ನಾವು ಏನು ಕೆಲಸ ಮಾಡುತ್ತೇವೆ? ಎನ್ನುವುದನ್ನು ರಾಶಿಚಕ್ರ ನಿರ್ಧರಿಸುವುದು!!

Posted By: Deepu
Subscribe to Boldsky

ನಿತ್ಯದ ಊಟ-ತಿಂಡಿ ಹಾಗೂ ಅಗತ್ಯ ವಸ್ತುಗಳನ್ನು ನಾವು ಪಡೆದುಕೊಳ್ಳಬೇಕು ಎಂದರೆ ನಮಗೊಂದು ದುಡಿಮೆ ಎನ್ನುವುದು ಇರಬೇಕು. ನಾವು ಏನು ಕೆಲಸ ಮಾಡುತ್ತೇವೆ? ನಮ್ಮ ಆದಾಯ ಎಷ್ಟು ಎನ್ನುವುದರ ಆಧಾರದ ಮೇಲೆ ನಮ್ಮ ಸ್ಥಿತಿ-ಗತಿಯ ನಿರ್ಧಾರವಾಗುವುದು. ಉತ್ತಮ ದುಡಿಮೆ ಇಲ್ಲದಿರುವಾಗ ಬೇಸರ ಮತ್ತು ಬಡತನ ನಮ್ಮನ್ನು ಕಾಡುವುದು. ಅದೇ ಕೈತುಂಬ ಗಳಿಕೆ ಕಿರಿಕಿರಿ ಇಲ್ಲದ ಉದ್ಯೋಗ ಎಂದಾಗ ಅತಿಯಾದ ಸಂತೋಷ ದೊರೆಯುವುದು. ಜೀವನವು ಸುಂದರ ಎನ್ನುವ ಭಾವ ಉಂಟಾಗುವುದು. ಹಾಗಾಗಿ ದುಡಿಮೆಯಲ್ಲಿ ಕಾಣುವ ಏರಿಳಿತವೇ ನಮ್ಮ ಜೀವನ ಎಂದರೆ ತಪ್ಪಾಗಲಾರದು.

ನಾವು ಮಾಡುವ ಕೆಲಸ ನಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಇಲ್ಲ ಎಂದಾದಾಗ ನಾವು ಎಷ್ಟೇ ಪ್ರಯತ್ನ ಪಟ್ಟರೂ ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿ ಹಾಗೂ ಯಶಸ್ಸು ದೊರೆಯದು. ಅದೇ ರಾಶಿಗನುಗುಣವಾಗಿ ಉದ್ಯೋಗ ಇದ್ದರೆ ನಮ್ಮ ಅಪೇಕ್ಷೆಗೆ ಅನುಗುಣವಾಗಿ ಹಣದ ಹರಿವು, ಯಶಸ್ಸು ಹಾಗೂ ಜೀವನದಲ್ಲಿ ನೆಮ್ಮದಿ ದೊರೆಯುವುದು. ನಿಮಗೆ ನಿಮ್ಮ ಉದ್ಯೋಗದಿಂದ ಜೀವನದ ಮೇಲೆ ಯಾವ ಪ್ರಭಾವ ಬೀರುತ್ತದೆ? ಅದಕ್ಕೆ ನಿಮ್ಮ ವರ್ತನೆ ಹೇಗಿರುವುದು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ...

ಮೇಷ

ಮೇಷ

ಮೇಷ ರಾಶಿಯವರಿಗೆ ಯಶಸ್ಸಿನ ಗುರಿಯನ್ನು ಹೇಗೆ ತಲುಪಬೇಕು ಎನ್ನುವುದು ತಿಳಿದಿದೆ. ಇವರು ಒಮ್ಮೆ ಒಂದು ಸಂಸ್ಥೆಯಲ್ಲಿ ಉತ್ತಮ ಸ್ಥಾನವನ್ನು ಪಡೆದು, ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ ಎಂದಾದರೆ ಯಾವುದೇ ಕಾರಣಕ್ಕೂ ಪುನಃ ಕೆಳಗಿನ ಸ್ಥಿತಿಗೆ ಬರಲು ಇಚ್ಛಿಸುವುದಿಲ್ಲ. ಬದಲಿಗೆ ಬೇರೆ ಸಂಸ್ಥೆಯಲ್ಲಿ ಉತ್ತಮ ಸ್ಥಾನಕ್ಕಾಗಿ ಏಣಿ ಹಾಕುತ್ತಾರೆ.

