Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ರಾಶಿಭವಿಷ್ಯ: ಜನ್ಮ ತಿಂಗಳ ಆಧಾರದ ಮೇಲೆ, ಅದೃಷ್ಟವೇ ಬದಲಾಗಬಹುದು!
ಜೀವನದಲ್ಲಿ ಪ್ರೀತಿ ಎನ್ನುವುದು ಪ್ರಮುಖ ಪಾತ್ರವಹಿಸುತ್ತದೆ. ಭೂಮಿಯ ಮೇಲಿರುವ ವ್ಯಕ್ತಿಗೆ ಜೀವನದ ನಿರ್ವಹಣೆ ಹಣ ಎಷ್ಟು ಪ್ರಮುಖವಾಗಿರುತ್ತದೆಯೋ ಅದಕ್ಕೂ ಹೆಚ್ಚಿನದಾಗಿ ಪ್ರೀತಿಯ ಅಗತ್ಯವಿರುತ್ತದೆ. ಪ್ರೀತಿಯನ್ನು ಕಾಣದೆ ಬದುಕಿದ ವ್ಯಕ್ತಿ ಮಾನಸಿಕವಾಗಿ ಕಿನ್ನತೆ, ದುಃಖದಿಂದ ಕೂಡಿದ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಯಾಗಿ ಬದುಕಿರುತ್ತಾನೆ ಎಂದು ಹೇಳಬಹುದು. ವ್ಯಕ್ತಿಯು ಜೀವನದಲ್ಲಿ ಅದೃಷ್ಟ ಹಾಗೂ ದುಃಖವನ್ನು ಪಡೆಯಲು ಅವನ ರಾಶಿಚಕ್ರವು ಎಷ್ಟು ಪ್ರಮುಖವಾದ ಪಾತ್ರವಹಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಪ್ರೀತಿಯ ವಿಚಾರದಲ್ಲೂ ಅಷ್ಟೇ ಪ್ರಾಮುಖ್ಯತೆಯನ್ನು ವಹಿಸುತ್ತದೆ ಎಂದು ಹೇಳಲಾಗುವುದು.
2018ರಲ್ಲಿ ಪ್ರೀತಿಯ ವಿಚಾರದಲ್ಲಿ ವ್ಯಕ್ತಿ ಹೆಚ್ಚು ಅದೃಷ್ಟವನ್ನು ಮಾಡಿದ್ದಾನೆ ಎಂದು ಹೇಳಬಹುದಾಗಿದೆ. ಈ ವರ್ಷದ ಪ್ರೀತಿಯ ಜೀವನದ ಭವಿಷ್ಯವಾಣಿಯು ವ್ಯಕ್ತಿಯ ಜನ್ಮ ತಿಂಗಳ ಆಧಾರವನ್ನು ಪಡೆದುಕೊಂಡಿದೆ. ಈಗಾಗಲೇ ವರ್ಷದ ಆರಂಭವಾಗಿ ಎರಡನೇ ತಿಂಗಳದ ಅಂತ್ಯಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷದಲ್ಲಿ ಯಾವ ಬಗೆಯ ಪ್ರೀತಿಯ ಅದೃಷ್ಟವನ್ನು ಜನ್ಮ ತಿಂಗಳ ಆಧಾರದ ಮೇಲೆ ಪಡೆದುಕೊಳ್ಳುತ್ತೇವೆ ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗಾಗಿ ಈ ಮುಂದೆ ವಿವರಿಸಿದೆ....

ಜನವರಿ
ಈ ತಿಂಗಳಲ್ಲಿ ಹುಟ್ಟಿದ ಜನರಿಗೆ ಪ್ರೀತಿಯ ವಿಚಾರದಲ್ಲಿ ರೋಮಾಂಚಕಾರಿ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ಸಂಬಂಧ ಹಾಗೂ ಸ್ಥಾನಮಾನಕ್ಕೆ ಹೊರತಾಗಿ ಕೆಲವು ವಿಚಾರಗಳಿಗೆ ನೀರಸ ಉಂಟಾಗಬಹುದು. ಇವರ ಪ್ರೀತಿಯ ಜೀವನದಲ್ಲಿ ತೊಡಕನ್ನು ಕಾಣುವ ಸಾಧ್ಯತೆಗಳೂ ಇವೆ. ಈಗಾಗಲೇ ವಿವಾಹವಾಗಿದ್ದರೆ ಅವರು ಕುಟುಂಬವನ್ನು ವಿಸ್ತರಿಸಬಹುದು. ಆ ಕಾರಣಕ್ಕಾಗಿ ಉತ್ತಮ ಸಿದ್ಧಿಯ ನಿರೀಕ್ಷೆ ಮಾಡಬಹುದು.

