ರಾಶಿ ಭವಿಷ್ಯ: ಈ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಿ ಎಲ್ಲವೂ ಒಳ್ಳೆಯದಾಗುವುದು...

By Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ. ವ್ಯಕ್ತಿ ಬೆಳೆದ ವಾತಾವರಣ, ಅವನ ಸುತ್ತ ಮುತ್ತಲಿನ ಪರಿಸರವು ಅವನ ವ್ಯಕ್ತಿತ್ವದ ಮೇಳೆ ಪ್ರಭಾವ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಗುಣಗಳು ರಾಶಿ ಚಕ್ರಕ್ಕೆ ಅನುಗುಣವಾಗಿ ಬಂದಿರುತ್ತದೆ. ಹಾಗಾಗಿ ವ್ಯಕ್ತಿ ಆದಷ್ಟು ಒಳ್ಳೆಯ ನಡತೆ ಹಾಗೂ ಹವ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆಗ ನಿಮ್ಮ ವ್ಯಕ್ತಿತ್ವ ಇನ್ನಷ್ಟು ಸುಧಾರಣೆಯಾಗುವುದು. ಜೊತೆಗೆ ಜೀವನದಲ್ಲಿ ಸಾಧನೆ ಮಾಡಲು ಸಹಾಯವಾಗುವುದು.

ಕೆಲವು ಕೆಟ್ಟ ಹವ್ಯಾಸಗಳು ನಮ್ಮಲ್ಲಿ ಅಡಗಿದ್ದರೆ ಅವು ನಮಗೆ ಯಶಸ್ಸನ್ನು ಸಾಧಿಸಲು ಅಡಚಣೆಯನ್ನು ಉಂಟುಮಾಡುತ್ತವೆ. ಹಾಗಾಗಿ ರಾಶಿ ಚಕ್ರಕ್ಕೆ ಅನುಗುಣವಾಗಿ ವ್ಯಕ್ತಿ ತನ್ನಲ್ಲಿರುವ ದೋಷ ಅಥವಾ ಕೆಟ್ಟ ಹವ್ಯಾಸಗಳನ್ನು ತೆಗೆದು ಹಾಕಿದರೆ ಉತ್ತಮ ಜೀವನ ನಡೆಸಬಹುದು. ಹಾಗಾದರೆ ಆ ಕೆಟ್ಟ ಗುಣಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರೆ ಈ ಮುಂದಿರುವ ವಿವರಣೆಯನ್ನು ನೋಡಿ....

ಮೇಷ: ಮಾರ್ಚ್ 21-ಏಪ್ರಿಲ್ 19

ಮೇಷ: ಮಾರ್ಚ್ 21-ಏಪ್ರಿಲ್ 19

ನೀವು ವಿಚಾರವನ್ನು ಅರಿತು ಕೊಳ್ಳುವ ಮೊದಲೇ ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಮುಂದಾಗುತ್ತೀರಿ. ಇದು ಕೆಲವೊಮ್ಮೆ ದುರಂತಗಳನ್ನು ಸೃಷ್ಟಿಸಬಹುದು. ಈ ವ್ಯಾಸದಿಂದ ನಿಮ್ಮ ಯಶಸ್ಸಿನ ದಾರಿಗೆ ಅಡೆತಡೆ ಉಂಟಾಗಬಹುದು ಅಥವಾ ಅನಪೇಕ್ಷಿತ ತಪ್ಪುಗಳು ನಿಮ್ಮಿಂದ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಸ್ವಲ್ಪ ಸಹನೆಯ ಸ್ವಭಾವ ಹಾಗೂ ವಿಚಾರವನ್ನು ಸಂಪೂರ್ಣವಾಗಿ ಅರಿತ ನಂತರ ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಹವ್ಯಾಸವನ್ನು ರೂಢಿಸಿಕೊಳ್ಳಿ.