ವೃಷಭ

ವೃಷಭ

ಈ ರಾಶಿಯವರು ಪರಿಶ್ರಮ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಇವರ ನಿಷ್ಠೆ ಮತ್ತು ನಿರ್ಣಯವು ಇವರ ಗುರಿಯ ಮಟ್ಟವನ್ನು ತಲುಪಲು ಸಹಾಯ ಮಾಡುವುದು. ಇವರು ತಮ್ಮನ್ನು ತಾವು ಕೆಲಸದಲ್ಲಿ ತಲ್ಲೀನಗೊಳಿಸಿಕೊಳ್ಳುತ್ತಾರೆ. ಫಲಿತಾಂಶದ ಮೇಲೆ ಹೆಚ್ಚು ಕೇಂದ್ರೀಕರಿಸದೆ ಮುನ್ನುಗ್ಗುತ್ತಾರೆ. ಹೀಗಾಗಿ ಅವರು ತಮ್ಮ ನಿರೀಕ್ಷೆಗೂ ಮುಂಚೆ ತಲುಪುತ್ತಾರೆ ಎನ್ನಲಾಗುವುದು.

ಮಿಥುನ

ಮಿಥುನ

ಈ ರಾಶಿಯವರು ತಮ್ಮ ಯಶಸ್ಸಿನ ಕೀಲಿಯನ್ನು ತಮ್ಮ ಆಧ್ಯತೆಗಳಿಗೆ ಅನುಗುಣವಾಗಿ ರಚಿಸುತ್ತಾರೆ. ವ್ಯಾಪಾರ ಸಂಬಂಧಿ ಪ್ರವಾಸಗಳನ್ನ ಅಥವಾ ಪ್ರಯಾಣವನ್ನು ಸ್ವೀಕರಿಸುವುದರ ಜೊತೆಗೆ ಬದಲಾವಣೆಯು ಅತ್ಯಗತ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು.

ಕರ್ಕ

ಕರ್ಕ

ಇವರ ವೃತ್ತಿ ಜೀವನದ ಯಶಸ್ಸು ತಮ್ಮ ಕೆಲಸದ ಮೇಲೆ ಹೇಗೆ ಭಾವನಾತ್ಮಕವಾದ ಹಿಡಿತವನ್ನು ಹೊಂದಿದ್ದಾರೆ ಎನ್ನುವದನ್ನು ಅವಲಂಭಿಸಿರುತ್ತದೆ. ಇವರು ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ ಎಂದಾದರೆ ಯಾವುದೇ ಕಾರಣಕ್ಕೂ ಚಿಂತಿಸುವ ಅಗತ್ಯವಿರುವುದಿಲ್ಲ. ಸರ್ವಕಾಲಿಕವಾಗಿ ತೋರುವ ಧೈರ್ಯದ ಜೊತೆಗೆ ಅವರ ಸಂಬಂಧಗಳ ಬಗ್ಗೆಯು ಹೆಚ್ಚಿನ ಕಾಳಜಿ ವಹಿಸಬೇಕಾಗುವುದು.

ಸಿಂಹ

ಸಿಂಹ

ಇವರು ಸನ್ನಿವೇಶಗಳ ಅನುಕೂಲವನ್ನು ತಮ್ಮ ಯಶಸ್ಸಿಗೆ ಕೇಳಿ ತೆಗೆದುಕೊಳ್ಳುವುದರಿಂದ ಬಹುಬೇಗ ಯಶಸ್ಸನ್ನು ಪಡೆಯುವರು. ಇನ್ನೊಂದೆಡೆ ಇವರು ಸೊಕ್ಕಿನ ವ್ಯಕ್ತಿಗಳಾಗಿ ತೋರಿಸಿಕೊಳ್ಳಬಹುದು.

ಕನ್ಯಾ

ಕನ್ಯಾ

ಇವರು ಕೆಲಸದಲ್ಲಿ ತೋರುವ ಪ್ರೀತಿಯು ಇವರ ಯಶಸ್ಸಿಗೆ ಕಾರಣವಾಗುವುದು. ಇವರು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಅಂತೆಯೇ ಆಧ್ಯತೆಯ ಪಟ್ಟಿಯ ಮೇಲೆ ಗಮನ ನೀಡುತ್ತಾರೆ. ಇವರ ಅತ್ಯುತ್ತಮ ಗುಣವೆಂದರೆ ಪ್ರಾಮಾಣಿಕತೆ, ಒಳನೋಟ ಹಾಗೂ ಉತ್ತಮ ಸ್ಮರಣ ಶಕ್ತಿ ಎನ್ನಬಹುದು.

