Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೋಪ ಬಂದಾಗ ಯಾವ್ಯಾವ ರಾಶಿಯವರು ಹೇಗೆಲ್ಲಾ ವರ್ತಿಸುತ್ತಾರೆ ನೋಡಿ
ವ್ಯಕ್ತಿಯ ವ್ಯಕ್ತಿತ್ವ ಬಿತ್ತರವಾಗುವುದು ಅವನು ಕೋಪಗೊಂಡಾಗ ಎನ್ನಬಹುದು. ಕೋಪಕ್ಕೆ ಒಳಗಾದ ವ್ಯಕ್ತಿಗಳು ಸಾಮಾನ್ಯವಾಗಿ ಅಂತರಾಳದಲ್ಲಿ ಅಡಗಿದ್ದ ನೋವುಗಳನ್ನು ಹಾಗೂ ಬೇಸರವನ್ನು ಬಹುಬೇಗ ವ್ಯಕ್ತಪಡಿಸುತ್ತಾರೆ. ಒಂದರ್ಥದಲ್ಲಿ ಆಳದ ಭಾವನೆ ಹಾಗೂ ಅಭಿಪ್ರಾಯಗಳು ಹೇಗಿರುತ್ತವೆ ಎನ್ನುವುದನ್ನು ಬಹಳ ಸುಲಭವಾಗಿ ಬಿತ್ತರಿಸುತ್ತಾರೆ. ಕೋಪದಲ್ಲಿಯೂ ನಾವು ವಿವಿಧ ಬಗೆಯ ಕೋಪಗಳನ್ನು ಕಾಣಬಹುದು. ಕೋಪಕ್ಕೆ ಒಳಗಾದಾಗ ಮೌನವನ್ನು ತಾಳಬಹುದು. ಕೆಲವರು ಸುತ್ತಲಿನ ವಸ್ತುಗಳನ್ನು ನಾಶಮಾಡಬಹುದು. ಇಲ್ಲವೇ ಎದುರಿಗಿದ್ದ ವ್ಯಕ್ತಿಯ ಮೇಲೆ ಹರಿಹಾಯಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಹೇಗೆ ವ್ಯಕ್ತಿತ್ವವು ಭಿನ್ನವಾಗಿರುತ್ತದೆಯೋ ಹಾಗೆಯೇ ಕೋಪವನ್ನು ವ್ಯಕ್ತಪಡಿಸುವ ವಿಧಾನವೂ ಭಿನ್ನವಾಗಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಕೋಪ ಎನ್ನುವುದು ಸಹಜ. ಮನುಷ್ಯನ ಸಾಮಾನ್ಯ ವರ್ತನೆಯಲ್ಲಿ ಒಂದಾದ ಈ ಕೋಪವು ಅವರ ರಾಶಿಚಕ್ರಕ್ಕೆ ಅನುಗುಣವಾಗಿ ಇರುತ್ತದೆ. ಗ್ರಹಗಳು ಹಾಗೂ ರಾಶಿಚಕ್ರಗಳು ವ್ಯಕ್ತಿಯ ಭಾವನೆಗಳ ನಿಯಂತ್ರಣ ಹಾಗೂ ವ್ಯಕ್ತಪಡಿಸುವಿಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ಬಗೆಯಲ್ಲಿ ಕೋಪ ಬರುವುದು? ಅದರ ಪರಿಣಾಮ ಹೇಗಿರುವುದು ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಅರಿಯಿರಿ...

ಮೇಷ
ಮೇಷರಾಶಿಯವರ ಕೋಪವನ್ನು ಚಿಕ್ಕ ಮಕ್ಕಳಿಗೆ ಹೋಲಿಸುತ್ತಾರೆ. ಇವರಿಗೆ ಒಮ್ಮೆ ಕೋಪಬಂದರೆ ಎದುರಿಗೆ ಯಾರು ಇದ್ದಾರೆ ಎನ್ನುವುದನ್ನು ಪರಿಗಣಿಸದೆಯೇ ಒಮ್ಮೆಲೇ ಸ್ಫೋಟಿಸುತ್ತಾರೆ. ಸಕ್ಕರೆಯ ಲೇಪನದಂತೆ ಇವರ ಭಾವನೆಗಳು ಇರುತ್ತವೆ. ಅಲ್ಲದೆ ಉತ್ತಮ ವೀಕ್ಷಕರು ಹೌದು. ಆದರೆ ಕ್ರೋದ ಹಾಗೂ ಸಿಟ್ಟಿನ ವಿಚಾರಕ್ಕೆ ಬಂದರೆ ಬೆಂಕಿಯ ರೂಪದಲ್ಲಿ ಇರುತ್ತದೆ ಎನ್ನಬಹುದು. ಸಿಟ್ಟು ಬಂದಾಗ ಕಿರುಚುವ ಮೂಲಕ ವ್ಯಕ್ತಪಡಿಸುತ್ತಾರೆ. ಆದರೆ ಅಷ್ಟೇ ಬೇಗನೆ ತಣ್ಣಗಾಗುತ್ತಾರೆ ಸಹ. ಇವರು ತಮ್ಮ ಭಾವನೆಗಳ ಮೇಲೆ ಆದಷ್ಟು ಹಿಡಿತವನ್ನು ಹೊಂದಿರಬೇಕು. ಒಮ್ಮೆ ಆದ ತಪ್ಪನ್ನು ಪುನಃ ಆಗದಂತೆ ಕಾಳಜಿವಹಿಸಬೇಕಿದೆ.

ವೃಷಭ
ಇವರು ಯಾರೊಂದಿಗಾದರೂ ಕೋಪಕ್ಕೆ ಒಳಗಾದರೆ ಮೊದಲು ಸೂಕ್ಷ್ಮವಾದ ಸುಳಿವನ್ನು ನೀಡುತ್ತಾರೆ. ಜೊತೆಗೆ ಮೌನವನ್ನು ಹೊಂದುವುದರ ಮೂಲಕ ತಣ್ಣಗಾಗುತ್ತಾರೆ. ಅತಿಯಾದ ಕೋಪಕ್ಕೆ ಒಳಗಾದಾಗ ಜ್ವಾಲಾಮುಖಿಯಾಗಿ ಇರುತ್ತಾರೆ. ಈ ರಾಶಿಚಕ್ರದ ವ್ಯಕ್ತಿಗಳು ಅಷ್ಟು ಸುಲಭವಾಗಿ ಕೋಪಕ್ಕೆ ಒಳಗಾಗುವುದಿಲ್ಲ. ಹಾಗೊಮ್ಮೆ ಕೋಪಕ್ಕೆ ಒಳಗಾದರೆ ಅದು ಬೆಂಕಿಯ ರೂಪದಲ್ಲಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರ ಎದುರು ಯಾರು ನಿಲ್ಲುವಂತಿರುವುದಿಲ್ಲ ಎಂದು ಹೇಳಲಾಗುವುದು.

ಮಿಥುನ
ಈ ರಾಶಿಯವರು ಹೆಚ್ಚು ಮಾತನಾಡುವುದನ್ನು ಇಷ್ಟಪಡುತ್ತಾರೆ. ಇವರು ಕೋಪಕ್ಕೆ ಒಳಗಾದರೆ ಕಿರುಚುವುದು, ಕೂಗುವುದು ಕಹಿಯಾದ ಮಾತುಗಳನ್ನು ಹೇಳುವುದು ಹಾಗೂ ಸಾಂದರ್ಭಕ್ಕೆ ಅನುಗುಣವಾಗಿ ಪದಗಳನ್ನು ಬಳಸುತ್ತಾರೆ.ಇವರ ವ್ಯಕ್ತಿತ್ವಕ್ಕೆ ಎರಡು ಮುಖವನ್ನು ಹೊಂದಿರುವುದರಿಂದ ಕೋಪಗೊಂಡಾಗ ಕಿರುಚುವುದೊಂದೆ ಮಾರ್ಗ ಎಂದು ಹೇಳಲು ಆಗುವುದಿಲ್ಲ. ಕೆಲವೊಮ್ಮೆ ಸಂದರ್ಭಕ್ಕೆ ಅನುಗುಣವಾಗಿ ಶಾಂತತೆಯನ್ನು ಅನುಸರಿಸಬಹುದು. ಅವರು ಯಾವುದನ್ನು ಅಷ್ಟು ಸುಲಭವಾಗಿ ನಿರ್ಣಯಿಸುವುದಿಲ್ಲ. ಇಲ್ಲವೇ ಜೀವನದಲ್ಲಿ ಏನು ಮಾಡಬೇಕು ಎನ್ನುವುದಕ್ಕೆ ನಿರ್ದಿಷ್ಟ ಅಭಿಪ್ರಾಯವನ್ನು ನೀಡುವುದಿಲ್ಲ. ಕ್ರೋಧದ ಕೇಂದ್ರಬಿಂದುವಾಗಿರುವ ಸಾಧ್ಯತೆಗಳು ಇರುತ್ತವೆ.

