈ ರಾಶಿಯ ಸ್ತ್ರೀಯರ ಮೂಗು ಸ್ವಲ್ಪ ಪುರುಷರ ಮೂಗಿನಂತೆ ಕಾಣುತ್ತದೆ. ಪುರುಷರು ದುರ್ಬಲವಾದ ಕೆನ್ನೆಯನ್ನು ಹೊಂದಿರುತ್ತಾರೆ.
ತುಲಾ
ಈ ವ್ಯಕ್ತಿಗಳು ಅಂಡಾಕಾರದ ಮುಖವನ್ನು ಹೊಂದಿರುತ್ತಾರೆ. ಇವರಿಗೆ ಕುಗ್ಗಿದ ಗಲ್ಲ ಅಥವಾ ಕುಳಿ ಬೀಳುವಂತಹ ಗಲ್ಲವನ್ನು ಹೊಂದಿರುತ್ತಾರೆ. ಇವರ ನಗು ಇವರ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಸ್ತ್ರೀಯರು ಮೊಂಡಾದ ಮೂಗು ಹಾಗೂ ಪುರುಷರು ಕಿರಿದಾದ ಪಾದಗಳನ್ನು ಹೊಂದಿರುತ್ತಾರೆ.
ವೃಶ್ಚಿಕ
ಇವರ ಕಣ್ಣು ಆಕರ್ಷಕ ಮತ್ತು ನೇರ ನೋಟದಿಂದ ಕೂಡಿರುತ್ತದೆ. ಕಮಾನಿನ ಆಕಾರದ ಹುಬ್ಬನ್ನು ಪಡೆದುಕೊಂಡಿರುತ್ತಾರೆ. ಮಹಿಳೆಯರ ಕೈಗಳು ಸ್ವಲ್ಪ ಪುರುಷರ ಕೈಗಳಂತೆ ತೋರುವುದು. ಪುರುಷರ ಕಾಲು ಸ್ವಲ್ಪ ಬಾಗಿದ ಅಥವಾ ಬಿಲ್ಲಿನಂತಹ ಕಾಲನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಇನ್ನು ಇವರು ಇವರು ಮಾನಸಿಕವಾಗಿ ಅತ್ಯುತ್ತಮವಾದ ಮೆದುಳಿನ ಸಾಮರ್ಥ್ಯ ಹೊಂದಿರುತ್ತಾರೆ. ಇವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರು ಇತರರ ಜನರ ಮನಸ್ಸನ್ನು ಓದುವುದು ಮತ್ತು ಅವರ ನೈಜ ಉದ್ದೇಶಗಳನ್ನು ಕಂಡುಹಿಡಿಯುವಲ್ಲಿ ಅವರಿಗೆ ಉತ್ತಮ ಸಾಮರ್ಥ್ಯವಿದೆ. ಒಬ್ಬ ವ್ಯಕ್ತಿಯ ಪಾತ್ರವನ್ನು ನಿರ್ಣಯಿಸುವಲ್ಲಿ ಅವರು ತುಂಬಾ ಚಾಣಾಕ್ಷರು. ತಮ್ಮ ತೀರ್ಪಿನ ಕುರಿತು ತೀರ್ಪು ನೀಡುತ್ತಿರುವ ಜನರಲ್ಲಿ ಅತ್ಯುತ್ತಮವಾದ ಗುಣಗಳನ್ನು ಕಂಡುಕೊಳ್ಳುತ್ತಾರೆ. ಇದಲ್ಲದೆ ಯಾರು ನಕಲಿ ಎಂದು ತಿಳಿದುಕೊಳ್ಳುವುದರಲ್ಲಿಯೂ ಸಹ ಚಾಣಾಕ್ಷರು ಇವರು. ಚೇಳಿನ ಚಿಹ್ನೆಯನ್ನು ಹೊಂದಿರುವ ಇವರು ಸಾಕಷ್ಟು ಕೆಸವನ್ನು ಮಾಡುತ್ತಾರೆ. ಆದರೆ ಅದನ್ನು ಬಹಳ ಶ್ರಮ ಪಟ್ಟು ಮಾಡುವ ಗೋಜಿಗೆ ಹೋಗುವುದಿಲ್ಲ. ಆಸೆಯನ್ನು ಹೊಂದಿರುತ್ತಾರೆಯಾದರೂ ನಿಧಾನವಾಗಿ ಕೆಲಸ ನಿರ್ವಹಿಸುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ. ಅಷ್ಟೇ ಅಲ್ಲದೆ ಸಂಪನ್ಮೂಲ, ವಿಶ್ಲೇಷಾತ್ಮಕ ಹಾಗೂ ಅರ್ಥಗರ್ಭಿತ ಸ್ವಭಾವದವರು ಇವರಾಗಿರುತ್ತಾರೆ. ಇವರು ಒಳ್ಳೆಯ ಪತ್ತೆದಾರರು ಮತ್ತು ಸತ್ಯವನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿರುವವರಾಗಿರುತ್ತಾರೆ.