ವೃಷಭ 21 ಏಪ್ರಿಲ್ -21 ಮೇ

ವೃಷಭ 21 ಏಪ್ರಿಲ್ -21 ಮೇ

ನೀವು ಒಬ್ಬಂಟಿಯಾಗಿ ಇರುವುದನ್ನು ಬಿಟ್ಟು ಹೆಚ್ಚು ಸಾಮಾಜಿಕವಾಗಿರುವುದನ್ನು ರೂಢಿಸಿಕೊಳ್ಳಬೇಕು. ನೀವು ಜನರೊಂದಿಗೆ ಬೆರೆಯಲು ಇಷ್ಟ ಪಡದವರಾಗಿ ಇರುತ್ತೀರಿ. ಹೆಚ್ಚು ಜನರೊಂದಿಗೆ ಬೆರೆತರೆ ಉತ್ತಮ ರೀತಿಯಲ್ಲಿ ಸಮಾಜದಲ್ಲಿ ತೆರೆದುಕೊಳ್ಳುವಿರಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ನೀವು ಕೆಲವು ವಿಚಾರಗಳು ನಿಮ್ಮ ಎದುರು ಬಂದಾಗ ಅದನ್ನು ಸಮಾಜದ ಮುಂದೆ ತರಲು ಮುಜುಗರಕ್ಕೆ ಒಳಗಾಗುತ್ತೀರಿ ಅಥವಾ ಎಲ್ಲರೆದುರು ವ್ಯಕ್ತ ಪಡಿಸಲು ಹೆದರುವಿರಿ. ಹಾಗಾಗಿ ನಿಮ್ಮ ಗುಣದಲ್ಲಿ ಈ ಸ್ವಭಾವವನ್ನು ಬಿಡಬೇಕು. ಆಗಲೇ ನೀವು ನಿಮ್ಮ ಉತ್ತಮ ಆಲೋಚನೆಗಳನ್ನು ಮತ್ತು ಕೆಲಸಗಳನ್ನು ಸಮಾಜದ ಎದುರು ನಿಲ್ಲಿಸಲು ಸಾಧ್ಯವಾಗುವುದು.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ನಿಮ್ಮ ಭಾವನಾತ್ಮಕ ಬುದ್ಧಿವಂತಿಕೆ ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವವನ್ನು ಉನ್ನತ ಸ್ಥಾನಕ್ಕೆ ನಿಲ್ಲಿಸುತ್ತದೆ. ಆದರೆ ನೀವು ಇತರರ ಮೇಲೆ ಅಧಿಕಾರ ತೋರಿಸುವುದನ್ನು ನಿಲ್ಲಿಸಬೇಕು. ಅಲ್ಲದೆ ಆದಷ್ಟು ಇತರರೊಂದಿಗೆ ಪ್ರಾಮಾಣಿಕರಾಗಿ ವರ್ತಿಸುವುದನ್ನು ಕಲಿಯ ಬೇಕಿದೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುವ ಇವರು ಧೈರ್ಯವಂತರೂ ನೇರ ನಡವಳಿಕೆಯ ಸ್ವಭಾವದವರೂ ಆಗಿರುತ್ತಾರೆ. ಸ್ಪರ್ಧೆಗೆ ಸದಾ ಸಿದ್ಧರಿರುವ ಇವರು ಸ್ಪರ್ಧೆಯಲ್ಲಿ ಗೆಲ್ಲಲು ಸತ್ಯದ ಭಂಡಾರ ಖಾಲಿಯಾದರೆ ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ. ಇತರರು ತಮ್ಮ ಜೀವನದಲ್ಲಿ ನಾಟಕವಾಡುವುದನ್ನು, ಸುಳ್ಳು ಹೇಳುವುದನ್ನು ಸಹಿಸದ ಇವರು ಆ ವ್ಯಕ್ತಿಗಳ ಸಂಗವನ್ನೇ ಬಿಟ್ಟುಬಿಡುತ್ತಾರೆ. ವ್ಯಂಗ್ಯವೆಂದರೆ ಇದೇ ಸುಳ್ಳುಗಳನ್ನು ಇವರೇ ಹೇಳಿ ಎದುರಿನವರು ತಮ್ಮೊಂದಿಗೆ ಸ್ನೇಹದಿಂದಿರಬೇಕೆಂದು ಬಯಸುತ್ತಾರೆ, ಹಾಗಾಗಿ ಇಂತಹ ಸಂಗತಿಗಳಿಂದ ಆದಷ್ಟು ದೂರವಿರಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇತರರೊಂದಿಗೆ ಅತಿಯಾಗಿ ಸ್ನೇಹಿತರಂತೆ ವರ್ತಿಸದಿರಿ. ಎಲ್ಲಾ ಸಮಯದಲ್ಲೂ ಜನರು ಅತಿಯಾಗಿ ಸ್ನೇಹಿತರಂತೆ ಇರುವುದನ್ನು ಇಷ್ಟಪಡರು. ಆದಷ್ಟು ನಿಮ್ಮ ಕೆಲಸದ ಬಗ್ಗೆ ಅದರ ಸುತ್ತಲಿನ ವಿಚಾರದ ಬಗ್ಗೆ ಚಿಂತಿಸಿ. ಆಗ ನೀವು ಇನ್ನಷ್ಟು ವಿಚಾರವನ್ನು ತಿಳಿದುಕೊಳ್ಳಲು ಸಹಾಯವಾಗುವುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಜೀವನದಲ್ಲಿ ಅತಿಯಾದ ನಿಷೇಧಗಳನ್ನು ಹೇರಿಕೊಳ್ಳದಿರಿ. ಇದು ನಿಮ್ಮ ಯಶಸ್ಸಿಗೆ ಅಡ್ಡಿಯಾಗುವುದಲ್ಲದೆ ಅನೇಕ ವಿಚಾರಗಳು ನಿಮಗೆ ಅರ್ಥವಾಗದೆಯೇ ಉಳಿದು ಕೊಳ್ಳುವುದು. ನಿಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಕೆಲವು ಗೀಳುಗಳು ನಿಮ್ಮ ಜೀವನದ ಗುರಿ ಸಾಧನೆಯ ವಿಚಾರದಲ್ಲಿ ಅಡ್ಡಿಯುಂಟುಮಾಡುವುದು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ನೀವು ಅಸೂಯೆಯ ವಿಚಾರದ ಮೇಲೆ ಕೇಂದ್ರಿಕರಿಸುವ ಬದಲು ಇತರರನ್ನು ಸಂತೋಷ ಪಡಿಸುವುದರ ಬಗ್ಗೆ ಗಮನ ಹರಿಸಿ. ನಿಮ್ಮ ಈ ಅಭ್ಯಾಸವು ಯಶಸ್ವಿ ಮಾರ್ಗವನ್ನು ಕೇಂದ್ರೀಕರಿಸುವುದಕ್ಕೆ ನೆರವಾಗುವುದು. ಈ ಅಭ್ಯಾಸವನ್ನು ತೊರೆದರೆ ನೀವು ನಿಮ್ಮ ನಿರೀಕ್ಷೆಗಳಿಗಿಂತ ಹೆಚ್ಚು ಮುಕ್ತರಾಗಿ ವ್ಯವಹರಿಸಲು ಸಾಧ್ಯವಾಗುವುದು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನೀವು ಎಲ್ಲಾ ವಿಚಾರವನ್ನು ಬಹಿರಂಗಪಡಿಸದಿರಿ. ನಿಮ್ಮಲ್ಲಿಯೇ ಕೆಲವು ವಿಚಾಋಗಳು ಗುಪ್ತವಾಗಿರುವಂತೆ ನೋಡಿಕೊಳ್ಳಿ. ನೀವು ಸಾಮಾನ್ಯವಾಗಿ ಎಲ್ಲವನ್ನೂ ಜನರೊಂದಿಗೆ ಹಂಚಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದೀರಿ. ಈ ಅಭ್ಯಾಸದಿಂದ ಜನರು ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಸಾಧ್ಯತೆಗಳಿವೆ. ಕೆಲವು ಚಿಂತನೆ ಹಾಗೂ ವಿಚಾರವನ್ನು ನಿಮ್ಮಲ್ಲಿಯೇ ಇಟ್ಟುಕೊಂಡರೆ ಆಗ ನಿಮ್ಮ ಯಶಸ್ಸು ಕೇಂದ್ರೀಕರಿಸಲು ಸಹಾಯವಾಗುವುದು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಅತಿಯಾಗಿ ಋಣಾತ್ಮಕ ಚಿಂತೆಯನ್ನು ಹೊಂದಿರುತ್ತೀರಿ. ನೀವು ಈ ಅಭ್ಯಾಸವನ್ನು ಬಿಟ್ಟು ಆದಷ್ಟು ಸಕಾರಾತ್ಮಕ ಚಿಂತನೆಗಳ ಬಗ್ಗೆ ವಿಚಾರ ನಡೆಸಿ. ಆಗ ನೀವು ಯಶಸ್ಸಿನ ದಾರಿಯಲ್ಲಿ ಮುಂದೆ ಸಾಗುವಿರಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ನೀವು ತುಂಬಾ ಭಾವನಾತ್ಮಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತೀರಿ. ಎಲ್ಲಾ ವಿಚಾರದಲ್ಲೂ ಅತಿಯಾಗಿ ಭಾವನಾತ್ಮಕರಾಗುವುದು ಒಳ್ಳೆಯದಲ್ಲ. ನೀವು ಆದಷ್ಟು ಧ್ಯಾನ ಮಾಡುವುದರ ಮೂಲಕ ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳಬಹುದು. ಕೆಲವು ವಿಚಾರಗಳಿಗೆ ಆದಷ್ಟು ವಾಸ್ತವಿಕವಾಗಿ ಚಿಂತನೆ ನಡೆಸಿ. ಜೀವನದಲ್ಲಿ ಯಶಸ್ಸನ್ನು ಕಾಣುವಿರಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ನೀವು ಮಾರ್ಗದರ್ಶಕರಾಗಿರಲು ಭಯಪಡದಿರಿ. ನೀವು ನಿಮ್ಮ ಆಲೋಚನೆಗಳನ್ನು ಹೇಳಲು ಅಥವಾ ಇತರರಿಗೆ ಮಾರ್ಗದರ್ಶನ ನೀಡಲು ಯಾವುದೇ ಬಗೆಯ ಹಿಂಜರಿಕೆ ಅಥವಾ ಭಯಕ್ಕೆ ಒಳಗಾಗದಿರಿ. ನೀವು ನಿರ್ಧರಿಸಿರುವ ವಿಚಾರವನ್ನು ವ್ಯಕ್ತಪಡಿಸಲು ಹಿಂಜರಿಯದಿರಿ.

For Quick Alerts
ALLOW NOTIFICATIONS
For Daily Alerts

    English summary

    Habit You Need To Quit, Based On Your Zodiac Sign

    From being best friends to turning into worst foes, one can blame the zodiac signs. There are certain individuals of a few zodiac signs that can give you cut-throat competition when it is all about emotions. These particular individuals belonging to the zodiac signs mentioned below can make you realise that they would not hesitate to cut you out of their lives in no time at all.Find out if you fall into this list of rude zodiac signs!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more