ಕರ್ಕ
ಇವರು ಬೇಸರವಾದಾಗ ನಿರುತ್ಸಾಹದ ರೀತಿಯಲ್ಲಿ ವರ್ತನೆ ತೋರಬಹುದು. ನಿಷ್ಕ್ರಿಯ ರೀತಿಯಲ್ಲಿ ಆಕ್ರಮಣ ಶೀಲತೆಯನ್ನು ತೋರಬಹುದು. ಒಮ್ಮೆ ರಕ್ಷಣಾತ್ಮಕ ಭಾವನೆಯಲ್ಲಿ ಇದ್ದಾರೆ ಎಂದಾದರೆ ಕೋಪವನ್ನು ನಿಧಾನವಾಗಿ ತಣ್ಣಗಾಗಿಸಿಕೊಳ್ಳುವರು. ಅತ್ಯುತ್ತಮ ಯೋಜನೆಯನ್ನು ಹೊಂದುವ ಇವರು ಎಲ್ಲರಿಗೂ ಪ್ರೀತಿಯನ್ನು ತೋರುವರು. ಸಾಮಾನ್ಯ ವಿಚಾಋಗಳಿಗೆ ಮೂಕ ಕೋಪವನ್ನು ವ್ಯಕ್ತಪಡಿಸಿಸುವರು. ಅದೇ ಇವರ ಭಾವನೆಗಳಿಗೆ ಗಂಭೀರವಾಗಿ ನೋವುಂಟಾಗಿದ್ದರೆ ಅದನ್ನು ಅವರು ಎಂದಿಗೂ ಕ್ಷಮಿಸುವುದಿಲ್ಲ.

ಸಿಂಹ
ಇವರು ಒಮ್ಮೆ ಕೋಪಗೊಂಡರೆ ಕ್ರೋಧದ ಭಾವನೆಯಲ್ಲಿ ಮುಳುಗಿರುತ್ತಾರೆ. ಘರ್ಜನೆಯ ಮೂಲಕ ವ್ಯಕ್ತಪಡಿಸಲು ಯಾವುದೇ ಭಯ ಅಥವಾ ಮುಜುಗರಕ್ಕೆ ಒಳಗಾಗುವುದಿಲ್ಲ. ಒಮ್ಮೆ ಜೋರಾಗಿ ಕೂಗುವುದರ ಮೂಲಕ ಸಮಾಧಾನಕ್ಕೆ ಒಳಗಾಗುತ್ತಾರೆ. ಹೆಚ್ಚಿನ ಸಿಟ್ಟಿಗೆ ಒಳಗಾದಾಗ ಆಕ್ರಮಣಕಾರಿ ಭಾಷೆಯನ್ನು ಅನುಸರಿಸುವರು. ಇವರ ಕೋಪ ತಣ್ಣಗಾದ ಬಳಿಕ ಕ್ಷಮೆಯಾಚಿಸಿದವರಿಗೆ ಕ್ಷಮೆ ನೀಡುವರು. ಇದರಿಂದ ಇವರ ಹೆಮ್ಮೆಯು ಹೆಚ್ಚುವುದು.