ಫೆಬ್ರುವರಿ
ಈ ತಿಂಗಳಲ್ಲಿ ಜನಿಸಿದವರು ಈ ವರ್ಷ ತೀವ್ರವಾದ ವೈಯಕ್ತಿಕ ಬದಲಾವಣೆಯನ್ನು ಕಾಣಬಹುದು. ಪಾಲುದಾರರು ಇವರ ಅಗತ್ಯಗಳನ್ನು ಅರಿಯದಿದ್ದರೆ ಸಂಬಂಧವು ಅಂತ್ಯ ಕಾಣುವ ಸಾಧ್ಯತೆಗಳಿವೆ ಎಂದು ಊಹಿಸಬಹುದಾಗಿದೆ. ಕೆಲವು ವಿಚಾರವು ಇವರಿಗೆ ರೋಮಾಂಚಕಾರಿ ಎಂದು ತೋರುತ್ತದೆಯಾರೂ ಅದು ಅವರ ಪಾಲುದಾರರಿಗೆ ಒತ್ತಡವನ್ನುಂಟುಮಾಡಬಹುದು. ತಮ್ಮಷ್ಟಕ್ಕೆ ತಾವು ನಿಜ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

ಮಾರ್ಚ್
ಈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಪ್ರತಿಯೊಬ್ಬರಲ್ಲೂ ಒಳ್ಳೆಯ ಗೆಳೆತನವನ್ನು ನೋಡಲು ಬಯಸುತ್ತಾರೆ. ಅದರಲ್ಲೂ ವಿಶೇಷವಾಗಿ ಅವರು ವಿವಾಹವಾಗಿದ್ದರೆ ಸಂಬಂಧಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಈ ವರ್ತನೆಯಿಂದಾಗಿ ಕೆಲವು ತೊಂದರೆಗಳನ್ನು ಸಹ ಎದುರಿಸಬೇಕಾಗುವ ಸಾಧ್ಯತೆಗಳಿರುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಷ್ಟು ಭಾರೀ ಪ್ರಮಾಣದ ಲಾಭಗಳಿಲ್ಲ. ಆದರೆ ಶಾಂತಿಯುತವಾದ ಜೀವನವನ್ನು ಕಾಣುತ್ತಾರೆ.

ಏಪ್ರಿಲ್
ಸಂಗಾತಿಯೊಂದಿಗೆ ಅಥವಾ ಪಾಲುದಾರರೊಂದಿಗೆ ಭಾವನಾತ್ಮಕ ವಿಚಾರ, ಅನ್ಯೋನ್ಯತೆ, ಸಂಪನ್ಮೂಲ ಸೇರಿದಂತೆ ಅನೇಕ ವಿಚಾರದಲ್ಲಿ ಕಲಿಕೆಯನ್ನು ಅನುಭವಿಸುತ್ತಾರೆ. ರಕ್ಷಣಾತ್ಮಕ ಮತ್ತು ಅಭದ್ರತೆಯ ವಿಚಾರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು. ಸಂಗಾತಿಯ ಸುತ್ತ ತಮ್ಮ ನೈಜತೆಯನ್ನು ಕಂಡುಕೊಳ್ಳುವ ಸಾಧ್ಯತೆಗಳಿವೆ.

ಮೇ
ಈ ತಿಂಗಳಲ್ಲಿ ಜನಿಸಿದ ಕೆಲವು ವ್ಯಕ್ತಿಗಳು ಮಾತ್ರ ಬದ್ಧವಾದ ಸಂಬಂಧ ಹಾಗೂ ಪ್ರೀತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ವರ್ಷದಲ್ಲಿ ಅನೇಕ ವ್ಯಕ್ತಿಗಳು ವಿವಿಧ ಬದಲಾವಣೆಯನ್ನು ಕಂಡುಕೊಳ್ಳುವರು ಎಂದು ಹೇಳಲಾಗುವುದು.

ಜೂನ್
ಈ ತಿಂಗಳಲ್ಲಿ ಜನಿಸಿದವರಿಗೆ ಪ್ರೀತಿಯ ವಿಚಾರದಲ್ಲಿ ಆಶ್ಚರ್ಯಕರವಾದ ಸಂಗತಿಗಳೇನು ಇಲ್ಲದಿರಬಹುದು. ಆದರೆ ವೈಯಕ್ತಿಕ ಬೆಳವಣಿಗೆ ಮತ್ತು ಸಂಬಂಧದ ವಿಷಯದಲ್ಲಿ ಖಂಡಿತವಾಗಿಯೂ ಬದಲಾವಣೆ ಉಂಟಾಗುವುದು ಎಂದು ಹೇಳಲಾಗುತ್ತದೆ. ವರ್ಷದ ಕೊನೆಯಲ್ಲಿ ಬೇರೆಯವರು ಯಾರು ಬೇಡ ಎನ್ನುವ ಭಾವಕ್ಕೆ ಬರುತ್ತಾರೆ.

