Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಜಿ ಪ್ರೇಯಸಿ ಕೊಂದು ರಕ್ತ ಕುಡಿದು, ಮೆದುಳನ್ನೇ ರೋಸ್ಟ್ ಮಾಡಿ ತಿಂದ!
ಕೆಲವೊಂದು ಘಟನೆಗಳು ತುಂಬಾ ವಿಚಿತ್ರವಾಗಿರುತ್ತದೆ. ಅದರಲ್ಲೂ ಕೆಲವು ವ್ಯಕ್ತಿಗಳು ಕೊಲೆ ಮಾಡುವ ರೀತಿ ಮತ್ತು ಅವರ ವಿಕೃತಿಯು ಇಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಇದು ಕೇಳುಗರಿಗೆ ಹಾಗೂ ಓದುಗರಿಗೆ ಕೂಡ ತುಂಬಾ ಆಘಾತ ನೀಡುವುದು. ಇಂತಹ ಕೆಲವೊಂದು ಘಟನೆಗಳು ಎದೆಗಟ್ಟಿ ಇದ್ದವರು ಮಾತ್ರ ಓದಬೇಕು.

ಯಾಕೆಂದರೆ ಪೈಶಾಚಿಕ ಕೃತ್ಯವು ಆ ರೀತಿಯಲ್ಲಿರುತ್ತದೆ. ಇಲ್ಲೊಬ್ಬ ವ್ಯಕ್ತಿ ತನ್ನ ಮಾಜಿ ಪ್ರೇಯಸಿಯನ್ನು ಕೊಂದು ಆಕೆಯ ರಕ್ತವನ್ನು ಕುಡಿದಿದ್ದಾನೆ. ಇಷ್ಟು ಮಾತ್ರವಲ್ಲದೆ ಆತ ಆಕೆಯ ಮೆದುಳನ್ನು ರೋಸ್ಟ್ ಮಾಡಿಕೊಂಡು ತಿಂದಿದ್ದಾನೆ. ತನ್ನ ಮಾಜಿ ಪ್ರೇಯಸಿಯ ಕೊಂದು ಆಕೆಯ ರಕ್ತ ಕುಡಿದು, ಮೆದುಳನ್ನು ರೋಸ್ಟ್ ಮಾಡಿ ತಿಂದ ವ್ಯಕ್ತಿಯ ಬಗ್ಗೆ ಮತ್ತಷ್ಟು ಓದಿಕೊಳ್ಳಿ.

ತನ್ನ ಮಾಜಿ ಪ್ರೇಯಸಿಯನ್ನು ಕೊಂದ
23ರ ಹರೆಯದ ಡಿಮಿಟ್ರಿ ಲುಚಿನ್ ಎಂಬಾತ ತನ್ನ ಮಾಜಿ ಪ್ರೇಯಸಿಯನ್ನು ಕೊಂದು ಬಳಿಕ ಆಕೆಯ ಮೆದುಳನ್ನು ರೋಸ್ಟ್ ಮಾಡಿ ತಿಂದ. ಆಕೆಯ ದೇಹದ ಒಳಗಿನ ಭಾಗಗಳನ್ನು ಹರಿದು ಹಾಕಿ ಆತ ತನ್ನ ಪೈಶಾಚಿಕ ಕೃತ್ಯವನ್ನು ತೊರಿಸಿದ್ದಾನೆ. ಕೋರ್ಟ್ ಆತನಿಗೆ ಕೊಲೆ ಆರೋಪದ ಮೇಲೆ 19 ವರ್ಷಗಳ ಸಜೆ ನೀಡಿದೆ.

ವೈನ್ ಬಾಟಲಿಯಿಂದ ಆಕೆಯನ್ನು ಕೊಂದ
ಆತ ವೈನ್ ಬಾಟಲಿಯಿಂದ ಆಕೆಯ ತಲೆಗೆ ಪದೇ ಪದೇ ಹೊಡೆದು ಕೊಂದ. ಇದರ ಬಳಿಕ ಮಾಂಸ ಕತ್ತರಿಸುವ ಚಾಕುವಿನಿಂದ ಆಕೆಯ ದೇಹವನ್ನು ಕತ್ತರಿಸಿದ. ಇದರ ಬಳಿಕ ಆಕೆಯ ಮೆದುಳನ್ನು ರೋಸ್ಟ್ ಮಾಡಿ, ರಕ್ತವನ್ನು ಕುಡಿದಿದ್ದಾನೆ.

