ರಾಶಿ ಭವಿಷ್ಯದ ಅನುಸಾರ ಯಾವ್ಯಾವ ರಾಶಿಯವರು ತುಂಬಾ ಆತಂಕಗೊಳ್ಳುತ್ತಾರೆ ನೋಡಿ...

Posted By: Deepu
Subscribe to Boldsky

ಆತಂಕ ಎನ್ನುವುದು ಪ್ರತಿಯೊಬ್ಬರಿಗೂ ಯಾವುದೋ ಒಂದು ರೂಪದಲ್ಲಿ ಕಾಡುತ್ತದೆ. ಆತಂಕ ಎನ್ನುವ ಕಾರಣದಿಂದ ಇಂದು ಅದೆಷ್ಟೋ ಜನರು ಕೆಟ್ಟ ಕೆಲಸಕ್ಕೆ ಮುಂದಾಗದೆ ಇದ್ದಾರೆ ಎನ್ನಬಹುದು. ಹಾಗೆಯೇ ಇನ್ನೊಂದೆಡೆ ಆತಂಕ ಎನ್ನುವ ಕಾರಣಕ್ಕೆ ಕೆಲವರು ತಮ್ಮ ಸಾಮಥ್ರ್ಯ ಏನು ಎನ್ನುವುದನ್ನು ಸಮಾಜದ ಮುಂದೆ ತೋರಲು ವಿಫಲವಾಗಿರಬಹುದು. ಹಾಗಾಗಿ ಆತಂಕ ಎನ್ನುವುದು ವ್ಯಕ್ತಿಗೆ ಧನಾತ್ಮಕ ಹಾಗೂ ಋಣಾತ್ಮಕ ಎನ್ನುವ ಎರಡು ಪರಿಣಾಮಗಳನ್ನು ಬೀರುತ್ತದೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.

ಆತಂಕ ಹಾಗೂ ಧೈರ್ಯ ಎನ್ನುವುದು ರಾಶಿಚಕ್ರದ ಆಧಾರದ ಮೇಲೆಯೇ ವ್ಯಕ್ತಿ ಹೊಂದಿರುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮಲ್ಲಿ ಯಾವ ಬಗೆಯ ಆತಂಕ ಇರುತ್ತದೆ. ಅದನ್ನು ನೀವು ಹೇಗೆ ದುರಿಸುವಿರಿ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಣೆಯನ್ನು ನೀಡಿದೆ. ನಿಮಗೂ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಇವರು ವೈಯಕ್ತಿಕವಾಗಿ ಏನಾದರೂ ತಿನ್ನುವಾಗ ತಮಗೆ ತಾವೇ ಕಚ್ಚಿಕೊಂಡರೆ ಎನ್ನುವ ವಿಚಾರಕ್ಕೆ ಹೆಚ್ಚು ಆತಂಕವನ್ನು ವ್ಯಕ್ತ ಪಡಿಸುತ್ತಾರೆ. ಇವರು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ಆಸಕ್ತಿ ಹೊಂದಿರುವುದಿಲ್ಲ. ಹಾಗೊಮ್ಮೆ ಇವರು ತಪ್ಪು ಮಾಡಿದಾಗ ಅಥವಾ ಕಷ್ಟಕ್ಕೆ ಎದುರಾದರೆ ಪುನಃ ಅಂತಹ ಸಂದರ್ಭ ಒದಗದಂತೆ ಎಚ್ಚರಿಕೆಯನ್ನು ವಹಿಸುತ್ತಾರೆ. ಇವರು ಸಾಮಾನ್ಯವಾಗಿ ತಪ್ಪನ್ನು ಮಾಡುವಾಗ ಹಾಗೂ ಇತರರಲ್ಲಿ ಸಹಾಯ ಕೇಳುವಾಗ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.