ಜುಲೈ
ಈ ತಿಂಗಳಲ್ಲಿ ಜನಿಸಿದವರಿಗೆ ಈ ವರ್ಷ ಸೂಕ್ತವಾಗಿದೆ. ಈ ವರ್ಷ ತಮ್ಮ ಪ್ರೀತಿಯ ಜೀವನದಲ್ಲಿ ಆಳವಾದ ಕಡು ಬಯಕೆಯನ್ನು ಹೊಂದಿರುತ್ತಾರೆ. ಸಂಬಂಧದಲ್ಲಿ ಅನೇಕ ಬದಲಾವಣೆಯನ್ನು ಅನುಭವಿಸುತ್ತಾರೆ. ಸಂಬಂಧದಲ್ಲಿ ಅನೇಕ ಬದಲಾವಣೆಯು ಅತ್ಯುತ್ತಮವಾಗಬಹುದು.

ಆಗಸ್ಟ್
ಈ ತಿಂಗಳಲ್ಲಿ ಜನಿಸಿದವರ ಪ್ರೀತಿಯ ಜೀವನ ನವೀಕರಣದ ಹಂತದಲ್ಲಿದೆ. ಜೂನ್ 26 ರಿಂದ ಆಗಸ್ಟ್ 27ರ ನಡುವಿನ ಅವಧಿಯು ಒಂದು ಪ್ರಮುಖವಾದ ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ. ಈ ಬದಲಾವಣೆಗಳು ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳಲು ಸಹಾಯವಾಗುವುದು.

ಸಪ್ಟೆಂಬರ್
ಈ ತಿಂಗಳಲ್ಲಿ ಜನಿಸಿದವರು ತಮ್ಮ ಪಾಲುದಾರರಲ್ಲಿ ಅಸಾಧಾರಣ ನಂಬಿಕೆಯನ್ನು ಹೊಂದಿರುತ್ತಾರೆ. ಭವಿಷ್ಯವಾಣಿಯು ನಿರ್ಬಂಧವಿಲ್ಲದ ಪ್ರೀತಿಯನ್ನು ಸೂಚಿಸುತ್ತದೆ. ಮತ್ತೊಂದೆಡೆ ಈ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ ನಕ್ಷತ್ರಗಳು ಪ್ರಕಾಶಮಾನವಾಗಿದೆ. ಇವರಿಗೆ ಎಲ್ಲವೂ ಅವರ ಕಾಲ್ಪನಿಕ ಕಥೆಯಂತೆ ಕಾಣುತ್ತದೆ.

ಅಕ್ಟೋಬರ್
ಈ ತಿಂಗಳಲ್ಲಿ ಜನಿಸಿದವರಿಗೆ ಅನೇಕ ಬದಲಾವಣೆಯ ಜೊತೆಗೆ ಅತ್ಯಂತ ಉತ್ತಮ ನಿರ್ಧಾರಕ ಅಥವಾ ನ್ಯಾಯಾಧೀಶನಾಗುವಂತೆ ಮಾಡುತ್ತದೆ. ಪ್ರೀತಿಯ ಜೀವನದಲ್ಲಿ ನವೀಕರಣ ಮತ್ತು ವಿಮೋಚನೆಯನ್ನು ಅನುಭವಿಸುವ ಸಾಧ್ಯತೆಗಳಿವೆ. ಬದ್ಧವಾದ ಸಂಬಂಧವನ್ನು ಹೊಂದಿದ್ದರೆ ಅವರು ಬದಲಾವಣೆಯನ್ನು ಬಯಸುತ್ತಾರೆ.

ನವೆಂಬರ್
ಈ ತಿಂಗಳಲ್ಲಿ ಜನಿಸಿದವರಿಗೆ ಪ್ರೀತಿಯ ಜೀವನವು ಅತ್ಯುತ್ತಮ ಸ್ಥಾನವನ್ನು ತಂದುಕೊಡುವುದಿಲ್ಲ. ಏಕೆಂದರೆ ಇವರ ಪಾಲುದಾರರು ಸಂಬಂಧದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಪಡೆಯಲು ಇಚ್ಛಿಸುತ್ತಾರೆ. ಅಥವಾ ಹೊರಗಿನ ಮಾದರಿಯಲ್ಲಿ ಬದುಕಲು ಇಚ್ಛಿಸುತ್ತಾರೆ.

ಡಿಸೆಂಬರ್
ಈ ತಿಂಗಳಲ್ಲಿ ಜನಿಸಿದವರು ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ತಮ್ಮ ಬಗ್ಗೆ ಹೆಚ್ಚಿನ ಗಮನ ನೀಡಲಿಲ್ಲ ಎಂದೇ ಹೇಳಬಹುದು. ಒಂಟಿಯಾಗಿರುವವರು ಹೊಸತನವನ್ನು ಪಡೆದುಕೊಳ್ಳಲು ಸಾಕಷ್ಟು ಅವಕಾಶಗಳಿಗಾಗಿ ಎದುರು ನೋಡಬಹುದು. ಹೊಸ ಸಂಬಂಧಗಳ ಬೆಳವಣಿಗೆಯ ಸಾಧ್ಯತೆಗಳಿವೆ.



Click it and Unblock the Notifications