ಸರಣಿ ಕೊಲೆಗಳ ಬಗ್ಗೆ ಓದಿಕೊಂಡು ಗೀಳು ಅಂಟಿಸಿಕೊಂಡಿದ್ದ
ಆತ ಸರಣಿ ಕೊಲೆಗಳ ಬಗ್ಗೆ ಓದಿಕೊಂಡು ಗೀಳು ಅಂಟಿಸಿಕೊಂಡಿದ್ದ. ಇದರಿಂದ ಆತ ತನ್ನ ಮಾಜಿ ಪ್ರೇಯಸಿಯನ್ನು ಎಚ್ಚರಿಕೆಯಿಂದ ಕೊಂದು, ವಿಕೃತಿ ಪ್ರದರ್ಶಿಸಿದ್ದಾನೆ.

ಆಕೆ ಮೆದುಳು ರುಚಿಯಾಗಿತ್ತಂತೆ!
ಆಕೆಯ ಮೆದುಳು ತುಂಬಾ ರುಚಿಯಾಗಿತ್ತು ಮತ್ತು ಇದರಿಂದ ಮತ್ತಷ್ಟು ಅದನ್ನು ತಿಂದೆ. ಆಕೆಯ ಕಿವಿಗಳನ್ನು ಕತ್ತರಿಸಿದ ಬಳಿಕ ಒಂದನ್ನು ಆಖೆಯ ಬಾಯಿಯ ಒಳಗಡೆ ತುರುಕಿದ್ದ ಮತ್ತೊಂದು ಕಿವಿಯನ್ನು ಬೆಕ್ಕಿಗೆ ನೀಡಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾನೆ.

ರಕ್ತದಿಂದ ಚಿತ್ರ ಬಿಡಿಸಿದ್ದ
ಆತ ರಾಕ್ಷಸರಂತೆ ರಕ್ತ ಮಾತ್ರ ಕುಡಿದಿಲ್ಲ. ತನ್ನ ಮನೆಯ ಬಾಗಿಲಿನಲ್ಲಿ ಆಕೆಯ ರಕ್ತದಿಂದ ಚಿತ್ರ ಬಿಡಿಸಿದ್ದ. ಆತ ಶವದ ಹೊಟ್ಟೆಯ ಮೇಲೆ ನೇರಳೆ ಬಣ್ಣದ ನೇಲ್ ಪಾಲಿಷ್ ನಿಂದ ಕೆಲವೊಂದು ಪದಗಳನ್ನು ಬರೆದಿದ್ದ.

ತಾನು ನಿರಪರಾಧಿ ಎಂದು ವಿವರಿಸಲು ಕವಿತ ಬರೆದ
ಪೊಲೀಸರು ವಿಚಾರಣೆ ಮಾಡುವ ವೇಳೆ ಆತ ತನ್ನನ್ನು ನಿರಪರಾಧಿ ಎಂದು ಸಾಬೀತು ಮಾಡಿಕೊಳ್ಳಲು ಕೆಲವು ವಿಚಿತ್ರ ಕವಿತೆಗಳನ್ನು ಹೇಳುತ್ತಿದ್ದ. ಆದರೆ ದುರಾದೃಷ್ಟದಿಂದ ಆತನ ವೈದ್ಯಕೀಯ ವರದಿಗಳಿಂದ ಆತ ಮಾನಸಿಕವಾಗಿ ಆರೋಗ್ಯವಾಗಿದ್ದಾನೆ ಎಂದು ಹೇಳಿತ್ತು.

ಆತನಿಗೆ ಶಿಕ್ಷೆ ನೀಡಲಾಯಿತು
ಮಾಜಿ ಪ್ರೇಯಸಿಯ ಕೊಲೆಗಾಗಿ ಆತನಿಗೆ ನ್ಯಾಯಾಧೀಶರು 19 ವರ್ಷಗಳ ಜೈಲು ಶಿಕ್ಷೆ ನೀಡಿದರು. ಇಂತಹ ವಿಚಿತ್ರ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.



Click it and Unblock the Notifications
