Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ವಾರದ ಭವಿಷ್ಯ: 25 ಮಾರ್ಚ್ 2018 ರಿಂದ 31 ಮಾರ್ಚ್ 2018
ಅದೃಷ್ಟ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಅದೃಷ್ಟ ಎನ್ನುವುದು ಶಾಶ್ವತವಾದುದ್ದಲ್ಲ. ಪ್ರತಿಯೊಬ್ಬರಿಗೂ ಬದಲಾವಣೆಯಾಗುತ್ತಲೇ ಇರುತ್ತದೆ. ವಿವಿಧ ಸ್ಥಾನದ ಬದಲಾವಣೆಯನ್ನು ಕಾಣುತ್ತಿರುವ ಗ್ರಹಗತಿಗಳ ಪರಿಣಾಮವಾಗಿ ರಾಶಿಚಕ್ರಗಳ ಭವಿಷ್ಯ ಬದಲಾವಣೆಯನ್ನು ಕಾಣುವುದು.
ಗ್ರಹಗತಿಗಳ ಸಂಚಾರ ಹಾಗೂ ಅದರ ಪರಿಣಾಮವಾಗಿ ವಿವಿಧ ಬಗೆಯ ಪರಿಣಾಮವನ್ನು ಅನುಭವಿಸಬೇಕಾಗುವುದು. ನಿಮ್ಮ ಹಾಗೂ ನಿಮ್ಮವರ ರಾಶಿಚಕ್ರದ ಪ್ರಕಾರ ಮಾರ್ಚ್ 21 ರಿಂದ ಮಾರ್ಚ್ 31ರ ವರೆಗೆ ನಿಮ್ಮ ಭವಿಷ್ಯ ಹೇಗಿರುತ್ತದೆ? ಯಾವೆಲ್ಲಾ ಬದಲಾವಣೆಯನ್ನು ತರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ
ನಿಮ್ಮ ಮನೆಯನ್ನು ಉತ್ತಮ ನೋಟದಿಂದ ಕೂಡಿರುವಂತೆ ಮಾಡಲು ಇದೊಂದು ಉತ್ತಮವಾದ ಸಮಯ ಎಂದು ಹೇಳಬಹುದು. ಹಣವನ್ನು ಹೇಗೆ ವ್ಯಯಿಸಬೇಕು ಎನ್ನುವುದನ್ನು ಅರಿಯಲು ಇದೊಂದು ಸೂಕ್ತವಾದ ಸಮಯ. ಹೂಡಿಕೆಗಾಗಿ ಅಧಿಕ ಹಣವನ್ನು ವ್ಯಯಿಸಬೇಕಿಲ್ಲ. ನಿಮ್ಮ ಬುದ್ಧಿಯನ್ನು ಹೂಡಿಕೆಮಾಡಲು ಅತ್ಯುತ್ತಮವಾದ ಸಮಯ ಇದು ಎಂದು ಹೇಳಲಾಗುವುದು.

ವೃಷಭ
ವಿಷಯದ ಜಾಡು ಹಿಡಿದು ಹೋಗಲು ಹೆಚ್ಚು ಆಸಕ್ತಿಯನ್ನು ಹೊಂದುವಿರಿ. ಒಳ್ಳೆಯ ಸುದ್ದಿಯನ್ನು ಈ ವಾರ ನೀವು ಪಡೆದುಕೊಳ್ಳುವಿರಿ. ಒಂದೇ ಸಮಯದಲ್ಲಿ ವಿಷಯವನ್ನು ತೆಗೆದುಕೊಳ್ಳುಬೇಕು. ಕೆಲಸ ಬದಲಾಯಿಸುವ ಮೊದಲು ವಿಷಯಗಳನ್ನು ಬದಲಾಯಿಸುವುದು ಮತ್ತು ಸಂಪೂರ್ಣ ವಿಷಯಗಳೊಂದಿಗೆ ನುಗ್ಗುವುದನ್ನು ತಪ್ಪಿಸಿ. ದೈನಂದಿನ ಕೆಲಸದಲ್ಲಿ ಸ್ಥಿರತೆ ಪಡೆಯಲು ಇದು ಸಹಾಯ ಮಾಡುತ್ತದೆ.