ಕನ್ಯಾ
ಇವರು ತಮ್ಮ ಸಿಟ್ಟು ಅಥವಾ ಕ್ರೋಧವನ್ನು ಬಹಳ ಆರಾಮದಾಯಕವಾದ ರೀತಿಯಲ್ಲಿ ನಿಯಂತ್ರಿಸುವರು. ಇವರು ತಮ್ಮ ಕೋಪವನ್ನು ಎಲ್ಲಿಯ ತನಕಬೇಕಾದರೂ ಹಿಡಿದಿಟ್ಟುಕೊಳ್ಳುವಂತಹ ಸಾಮಥ್ರ್ಯವನ್ನು ಹೊಂದಿದ್ದಾರೆ. ಇವರು ತಮ್ಮ ಕೋಪದ ಭಾವನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇದ್ದಾಗ ಆರೋಗ್ಯ ಸಮಸ್ಯೆಗೆ ಒಳಗಾಗಬಹುದು. ಹಾಗೊಮ್ಮೆ ಇವರ ಕೋಪ ವ್ಯಕ್ತಪಡಿಸಿದಾಗ ಅಥವಾ ಹೊರಹೊಮ್ಮಿದಾಗ ಇತರರಿಗೆ ಗೊಂದಲ ಹಾಗೂ ವಿಚಿತ್ರ ಎನಿಸಬಹುದು. ಇವರು ತಮ್ಮ ಅಭಿಪ್ರಾಯವನ್ನು ಸಿಂಧುತ್ವ ಎಂದು ಪರಿಗಣಿಸುವುದನ್ನು ನಿಲ್ಲಿಸಬೇಕು.

ತುಲಾ
ಇವರು ತಮ್ಮ ಕೋಪವನ್ನು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇವರು ಸಾಮಾನ್ಯವಾಗಿ ತಮ್ಮ ಭಾವನೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ. ಇವರು ಬಹಳ ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿ ಎನ್ನುವುದನ್ನು ಕೋಪದ ಮೂಲಕ ತಿಳಿಸಲು ಬಯಸುವುದಿಲ್ಲ. ಹಾಗಾಗಿ ಕೋಪಬಂದಾಗ ಆದಷ್ಟು ಶಾಂತ ಚಿತ್ತದಲ್ಲಿ ಇರಲು ಬಯಸುವರು. ಯಾವಾಗ ಸಹನೆ ಮೀರುವಂತಹ ಸಂದರ್ಭಗಳು ಎದುರಾಗುವುದೋ ಆಗ ಮಾತ್ರ ತಮ್ಮ ಕೋಪವನ್ನು ವ್ಯಕ್ತಪಡಿಸುವರು. ಇವರು ಸಾಮಾನ್ಯವಾಗಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ವೃಶ್ಚಿಕ ಇವರು ಅಷ್ಟು
ಇವರು ಅಷ್ಟು ಸುಲಭವಾಗಿ ಕೋಪಕ್ಕೆ ಒಳಗಾಗುವುದಿಲ್ಲ. ಇವರು ಮಿತಿಮೀರಿದ ಸ್ಥಿತಿ ಎದುರಾದಾಗ ಮಾತ್ರ ಬೆಂಕಿಯ ರೂಪವನ್ನು ತೋರುವರು. ಕೋಪಕ್ಕೆ ಒಳಗಾದಾಗ ಬಹಳ ಕ್ರೂರತೆಯನ್ನು ಪಡೆದುಕೊಳ್ಳುವರು. ಇವರ ಸಿಟ್ಟಿಗೆ ಕಾರಣವಾದ ವಿಷಯ ಅಥವಾ ವ್ಯಕ್ತಿಯನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಅತಿರೇಕದ ಕೋಪಕ್ಕೆ ಒಳಗಾದಾಗ ವಿನಾಶಕಾರಿ ಪ್ರವೃತ್ತಿಯನ್ನು ತೋರಬಲ್ಲರು.

ಧನು:
ಇವರು ಬೆಂಕಿಯಿಂದಲೇ ಆಳುವ ವ್ಯಕ್ತಿಗಳು ಎನ್ನಬಹುದು. ಇವರು ಬಹುಬೇಗ ಕೋಪಗೊಳ್ಳುವರು. ಅಲ್ಲದೆ ಸುತ್ತಲಿನ ವ್ಯಕ್ತಿಗಳಿಗೆ ಸಾಕಷ್ಟು ನೋವನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚು. ಕೋಪವನ್ನು ಬಹುಬೇಗನೆ ಶಾಂತಗೊಳಿಸಿಕೊಳ್ಳುವ ಸಾಮಥ್ರ್ಯವನ್ನು ಇವರು ಹೊಂದಿರುತ್ತಾರೆ. ಸ್ನೇಹಪೂರ್ವಕವಾದ ವರ್ತನೆಯನ್ನು ತೋರುವರು. ಇವರು ತಾವೇಕೆ ಕೋಪಗೊಂಡಿದ್ದೆ ಎನ್ನುವುದನ್ನು ಬಹುಬೇಗ ಮರೆಯುವರು.