ಧನು
ಈ ರಾಶಿಯವರು ಸುಂದರವಾದ , ಸ್ಪಷ್ಟವಾದ ಕಣ್ಣನ್ನು ಹೊಂದಿರುತ್ತಾರೆ. ಕ್ರೀಡಾಪಟುವಿನಂತಹ ದೇಹವಾಗಿರುತ್ತದೆ. ಮಹಿಳೆಯರು ಸ್ವಲ್ಪ ತೂಕವನ್ನು ಹೊಂದಿರುವ ದೇಹವನ್ನು ಹೊಂದಿರುತ್ತಾರೆ. ಇವರು ಅತ್ಯುತ್ತಮ ಧ್ಯಾನ ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ. ಒಮ್ಮೆ ಇವರು ಕಣ್ಮುಚ್ಚಿ ಯಾವುದಾದರೊಂದು ವಿಚಾರಕ್ಕೆ ತೀರ್ಮಾನ ಕೈಗೊಂಡರೆ ಅದು ಕಾರ್ಯ ರೂಪಕ್ಕೆ ಬರುತ್ತದೆ. ಕೆಲವು ವಿಚಾರಗಳಿಗೆ ಹೃದಯದಿಂದ ನಿರ್ಧರಿಸುವ ಬದಲು ಕಿವಿಮಾತುಗಳಿಂದ ನಿರ್ಧರಿಸಬಹುದು ಎನ್ನುವ ಧೋರಣೆಯನ್ನು ತಳೆಯುತ್ತಾರೆ. ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ. ಇನ್ನು ಈ ವ್ಯಕ್ತಿಗಳು ಆಧ್ಯಾತ್ಮಿಕ, ಧನಾತ್ಮಕ ಮತ್ತು ನೈತಿಕತೆಯ ಸ್ವಭಾವ ಹೊಂದಿರುವವರಾಗಿರುತ್ತಾರೆ. ಇವರು ಪ್ರವಾಸ ಪ್ರಿಯರು ಮತ್ತು ಯಾವುದೇ ಹುದ್ದೆಗೆ ಬೇಕಾಗುವಂತಹ ಶಿಕ್ಷಣವನ್ನು ಸಂಪಾದಿಸುವವರು.ಇವರು ಆಲಸ್ಯ ಪ್ರವೃತ್ತಿಯವರು ಎನ್ನಬಹುದು. ಶ್ರಮಪಟ್ಟು ಕೆಲಸಮಾಡುವವರಲ್ಲಿ ಕೊನೆ ಸ್ಥಾನವನ್ನು ಪಡೆದುಕೊಳ್ಳುವರು. ಇವರಿಗೆ ಯಾವುದೇ ಸಂಘಟಿತ ಯೋಜನೆ, ಆಲೋಚನೆ ಇರುವುದಿಲ್ಲ. ಹಾಗೆಯೇ ಮಾಡಬೇಕೆಂದಿದ್ದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಎನ್ನಬಹುದು. ಧನುರ್ ರಾಶಿ ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ.
ಮಕರ
ಸುಂದರವಾಧ ಕೆನ್ನೆ, ಚೂಪಾದ ಗಲ್ಲ ಹೊಂದಿರುತ್ತಾರೆ. ಮಹಿಳೆಯರ ತುಟಿಯು ಬಹಳ ತೆಳುವಾದ ವಿನ್ಯಾಸವನ್ನು ಹೊಂದಿರುತ್ತದೆ. ಪುರುಷರು ಕೊಂಚ ಕುಳ್ಳರಾಗಿರುತ್ತಾರೆ ಎನ್ನಲಾಗುವುದು.
ಕುಂಭ
ಈ ರಾಶಿಯವರ ಕಿವಿ ಮತ್ತು ತುಟಿಗಳು ಚೂಪಾದ ವಿನ್ಯಾಸದಿಂದ ಕೂಡಿರುತ್ತದೆ. ವಿಶಾಲವಾದ ಹಣೆ ಮತ್ತು ತೆಳುವಾದ ದೇಹದಾಕಾರವನ್ನು ಹೊಂದಿರುತ್ತಾರೆ. ಸ್ತ್ರೀಯರ ಕತ್ತು ಸ್ವಲ್ಪ ದಪ್ಪದಾದ ವಿನ್ಯಾಸವನ್ನು ಹೊಂದಿರುತ್ತದೆ. ಪುರುಷರು ವಿಶಾಲವಾದ ಭುಜವನ್ನು ಹೊಂದಿರುತ್ತಾರೆ ಎನ್ನಲಾಗುವುದು.
ಮೀನ
ಇವರು ಸುಂದರವಾದ ಹಾಗೂ ಮಂದವಾದ ನಗುವನ್ನು ಹೊಂದಿರುತ್ತಾರೆ. ಅಲೆಅಲೆಯಾದ ಕೇಶರಾಶಿಯನ್ನು ಹೊಂದಿರುತ್ತಾರೆ. ಸ್ತ್ರೀಯರು ಮಗುವಿನ ಮುಖದಂತೆ ಇರುತ್ತಾರೆ. ಪುರುಷರಿಗೆ ಮುಖದ ಮೇಲೆ ಸ್ವಲ್ಪ ಸುಕ್ಕುಗಳಿರುವಂತೆ ತೋರುತ್ತದೆ. ಜೊತೆಗೆ ಬಹು ಬೇಗ ವಯಸ್ಸಾದವರಂತೆ ಕಾಣುವ ಸಾಧ್ಯತೆಗಳಿವೆ.