ಮಿಥುನ
ನಿಮ್ಮ ಪ್ರಯತ್ನದಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸುವಿರಿ. ಹಣ ಖರ್ಚುಮಾಡುವುದರ ಕುರಿತು ಒಂದಿಷ್ಟು ಗಮನ ಹರಿಸುವುದು ಸೂಕ್ತ. ಸಮಸ್ಯೆಗಳಿಗೆ ಹತ್ತಿರವಾಗಿರುವ ರೀತಿಯಲ್ಲಿ ನೀವು ಪರಿಸ್ಥಿತಿಯನ್ನು ಸರಿಯಾಗಿ ನಿರ್ಣಯಿಸಲು ಕಷ್ಟವಾಗುವುದು. ಮತ್ತೊಂದೆಡೆ ಆರೋಗ್ಯ ಸಮಸ್ಯೆ ಕಾಣುವುದು. ಪ್ರಣಯದ ವಿಚಾರದಲ್ಲಿ ಕೆಲವು ಒತ್ತಡದಿಂದ ನಿಧಾನಗತಿಯಲ್ಲಿ ಸಾಗುವಿರಿ.

ಕರ್ಕ
ವೈವಿದ್ಯಗೊಳಿಸಲು ಇದು ನಿಮಗೆ ಸೂಕ್ತ ಸಮಯ. ನಿಮ್ಮ ಸಲಹೆ ಸೂಕ್ತ ರೀತಿಯಲ್ಲಿ ಇಲ್ಲದಿರುವುದರಿಂದ ನಿಮ್ಮ ಸ್ನೇಹಿತರಿಗೆ ಗೊಂದಲ ಉಂಟಾಗುವುದು. ನಿಮ್ಮ ಪ್ರಾಮಾಣಿಕ ಸ್ವಭಾವವು ಮುಖ್ಯವಾದದ್ದು ಎಂದು ತಿಳಿಯಲು ನಿಮಗೆ ಕಷ್ಟವಾಗುವುದು. ಜನರ ಮನಸ್ಸನ್ನು ಗೆಲ್ಲಲು ನಿಮಗೆ ಇದು ಉತ್ತಮವಾದ ಸಮಯ. ಪ್ರೀತಿ ಪಾತ್ರರ ಜೊತೆ ಸಮಯವನ್ನು ಕಳೆಯಲು ನಿಮ್ಮ ಸಮಯವನ್ನು ಮೀಸಲಿಡಬೇಕು.

ಸಿಂಹ
ಈ ವಾರ ವ್ಯಕ್ತಿ ಒಬ್ಬರು ನಿಮ್ಮನ್ನು ಕೆರಳಿರುವ ಮನಃಸ್ಥಿತಿಯಲ್ಲಿ ನೋಡುತ್ತಾರೆ. ನೀವು ಶಸ್ತ್ರಾಸ್ತ್ರ ರೂಪದ ಪದಗಳನ್ನು ಬಳಸುವಿರಿ. ನೀವು ಆಡುವ ಮಾತಿನ ಪರಿಣಾಮ ಏನಾಗುವುದು ಎನ್ನುವುದರ ಕುರಿತು ನೀವು ಯೋಚಿಸಿರುವುದಿಲ್ಲ. ಹಾಗಾಗಿ ನೀವು ಏನನ್ನು ಹೇಳುತ್ತೀರಿ ಎನ್ನುವ ಮೊದಲು ಯೋಚಿಸಬೇಕು.

ಕನ್ಯಾ
ನಿಮಗೆ ಸಾಕಷ್ಟು ಗೊಂದಲ ಉಂಟಾಗುವುದು. ಈ ಕುರಿತು ನೀವು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಇತರರ ಮಾತಿನಿಂದ ನೀವು ಹೆಚು ಪ್ರಭಾವಿತರಾಗುವಿರಿ. ಸೃಜನಾತ್ಮಕ ವಿಷಯಗಳ ಮೇಲೆ ಗಮನ ಹರಿಸಬೇಕು. ಅದರಲ್ಲಿ ನೀವು ಉತ್ಕøಷ್ಟರಾಗಬಹುದು.

ತುಲಾ
ಈ ವಾರ ನಿಮಗೆ ಪ್ರೀತಿಯ ವಿಚಾರದಲ್ಲಿ ಕಠಿಣವಾದ ಸಮಯ ಎನ್ನಬಹುದು. ಕೆಲವು ಒತ್ತಡಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಅಸಮಧಾನ ಉಂಟಾಗುವುದು. ಸರಳವಾದ ಮಾತುಗಳು ಅಧಿಕ ಶುಲ್ಕವನ್ನು ವಿಧಿಸುವುದು. ನಿಮ್ಮ ದೌರ್ಬಲ್ಯವನ್ನು ನೀವು ಒಪ್ಪಿಕೊಳ್ಳಬೇಕು. ಜೊತೆಗೆ ಅದರ ಸುಧಾರಣೆಗೆ ನೀವು ಏನಾದರೂ ಕೈಗೊಳ್ಳಬೇಕು.