ಮಕರ
ಇವರು ಕೋಪವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಕೋಪಕ್ಕೆ ಒಳಗಾದಾಗ ಮಿತಿಮೀರಿದ ವರ್ತನೆಯನ್ನು ತೋರಬಲ್ಲರು. ಅವಕಾಶ ಸಿಕ್ಕಾಗ ಟೀಕೆಯನ್ನು ಮಾಡಬಲ್ಲರು. ಸಾಮಾನ್ಯವಾಗಿ ಇವರು ಸಣ್ಣ ವಿಚಾರಗಳಿಗೆ ಕೋಪವನ್ನು ವ್ಯಕ್ತಪಡಿಸುವುದಿಲ್ಲ. ನಿರಾಶೆಗೆ ಅಥವಾ ಮೋಸಕ್ಕೆ ಒಳಗಾದರೆ ಇವರ ಕೋಪ ನಿಯಂತ್ರಣದಲ್ಲಿ ಇರುವುದಿಲ್ಲ. ಇವರು ಕೋಪಕ್ಕೆ ಒಳಗಾದರೆ ಸುತ್ತಲಿನ ಜನರಿಗೆ ಆಘಾತ ಉಂಟುಮಾಡಬಲ್ಲರು.

ಕುಂಭ
ಇವರು ಸಾಕಷ್ಟು ಶಾಂತ ಚಿತ್ತ ಹಾಗೂ ಎಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಇವರು ಸಾಮಾನ್ಯವಾಗಿ ಕೋಪಕ್ಕೆ ಒಳಗಾದರೆ ಮೊದಲು ಆ ವ್ಯಕ್ತಿಯೊಂದಿಗೆ ಮಾತನ್ನು ನಿಲ್ಲಿಸುತ್ತಾರೆ. ತಮ್ಮ ಭಾವನೆ ಸರಿ ಹೋಗುವವರೆಗೂ ಮೌನವನ್ನು ತಾಳುತ್ತಾರೆ. ಇವರು ಸಾಧ್ಯವಾದಷ್ಟು ಮಟ್ಟಿಗೆ ಅಹಿತಕರ ವಿಚಾರ ಹಾಗೂ ವಿಷಯಗಳನ್ನು ಮರೆಯಲು ಪ್ರಯತ್ನಿಸುವರು.

ಮೀನ
ಈ ರಾಶಿಯವರು ಸದಾ ಭಾವನೆಯಲ್ಲಿಯೇ ಮುಳುಗಿರುತ್ತಾರೆ. ಕಲ್ಪನೆಯ ಲೋಕದಲ್ಲಿ ತೇಲುತ್ತಿರುತ್ತಾರೆ. ಇವರು ಪದೇ ಪದೇ ಕೋಪಕ್ಕೆ ಒಳಗಾಗುತ್ತಿರುವುದಿಲ್ಲ. ಇವರು ಕೋಪಗೊಂಡಾಗ ಭಯಭೀತರಾಗುವ ಸಾಧ್ಯತೆಗಳಿರುತ್ತವೆ. ಇವರು ಅಷ್ಟು ಸುಲಭವಾಗಿ ಕೋಪಗೊಳ್ಳುವುದಿಲ್ಲ. ಹಾಗೊಮ್ಮೆ ಕೋಪಕ್ಕೆ ಒಳಗಾದರೆ ಹಿಂಸಾತ್ಮಕ ಮತ್ತು ಸ್ವ-ವಿನಾಶಕಾರಿ ವರ್ತನೆಯನ್ನು ತೋರಬಹುದು. ಇವರು ತಿಯಾದ ಬೇಸರ ಹಾಗೂ ಕೋಪಕ್ಕೆ ಒಳಗಾದರೆ ಒಂದಿಷ್ಟು ಸಮಯ ಏಕಾಂತದಲ್ಲಿ ಕಳೆದು, ಹೃದಯವನ್ನು ಹಗುರಗೊಳಿಸಿಕೊಳ್ಳುವರು.



Click it and Unblock the Notifications