ವೃಷಭ

ವೃಷಭ

ಜೀವನದಲ್ಲಿ ಒದಗಿ ಬರುವ ಅನಿರೀಕ್ಷಿತ ಮತ್ತು ಅನಿಶ್ಚಿತ ವಿಚಾರಗಳು ಒದಗಿ ಬರುವುದಕ್ಕೆ ಹೆಚ್ಚು ಆತಂಕಿತರಾಗಿರುತ್ತಾರೆ. ಇವರು ಕೆಲವೊಮ್ಮೆ ಇದನ್ನು ಒಪ್ಪಿಕೊಳ್ಳುವುದು ಕಷ್ಟ ಎನ್ನಬಹುದು. ಕೆಲವು ಸಂದರ್ಭದಲ್ಲಿ ಹೋರಾಡಬೇಕಾದ ಸನ್ನಿವೇಶ ಎದುರಾದಾಗ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ.

ಮಿಥುನ

ಮಿಥುನ

ಈ ರಾಶಿಯವರು ಸಿಕ್ಕಿ ಬಿದ್ದಾಗ ಮತ್ತು ಗೊಂದಲಕ್ಕೆ ಒಳಗಾದಾಗ ಹೆಚ್ಚು ಆತಂಕಕ್ಕೆ ಒಳಗಾಗಿರುತ್ತಾರೆ. ತಮ್ಮಲ್ಲಿ ಬೇಸರದ ಮಿತಿ ಕಡಿಮೆಯಾದಾಗ ಹೊಸ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಾರೆ. ಕೆಲವು ಸಂದಿಗ್ಧ ಪರಿಸ್ಥಿತಿಯಲ್ಲಿ ತಾವು ಸಿಕ್ಕಿ ಬೀಳುತ್ತೇವೆ ಎನಿಸಿದಾಗ ಹೆಚ್ಚು ಭಯಭೀತರಾಗಿರುತ್ತಾರೆ.

ಕರ್ಕ

ಕರ್ಕ

ಈ ರಾಶಿಯವರು ಪರಿತ್ಯಾಗದ ಭಾವನೆಯಿಂದ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಇವರು ತಮ್ಮ ಪ್ರೀತಿಪಾತ್ರರಿಗಾಗಿ ಏನುಬೇಕಾದರೂ ಮಾಡುತ್ತಾರೆ. ಇವರು ಕೆಲವೊಮ್ಮೆ ಹೆಚ್ಚು ಸಂರಕ್ಷಕರಾಗಿ ವರ್ತಿಸುತ್ತಾರೆ. ಕೆಲವೊಮ್ಮೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದರ ಬಗ್ಗೆ ಹೆಚ್ಚು ಚಿಂತೆಗೆ ಒಳಗಾಗುತ್ತಾರೆ. ಜೊತೆಗೆ ಏಕಾಂಗಿಯಾಗಿ ಉಳಿದುಕೊಳ್ಳುತ್ತಾರೆ.

ಸಿಂಹ

ಸಿಂಹ

ಈ ರಾಶಿಯವರು ತಿರಸ್ಕಾರಕ್ಕೆ ಮತ್ತು ಅವಮಾನಕ್ಕೆ ಒಳಗಾದಾಗ ಹೆಚ್ಚು ಆತಂಕವನ್ನು ವ್ಯಕ್ತಪಡಿಸುತ್ತಾರೆ. ಈ ವ್ಯಕ್ತಿಗಳು ನಿರಾಕರಣೆ ಮತ್ತು ಅವಮಾನವನ್ನು ಎದುರಿಸುವಾಗ ಚಿಂತನೆಗೆ ಒಳಗಾಗುತ್ತಾರೆ. ಇತರರನ್ನು ನಿರಾಸೆಗೊಳಿಸುವ ವಿಚಾರದಿಂದ ಖಿನ್ನತೆಗೆ ಒಳಗಾಗಬಹುದು.