ವೃಶ್ಚಿಕ
ಆಳವಾದ ಮತ್ತು ಗುಪ್ತವಾದ ಭಾವನೆಯಿಂದ ಹೊರ ಬರಲು ಇದು ಸೂಕ್ತವಾದ ಸಮಯ ನಿಮಗೆ. ನಿಮ್ಮ ಹೃದಯದಲ್ಲಿರುವ ಕೆಲವು ವಿಚಾರಗಳನ್ನು ಬಿಚ್ಚಿಡುವುದರ ಮೂಲಕ ದೊಡ್ಡ ಪರಿಹಾರವನ್ನು ಕಂಡುಕೊಳ್ಳಬಹುದು. ಮನೆಯ ಹೆಣ್ಣುಮಕ್ಕಳಿಂದ ಸಹಾಯ ಹಾಗೂ ಸಹಾನುಭೂತಿ ನೀಡುವರು.

ಧನು
ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸ ವೈಖರಿಯನ್ನು ಗಮನಿಸುತ್ತಿರುವುದರಿಂದ ನಿಮ್ಮ ಮೇಲೆ ಒತ್ತಡ ಉಂಟಾಗುವುದು. ಈ ಸಮಯದಲ್ಲಿ ಉಂಟಾಗುವ ಪ್ರೀತಿಯ ವಿಷಯವು ವಿನೋದ ಮತ್ತು ಭಾವನಾತ್ಮಕ ನಾಟಕದಿಂದ ಕೂಡಿರುತ್ತದೆ.

ಮಕರ
ನಿಮಗೆ ಇದು ಆರ್ಥಿಕ ಭದ್ರತೆಗೆ ಉತ್ತಮವಾದ ಸಮಯ ಎಂದು ಹೇಳಬಹುದು. ಕೆಲವು ಅನುಚಿತ ವ್ಯವಹಾರಗಳಿಂದ ದೂರ ಉಳಿಯುವುದು ಉತ್ತಮ. ಇನ್ನೊಂದೆಡೆ ಬೃಹತ್ ಪ್ರಮಾಣದ ತಪ್ಪಿ ನಿಮ್ಮ ಕೈಯಿಂದ ನಡೆಯ ಬಾರದು ಎನ್ನುವುದನ್ನು ನೀವು ಅರಿಯಬೇಕು.

ಕುಂಭ
ಈ ವಾರ ಸ್ನೇಹಿತರೊಂದಿಗೆ ಮತ್ತು ಪ್ರೇಮಿಗಳೊಂದಿಗೆ ನಡೆಯುವ ಸಂಘರ್ಷಣೆಯನ್ನು ನೀವು ತಪ್ಪಿಸಬೇಕು. ಪ್ರಾಪಂಚಿಕ ವ್ಯವಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಶುಕ್ರಗ್ರಹದ ಬದಲಾವಣೆಯಿಂದಾಗಿ ನಿಮ್ಮ ಒಡಹುಟ್ಟಿದವರ ಮೂಲಕ ಉತ್ತಮ ಅದೃಷ್ಟವನ್ನು ಪಡೆದುಕೊಳ್ಳುವಿರಿ.

ಮೀನ
ಶುಕ್ರನು ನಿಮ್ಮ ಆರ್ಥಿಕ ಸ್ಥಾನಕ್ಕೆ ಪ್ರವೇಶವನ್ನು ತೋರುತ್ತದೆ. ಇದು ಪ್ರೀತಿಯ ವಿಷಯಗಳಲ್ಲಿ ಮತ್ತು ನಿಕಟ ಸಂಬಂಧಗಳಿಗೆ ಋಣಾತ್ಮಕ ಪ್ರವೇಶವನ್ನು ತೋರುವುದು. ಸ್ವಯಂ ಪ್ರಯತ್ನಗಳ ಮೂಲಕ ಲಾಭವನ್ನು ಅನುಭವಿಸುತ್ತೀರಿ. ನಿಮ್ಮ ಆಲೋಚನೆಗಳನ್ನು ನೀವು ಚೆನ್ನಾಗಿ ಸಂವಹನ ಮಾಡಬಹುದು. ಅದು ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ.



Click it and Unblock the Notifications