ತುಲಾ

ತುಲಾ

ಇವರಲ್ಲಿರುವ ಹೊಂದಾಣಿಕೆಯ ಗುಣ ಹಾಗೂ ತಲುಪುವ ವೇಗದ ಪರಿಣಾಮವಾಗಿಯೇ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಘರ್ಷಣೆಯನ್ನು ತಪ್ಪಿಸುವ ಕೌಶಲ್ಯ ಹಾಗೂ ಬುದ್ಧಿವಂತಿಕೆಯಿಂದ ಇವರು ಯಶಸ್ವಿಯ ಹಾದಿಯನ್ನು ತುಳಿಯುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ತಮ್ಮ ಅಂತದೃಷ್ಟಿ ಮತ್ತು ಕೌಶಲ್ಯಗಳಿಂದ ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸರಿಯಾದ ಸಮಸಯದಲ್ಲಿ ಸೂಕ್ತ ರೀತಿಯ ಕೆಲಸ ನಿರ್ವಹಿಸುವುದು ಮತ್ತು ಜೀವನದಲ್ಲಿ ಪ್ರತಿಯೊಂದು ಅವಕಾಶಗಳಿಂದ ಪ್ರಯೋಜನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಧನು

ಧನು

ಇವರು ಶ್ರಮಪಟ್ಟು ದುಡಿಯುವುದರಿಂದ ಯಶಸ್ಸಿನ ಕೀಲಿಯನ್ನು ಬಹುಬೇಗ ಪಡೆಯಬಹುದು ಎಂದು ನಂಬಿರುತ್ತಾರೆ. ಇವರು ತಾವು ಅಂದುಕೊಂಡಂತಹ ವೃತ್ತಿ ಜೀವನವನ್ನೇ ನಡೆಸುತ್ತಾರೆ. ಇತರರೊಂದಿಗೆ ಪ್ರಾಮಾಣಿಕರಾಗಿರುವ ಇವರು ತಮ್ಮ ಶಕ್ತಿಯನ್ನು ಯಶಸ್ಸಿನಲ್ಲಿ ವಿನಿಯೋಗಿಸುತ್ತಾರೆ.

ಮಕರ

ಮಕರ

ಆಜ್ಞೆಯ ಅಡಿಯಲ್ಲಿ ಇರುವಾಗ ಈ ರಾಶಿಯವರು ಉತ್ತಮ ಕೆಲಸವನ್ನು ನಿರ್ವಹಿಸುತ್ತಾರೆ. ಇವರು ಆದಷ್ಟು ನಿರ್ವಾಹಕ ಗುಣವನ್ನು ಸಾಭೀತು ಪಡಿಸಿ ಲಾಭವನ್ನು ಪಡೆಯಲು ಪ್ರಯತ್ನಿಸಬೇಕು. ಇವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ ನಂತರ ನಿಜವಾದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎನ್ನಬಹುದು.

ಕುಂಭ

ಕುಂಭ

ವಿಭಿನ್ನ ಸಂದರ್ಭದಲ್ಲಿ ನಿಜವಾದ ಆಳವನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಪರಿಪೂರ್ಣತೆಯನ್ನು ಪಡೆದುಕೊಳ್ಳುವ ಮೊದಲು ಅನೇಕ ಉದ್ಯೋಗಗಳನ್ನು ಬದಲಿಸುವುದರ ಅರ್ಥವೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ತಮ್ಮ ಸ್ವಯಂ ಪ್ರೇರಣೆ ಮತ್ತು ಗಮನವು ಅವರಿಗೆ ಯಶಸ್ಸನ್ನು ತಂದುಕೊಡುವುದು ಎನ್ನುವುದನ್ನು ಅರಿಯಬೇಕು.

ಮೀನ

ಮೀನ

ಈ ರಾಶಿಯವರು ಹೆಚ್ಚಿನ ಪ್ರಯತ್ನ ತೋರದೆಯೇ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಇವರು ತಾವು ಏನು ಮಾಡಬೇಕು ಹಾಗೂ ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳುತ್ತಾರೆ. ಇದರಿಂದಲೇ ಅವರು ಸುಲಭವಾಗಿ ಯಶಸ್ಸನ್ನು ಸಾಧಿಸುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    How Your Career Gets Influenced By Your Zodiac Sign

    Each individual is believed to be dictated by their zodiac sign powers. These powers help in shaping up a person's personality and characteristics. Here, we reveal to you the facts on how the zodiac signs will influence your career growth and success. Find out more...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more