Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಗೈಯಲ್ಲಿರುವ ರೇಖೆಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳಿ!
ಉನ್ನತ ಪದವಿ ಪಡೆಯುವ ಮೊದಲು ಯಾವ ವೃತ್ತಿ ಮಾಡಬೇಕೆಂಬ ಗೊಂದಲವು ನಿಮ್ಮಲ್ಲಿ ಇದ್ದರೆ ಆಗ ನೇರವಾಗಿ ಹಸ್ತಸಾಮುದ್ರಿಕ ಶಾಸ್ತ್ರ ಹೇಳುವವರ ಬಳಿಗೆ ತೆರಳಿ ನಿಮ್ಮ ಗೊಂದಲ ನಿವಾರಣೆ ಮಾಡಿಕೊಳ್ಳಬಹುದು. ಯಾಕೆಂದರೆ ಹಸ್ತಸಾಮುದ್ರಿಕಾ ಶಾಸ್ತ್ರ ಹೇಳುವವರು ಅಂಗೈಯಲ್ಲಿರುವಂತಹ ರೇಖೆ ಹಾಗೂ ಗುರುತುಗಳನ್ನು ನೋಡಿಕೊಂಡು ನಿಮಗೆ ಯಾವ ರೀತಿಯ ವೃತ್ತಿ ಹೊಂದಿಕೊಳ್ಳಲಿದೆ ಎಂದು ಹೇಳುವರು. ಈ ಲೇಖನದಲ್ಲಿ ಜ್ಯೋತಿಷಿಗಳು ನಿಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಬಹುದು ಎಂದು ಹೇಳುವರು.

ನಿಮ್ಮ ಅಂಗೈಯ ಗುಣಮಟ್ಟ ಮತ್ತು ಅದರಲ್ಲಿರುವ ರೇಖೆಗಳನ್ನು ನೋಡಿಕೊಂಡು ನಿಮಗೆ ಯಾವ ರೀತಿಯ ಉದ್ಯೋಗವು ಹೊಂದಿಕೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುವರು. ನಿಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿರುವಂತಹ ಉದ್ಯೋಗ ಮಾಡಿದರೆ ಆಗ ಜೀವನದಲ್ಲಿ ನಿಮಗೆ ಯಶಸ್ಸು ಕೂಡ ಒಲಿದು ಬರುವುದು ಎಂದು ಹೇಳಲಾಗುತ್ತದೆ. ನಿಮ್ಮ ಅಂಗೈಯಲ್ಲಿರುವ ರೇಖೆ ಹಾಗೂ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವ ಉದ್ಯೋಗ ಸೂಕ್ತವೆಂದು ನೀವು ತಿಳಿಯಿರಿ.

ನಾಟ್ಟಿ ಬೆರಳುಗಳಿದ್ದರೆ
ಈ ರೀತಿಯ ಬೆರಳುಗಳು ಇರುವಂತಹ ವ್ಯಕ್ತಿಗಳು ಯಾವುದನ್ನು ಹಾಗೂ ಪ್ರತಿಯೊಂದನ್ನು ಬೇಗನೆ ಒಪ್ಪಿಕೊಳ್ಳಲಾರರು. ಇವರು ತುಂಬಾ ಅದ್ಭುತವಾಗಿರುವ ವಾಸ್ತುಶಿಲ್ಪಿಗಳು, ವಿದ್ವಾಂಸರು, ಶಿಕ್ಷಕರು, ಬರಹಗಾರರು, ಪತ್ತೆದಾರರು, ಕಾರ್ಯಕ್ರಮ ನಿರ್ವಾಹಕರು ಮತ್ತು ಗ್ರಾಫಿಕ್ ವಿನ್ಯಾಸಕಾರರು ಆಗಿರುವರು.

ಬುಧದ ಬಲಿಷ್ಠ ರೇಖೆ ಹೊಂದಿರುವವರು
ಬುಧದ ಬಲವಾದ ರೇಖೆ ಹೊಂದಿರುವ ವ್ಯಕ್ತಿಗಳು ಮಹಾನ್ ಮತ್ತು ಹಾಸ್ಯದ ವ್ಯಕ್ತಿಗಳಾಗಿರುವರು. ಇವರ ಲೆಕ್ಕಾಚಾರವು ಎಲ್ಲರಿಗಿಂತ ಭಿನ್ನವಾಗಿರುವಂತೆ ಮಾಡುವುದು. ಇವರಿಗೆ ಲೆಕ್ಕಪತ್ರದ, ಗಣಿತ, ವಿಜ್ಞಾನ, ಸಂವಹನ ಮತ್ತು ಕಾನೂನಿಗೆ ಸಂಬಂಧಿಸಿದ ವೃತ್ತಿಯು ಹೊಂದಿಕೆಯಾಗುವುದು.

ಬೆರಳುಗಳ ಗಾತ್ರ
ಮಧ್ಯದ ಬೆರಳು ಮತ್ತು ಕಿರುಬೆರಳು ದೊಡ್ಡದಾಗಿದ್ದರೆ ಆಗ ಇಂತಹ ವ್ಯಕ್ತಿಗಳು ವಕೀಲರಾಗುವರು. ಇನ್ನೊಂದು ಕಡೆ ದೊಡ್ಡ ಅಂಗೈಯ ಜತೆಗೆ ದೊಡ್ಡ ಬೆರಳುಗಳು ಹಾಗೂ ಬುಧನ ಪರ್ವತವು ಉತ್ತಮವಾಗಿ ಬೆಳೆದಿದ್ದರೆ, ಆಗ ಈ ವ್ಯಕ್ತಿಗಳು ಅಕೌಂಟ್ಸ್ ನಲ್ಲಿ ಶ್ರೇಷ್ಠರಾಗಿರುವರು.

ಉತ್ತಮವಾಗಿ ಬೆಳೆದಿರುವ ಚಂದ್ರನ ಪರ್ವತ
ಉದ್ದನೆಯ ತೋರುಬೆರಳಿನೊಂದಿಗೆ ಚಂದ್ರನ ಪರ್ವತವು ಸರಿಯಾಗಿ ಬೆಳೆದಿದ್ದರೆ ಆಗ ಇಂತಹ ವ್ಯಕ್ತಿಗಳಿಗೆ ಬೋಧನೆಯು ಒಳ್ಳೆಯ ವೃತ್ತಿಯಾಗಿರುವುದು. ಇವರು ಮಾರ್ಗದರ್ಶಿಗಳು ಅಥವಾ ನಾವಿಕರಾಗಬಹುದು.

ಶನಿಯ ಬಲವಾದ ಪರ್ವತ
ಶನಿಯ ಬಲವಾದ ಪರ್ವತ ಹೊಂದಿರುವ ವ್ಯಕ್ತಿಗಳು ಒಂದು ನಿಮಿಷದ ವಿವರದಲ್ಲೂ ಹೆಚ್ಚಿನ ಗಮನಹರಿಸುವರು. ಇಂತಹ ವ್ಯಕ್ತಿಗಳಿಗೆ ಸಂಶೋಧನೆಯು ಉತ್ತಮ ಆಯ್ಕೆಯಾಗಿದೆ. ಇನ್ನೊಂದು ಕಡೆಯಲ್ಲಿ ಇವರಿಗೆ ಇಂಜಿನಿಯರ್ ಅಥವಾ ವೈದ್ಯಕೀಯ ವಲಯದಲ್ಲೂ ಇವರು ವೃತ್ತಿ ಕಂಡುಕೊಳ್ಳಬಹುದು.



Click it and Unblock the Notifications