ಕನ್ಯಾ

ಕನ್ಯಾ

ಈ ರಾಶಿಯವರು ವಿಷಯಗಳ ಕುರಿತು ಅತಿಯಾದ ಚಿಂತನೆ ಮತ್ತು ವೀಕ್ಷಣೆಗಳ ಕುರಿತು ಹೆಚ್ಚು ಆತಂಕವನ್ನು ಹೊಂದಿರುತ್ತಾರೆ. ಇವರು ಆರೋಗ್ಯದ ಬಗ್ಗೆ ಹೆಚ್ಚು ಅರ್ಥಗರ್ಭಿತರಾಗಿರುತ್ತಾರೆ. ಆದರೆ ಅದರ ಬಗ್ಗೆಯೇ ಅವರು ಹೆಚ್ಚು ಚಿಂತನೆ ನಡೆಸುತ್ತಾರೆ. ರೋಗದ ಬಗ್ಗೆ ಅತಿಯಾಗಿ ಚಿಂತಿಸುವುದನ್ನು ಇವರು ಬಿಡಬೇಕು. ಆಗ ಆತಂಕದ ಪ್ರಮಾಣ ಕಡಿಮೆಯಾಗುವುದು.

ತುಲಾ

ತುಲಾ

ಇತರರು ಪದೇ ಪದೇ ತಮ್ಮ ಮಿತಿಯ ಗೆರೆಯನ್ನು ದಾಟುತಿದ್ದರೆ ಬಹುಬೇಗ ಆತಂಕಕ್ಕೆ ಒಳಗಾಗುತ್ತಾರೆ. ಇವರು ಸಮಾಧಾನ ಮಾಡುವಾಗ ಅಥವಾ ಇತರರು ಇವರ ಕೊಡುಗೆಯನ್ನು ತಿರಸ್ಕರಿಸಿದಾಗ ಆತಂಕಕ್ಕೆ ಒಳಗಾಗುವರು. ಇವರು ಉತ್ತಮ ಆಸಕ್ತಿಯ ಮಟ್ಟವನ್ನು ಹೊಂದಿರುತ್ತಾರೆ. ಜೊತೆಗೆ ಎಲ್ಲವೂ ಸಮತೋಲನದಲ್ಲಿ ಇರಬೇಕು ಎಂದು ಬಯಸುತ್ತಾರೆ. ಇವರ ಮೃದುತ್ವದ ಸ್ವಭಾವ ಹಾಗೂ ಪ್ರೀತಿಯು ಸಂದರ್ಭವನ್ನು ಸಮತೋಲನಕ್ಕೆ ತರುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ತಮ್ಮ ಸುತ್ತಲು ಅಧಿಕ ಜನರನ್ನು ಹೊಂದಿದ್ದರೆ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಇವರಿಗಿಂತ ಅಧಿಕ ಚುರುಕಾಗಿರುವ ವ್ಯಕ್ತಿಗಳನ್ನು ಎದುರಿಸಲು ಇವರಿಗೆ ಹೆಚ್ಚು ಆತಂಕ ಉಂಟಾಗುವುದು. ಇವರ ಆತಂಕವು ಭಾವನೆಯಲ್ಲಿ ವ್ಯಕ್ತವಾಗುವುದು. ಹಾಗಾಗಿ ಇತರರೊಂದಿಗೆ ಇವರು ಉತ್ತಮ ರೀತಿಯಲ್ಲಿ ಮುಂದುವರಿಯಲು ಕಷ್ಟವಾಗುವುದು.

ಧನು

ಧನು

ಈ ರಾಶಿಯವರು ನಿರಾಶೆಯ ಸಂಗತಿಗಳಿಂದ ಕೆಲಗಿಳಿಯುವುದಕ್ಕೆ ಹೆಚ್ಚು ಆತಂಕವನ್ನು ವ್ಯಕ್ತಪಡಿಸುತ್ತಾರೆ. ಆಶಾವಾದಿ ವ್ಯಕ್ತಿಗಳು ತಮ್ಮ ಸುತ್ತ ಇರಬೇಕೆಂದು ಇವರು ಬಯಸುತ್ತಾರೆ. ಋಣಾತ್ಮಕ ವಿಷಯ ಇವರ ಪ್ರಗತಿಯಲ್ಲಿ ಸ್ವಲ್ಪ ಕುಂದುಂಟುಮಾಡಬಹುದು.

ಮಕರ

ಮಕರ

ಈ ರಾಶಿಯವರು ಅಸಮರ್ಥತೆ ಮತ್ತು ಮೂರ್ಖತನದ ಕಾರಣದಿಂದ ಆತಂಕವನ್ನು ಹೊಂದುತ್ತಾರೆ. ಇವರು ಹೆಚ್ಚಿನ ಗುಣಮಟ್ಟ ಮತ್ತು ಸುರಕ್ಷತೆಯಿಂದ ಇರಲು ಬಯಸುವರು. ಸಮರ್ಥ ಜನರೊಂದಿಗೆ ಸುತ್ತುವರಿದಿರಲು ಇವರು ಬಯಸುತ್ತಾರೆ. ಇದರಿಂದ ತಾವು ಸುರಕ್ಷಿತವಾಗಿರಬಹುದು ಎಂದು ತಿಳಿಯುತ್ತಾರೆ. ಸ್ಪರ್ಧೆಯಿಂದ ಕೂಡಿರುವ ಸಂದರ್ಭ ಎದುರಾದಾಗ ಆತಂಕದ ಭಾವನೆ ಕಾಡುವುದು.

ಕುಂಭ

ಕುಂಭ

ಜನರು ತಮ್ಮ ಮೇಲೆ ಅಸಮಂಜಸವಾದ ಬೇಡಿಕೆಯನ್ನು ವ್ಯಕ್ತಪಡಿಸಿದಾಗ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಇವರು ಒಂಟಿಯಾಗಿರಲು ಬಯಸುತ್ತಾರೆ. ಕ್ಷಿಪ್ರವಾದ ನಿರ್ಧಾರಕೈಗೊಳ್ಳುವುದನ್ನು ಇವರು ಇಷ್ಟಪಡುವುದಿಲ್ಲ. ಏಕೆಂದರೆ ಆತಂಕದ ಪ್ರಮಾಣವು ಆಗ ಅಧಿಕವಾಗುತ್ತದೆ.

ಮೀನ

ಮೀನ

ಆತಂಕವನ್ನು ಸೃಷ್ಟಿಸುವಂತಹ ಆಲೋಚನೆಗಳಿಗೆ ಹೆಚ್ಚು ಆತಂಕ ಪಡುತ್ತಾರೆ. ಇವರಿಗೆ ಸಾಮಾನ್ಯವಾದ ಕೆಲವು ಚಿಂತನೆಗಳು ಸಹ ಹೆಚ್ಚು ಆತಂಕವನ್ನುಂಟುಮಾಡುವುದು. ತಮ್ಮ ಭವಿಷ್ಯದಲ್ಲಿ ಅನುಕೂಲವಾಗುವಂತೆ ಕೆಲವು ಚಿಂತನೆಗಳನ್ನು ಕೈಗೊಳ್ಳುತ್ತಾರೆ. ಇವರು ಆದಷ್ಟು ಶಾಂತ ಮನಸ್ಸಿನಿಂದ ನಿರ್ಧಾರವನ್ನು ಕೈಗೊಳ್ಳುವ ಪರಿಯನ್ನು ರೂಢಿಸಿಕೊಳ್ಳಬೇಕು.

English summary

How Anxiety Is Related To Your Zodiac Sign

Ever wondered that your anxiety level can be related to your zodiac sign? Well, the fact is that your anxiety can be related to your zodiac sign. Here, in this article, we are revealing to you on how anxiety is actually related to your zodiac sign. Be it the restlessness or even the constant looking over your shoulder that can define your anxiety level, here we reveal to you on how anxiety is related to our sun signs.
Story first published: Monday, March 12, 2018, 23:31 [IST]